ಕುಂದಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದ ಪ್ರಯುಕ್ತ ಬೃಹತ್ ಗುರು ಸಂದೇಶ ಮತ್ತು ವಾಹನ ಜಾಥಾ

0
422

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬ್ರಹ್ಮಶ್ರೀ ನಾರಾಯಣಗುರುಗಳು ಮಾನವತಾ ಸಂದೇಶ ನೀಡಿದ್ದು, ಜಗತ್ತಿನ ಧರ್ಮಗುರುಗಳು ಎಂದು ಕುಂದಾಪುರ ತಾಲೂಕು ಬಿಲ್ಲವ ಸಮಾಜಸೇವಾ ಸಂಘದ ಕುಂದಾಪುರ ಇದರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದರು.

ಭಾನುವಾರ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಮಾರ್ಗದರ್ಶನದಲ್ಲಿ ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಬೃಹತ್ ಗುರು ಸಂದೇಶ ವಾಹನ ಜಾಥಾ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

Click Here

ನಾರಾಯಣಗುರುಗಳ ಸಂದೇಶ ಜಗತ್ತಿಗೆ ಮಾರ್ಗದರ್ಶನವಾಗಿದ್ದು, ಅವರ ಜಯಂತಿಯನ್ನು ಪ್ರತಿಯೊಬ್ಬರು ಆಚರಿಸಿ, ಅವರ ಸಂದೇಶ ಪಾಲಿಸಬೇಕು ಎಂದು ಕರೆ ನೀಡಿದರು.

ಕುಂದಾಪುರದ ಉದ್ಯಮಿ ಸತೀಶ್ ಕೋಟ್ಯಾನ್,ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಕುಂದಾಪುರದ ನಾರಾಯಣಗುರು ಸಭಾಭವನದಿಂದ ಹೆಮ್ಮಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಜಾಥಾ ನಡೆಯಿತು.

Click Here

LEAVE A REPLY

Please enter your comment!
Please enter your name here