Category: ಸುದ್ದಿ

  • ಕುಂದಾಪುರ: ಮೇಲ್ಸೆತುವೆಯ ತಳಭಾಗದ ಸೌಂದರ್ಯಕರಣ ಉದ್ಘಾಟನೆ

    ಕುಂದಾಪುರ: ಮೇಲ್ಸೆತುವೆಯ ತಳಭಾಗದ ಸೌಂದರ್ಯಕರಣ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಕುಂದಾಪುರ ಸುವರ್ಣ ಮಹೋತ್ಸವದ ಅಂಗವಾಗಿ ಕುಂದಾಪುರ ಶಾಸ್ತ್ರೀ ಸರ್ಕಲ್‍ನ ಮೇಲ್ಸೆತುವೆಯ ತಳಭಾಗವನ್ನು ಸುಮಾರು 24 ಲಕ್ಷ ವೆಚ್ಚದಲ್ಲಿ ಸೌಂದರ್ಯಕರಣ ಮಾಡಲಾಗಿದ್ದು ಅದರ ಪುರಸಭೆಗೆ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಉದ್ಘಾಟನೆ ನೆರವೇರಿಸಿದರು.

    ಕುಂದಾಪುರ ಮೇಲ್ಸೆತುವೆಯ ತಳಭಾಗ ಸೂಕ್ತ ನಿರ್ವಹಣೆ ಇಲ್ಲದೆ ಇರುವ ಸಂದರ್ಭ ಲಯನ್ಸ್ ಕ್ಲಬ್ ಕುಂದಾಪುರದವರು ವಿಶೇಷ ಆಸಕ್ತಿಯಿಂದ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಸೌಂದರ್ಯಕರಣಗೊಳಿಸಿದ್ದಾರೆ. ಕುಂದಾಪುರದ ಹೃದಯಭಾಗದ ಸ್ಥಳ ಈಗ ಅತ್ಯಂತ ಸುಂದರವಾಗಿದ್ದು, ನೈರ್ಮಲ್ಯಕರಣ ಕಾಪಾಡುವ ಕೆಲಸ ಎಲ್ಲರ ಜವಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧೀಕಾರದ ಮೂಲಕ ಪಾರ್ಕಿಂಗ್ ವ್ಯವಸ್ಥೆಗೆ ಅನುಮತಿ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಲಯನ್ಸ ಡಿಸ್ಟಿಕ್ 317ಸಿ ಗವರ್ನರ್ ಡಾ.ನೇರಿ ಕರ್ನೇಲಿಯೋ ಮಾತನಾಡಿ, ಲಯನ್ಸ್ ಕ್ಲಬ್ ನ ಗುರಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸ್ವಷ್ಚತೆಯ ಅರಿವು ಮೂಡಿಸುವುದು, ನಗರ ಸೌಂದರ್ಯ ಕಾಪಾಡುವ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ಮುಖ್ಯ ಉದ್ದೇಶ, ಸಾರ್ವಜನಿಕ ಸ್ಥಳಗಳು, ಉದ್ಯಾವನಗಳುಮ ಪಾರ್ಕುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಲಯನ್ಸ್ ಕ್ಲಬ್ ಶ್ರಮಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕುಂದಾಪುರ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವವ ಸಂದರ್ಭದಲ್ಲಿ ಎಲ್ಲರೂ ಮೆಚ್ಚುವಂತಹ ಕಾರ್ಯ ಮಾಡಿದೆ ಎಂದರು.
    ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‍ನ ಸುವರ್ಣ ಮಹೋತ್ಸವ ಯೋಜನೆಗೆ ಸಹಕಾರ ನೀಡಿದ ಕುಂದಾಪುರ ಲಯನ್ಸ್ ಕ್ಲಬ್‍ನ ಸ್ಥಾಪಕ ಬಸ್ರೂರು ವೀರರಾಜೇಂದ್ರ ಹೆಗ್ಡೆ ಕುಟುಂಬದವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಲಯನ್ಸ್ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಡಾ.ದಿನೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಇಂ.ರಮಾನಂದ ಕೆ. ಪ್ರಾಸ್ತಾವಿಕ ಮಾತನಾಡಿ 1972ರಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಆರಂಭಗೊಂಡಿತು. 1973ರಲ್ಲಿ ಅಂತರಾಷ್ಟ್ರೀಯ ಮಾನ್ಯತೆ ದೊರಕಿತು.ಇದೀಗ 51ನೇ ವರ್ಷದಲ್ಲಿ ನಮ್ಮ ಕ್ಲಬ್ ಮುನ್ನೆಡೆಯುತ್ತಿದೆ. ಸುವರ್ಣ ಮಹೋತ್ಸವದ ವರ್ಷದಲ್ಲಿ 24 ವೆಚ್ಚದಲ್ಲಿ ಕುಂದಾಪುರ ಮೇಲ್ಸೆತುವೆ ತಳಭಾಗದ ಸೌಂದರ್ಯಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ಎನ್.ಹೆಚ್.ಐ ಯಿಂದ ಅದಕ್ಕೆ ಅನುಮತಿ ದೊರಕಲಿಲ್ಲ. ಮುಂದೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಇದೆ. ಈ ಯೋಜನೆ ನಡೆಸಲು ಸರ್ಕಾರ, ಇಲಾಖಾ ಮಟ್ಟದಲ್ಲಿ ಸಹಕಾರ ನೀಡಿದ ಶಾಸಕರು, ಸಹಾಯಕ ಆಯುಕ್ತರು, ಪುರಸಭಾ ಮುಖ್ಯಸ್ಥರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
    ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ಆರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಲಯನ್ಸ್ ಪಿಡಿಜಿಗಳಾದ ಪ್ರಕಾಶ್ ಸೋನ್ಸ್, ಬಸ್ರೂರು ರಾಜೀವ ಶೆಟ್ಟಿ, ಮಂಜಪ್ಪ ಸೊರಬ ಶುಭ ಶಂಸನೆಗೈದರು. ಈ ಸಂದರ್ಭದಲ್ಲಿ ಜಯಕರ ಶೆಟ್ಟಿ, ದೇವದಾಸ ಕಾಮತ್, ಸಿಲ್ವೇಸ್ಟರ್ ಅಲ್ಮೇಡಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ದಿನಕರ ಆರ್ ಶೆಟ್ಟಿ, ಕೋಶಾಧಿಕಾರಿ ಬಿ.ಶಂಕರ್ ಶೆಟ್ಟಿ, ಸುವರ್ಣ ಮಹೋತ್ಸವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಹುಂತ್ರಿಕೆ ಮೊದಲಾದವರು ಉಪಸ್ಥಿತರಿದ್ದರು.
    ಧಾರಿಣಿ ಕುಂದಾಪುರ ಪ್ರಾರ್ಥಿಸಿದರು. ಲಯನ್ಸ ಕ್ಲಬ್ ಅಧ್ಯಕ್ಷರಾದ ಡಾ.ರಮೇಶ ಶೆಟ್ಟಿ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ ವಂದಿಸಿದರು. ಸದಾನಂದ ನಾವಡ ಕಾರ್ಯಕ್ರಮ ನಿರ್ವಹಿಸಿದರು.

