Category: Uncategorized

  • ಕೋಟ :ಒಗ್ಗಟ್ಟಿನ ಮೂಲಕ ಧಾರ್ಮಿಕ ಕೈಂಕರ್ಯದ ಬಲ ಹೆಚ್ಚಿಸಿ- ನಾಡೋಜ ಡಾ.ಜಿ ಶಂಕರ್

    ಕೋಟ :ಒಗ್ಗಟ್ಟಿನ ಮೂಲಕ ಧಾರ್ಮಿಕ ಕೈಂಕರ್ಯದ ಬಲ ಹೆಚ್ಚಿಸಿ- ನಾಡೋಜ ಡಾ.ಜಿ ಶಂಕರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗ್ರಾಮದಲ್ಲಿ ಒಗ್ಗಟ್ಟು ಇದ್ದರೆ ಆ ಊರಿನಲ್ಲಿ ಸಕಲ ಇಷ್ಟಾರ್ಥ ನೆರವೆರಲು ಸಾಧ್ಯ ಎಂದು ನಾಡೋಜ ಡಾ.ಜಿ ಶಂಕರ್ ಹೇಳಿದರು.

    ಕೋಟ ಗಿಳಿಯಾರು ಹರ್ತಟ್ಟಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತು ಪೌಳಿ ಲೋಕಾರ್ಪಣೆಗೊಳಿಸಿ ಮಾತನಾಡಿ ಧಾರ್ಮಿಕ ಕೈಂಕರ್ಯಕ್ಕೆ ಬಲ ಹೆಚ್ಚಿಸುವುದು ಊರಿನ ಒಗ್ಗಟ್ಟು ಈ ನಿಟ್ಟಿನಲ್ಲಿ ಕಲ್ಲಟ್ಟು ಮಹಾಲಿಂಗೇಶ್ವರ ಸಂತೃಪ್ತನಾಗಿ ಭಕ್ತರ ಬೇಡಿಕೆಗೆ ಸದಾ ಸ್ಪಂದಿಸಲಿದ್ದಾನೆ. ಊರು ಅಭಿವೃದ್ಧಿಯಾಗಬೇಕಾದರೆ ಧಾರ್ಮಿಕ ಕ್ಷೇತ್ರಗಳು ಉನ್ನತಿ ಕಾಣಬೇಕು ಈ ದಿಸೆಯಲ್ಲಿ ಸರಕಾರ ಧಾರ್ಮಿಕ ದತ್ತಿ ಇಲಾಖೆಯ ಸಹಾಯ ಪಡೆದು ಸ್ಥಳೀಯ ಉದ್ಯಮಿಗಳ ಸಹಕಾರದಿಂದ ಕ್ಷೇತ್ರಗಳು ಅಭಿವೃದ್ಧಿಗೊಳಲಿ ಆ ಮೂಲಕ ಗ್ರಾಮಗಳು ಧಾರ್ಮಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ದೇವಳದ ವತಿಯಿಂದ ನಾಡೋಜ ಡಾ.ಜಿ.ಶಂಕರ್ ಅವರನ್ನು ಸನ್ಮಾನಿಸಲಾಯಿತು.

    ದೇವಳದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ, ಪತ್ನಿ ಅಂಬಿಕಾ ಸುರೇಶ್, ಕಾರ್ಯದರ್ಶಿ ಹರೀಷ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ಉಪಾಧ್ಯಕ್ಷರಾದ ತಿಮ್ಮ ಕಾಂಚನ್, ಗಿರೀಶ್ ದೇವಾಡಿಗ, ಜೊತೆಕಾರ್ಯದರ್ಶಿ ನಾಗರಾಜ್ ಗಾಣಿಗ, ಚೇತನ ಆರ್ ಕುಂದರ್, ಶಾಂತಾ ಆಚಾರ್ಯ, ಬಾಬು ಶೆಟ್ಟಿ, ಗುರುವ ಬಂಗೇರ, ಸಂತೋಷ್ ಪೂಜಾರಿ, ಸಿದ್ಧ ದೇವಾಡಿಗ, ರಾಜು ಪೂಜಾರಿ ಹೋಬಳಿಮನೆ, ಚಂದ್ರ ಹಾಡಿಕೆರೆ, ಆದಿತ್ಯ ಕೋಟ, ದೇವಳದ ಪ್ರದಾನ ಅರ್ಚಕ ಸುಧೀರ್ ಐತಾಳ್ ಸಾಲಿಗ್ರಾಮ, ಕಲಾವತಿ ಅಶೋಕ್, ಕೋಟ ಮೊಗವೀರ ಯುವ ಸಂಘದ ಅಧ್ಯಕ್ಷ ರಂಜೀತ್ ಕುಮಾರ್, ಸಂತೋಷ್ ದೇವಾಡಿಗ, ಜಗದೀಶ್ ದೇವಾಡಿಗ, ಕೋಟ ಗ್ರಾ.ಪಂ ಸದಸ್ಯ ಪಾಂಡು ಪೂಜಾರಿ, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಸ್ಥಳೀಯರಾದ ಮಹಾಬಲ ಪೂಜಾರಿ, ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕುಸಿತ – ಡಾ.ನಿರಂಜನಾರಾದ್ಯ

    ಕುಂದಾಪುರ :ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕುಸಿತ – ಡಾ.ನಿರಂಜನಾರಾದ್ಯ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಸರಕಾರಿ ಶಾಲೆಗಳ ಗುಣಮಟ್ಟ ಕಡಿಮೆಯಾಗಲು ಬಹುಮುಖ್ಯ ಕಾರಣ ಶಿಕ್ಷಕರ ಕೊರತೆ. ಇದಕ್ಕೆ ಸರಕಾರವೇ ನೇರ ಹೊಣೆ. ಶಿಕ್ಷಕರ ಭರ್ತಿಗೆ ಸರಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಕಳೆದ ಅನೇಕ ವರ್ಷಗಳಿಂದ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಞ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕ ಡಾ| ನಿರಂಜನಾರಾಧ್ಯ ವಿ.ಪಿ. ಹೇಳಿದರು.

