ಪಾರಂಪಳ್ಳಿ-ಸೀತಾ ನದಿಯ ಮಧ್ಯದಲ್ಲಿ ಕಯಾಕಿಂಗ್ ತಂಡದ ರಾಷ್ಟ್ರಪ್ರೇಮ ಧ್ವಜಾರೋಹಣ

0
695

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ಪ್ರೇಮವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡು ಪ್ರತೀ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಪಣ ತೊಟ್ಟು ಯಶಸ್ವಿಗೊಳಿಸಿದರೆ, ಸಾಲಿಗ್ರಾಮದ ಪಾರಂಪಳ್ಳಿ ಸೀತಾನದಿಯಲ್ಲಿ ಯುವಕರ ತಂಡ ವಿಭಿನ್ನವಾಗಿ ಅತೀ ರೋಚಕ ಎನಿಸುವ ರೀತಿಯಲ್ಲಿ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ. ಸೀತಾ ನದಿಯ ಉಪನದಿಯಲ್ಲಿ ಕಾಯಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಮಿಥುನ್ ಮೆಂಡನ್ ಮತ್ತು ಲೋಕೇಶ್ ಮೆಂಡನ್ ಅವರ ತಂಡ ಇದೀಗ ಈ ವಿಭಿನ್ನ ಪ್ರಯತ್ನದಲ್ಲಿ ಮತ್ತೊಮ್ಮೆ ಸೈ ಎನಿಸಿದ್ದಾರೆ.

Click Here

ಸೀತಾ ನದಿಯ ಮದ್ಯದಲ್ಲಿ ಕಾಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜ ಸ್ತಂಭ ಸೃಷ್ಠಿಸಿ ಊರ ಹಿರಿಯ ಗುರಿಕಾರ ಕೂಸ ಮರಕಾಲ ಇವರ ಮೂಲಕ ಧ್ವಜಾರೋಹಣ ನೆರವೆರಿಸಿದೆ, ಅನ್ನವಿತ್ತ ಪ್ರಕೃತಿ ಮದ್ಯದಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುತಿರುವ ಈ ತಂಡದ ಈ ಸಾಹಸಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Click Here

LEAVE A REPLY

Please enter your comment!
Please enter your name here