  • ಗಂಗೊಳ್ಳಿ – ಸಮುದ್ರ ಮೀನು ಸಂರಕ್ಷಣೆಗೆ ಬಂಡೆ ಸಾಲು ಯೋಜನೆ ಅನುಷ್ಠಾನ ಶೀಘ್ರ – ಸಚಿವ ಮಂಕಾಳ್ ವೈದ್ಯ

    ಗಂಗೊಳ್ಳಿ – ಸಮುದ್ರ ಮೀನು ಸಂರಕ್ಷಣೆಗೆ ಬಂಡೆ ಸಾಲು ಯೋಜನೆ ಅನುಷ್ಠಾನ ಶೀಘ್ರ – ಸಚಿವ ಮಂಕಾಳ್ ವೈದ್ಯ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಳ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಮತ್ತು ಮೀನುಗಳ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಬಂಡೆ ಸಾಲು ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಹೇಳಿದರು.

    ಭಾನುವಾರ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಡೆದ ಪರಿಹಾರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಮುದ್ರದಲ್ಲಿ ಮೀನುಗಳು ಮರಿ ಹಾಕುವ ಪ್ರಕ್ರಿಯೆಯಿಂದ ಆರಂಭಗೊಂಡು ಮೀನುಗಳು ಬಲಿಷ್ಠವಾಗುವಲ್ಲಿಯವರೆಗೂ ಇತ್ತೀಚಿನ ದಿನಗಳಲ್ಲಿ ತೊಂದರೆಗೆ ಒಳಗಾಗುತ್ತಿದ್ದು ಸಮುದ್ರ ಮೀನುಗಳ ಸಂರಕ್ಷಣೆಗೆ ಸುಮಾರು 5 ಮೀಟರ್ ಆಳದಿಂದ 10 ಮೀಟರ್ ಆಳದವರೆಗೆ ಸಮುದ್ರದಲ್ಲಿ ಕೃತಕ ಬಂಡೆಸಾಲುಗಳನ್ನು ನಿರ್ಮಿಸುವ ಮೂಲಕ ಮೀನು ಸಂರಕ್ಷಣಾ ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಕೇರಳ ರಾಜ್ಯ ಮತ್ತು ತಮಿಳುನಾಡುಗಳಲ್ಲಿ ಈ ರೀತಿಯ ಬಂಡೆಸಾಲು ಯೋಜನೆ ಯಶಸ್ವಿಯಾಗಿದ್ದು, ರಾಜ್ಯದಲ್ಲಿಯೂ ಶೀಘ್ರ ಅನುಷ್ಟಾನಗೊಳ್ಳಲಿದೆ ಎಂದರು.

    ಗಂಗೊಳ್ಳಿ ಜೆಟ್ಟಿ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಶೀಘ್ರ ಕೈಗೊಳ್ಳಲಾಗುತ್ತಿದೆ. ತನಿಖೆ ನ್ಯಾಯಾಲಯದಲ್ಲಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದ ಅವರು, ನಮಗಿರುವುದು ಸ್ವಲ್ಪವೇ ದಿನಗಳ ಅವಕಾಶ ಎನ್ನುವ ಅರಿವಿದೆ. ಅಲ್ಪ ಅವಧಿಯಲ್ಲಿ ನಾನು ನನ್ನ ಹೆಸರು ಉಳಿಸಿ ಹೋಗುತ್ತೇನೆ ಎಂದರು. ದೇಶದ ಕಡಲ ತೀರದ ಭದ್ರೆತೆಯ ಬಗ್ಗೆ ಯಾರಿಗೂ ಭಯ ಬೇಡ. ದೇಶದ ಕರಾವಳಿ ತೀರದ ಸೆಕ್ಯೂರಿಟಿಯನ್ನು ನಮ್ಮ ಮೀನುಗಾರರೇ ಮಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಅವರೇ ಮಾಡಿದ್ದಾರೆ. ಮುಮದೆಯೂ ಅವರ ಕಣ್ತಪ್ಪಿಸಿ ಒಂದು ಸೂಜಿ ಮೊನೆಯೂ ಒಳ ಬರುವುದು ಸಾಧ್ಯವಿಲ್ಲ ಎಂದು ಮೀನುಗಾರರನ್ನು ಕೊಂಡಾಡಿದರು.