    ಅವರು ಸೋಮವಾರ ಇಲ್ಲಿನ ರೋಟರಿ ಭವನದಲ್ಲಿ ನಡೆದ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ, ತಾಲೂಕು ಸಮಿತಿ ಬೈಂದೂರು, ಬ್ರಹ್ಮಾವರ, ಕುಂದಾಪುರ, ಉಡುಪಿ, ಕಾರ್ಕಳ ಆಶ್ರಯದಲ್ಲಿ ರೋಟರಿ ಕ್ಲಬ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರದ ಸಹಯೋಗದಲ್ಲಿ ಸರಕಾರಿ ಶಾಲೆ ಉಳಿಯಲಿ, ಬೆಳೆಯಲಿ, ನೆರೆ ಹೊರೆಯ ಸಮಾನ ಶಾಲೆಯಾಗಲಿ ಎನ್ನುವ ಧ್ಯೇಯದೊಂದಿಗೆ ‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆ -೨೦೦೯’ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಉದ್ಘಾಟಿಸಿದ ಭಟ್ಕಳದ ಉದ್ಯಮಿ ಅಬ್ದುಲ್ ಸಿರಾಜುದ್ದಿನ್ ಶುಭಹಾರೈಸಿದರು. ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಅಧ್ಯಕ್ಷತೆ ವಹಿಸಿದ್ದರು.

    ಹೋರಾಟದ ಎಚ್ಚರಿಕೆ
    ಸಮನ್ವಯ ವೇದಿಕೆ ಕುಂದಾಪುರ ವಲಯದ ಅಧ್ಯಕ್ಷ ಎಸ್.ವಿ. ನಾಗರಾಜ ಮಾತನಾಡಿ, ಇಂಗ್ಲಿಷ್ ವ್ಯಾಮೋಹ, ಶಿಕ್ಷಣದ ವ್ಯಾಪಾರೀಕರಣ, ಅಪಪ್ರಚಾರ, ಕಾಳಜಿಯಿಲ್ಲದ ಜನಪ್ರತಿನಿಽಗಳು, ಅಽಕಾರಿಗಳಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ. ಹೀಗೆ ಮುಂದುವರಿಯುತ್ತಿದ್ದರೆ, ನಮ್ಮ ವೇದಿಕೆಯಿಂದ ಜಿಲ್ಲೆಯ ೬೨೨ ಶಾಲೆಗಳ ೧೧,೫೦೦ ಮಂದಿ ಸದಸ್ಯರ ಸಹಿತ ರಾಜ್ಯದ ೪೫ ಸಾವಿರಕ್ಕೂ ಮಿಕ್ಕಿ ಶಾಲೆಗಳ ೮.೫೦ ಲಕ್ಷ ಸದಸ್ಯರು ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಬಿಆರ್‌ಪಿ ಸಂತೋಷ್ ಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಕಾರ್‍ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್‍ಯದರ್ಶಿ ಆರತಿ ಮೇಲಾಂಟ, ಪುರಸಭಾ ಘಟಕಾಧ್ಯಕ್ಷ ಅಶ್ವಥ್ ಕುಮಾರ್, ಕುಂದಾಪುರ ಕಾರ್‍ಯದರ್ಶಿ ಪ್ರಮೋದಾ ಕುಶಲ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

    ಬೈಂದೂರು ವಲಯದ ಅಧ್ಯಕ್ಷ ಅವನೀಶ ಹೊಳ್ಳ ಸ್ವಾಗತಿಸಿ, ರವಿ ಮರವಂತೆ ವಂದಿಸಿದರು. ಕುಂಭಾಶಿ ಘಟಕದ ಅಧ್ಯಕ್ಷೆ ದೀಪಿಕಾ ರಮೇಶ್, ರಾಜಶೇಖರ್ ಕಾಳಾವರ ಕಾರ್‍ಯಕ್ರಮ ನಿರೂಪಿಸಿದರು.

  • ಕುಂದಾಫುರ: ಕೊರಗ ಜನಪದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ

    ಕುಂದಾಫುರ: ಕೊರಗ ಜನಪದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಿಟ್ಟೆ ವಿಶ್ವ ವಿದ್ಯಾನಿಲಯ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಮತ್ತು ಕೊರಗ ಸಂಘಟನೆಗಳ ಆಶ್ರಯದಲ್ಲಿ ಕೊರಗ ಜನಪದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಸಾಧಕರಿಗೆ ಗೌರವದ ಸನ್ಮಾನ ಕಾರ್ಯಕ್ರಮವು ಆಲೂರು ಗ್ರಾಮದ ಹಾಡಿಮನೆಯಲ್ಲಿ ನಡೆಯಿತು.

    ಸಮುದಾಯದ ಹಿರಿಯ ಮಹಿಳೆ ಕಾಳು ಕೊರಗ ಉದ್ಘಾಟಿಸಿದರು. ನಿಟ್ಟೆ ವಿಶ್ವ ವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸಾಯಿಗೀತಾ ಮಾತನಾಡಿ, ಕೊರಗ ಸಮುದಾಯದಲ್ಲಿ ಕಪ್ಪಡ ಕೊರಗ, ಸೊಪ್ಪು ಕೊರಗ, ತೊಪ್ಪು ಕೊರಗ, ಕುಂಟ್ಟು ಕೊರಗ ಎನ್ನುವ ನಾಲ್ಕು ಒಳ ಪಂಗಡಗಳು ಇದೆ. ಭಾಷಾ ದಾಖಲಿಖೀರಣವನ್ನು ಗೌರಿ ಕೆಂಜೂರು, ಬಾಬು ಪಾಂಗಾಳ, ಶ್ರೀಧರ ನಾಡ ನಡೆಸುತ್ತಿದ್ದಾರೆ. ಕೊರಗ ಭಾಷೆಯ ಪ್ರತಿ ಶಬ್ದಗಳನ್ನು ದಾಖಲಿಸುವ ಗುರಿ ಹೊಂದಿದೆ ಎಂದರು.

