ಕುಂದಾಪುರ ಮಿರರ್ ಸುದ್ದಿ…
ಕೋಟ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು. ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಮತ್ತು ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಎಜ್ಯುಕೇರ್ ಕೋಟ ಇವರ ಜಂಟಿ ಆಶ್ರಯದಲ್ಲಿ 2022-23 ನೇ ಸಿ.ಎಮ್.ಕೆ.ಕೆ.ವೈ ಯೋಜನೆಯಡಿಯಲ್ಲಿ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ ಶನಿವಾರ ಶ್ರೀದೇವಿ ಕಿರಣ್ ಕಾಂಪ್ಲೆಕ್ಸ್‍ನಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ,ಯುವ ವಿಜ್ಞಾನಿ ಅನಿಕೇತ್ ಶೆಣೈ, ಪ್ರಕಾಶ್ ಶೆಟ್ಟಿ, ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿಯ ಕೇಂದ್ರ ವ್ಯವಸ್ಥಾಪಕರಾದ ಚೇತನ್ ಎಮ್, ಸಿಡಾಕ್‍ನ ತರಬೇತುದಾರ ಪ್ರಥ್ವಿರಾಜ್ ನಾಯಕ್ ಉಪಸ್ಥಿತರಿದ್ದರು.
ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿಯ ರಮ್ಯಶ್ರೀ ಸ್ವಾಗತಿಸಿ, ಸಿಡಾಕ್‍ನ ತರಬೇತುದಾರ ಶ್ರುತಿ ನಿರೂಪಿಸಿ ವಂದಿಸಿದರು.