  • ಗಂಗೊಳ್ಳಿ :ನಾನು ಮಂತ್ರಿ ಅಲ್ಲ ಜನಸಾಮಾನ್ಯ – ಸಚಿವ ಮಾಂಕಾಳ್ ಎಸ್ ವೈದ್ಯ

    ಗಂಗೊಳ್ಳಿ :ನಾನು ಮಂತ್ರಿ ಅಲ್ಲ ಜನಸಾಮಾನ್ಯ – ಸಚಿವ ಮಾಂಕಾಳ್ ಎಸ್ ವೈದ್ಯ

    ಗಂಗೊಳ್ಳಿ ಬಂದರಿನಲ್ಲಿ ಸಂತ್ರಸ್ತ ಮೀನುಗಾರರಿಗೆ ಪರಿಹಾರ ವಿತರಣೆ ಹಾಗೂ ಮೀನುಗಾರರಿಗೆ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ: ನಾನು ಮಂತ್ರಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಜನಸಾಮಾನ್ಯನಾಗಿ ಗುರುತಿಸಿಕೊಳ್ಳುವ ಬಗ್ಗೆ ಹೆಚ್ಚು ಇಷ್ಟಪಡುತ್ತೇನೆ. ಮೀನುಗಾರರು ನನ್ನೆಲ್ಲ ಬಂಧುಗಳು ಮೀನುಗಾರ ಸಮುದಾಯದಿಂದಾಗಿ ನನಗೆ ಇಂದು ಸಚಿವನಾಗುವ ಯೋಗ ಬಂದಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್ ವೈದ್ಯ ಹೇಳಿದರು.

    ಅವರು ಭಾನುವಾರ ಮೀನುಗಾರಿಕಾ ಇಲಾಖೆಯ ವತಿಯಿಂದ ಗಂಗೊಳ್ಳಿ ಬಂದರಿನಲ್ಲಿ ಸಂತ್ರಸ್ತ ಮೀನುಗಾರರಿಗೆ ಪರಿಹಾರ ವಿತರಣೆ ಹಾಗೂ ಮೀನುಗಾರರಿಗೆ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಪರಿಹಾರ ವಿತರಿಸಿ ಮಾತನಾಡಿದರು.

    ನಾನು ಸಚಿವನಾದ ಮೇಲೆ ಬೋಟು ಅಥವಾ ದೋಣಿ ದುರಂತಕ್ಕೊಳ್ಳಗಾದರೆ 24 ಗಂಟೆಯೊಳಗೆ 1 ರಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಒಂದು ವೇಳೆ ಮೀನುಗಾರಿಕೆ ಸಂದರ್ಭ ಮೀನುಗಾರ ಕಾರ್ಮಿಕ ಸಾವನ್ನಪ್ಪಿದರೆ 8 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

    ಮೀನುಗಾರರು ಯಾವತ್ತೂ ಸಹಾಯಕ್ಕಾಗಿ ಇನ್ನೊಬ್ಬರೊಂದಿಗೆ ಕೈಚಾಚಬಾರದು ಎನ್ನುವ ಉದ್ದೇಶದಿಂದ ಸುಮಾರು 5000 ಕೋಟಿಗಳ ಬಜೆಟ್ ಮೀನುಗಾರಿಕಾ ಇಲಾಖೆ ಮತ್ತು ಬಂದರು ಇಲಾಖೆಗೆ ಒದಗಿಸಲಾಗುತ್ತಿದೆ ಎಂದರು. ಕರಾವಳಿಯ ಭಾಗದಲ್ಲಿ ಮೀನುಗಾರಿಕಾ ಇಲಾಖೆಯಲ್ಲಿ ಕರಾವಳಿಗಳಿಗೆ ಯಾವುದೇ ಹುದ್ದೆಗಳು ಸಿಗುತ್ತಿಲ್ಲ ಕೃಷಿ ಭೂಮಿ ಇಲ್ಲದವರಿಗೆ ಮೀನುಗಾರಿಕಾ ಮತ್ತು ಬಂದರೂ ಇಲಾಖೆಯಲ್ಲಿ ಅಧಿಕಾರಿಗಳಾಗಿ ಆಯ್ಕೆಯಾಗಲು ಅವಕಾಶ ಇಲ್ಲದಿರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಕೃಷಿಭೂಮಿ ಇಲ್ಲದೆ ಇರುವವರೆಗೂ ಕೂಡ ಸರಕಾರಿ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

    ಇದೇ ಸಂದರ್ಭ ಗಂಗೊಳ್ಳಿಯಲ್ಲಿ 13 11 2018 ರಂದು ನಡೆದ ದೋಣಿ ಅಗ್ನಿ ದುರಂತ ದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಪತ್ರ ವಿತರಿಸಲಾಯಿತು. ಅಲ್ಲದೆ ಶಿರೂರಿನ ಅಳ್ವೆಗದ್ದೆಯಲ್ಲಿ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಪತ್ರ, ಅರ್ಹರಿಗೆ ಲೈಫ್ ಜಾಕೆಟ್ ಹಾಗೂ ಲೈಫ್ ಬಾಯ್ ಗಳನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಪರಿಹಾರ ಕಿಟ್ ವಿತರಿಸಲಾಯಿತು.