    ಸಮುದಾಯದ ಕಲಾವಿದರು, ಗುರಿಕಾರರು, ಕೃಷಿ ಕ್ಷೇತ್ರ, ಸೃಜನಶೀಲ ಕುಲಕಸುಬು ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಷ್ಟು ಕೊರಗ ಯರುಕೊಣೇ, ಶಂಕರ ಬಾರಂದಾಡಿ, ಕಾಳು ಆಲೂರು, ಕರಿಯಮ್ಮ ಆಲೂರು, ಕೃಷ್ಣ ತೆಂಕಬೈಲು, ಮಾಸ್ತಿ ಹೆಮ್ಮಂಜೆ, ಕೊರಗ ನಾರ್ಕಳಿ, ರಾಮ ವಂಡ್ಸೆ, ಈರ ದೀಟಿ, ಹೊನ್ನಮ್ಮ ಕೊಣ್ಕಿ, ಐತಾ ನಂದ್ರೋಳಿ, ರಾಮ ಹೆರೂರು, ಸಂದೀಪ ಮಾರಣಕಟ್ಟೆಯವರನ್ನು ಸನ್ಮಾನಿಸಲಾಯಿತು.

    ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಘಟಕಾಧ್ಯಕ್ಷ ಗಣೇಶ ಆಲೂರು ಅಧ್ಯಕ್ಷತೆವಹಿಸಿದರು. ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ರವಿ ಶೆಟ್ಟಿ, ಹರ್ಕೂರು ಸೊಸೈಟಿ ಅಧ್ಯಕ್ಷ ಮಂಜಯ್ಯ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಸುಂದರ ಕೊರಗ ಉಪಸ್ಥಿತರಿದ್ದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷರು ಶ್ರೀಧರ ನಾಡ ರವರು ಪ್ರಾಸ್ತಾವಿಸಿದರು. ನಾಗರಾಜ್ ನಂದ್ರೋಳಿ ಸ್ವಾಗತಿಸಿದರು, ಸುರೇಶ್ ಹೇರೂರು ವಂದಿಸಿದರು, ರೇವತಿ ಆಲೂರು ನಿರೂಪಿಸಿದರು.

  • ಕುಂದಾಪುರ:ಸಹಕಾರಿ ಸಂಘಗಳು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು – ಅಪ್ಪಣ್ಣ ಹೆಗ್ಡೆ

    ಕುಂದಾಪುರ:ಸಹಕಾರಿ ಸಂಘಗಳು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು – ಅಪ್ಪಣ್ಣ ಹೆಗ್ಡೆ

    ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಹಕಾರಿ ಸಂಘಗಳು ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಿದಾಗ ಸಹಕಾರಿ ಉದ್ಧೇಶ ಈಡೇರುತ್ತದೆ ಎಂದು ಮಾಜಿ ಶಾಸಕ, ಧಾರ್ಮಿಕ ಮುಂದಾಳು, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಮಾಜಿ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಶನಿವಾರ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರಮಹೋತ್ಸವವನ್ನು ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ, ಮಾತನಾಡಿದರು.

    ಅಜಾತಶತ್ರು ದಿ| ಯಡ್ತರೆ ಮಂಜಯ್ಯ ಶೆಟ್ಟಿ ಅವರ ಮುಂದಾಳತ್ವದಲ್ಲಿ ೧೯೬೦ ರಲ್ಲಿ ಷೇರು ಸಂಗ್ರಹದ ಮೂಲಕ ಆರಂಭಗೊಂಡ ಈ ಸಂಸ್ಥೆಯು ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ರೈತರ ಹಿತದೃಷ್ಟಿಯಲ್ಲಿ ಆರಂಭಗೊಂಡ ಈ ಸಂಸ್ಥೆಯ ಯಶಸ್ಸಿನಲ್ಲಿ ಉತ್ತಮ ಆಡಳಿತ ಮಂಡಳಿ, ಪ್ರಾಮಾಣಿಕ ನೌಕರ ವೃಂದ ಹಾಗೂ ಗ್ರಾಹಕರ ಸಹಕಾರದ ಪಾಲು ಹಿರಿದು ಎಂದರು.

    ಸಹಕಾರಿ ಎಂದರೆ ಒಬ್ಬರಿಗೊಬ್ಬರು ಸಹಕಾರ ನೀಡುವುದು, ಅದೇ ಸಿದ್ಧಾಂತವನ್ನು ಎಲ್ಲರೂ ಪಾಲಿಸುತ್ತಿರುವುದರಿಂದಲೇ ಈ ರಂಗ ಬೆಳೆಯುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.

    6 ದಶಕದ ಹಿಂದಿನ ಈ ಸಂಸ್ಥೆಯು ಇಂದು ಬೃಹದಾಕಾರವಾಗಿ ಬೆಳೆದಿದೆ. ವಾರ್ಷಿಕ 15 ಕೋ.ರೂ. ಗೂ ಮಿಕ್ಕಿ ವ್ಯವಹಾರವನ್ನು ಹೊಂದಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ರಂಗ ಉತ್ತಮವಾಗಿರಲು ಗ್ರಾಹಕರು ತಮ್ಮ ಮೇಲಿಟ್ಟ ನಂಬಿಕೆ ಹಾಗೂ ವಿಶ್ವಾಸವೇ ಕಾರಣ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

    ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು, ನಿವೃತ್ತ ನೌಕರರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

    ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮಿನಾರಾಯಣ ಜಿ.ಎನ್., ಕುಂದಾಪುರದ ಸಹಾಯಕ ನಿಬಂಧಕಿ ಲಾವಣ್ಯ ಕೆ.ಆರ್., ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಬಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಽಕಾರಿ ಎಚ್. ಶೋಭಾಕೃಷ್ಣ, ನಿರ್ದೇಶಕರಾದ ಮೋಹನ್ದಾಸ್ ಶೆಟ್ಟಿ, ಕೆ. ಸುಧಾಕರ ಶೆಟ್ಟಿ, ಆನಂದ ಬಿಲ್ಲವ, ಎಂ. ಮಹೇಶ ಹೆಗ್ಡೆ ಮೊಳಹಳ್ಳಿ, ಕೆ. ಭುಜಂಗ ಶೆಟ್ಟಿ, ಕೆ. ಮೋಹನ್ ಪೂಜಾರಿ, ಪ್ರಭಾಕರ ಶೆಟ್ಟಿ, ರವಿ ಗಾಣಿಗ, ಎಚ್. ದೀನಪಾಲ್ ಶೆಟ್ಟಿ, ಎಚ್. ಚಂದ್ರಶೇಖರ ಶೆಟ್ಟಿ, ಎಸ್.ಜಯರಾಮ ಶೆಟ್ಟಿ, ಯಡ್ತರೆ ಹೌಸ್ನ ಎಂ,. ಅಶೋಕ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಎಸ್. ರಾಜು ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಆರ್.ಜೆ. ನಯನಾ, ಜಯಶ್ರೀ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