    ಉಡುಪಿ ಶಾಸಕ ಯಶಪಾಲ ಸುವರ್ಣ ಮಾತನಾಡಿ,
    “ಜೀವದ ಹಂಗು ತೊರೆದು ಬದುಕು ಕಟ್ಟಿಕೊಳ್ಳುವವರು ಮೀನುಗಾರರು. ಕರಾವಳಿ ಮೀನುಗಾರಿಕೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ. ಆದರೆ ಈಗ ಮೀನುಗಾರಿಕೆಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಸಿನ್ ಬೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಾಡ ದೋಣಿ ಮೀನುಗಾರರು ಸೀಮೆಣ್ಣೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಕೋಪಕ್ಕೊಳಗಾದ ಸಂತ್ರಸ್ತರಿಗೆ 8 ಲಕ್ಷ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇದೆಲ್ಲವನ್ನು ಗಮನಿಸಿ ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಮೀನುಗಾರಿಕಾ ಸಚಿವರು ಮತ್ತು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಬೇಕಿದೆ” ಎಂದರು.

    ಇದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಮತ್ತು ಬಂದರು ಇದಕ್ಕೆ ಸಚಿವರಾದ ಮಾಂಕಾಲ ವೈದ್ಯ ಅವರನ್ನು ಗಂಗೊಳ್ಳಿ ಬಂದರು ವ್ಯಾಪ್ತಿಯ ಮೀನುಗಾರರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಎ. ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಡುಪಿ ಶಾಸಕ ಯಶ್ ಪಾಲ್ ಆನಂದ್ ಸುವರ್ಣ, ಮದನ್ ಕುಮಾರ್ ಉಪ್ಪುಂದ, ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕ ವಿವೇಕ ಆರ್, ಉಪನಿರ್ದೇಶಕ ಅಂಜನಾದೇವಿ ಟಿ, ಗಂಗೊಳ್ಳಿ ಬಂದರು ಮೀನುಗಾರಿಕಾ ಉಪ ನಿರ್ದೇಶಕ ಸಂಜೀವ ಅರಕೆರೆ, ಕುಂದಾಪುರ ಮೀನುಗಾರಿಕಾ ಸಹಾಯಕ ಉಪನಿರ್ದೇಶಕ್ಕೆ ಕುಮಾರಿ ಸುಮಲತಾ ಉಪಸ್ಥಿತರಿದ್ದರು.

    ಮೀನುಗಾರಿಕೆ ಬಂದರುಗಳು ಮಲ್ಪೆ ಇದರ ಮೀನುಗಾರಿಕೆ ಅಪರ ನಿರ್ದೇಶಕ ಇದರ ಹರೀಶ್ ಕುಮಾರ್ ಸ್ವಾಗತಿಸಿದರು.

  • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ಶುಭಾಶಂಸನಾ ಕಾರ್ಯಕ್ರಮ

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ಶುಭಾಶಂಸನಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2023-24 ನೇ ಸಾಲಿನ ಹತ್ತನೇ ತರಗತಿಯ ಮಕ್ಕಳಿಗೆ ಶುಭಾಶಂಸನಾ ಕಾರ್ಯಕ್ರಮವು ಸಂಸ್ಥೆಯ ಕಾರ್ಯದರ್ಶಿಯವರಾದ ಕೆ. ರಾಧಾಕೃಷ್ಣ ಶೆಣೈ ಯವರ ಆಶಯದಂತೆ ನಡೆಯಿತು.

    ಈ ಸಮಾರಂಭದಲ್ಲಿ ನಮ್ಮ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿಯವರು ಮಕ್ಕಳಿಗೆ ಮುಂಬರುವ ಪರೀಕ್ಷೆಗೆ ಶುಭ ಹಾರೈಸಿದರು.

    ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡರು. ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗರು ಸರ್ವರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಸಂಗೀತ ಶಿಕ್ಷಕಿ ರಮಣಿಯವರು ಪ್ರಾರ್ಥನೆಗೈದರು. ಪ್ರೌಢಶಾಲಾ ಸಹಶಿಕ್ಷಕಿ ಪ್ರತಿಭಾ ಪೈ ರವರು ಕಾರ್ಯಕ್ರಮವನ್ನು ನಿರೂಪಿಸಿ, ಪ್ರೌಢಶಾಲಾ ಸಹಶಿಕ್ಷಕಿ ಆಶಾ ಬಾಯಿಯವರು ಧನ್ಯವಾದ ಸಮರ್ಪಣೆಗೈದರು.

  • ವಂಡ್ಸೆ :ವಿಶ್ವೇಶ್ವರ ಸೋಮಯಾಜಿ ಮೋರ್ಟು ಅವರಿಗೆ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ

    ವಂಡ್ಸೆ :ವಿಶ್ವೇಶ್ವರ ಸೋಮಯಾಜಿ ಮೋರ್ಟು ಅವರಿಗೆ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಂಡ್ಸೆ ದಿ|ನಾರಾಯಣ ಗಾಣಿಗರ ಸ್ಮರಣಾರ್ಥ ನಾರಾಯಣ ಗಾಣಿಗರ ಕುಟುಂಬದವರು ಕೊಡಮಾಡುವ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ-2024ಕ್ಕೆ ಬಡಗುತಿಟ್ಟಿನ ಯಕ್ಷಗಾನ ಸಾಂಪ್ರದಾಯಿಕ ಶೈಲಿಯ ಭಾಗವತ, ಯಕ್ಷಗುರು, ಮದ್ದಳೆವಾದಕರಾದ ವಿಶ್ವೇಶ್ವರ ಸೋಮಯಾಜಿ ಮೋರ್ಟು ಇವರನ್ನು ಆಯ್ಕೆ ಮಾಡಲಾಗಿದೆ.

    ಮೋರ್ಟು ಶಿವರಾಮ ಸೋಮಯಾಜಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರರಾಗಿ 1950ರಲ್ಲಿ ಜನಿಸಿದ ಇವರು ಯಕ್ಷಗಾನದ ಬಗ್ಗೆ ಆಕರ್ಷಿತರಾಗಿ ಬೆಳ್ಳಾಲದ ವೆಂಕಟಾಚಲ ಹೆಬ್ಬಾರ್ ಅವರ ಬಳಿ ತಾಳ ಅಭ್ಯಾಸ ಮಾಡಿದರು. ಕದಳಿಯ ಸೀತಾರಾಮ ಮಧ್ಯಸ್ಥ, ಜನ್ಸಾಲೆ ನಾಗಪ್ಪಯ್ಯವರ ಗರಡಿಯಲ್ಲಿ ಮದ್ದಳೆಯ ನುಡಿತಗಳನ್ನು ಸಾಂಪ್ರದಾಯಕವಾಗಿ ಅಭ್ಯಾಸಿಸಿ ಬಳಿಕ ಮಾರ್ವಿ ವಾದಿರಾಜ ಹೆಬ್ಬಾರ್ ಅವರಲ್ಲಿ ಭಾಗವತಿಕೆಯನ್ನು ಕರಗತ ಮಾಡಿಕೊಂಡರು. 1976ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಳಿ ಭಾಗವತಿಕೆಯ ರಂಗತಂತ್ರದ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು. ಕಮಲಶಿಲೆ, ಮಾರಣಕಟ್ಟೆ, ಮಂದಾರ್ತಿ, ಕೊಡವೂರು, ಪೆರ್ಡೂರು, ಶಿವರಾಜಪುರ, ಸೌಕೂರು ಮೇಳಗಳಲ್ಲಿ 28 ವರ್ಷಗಳ ಕಲಾಸೇವೆ ಸಲ್ಲಿಸಿದರು. ಬಡಗಿನ ಮೇರು ಭಾಗವತರಾಗಿದ್ದ ಮರವಂತೆ ನರಸಿಂಹ ದಾಸ, ಶ್ರೀನಿವಾಸ ಹಾಗೂ ಅಂಪಾರು ವೈದ್ಯರಿಗೆ ಮದ್ದಲೆಯಲ್ಲಿ ಸಾಥ್ ನೀಡಿ ಸೈ ಎನಿಸಿಕೊಂಡರು. ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮೆ ಹಾಗೂ ರಾಜಾರತ್ನ ಸೇನ ಎಂಬ ಪ್ರಸಂಗಗಳನ್ನು ರಚಿಸಿದ್ದಾರೆ. ಇವರ ಕಲಾಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಯಕ್ಷಬಂಧು ಅಭಿನಂದನಾ ಗ್ರಂಥವನ್ನು ಸಲ್ಲಿಸಲಾಗಿದೆ.

    ಮಾ.12ರಂದು ತಿರುಮಲ ಶ್ರೀ ಲಕ್ಷ್ಮೀವೆಂಕಟರಣ ದೇವಸ್ಥಾನ ಜಾತ್ರೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

  • ಕುಂದಾಪುರ :ಮಾ.13 ರಿಂದ 17ರ ತನಕ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ, 2016 ಕಾಯಿ ಗಣಹೋಮ

    ಕುಂದಾಪುರ :ಮಾ.13 ರಿಂದ 17ರ ತನಕ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ, 2016 ಕಾಯಿ ಗಣಹೋಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದಿ.ವೇ.ಮೂ.ಹಟ್ಟಿಅಂಗಡಿ ರಾಮಚಂದ್ರ ಭಟ್ಟರ ದಿವ್ಯ ಸಂಕಲ್ಪದ ಸ್ವರೂಪದಂತೆ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ, 2016 ಕಾಯಿ ಗಣಹೋಮ ಮಾ. 13ರಿಂದ ಮಾ.17ರ ತನಕ ನಡೆಯಲಿದೆ. ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮ, ಪ್ರತಿ ದಿನ ಮಹಾ ಅನ್ನಸಂತರ್ಪಣೆ, ಸಂಜೆ 6 ಘಂಟೆಯಿಂದ ಧಾರ್ಮಿಕ ಸಭೆ, ರಾತ್ರಿ 8 ಘಂಟೆಯಿಂದ ವೇ,ಮೂ. ರಾಮಚಂದ್ರ ಭಟ್ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ಟ್ ಹೇಳಿದರು.