  • ಬೈಂದೂರು: ಕೊಲೆಗೈದು ಕಾರು ಸುಟ್ಟ ಹಂತಕರು – ಆತ್ಮಹತ್ಯೆ ಡ್ರಾಮಾ..! ಮಹಿಳೆ ಸೇರಿ ನಾಲ್ವರು ಅಂದರ್

    ಬೈಂದೂರು: ಕೊಲೆಗೈದು ಕಾರು ಸುಟ್ಟ ಹಂತಕರು – ಆತ್ಮಹತ್ಯೆ ಡ್ರಾಮಾ..! ಮಹಿಳೆ ಸೇರಿ ನಾಲ್ವರು ಅಂದರ್

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಬೈಂದೂರು ಹೇನ್ಬೇರುವಿನ ನಿರ್ಜನ ಪ್ರದೇಶದಲ್ಲಿ ಕಾರಿನೊಂದಿಗೆ ವ್ಯಕ್ತಿ ಸುಟ್ಟು ಕರಕಲಾಗಿರುವ ಘಟನೆಗೆ ಬಿಗು ತಿರುವು ದೊರಕಿದ್ದ ಕೊಲೆಗಾರ ತಾನು ಬಚವಾಗಲು ಅಮಾಯಕ ವ್ಯಕ್ತಿಯನ್ನು ತನ್ನ ಕಾರಿನೊಳಗೆ ಬೆಂಕಿಹಾಕಿ ಸಾಯಿಸಿರುವುದಾಗಿ ತಿಳಿದು ಬಂದಿದೆ. ಕಾರಿನೊಳಗೆ ಗುರುತು ಹಿಡಿಯದಷ್ಟು ಸುಟ್ಟು ಹೋಗಿರುವ ವ್ಯಕ್ತಿಯನ್ನು ಕಾರ್ಕಳ ಪರಿಸರದ ನಿವಾಸಿ ಮೇಸ್ತ್ರೀ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗ (55ವ) ಎಂದು ಗುರುತಿಸಲಾಗಿದೆ.

    ಮೃತ ಆನಂದ ದೇವಾಡಿಗ

    ಕೊಲೆಗೆ ಕಾರಣನಾದ ವ್ಯಕ್ತಿಯನ್ನು ಕಾರ್ಕಳ ತಾಲೂಕು ಮಾಳ ಗ್ರಾಮದ ಖಾಸಗಿ ಸರ್ವೇಯರ್ ಸದಾನಂದ ಶೇರೆಗಾರ್ (54ವ), ಕೃತ್ಯಕ್ಕೆ ಸಹಕರಿಸಿದ ಹಿರ್ಗಾನ ಶಿವನಗರ ನಿವಾಸಿ ಶಿಲ್ಪಾ (30ವ) ಎಂಬಾಕೆಯನ್ನು ಬಂಧಿಸಲಾಗಿದೆ.

    ಘಟನೆ ಸಂಬಂದ ತನಿಖೆ ಆರಂಭಿಸಿದ ಬೈಂದೂರು ಪೊಲೀಸರು ಕೊಲೆಯ ಸೂತ್ರದಾರ ಸದಾನಂದ ಶೇರೆಗಾರ್, ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

    ಈ ಕೊಲೆ ಪ್ರಕರಣ ಸಿನಿಮೀಯ ರೀತಿಯಲ್ಲಿದ್ದು ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರುಗಾರ್ ಹಣ ಹಾಗೂ ಅವ್ಯಹಾರದಲ್ಲಿ ಸಿಲುಕಿಕೊಂಡಿದ್ದು ಅದರಿಂದ ಬಚವಾಗಲು ತಾನು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದ ಕಥೆ ಕಟ್ಟಲು ಈ ನಾಟಕ ರೂಪಿಸಿದ್ದ. ಅದಕ್ಕೆ ಪೂರಕವಾಗಿ ಒಂದು ಮಂಗಳವಾರ ಮಧ್ಯಾಹ್ನ ತನ್ನ ಸ್ನೇಹಿತೆ ಶಿಲ್ಪಾ ಎಂಬಾಕೆಯ ಸಹಾಯ ಕೇಳಿದ್ದ. ಶಿಲ್ಪಾ ತನ್ನ ಪರಿಚಿತ ವ್ಯಕ್ತಿ ಮೇಸ್ತ್ರೀ ಆನಂದ ದೇವಾಡಿಗ ಎನ್ನುವಾತನನ್ನು ಬಾರ್‍ಗೆ ಬರುವಂತೆ ತಿಳಿಸಿದ್ದು, ಬಾರ್ ನಲ್ಲಿ ಮೇಸ್ತ್ರೀ ಆನಂದ ದೇವಾಡಿಗ ಎನ್ನುವಾತನಿಗೆ ಚೆನ್ನಾಗಿ ಕುಡಿಸಿದ್ದಾರೆ. ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿದ್ದರು. ಆನಂದ ದೇವಾಡಿಗನನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಇವರು ಬೈಂದೂರಿನತ್ತ ಹೊರಟಿದ್ದರು. ರಾತ್ರಿ 12.30 ಗಂಟೆಯ ಸುಮಾರಿಗೆ ಕಾರು ಸಾಸ್ತಾನ ಟೋಲ್‍ಗೇಟ್‍ನಲ್ಲಿ ಮಹಿಳೆ ಟೋಲ್ ಪಾವತಿಸಿದ್ದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಬೈಂದೂರು ಹೆನ್‍ಬೇರುವಿನಲ್ಲಿ ಕಾರಿಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿ ಇವರು ಮರಳಿದ್ದು, ಅವರನ್ನು ಸದಾನಂದ ಸೇರುಗಾರನ ಸಂಬಂಧಿಕರು ಅಲ್ಲಿಂದ ಕರೆದುಕೊಂಡು ಹೋಗಿ ಬೆಂಗಳೂರು ಬಸ್‍ಗೆ ಹತ್ತಿಸಿದ್ದಾರೆ.
    ತಾನು ಆತ್ಮಹತ್ಯೆ ಮಾಡಿಕೊಂಡೇ ಎಂದು ನಂಬಿಸುವ ಸಲುವಾಗಿ ಹಂತಕರು ಬೆಂಗಳೂರಿಗೆ ಹೊರಟಿದ್ದು ದುರದೃಷ್ಟವಶಾತ್ ಬಸ್ ಹಾಳಾಗಿ ಮೂಡಬಿದ್ರೆಯಿಂದ ಆತ ಮರಳಿ ಕಾರ್ಕಳಕ್ಕೆ ಬರುವಾಗ ಪೊಲೀಸರು ಸದಾನಂದ ಶೇರುಗಾರ ಹಾಗೂ ಶಿಲ್ಪರನ್ನು ಬಂಧಿಸಿದ್ದಾರೆ.

    ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಎ.ಎಸ್.ಪಿ ಸಿದ್ಧಲಿಂಗಯ್ಯ, ಡಿ.ವೈ.ಎಸ್.ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವದಲ್ಲಿ ಪಿಎಸ್‍ಐ ಪವನ್ ನಾಯಕ್,ಗಂಗೊಳ್ಳಿ ಠಾಣೆಯ ಪಿಎಸ್‍ಐ ವಿನಯ ಕೊರ್ಲಹಳ್ಳಿ, ಕಾನ್ಸಟೇಬಲ್ ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಓಧರ, ಫ್ರಿನ್ಸ್, ಚಂದ್ರ ಗಂಗೊಳ್ಳೀ, ಚಾಲಕ ಚಂದ್ರಶೇಖರ, ಸುಜಿತ್, ಶ್ರೀನಿವಾಸ, ಶಾಂತಾರಾಮ ಶೆಟ್ಟಿ ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.
    ಬುಧವಾರ ಬೆಳಿಗ್ಗೆ ಹೆನ್‍ಬೇರುವಿನಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯವಾದ ರೀತಿಯಲ್ಲಿ ವ್ಯಕ್ತಿಯೋರ್ವರ ಕಳೇಬರಹ ಪತ್ತೆಯಾಗಿತ್ತು. ಪ್ರಕರಣವನ್ನು ಬೇದಿಸಲು ಹೊರಟ ಪೊಲೀಸರು ಪ್ರಾರಂಭದಲ್ಲಿ ಕಾರಿನ ಚೆಸ್ಸಿ ನಂಬರ್ ಫೊರೆನ್ಸಿಕ್ ತಜ್ಞರ ಸಹಕಾರದಲ್ಲಿ ಪತ್ತೆ ಹಚ್ಚಿ ಆ ಆಧಾರದಲ್ಲಿ ಕಾರಿನ ಮಾಲಕರ ಪತ್ತೆ ºಚ್ಚಿದ್ದರು. ಕಾರು ಸದಾನಂದ ಸೇರುಗಾರ್ ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿತ್ತು. ಸಾಸ್ತಾನ ಟೋಲ್ ಗೇಟ್‍ನಲ್ಲಿ ರಾತ್ರಿ 12.30ಕ್ಕೆ ಈ ಕಾರಿನಿಂದ ಮಹಿಳೆ ಟೋಲ್ ಪಾವತಿಸಿರುವುದು ದೃಢ ಪಟ್ಟಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆದು ಒಂದೇ ದಿನದಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

  • ವಿಶಿಷ್ಠ ಆಚರಣೆಗಳ ಮಾರಿಕಾಂಬೆಯ ಜಾತ್ರೆ : ಕೋಣನ ಮೂಲಕ ಪುರಮೆರವಣಿಗೆ ಮಾರಿಕಾಂಬೆಯ ಜಾತ್ರೆಗೆ ಕೆಳಾಕಳಿ ಸನ್ನದ್ಧ

    ವಿಶಿಷ್ಠ ಆಚರಣೆಗಳ ಮಾರಿಕಾಂಬೆಯ ಜಾತ್ರೆ : ಕೋಣನ ಮೂಲಕ ಪುರಮೆರವಣಿಗೆ ಮಾರಿಕಾಂಬೆಯ ಜಾತ್ರೆಗೆ ಕೆಳಾಕಳಿ ಸನ್ನದ್ಧ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಹಕ್ಲಾಡಿ ಗ್ರಾಮದ ಗ್ರಾಮದೇವತೆ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಮೇ 10 ರಿಂದ ಆರಂಭವಾಗಲಿದ್ದು, ಮೇ 12ರವರೆಗೆ ನಡೆಯಲಿದೆ. ಶಿರಸಿಯ ಮಾರಿಕಾಂಬೆಯ ತಂಗಿಯೆಂದೇ ಜನಜನಿತವಾಗಿರುವ ಕೆಳಾಕಳಿ ದೇವಿಯ ಜಾತ್ರಾ ಮಹೋತ್ಸವವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

    ದೇವಸ್ಥಾನದ ವಠಾರದಲ್ಲಿ ಮೇ 9 ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ರಾತ್ರಿ 12ಕ್ಕೆ ದೇವಿಯ ವೈಭವದ ಬೀಡಿಕೆ ಮೆರವಣಿಗೆ, ಮೇ 10 ರಂದು ಹರಕೆಯ ಸೇವೆಗಳು, ಕೋಣನ ಪುರ ಪ್ರವೇಶ, ಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಮಂಡಳಿಯಿಂದ ಭಕ್ತಿ ಲಹರಿ, ನಾಟಕ, ಯಕ್ಷಗಾನ, ಮೇ 11ರಂದು ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಕಸಗುಡಿಸುವ ಸೇವೆ, ಅನ್ನಸಂತರ್ಪಣೆ, ಮೇ 12 ರಂದು ತುಲಾಭಾರ, ದೇವಿಯ ಪುರಪ್ರವೇಶ, ಹರಕೆ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.