    ಅವರು ಮಾ.9ರಂದು ಹಟ್ಟಿಯಂಗಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಮಾ.13ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪ್ರಾರಂಭ, ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ದೇವಾಲಯ ಲೋಕಾರ್ಪಣೆ, ಶಿಖರ ಕಲಶ ಸ್ಥಾಪನೆ, ಅಭಿಷೇಕ, ಭಕ್ತರಿಗೆ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶುಭಾಸಂಸನೆಗಯ್ಯುವರು. ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕ ಜಿ. ಶಂಕರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಧಾರ್ಮಿಕ ಮಾರ್ಗದರ್ಶಕ ಧ್ವಾರಕಾನಾಥ್, ಮಾನವ ಹಕ್ಕು ಆಯೋಗದ ಸದಸ್ಯ ಟಿ. ಶ್ಯಾಮ್ ಭಟ್ಟ, ಉಧ್ಯಮಿ ಆನಂದ ಕುಂದರ್, ಉಧ್ಯಮಿ ಜಗದೀಶ ಎಂ., ಬೆಂಗಳೂರು, ಶ್ರೀ ಮಹಿಷಾಸುರ ಮರ್ಧಿನಿ ದೇವಾಲಯ ಬಗ್ವಾಡಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಟ್ಟಿಯಂಗಡಿ, ಗ್ರಾ.ಪಂ.ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ ಉಪಸ್ಥಿತರಿರುವರು.
    ಬಳಿಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕನ್ನಡ ನಾಟಕ ‘ಶಿವದೂತ ಗುಳಿಗ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

    ಮಾ.14ರಂದು ಬೆಳಿಗ್ಗೆ ಲಕ್ಷ ಮೋದಕ ಹವನ, 10 ಗಂಟೆಗೆ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವಾರ್ಣಲ್ಲಿ ಮಹಾಸಂಸ್ಥಾನಮ್ ಇವರ ಆಗಮನ, ದೇವರಿಗೆ ಪೂಜೆ, ಶ್ರೀಗಳಿಂದ ಆಶೀರ್ವಚನ ಹಾಗೂ ಮಂತ್ರಾಕ್ಷತೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣಮಠ ಅವರಿಂದ ಆಶೀರ್ವಚನ. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಪಂಚಾಂಗಕರ್ತ ತಟ್ಟುವಟ್ಟು ವಾಸುದೇವ ಜೋಯಿಸರು ಹಲಾಡಿ ಶುಭಾಸಂಸನೆಗೈಯುವರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎ. ಕಿರಣ್‍ಕುಮಾರ್ ಕೊಡ್ಗಿ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಗೋಪಾಲ ಪೂಜಾರಿ, ಆನೆಗುಡ್ಡೆ ವಿನಾಯಕ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮದ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಉಧ್ಯಮಿಗಳಾದ ಶಿವರಾಮ ಹೆಗ್ಡೆ ಬೆಂಗಳೂರು, ಜಿ.ಕೆ.ಶೆಣೈ ಬೆಂಗಳೂರು, ಹೆಚ್.ಬಿ.ಶಿವಕುಮಾರ್ ಬೆಂಗಳೂರು, ಗುರುಪ್ರಸಾದ್ ಬೆಂಗಳೂರು, ಕರುಣಾಕರ ಶೆಟ್ಟಿ ಅರಸೀಕೆರೆ, ಅತಿಶಯ ಜೈನ ಕ್ಷೇತ್ರದ ಮೊಕ್ತೇಸರ ಸುರೇಂದ್ರ ಜೈನ್, ಶ್ರೀ ಲೋಕನಾಥೇಶ್ವರ ದೇವಸ್ಥಾನದ ಮೊಕ್ತೇಸರ ಸನತ್ ಕುಮಾರ್ ರೈ, ಉಧ್ಯಮಿ ಗೋವಿಂದ ಬಾಬು ಪೂಜಾರಿ, ಬೈಂದೂರು, ಉಧ್ಯಮಿ ಸುಧೀಂದ್ರ ಕಟ್ಟೆ ಗಂಗೊಳ್ಳಿ, ಉಪಸ್ಥಿತರಿರುವರು.

    ಬಳಿಕ ರೂಪಕಲಾ ಕುಂದಾಪುರ ಇವರಿಂದ ಹಾಸ್ಯಮಯ ನಾಟಕ ಇನ್ಸ್‍ಪೆಕ್ಟರ್ ಅಣ್ಣಪ್ಪ ಪ್ರದರ್ಶನಗೊಳ್ಳಲಿದೆ ಎಂದರು.