    ಕೋಣನ ಪುರ ಮೆರವಣಿಗೆ
    ದೇಗುಲದಲ್ಲಿ ಪೂಜೆ ಮಾಡಿ, ಜನರ ಸಂಕಷ್ಟ ನಿವಾರಣೆಗೆಂದು ಪುರ ಮೆರವಣಿಗೆ ಹೊರಡುವ ದೈವ ಸ್ವರೂಪಿಯಾದ ಕೋಣನಿಗೆ ಗ್ರಾಮದ ಮುತ್ತೈದೆಯರು ಕಾಲು ತೊಳೆದು, ಹಣೆಗೆ ಅರಿಶಿನ ಕುಂಕುಮವಿಟ್ಟು, ನೆತ್ತಿಗೆ ಎಣ್ಣೆ ಹಾಕಿ ಭಕ್ತಿಯಿಂದ ಕಾಲಿಗೆರಗಿ ಮಾರಿಕಾಂಬಾ ಕಾಪಾಡಮ್ಮಾ ಎಂದು ಭಯಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಕೋಣ ಮನೆ ಬಾಗಿಲಿಗೆ ಬಂದರೆ ಶುಭ ಎನ್ನುವ ನಂಬಿಕೆಯಿಂದ ಕೋಣನ ಮನೆ -ಮನೆ ಮೆರವಣಿಗೆ ನಡೆಯುತ್ತದೆ.

    ಶಿರಸಿಯಂತೆ ಮನೆ-ಮನೆ ಮೆರವಣಿಗೆ
    ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯ ಸಂದರ್ಭ ಕೋಣನ ಮೆರವಣಿಗೆ ನಡೆಯುವುದು ವಾಡಿಕೆ. ರಾಜ್ಯದ ಅದೆಷ್ಟೋ ಮಾರಿಕಾಂಬಾ ದೇವಿಯ ದೇವಸ್ಥಾನಗಳಲ್ಲಿ ಶಿರಸಿ ಬಿಟ್ಟರೆ ಕೋಣನ ಮೆರವಣಿಗೆ ನಡೆಯುವುದು ಕೆಳಾಕಳಿಯಲ್ಲಿ ಮಾತ್ರ ಅನ್ನುವುದು ವಿಶೇಷ. ಅಂದರೆ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಕೆಳಾಕಳಿಯಲ್ಲಿ ಮಾತ್ರ ಈ ಪದ್ಧತಿಯಿದೆ. ಜಾತ್ರೆಯ ಒಂದು ವಾರ ಮೊದಲಿನ ಮಂಗಳವಾರ (ಈ ಬಾರಿ ಮೇ 4) ಕೋಣನ ಮೆರವಣಿಗೆ ಹೊರಟಿದ್ದು, ಹಕ್ಲಾಡಿ, ಹರ್ಕೂರು ಹಾಗೂ ಸೇನಾಪುರ ಈ 3 ಗ್ರಾಮಗಳ ಎಲ್ಲ ಮನೆಗಳಿಗೆ ಭೇಟಿ ನೀಡುತ್ತದೆ. ಈಗ ಮನೆ ಹೆಚ್ಚಾಗಿದ್ದರಿಂದ ಅಲ್ಲಲ್ಲಿ ಒಂದು ಕಡೆ ಕಟ್ಟೆ ಮಾಡಿ, ಅಲ್ಲಿಯೇ ಕೋಣನಿಗೆ ಪೂಜೆ ನೆರವೇರಿಸಲಾಗುತ್ತಿದೆ.

    21 ದಿನ ಮೊದಲೇ ನಿಗದಿ
    ಜಾತ್ರೆಗೆ 21 ದಿನ ಮೊದಲೇ ಮಂಗಳವಾರ ದಿನ ನಿಗದಿಪಡಿಸಲಾಗುತ್ತದೆ. ಅಂದಿನಿಂದ ಹಕ್ಲಾಡಿ, ಹರ್ಕೂರು, ಸೇನಾಪುರ ಗ್ರಾಮದಲ್ಲಿ ಜಾತ್ರೆ ಮುಗಿಯುವವರೆಗೆ ಯಾವುದೇ ಮದುವೆ ಸಹಿತ ಯಾವುದೇ ಶುಭಕಾರ್ಯಗಳು ನಡೆಯವುದಿಲ್ಲ. ಅದಾದ ಎರಡನೇ ಮಂಗಳವಾರ ದೇಗುಲದ ಕಟ್ಟು-ಕಟ್ಟಲೆಗೆ ಸಂಬಂ„ಸಿದಂತೆ ಅನೇಕ

    2 ವರ್ಷಕ್ಕೊಮ್ಮೆ ಯಾಕೆ ?
    ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಶತಶತಮಾಗಳ ಇತಿಹಾಸವಿದೆ. ಶಿರಸಿ ಮಾರಿಕಾಂಬಾ ದೇವಿ ಅಕ್ಕನಾದರೆ, ಕೆಳಾಕಳಿ ದೇವಿ ತಂಗಿ ಅನ್ನುವುದು ಭಕ್ತರ ನಂಬಿಕೆ. ಒಂದು ವರ್ಷ ಶಿರಸಿಯಲ್ಲಾದರೆ, ಮತ್ತೊಂದು ವರ್ಷ ಕೆಳಾಕಳಿಯಲ್ಲಿ ಜಾತ್ರೆ ನಡೆಯುತ್ತದೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ರದ್ದಾಗಿದ್ದರಿಂದ ಈ ವರ್ಷ ನಡೆಯುತ್ತಿದೆ. ಶಿರಸಿಯಲ್ಲಿ ಏನೆಲ್ಲ ನಡೆಯುತ್ತದೋ ಅದೆಲ್ಲವೂ ಇಲ್ಲಿಯೂ ನಡೆಯುತ್ತದೆ. ಬೇರೆ ದೇವಸ್ಥಾನ ಹಾಗೂ ದೇವರಿಗೆ ಹರಕೆ ತೀರಿಸಲು ಎಲ್ಲದಿನ ಅವಕಾಶವಿದ್ದರೂ, ಕೆಳಾಕಳಿಯಲ್ಲಿ ಜಾತ್ರೆ ವೇಳೆ ಮಾತ್ರ ಹರಕೆ ಸಂದಾಯಕ್ಕೆ ಅವಕಾಶ. ಜಾತ್ರೆ ಸಂದರ್ಭ ಹೊರ ಗದ್ದುಗೆಯಲ್ಲಿ ಮಾರಿಕಾಂಬೆ ದೇವಿ ಕೂರಿಸಿ, ಎಲ್ಲ ವರ್ಗದ ಜನರಿಗೂ ಪೂಜೆ ಮಾಡುವ ಅವಕಾಶವಿದ್ದು, ಸರ್ವಧರ್ಮ ಸಮನ್ವಯತೆಗೆ ಸಾಕ್ಷಿ.

    ಕಳೆದ ವರ್ಷ ಕೊರೊನಾದಿಂದ ಜಾತ್ರೆ ನಡೆದಿರಲಿಲ್ಲ. ಅದರ ಪ್ರಾಯಶ್ಚಿತವಾಗಿ ಈ ವರ್ಷ ಆಚರಿಸಲಾಗುತ್ತಿದೆ. ಸಿರಸಿಯಂತೆಯಯೇ ಎಲ್ಲ ಆಚರಣೆಗಳನ್ನು ನಡೆಸಲಾಗುತ್ತಿದೆ. ಕೋಣನ ಪುರ ಮೆರವಣಿಗೆಯೆಂದರೆ ದೇವಿಯೇ ಮನೆ- ಮನೆಗೆ ಬಂದು, ಆಶೀರ್ವದಿಸುತ್ತಾಳೆ ಅನ್ನುವ ನಂಬಿಕೆ ನಮ್ಮೆಲ್ಲರದು. ಉಡುಪಿ, ಕುಂದಾಪುರ ಮಾತ್ರವಲ್ಲದೆ ಶಿರಸಿ, ಸಾಗರ, ನಗರ, ಹೊಸನಗರ ಕಡೆಯಿಂದೆಲ್ಲ ಭಕ್ತರು ಬರುತ್ತಾರೆ.
    – ಜಯರಾಜ್ ಎಸ್.ಹೆಗ್ಡೆ, ಆನುವಂಶಿಕ ಮೊಕ್ತೇಸರ, ಶ್ರೀ ಮಾರಿಕಾಂಬಾ ದೇವಸ್ಥಾನ ಕೆಳಾಕಳಿ

  • ಸದೃಢ ಭಾರತಕ್ಕಾಗಿ ಬಲಿಷ್ಠ ಬಿಜೆಪಿ ಧ್ಯೇಯವಾಕ್ಯ ಮನೆಮನೆಯಲ್ಲಿ ಮೊಳಗಲಿ -ಸಚಿವ ಕೋಟ

    ಸದೃಢ ಭಾರತಕ್ಕಾಗಿ ಬಲಿಷ್ಠ ಬಿಜೆಪಿ ಧ್ಯೇಯವಾಕ್ಯ ಮನೆಮನೆಯಲ್ಲಿ ಮೊಳಗಲಿ -ಸಚಿವ ಕೋಟ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಟ್ಟು ಹಾಗು ಪಡುಕರೆಯ 4 ಮತ್ತು 5 ನೇ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಹಾಗೂ ಸಶಕ್ತ ಬೂತ್ – ಸದೃಢ ಭಾರತ ಅಧ್ಯಯನ ಹಾಗೂ ಪರಿಶೀಲನ ಸಭೆ ಭಾನುವಾರ ನಡೆಯಿತು.

    ಈ ಸಂಧರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸದೃಢ ಭಾರತಕ್ಕಾ ಬಲಿಷ್ಠ ಬಿಜೆಪಿ ಎಂಬ ಧ್ಯೇಯಗಳನ್ನು ಇರಿಸಿ ಪ್ರತಿಯೊಬ್ಬರು ಪಕ್ಷಕ್ಕಾಗಿ ಶ್ರಮಿಸಬೇಕಾಗಿದೆ.ಮುಂದಿನ ಚುನಾವಣೆ ದೃಷ್ಠಿಯನ್ನು ಇರಿಸಿಕೊಂಡು ಮನೆ ಮನೆಯಲ್ಲಿ ಭಾರತೀಯ ಜನತಾಪಾರ್ಟಿ ಘೋಷ ಮೊಳಗಿಸದಬೇಕು ತನ್ಮೂಲಕ ಇನ್ನೊಮ್ಮೆ ರಾಜ್ಯದಲ್ಲಿ ಭಾಜಪವನ್ನು ಅಧಿಕಾರಕ್ಕೆ ಏರಿಸಬೇಕು ಎಂದು ಕರೆ ಇತ್ತರು.
    ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಕೋಟತಟ್ಟು ಶಕ್ತಿ ಕೇಂದ್ರದ ವಿಸ್ತಾರಕ ಸದಾನಂದ ಉಪ್ಪಿನಕುದ್ರು,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಕುಂದಾಪುರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರಿ, ಕೋಟತಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಮೊದ್ ಹಂದೆ, ಹೊಸದಾಗಿ ಆಯ್ಕೆಯಾಗಿ ಮೂರು ಬೂತ್‍ನ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಂದಟ್ಟು , ರಾಮ ಎಮ್. ಬಂಗೇರ , ರಮಾನಂದ ಮೆಂಡನ್ ಹಾಗೂ ಕೋಟತಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರು ಕೋಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಮತ್ತಿತರರು ಉಪಸ್ಥಿತರಿದ್ದರು.

  • ಜನಜಾಗೃತಿಗಾಗಿ ಗಂಗೊಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಪೊಲೀಸ್ ಪಥ ಸಂಚಲನ

    ಜನಜಾಗೃತಿಗಾಗಿ ಗಂಗೊಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಪೊಲೀಸ್ ಪಥ ಸಂಚಲನ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಹಿಜಾಬ್- ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದ ಮೇಲ್ ಗಂಗೊಳ್ಳಿ, ಜಾಮಿಯಾ ಮೊಹಲ್ಲಾ, ಸುಲ್ತಾನ್ ಮೊಹಲ್ಲಾ, ಚರ್ಚ್ ರೋಡ್, ಎಸ್. ವಿ ಕಾಲೇಜು ರಸ್ತೆ, ಬಂದರು ರಸ್ತೆಯಲ್ಲಿ ಜನ ಜಾಗ್ರತಿ ಮೂಡಿಸುವ ಸಲುವಾಗಿ ಪೊಲೀಸ್ ಪಥ ಸಂಚಲನ ನಡೆಸಿದರು.

    ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್, ಕೊಲ್ಲೂರು ಠಾಣೆ ಪಿಎಸ್ಐ ಹೀರಣ್ಣ ಶಿರಗುಂಟೆ, ಟ್ರಾಫಿಕ್ ಠಾಣೆ ಪಿಎಸ್ಐ ಸುಧಾಪ್ರಭು, ಬೈಂದೂರು ಠಾಣೆ ಪಿಎಸ್ಐ ಪವನ್ ನಾಯ್ಕ್ ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು, ಕೆ.ಎಸ್.ಆರ್.ಪಿ ಮಹಿಳಾ ವಿಭಾಗದ ಪೊಲೀಸರು ಪಥಸಂಚಲನದಲ್ಲಿ ಇದ್ದರು.

     

  • ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅರಾಟೆ ದಿ| ಮಂಜುನಾಥ  ಪ್ರಶಸ್ತಿ ಪ್ರದಾನ

    ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅರಾಟೆ ದಿ| ಮಂಜುನಾಥ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಬಡಗುತಿಟ್ಟಿನ ಯಕ್ಷಕಿಂಕರ ಬಿರುದಾಂಕಿತ ಖ್ಯಾತ ಸ್ತ್ರೀವೇಷಧಾರಿ ಅರಾಟೆ ದಿ|ಮಂಜುನಾಥ ಸ್ಮರಣಾರ್ಥ ಕೊಡಮಾಡುವ ಅರಾಟೆ ಮಂಜುನಾಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.30ರಂದು ಬೇಲ್ತೂರಿನಲ್ಲಿ ಜರಗಿತು.

    ಈ ಸಂದರ್ಭ ಬಡಗುತಿಟ್ಟಿನ ಖ್ಯಾತ ಕಲಾವಿದ ಬೇಲ್ತೂರು ರಮೇಶ್ ನಾಯ್ಕ್‍ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬೇಲ್ತೂರು ರಮೇಶ್ ಅವರು ಸುದೀರ್ಘ 54ವರ್ಷಗಳ ಕಾಲ ವೃತ್ತಿ ಕಲಾವಿದರಾಗಿ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದು ಇವರ ಪುಂಡುವೇಷ ಅತ್ಯಂತ ಅದ್ಬುತವಾದದ್ದು. ಇವರ ನಿರಂತರ ಯಕ್ಷ ಸೇವೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಸಿಗಬೇಕಿತ್ತು ಎಂದರು.

    ಪ್ರಶಸ್ತಿ ಸ್ವೀಕರಿಸಿದ ಬೇಲ್ತೂರು ರಮೇಶ್ ಮಾತನಾಡಿ, ನನ್ನ ಯಕ್ಷ ತಿರುಗಾಟದ ಯಶಸ್ವಿಗೆ ಅರಾಟೆ ಮಂಜುನಾಥನವರ ಸಹಕಾರ ಅತ್ಯಂತ ಮಹತ್ವದಿದೆ. ಆದ್ದರಿಂದ ಇಂದು ಅವರ ಹೆಸರಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಅತ್ಯಂತ ಖುಷಿಕೊಡುತ್ತಿದೆ ಎಂದರು.
    ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ ಶುಭ ಹಾರೈಸಿದರು.
    ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ, ಕಟ್‍ಬೇಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಪುತ್ರನ್, ಮೊಗವೀರ ಯಕ್ಷಕಲಾವೇದಿಕೆಯ ಚಂದ್ರ ಕಂಡ್ಲೂರು, ದೇವದಾಸ್ ಬಾರ್ಕೂರು, ಅರಾಟೆಯವರ ಪತ್ನಿ ಜಲಾಜಾಕ್ಷಿ ಎಂ ಅರಾಟೆ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
    ಕಾರ್ಯಕ್ರಮದ ಸಂಯೋಜಕ, ಅರಾಟೆಯವರ ಪುತ್ರ ಗಣೇಶ್ ಪ್ರಸಾದ್ ಅರಾಟೆ ಸ್ವಾಗತಿಸಿ, ವಿದ್ವಾನ್ ಅಶೋಕ್ ಆಚಾರ್ಯ ಸಾೈಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಶಿಲಾನ್ಯಾಸ

    ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…
    ಗಂಗೊಳ್ಳಿ :
    ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪುಗೊಳ್ಳುತ್ತಿದ್ದು, ಅನೇಕ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ. ಪಿಸಲಾಗುವುದು. 94ಸಿ, 94ಸಿಸಿ, 53 ಮತ್ತು 57ರ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ತಹಶೀಲ್ದಾರ್‍ರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

    ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗುಜ್ಜಾಡಿ ಗ್ರಾಮ ಪಂಚಾಯತ್ ಸಮೀಪ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

    ಕ್ಷೇತ್ರದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡುವ ಸುಮಾರು 500 ಕೋಟಿ ರೂ. ವೆಚ್ಚದ ಯೋಜನೆ ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ. ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಲು ಅಲೆಯುವುದನ್ನು ತಪ್ಪಿಸಲು ಪಡಿತರ ಚೀಟಿ ಹೊಂದಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಸರಕಾರ ಆದೇಶ ಹೊರಡಿಸಲಿದೆ. ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಮಾಜಿ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಣೇಕರ್, ಗುಜ್ಜಾಡಿ ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸದಸ್ಯರಾದ ಹರೀಶ ಮೇಸ್ತ, ಶೇಖರ ದೇವಾಡಿಗ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಶ್ರೀಧರ, ತುಂಗಾ ಪೂಜಾರಿ, ಭಾರತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ ಪೂಜಾರಿ, ಪಿಡಿಒ ಶೋಭಾ, ಕಾರ್ಯದರ್ಶಿ ಶಕುಂತಲಾ, ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.