    ಮಾ.15ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪೂರ್ಣಾಹುತಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ನಂಜುಂಡ ದೀಕ್ಷಿತ್, ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಗುರುರಾಜ ಶರ್ಮ ಉಪಸ್ಥಿತರಿರುವರು. ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು, ಶ್ರೀ ಗೋಕರ್ಣ ಪರ್ತಗಾಳಿ ಮಠ ಇವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಿವ್ಯ ಉಪಸ್ಥಿತಿ ಇರಲಿದೆ ಎಂದೂ ತಿಳಿಸಲಾಗಿದೆ. ಸಂಜೆ 6 ಗಂಟೆಗೆ ಶ್ರೀಚಕ್ರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ. ಧಾರ್ಮಿಕ ಸಭೆಯಲ್ಲಿ ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಕಟೀಲು ದೇವಸ್ಥಾನದ ಅನುವಂಶೀಯ ಅರ್ಚಕ ಹರಿನಾರಾಯಣ ಅಸ್ರಣ್ಣ ಶುಭಾಸಂಸನೆಗೈಯುವರು. ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ರಾವ್, ಶಾಸಕ ಯಶ್‍ಪಾಲ್ ಸುವರ್ಣ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕ ಸುಕುಮಾರ ಶೆಟ್ಟಿ, ಶ್ರೀ ಕ್ಷೇತ್ರ ಕಮಲಶಿಲೆಯ ಅನುವಂಶೀಯ ಅರ್ಚಕ ಸಚ್ಚಿದಾನಂದ ಚಾತ್ರ, ಹರಿಕೃಷ್ಣ ಪುನರೂರು ಮೂಲ್ಕಿ, ಯೋಗೀಶ ಕಾಮತ್ ಚಾರ್ಟಡ್ ಅಕೌಂಟೆಂಟ್ ಕುಮಟಾ, ಉಧ್ಯಮಿಗಳಾದ ದಿನೇಶಕುಮಾರ್ ಹೆಗ್ಡೆ, ಕೆ.ಎಂ.ಶೆಟ್ಟಿ ಉಪಸ್ಥಿರಿರುವರು. ಬಳಿಕ ಕುದ್ರೋಳಿ ಗಣೇರ್ಶ ಅವರಿಂದ ಜಾದೂ ಜಾತ್ರೆ ‘ಮಯಾಲೋಕ’ ನಡೆಯಲಿದೆ ಎಂದರು.

    ಮಾ.16ರಂದು ಬೆಳಿಗ್ಗೆ ಶತಚಂಡಿಕಾಯಾಗ ಪೂರ್ಣಾಹುತಿ, ಶ್ರೀ ಬಾಳೇಕುದುರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಹೊರನಾಡು ಧರ್ಮಕರ್ತರು ಭೀಮೇಶ್ವರ ಜೋಷಿ ಉಪಸ್ಥಿತರಿರುವರು. ಸಂಜೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಧರ್ಮಕರ್ತರು ಹೊರನಾಡು ಭೀಮೇಶ್ವರ ಜೋಷಿ ಶುಭಾಸಂಸನೆಗೈಯುವರು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಶಾಸಕ ಸುನಿಲ್ ಕುಮಾರ್, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಕರ್ನಾಟಕ ಬ್ಯಾಂಕ್ ನಿವೃತ್ತ ಎಂ.ಡಿ. ಎಂ.ಎಸ್.ಮಹಾಬಲೇಶ್ವರ ಭಟ್ಟ, ಉಧ್ಯಮಿಗಳಾದ ಆರೂರು ಪ್ರಭಾಕರ ರಾವ್, ಶರತ್ ಸಾಲಿಯಾನ್, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಉಧ್ಯಮಿ ಚಂದ್ರûಶೇಖರ ಶೆಟ್ಟಿ ಬೆಂಗಳೂರು, ಉಪಸ್ಥಿತರಿರುವರು. ಬಳಿಕ ರಾಜ್ಯಮಟ್ಟದ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ನೇತೃತ್ವದಲ್ಲಿ ಟಿವಿ ವಾಹಿನಿಗಳ ಪ್ರಸಿದ್ಧಿಯ ಕಲಾವತಿ ದಯಾನಂದ, ರವೀಂದ್ರ ಪ್ರಭು, ರಜತ್ ಮೈಯ್ಯ ಮತ್ತು ಅನೇಕ ಕಲಾವಿದರಿಂದ ‘ಸ್ವರಾಂಜಲಿ’ ನಡೆಯಲಿದೆ ಎಂದರು.

    ಮಾ.17ರಂದು ಬೆಳಿಗ್ಗೆ 2016 ಕಾಯಿ ಗಣಹವನ ಪ್ರಾರಂಭ, ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಇವರ ಆಗಮನ ಪೂರ್ಣ ಕುಂಭ ಸ್ವಾಗತ, ಶ್ರೀ ದೇವರ ಕಲಾ ಚೈತನ್ಯ ಪರಿಪೂರ್ಣತೆಗೋಸ್ಕರ ಪೂಜೆ, ರಜತ ಕಲಶಾಭಿಷೇಕ, ಪ್ರಧಾನ ಬ್ರಹ್ಮಕಲಶಾಭಿಷೇಕ ಮತ್ತು ಕನಕಾಭಿಷೇಕ ಗಣಹವನದ ಪೂರ್ಣಾಹುತಿಯಲ್ಲಿ ದಿವ್ಯ ಉಪಸ್ಥಿತಿ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ
    ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಗಳು, ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಗಾಣಗಾಪುರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ, ಪಾಂಡೇಶ್ವರದ ತೀರ್ಥಬೈಲಿನ ವಿಜಯ ಮಂಜ ಶುಭಾಸಂಸನೆಗೈಯುವರು.
    ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಲಕ್ಷ್ಮೀ ಹೆಬ್ಬಾಳ್ಳರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಉಧ್ಯಮಿ ಸದಾನಂದ ಮಯ್ಯ ಬೆಂಗಳೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಧ್ಯಮಿ ರಾಜೇಂದ್ರ ಕಟ್ಟೆ, ಉಧ್ಯಮಿ ದಿವಾಕರ ಶೆಟ್ಟಿ ಉಡುಪಿ, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ, ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಹೆಗ್ಡೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪಾರ್ವತಿ ಉಪಸ್ಥಿತರಿರುವರು.
    ರಾತ್ರಿ 8 ಗಂಟೆಗೆ ಹಟ್ಟಿಯಂಗಡಿ ಮೇಳ ಮತ್ತು ಮೆಕ್ಕೆಕಟ್ಟು ಮೇಳದವರಿಂದ ಕೂಡಾಟ ನಡೆಯಲಿದೆ ಎಂದರು.
    ಉದ್ಭವ ದ್ವಿಭುಜ ಸಿದ್ಧಿವಿನಾಯಕವಾಗಿರುವುದರಿಂದ ಮೂಲ ವಿಗ್ರಹವನ್ನು ಕದಲಿಸಲು ಅವಕಾಶವಿಲ್ಲ. ಪ್ರತಿಷ್ಠಾಂಗ ವಿಧಿಗಳು ನಡೆಯುವುದಿಲ್ಲ ಎಂದು ಹೇಳಿದ ಅವರು ಪವಾಡ ಸ್ವರೂಪದಂತೆ 5-6ತಿಂಗಳಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಆಗಿದೆ. ಬೆಳ್ಳಿರಥದ ನಿರ್ಮಾಣವೂ ಆಗಿದೆ ಎಂದು ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಾಮದೇವಿ ರಾಮಚಂದ್ರ ಭಟ್ಟ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ, ರಾಧಾಕೃಷ್ಣ ಭಟ್, ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು.

  • ಕುಂದಾಪುರ :ಜೆಇಇ ಮೈನ್ಸ್ B-Arch ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ.

    ಕುಂದಾಪುರ :ಜೆಇಇ ಮೈನ್ಸ್ B-Arch ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರಾಷ್ಟ್ರಮಟ್ಟದಲ್ಲಿ ಜರುಗಿದ 2024 ನೇ ಸಾಲಿನ ಜೆಇಇ ಮೈನ್ಸ್ B-Arch ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಧ್ಯಾ 92.301 ಪರ್ಸೆಂಟೈಲ್ (ಡ್ರಾಯಿಂಗ್ ಪರೀಕ್ಷೆ 97.884 ಪರ್ಸೆಂಟೈಲ್)ಪಡೆದು ಉತ್ತಮ ಸಾಧನೆ ಮೆರೆದಿದ್ದಾಳೆ.

    ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.

  • ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ

    ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಮಹಾ ಶಿವರಾತ್ರಿ ಆಚರಣೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮಹಾಶಿವನಿಗೆ ಸಾರ್ವಜನಿಕ ಶತ ರುದ್ರಾಭಿಷೇಕ 9-30 ರಿಂದ 12-30 ತನಕ ರುದ್ರಾಭಿಷೇಕ , ಹೆರಂಬ, ಮಹಾಗಣಪತಿ ಸನ್ನಿಧಾನದಲ್ಲಿ ರಂಗಪೂಜೆ, ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಅಗಲು ರಂಗಪೂಜೆ ವಿಶೇಷ ಕಾರ್ಯಕ್ರಮಗಳು ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತೃತ್ವದಲ್ಲಿ ಜರಗಿದವು.

    ಶ್ರೀ ದೇಗುಲದ ವತಿಯಿಂದ ಪನ್ಯಾರ ಪ್ರಸಾದ, ವಿಶೇಷ ಭಜನೆ ಭಾಗವಾಗಿ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರಿಂದ ಭಜನಾ ಕಾರ್ಯಕ್ರಮ ಜರಗಿತು.

    ನೂರಾರು ಭಕ್ತರು ಶ್ರೀ ದೇವರ ವಿವಿಧ ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಹರಕೆ ಸೇವೆಯನ್ನುಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕರಾದ ರವಿ ಐತಾಳ್, ರಘುಪತಿ ಭಟ್ ,ಟ್ರಸ್ಟ್ ಸದಸ್ಯರಾದ ಅಶೋಕ್ ಶೆಟ್ಟಿ, ದಿನೇಶ್ ಆಚಾರ್, ಬಾಬು, ಅಚ್ಯುತ ಹಂದೆ, ಕೃಷ್ಣ ದೇವಾಡಿಗ, ಸುಫಲ ಶೆಟ್ಟಿ, ದಿವ್ಯ ಪ್ರಭು, ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ, ಶಿವರಾಮ ಶೆಟ್ಟಿ, ಎಂ.ಎನ್ ಮಧ್ಯಸ್ಥ, ಎಂ.ವಿ ಮಯ್ಯ,ನಾಗರಾಜ್ ಅಮೀನ್,ಜಯರಾಮ್ ಆಚಾರ್, ವ್ಯವಸ್ಥಾಪಕಿ ಸುಶ್ಮಿತಾ ಉಪಸ್ಥಿತರಿದ್ದರು.

  • ಕೋಟತಟ್ಟು ಗ್ರಾಮಪಂಚಾಯತ್ ಸಾರಥ್ಯದಲ್ಲಿ ಕೊರಗ ಕುಟುಂಬಗಳಿಗೆ ಸೂರು ಭಾಗ್ಯ, ಶಿಲಾನ್ಯಾಸ

    ಕೋಟತಟ್ಟು ಗ್ರಾಮಪಂಚಾಯತ್ ಸಾರಥ್ಯದಲ್ಲಿ ಕೊರಗ ಕುಟುಂಬಗಳಿಗೆ ಸೂರು ಭಾಗ್ಯ, ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ದಾನಿಗಳ ನೆರವಿನೊಂದಿಗೆ ಸುಮಾರು 8 ಕೊರಗ ಕುಟುಂಬಗಳಿಗೆ ನವಸೂರು ಕಲ್ಪಿಸುವ ಕಾರ್ಯಕ್ರಮ ಶುಕ್ರವಾರ ಚಾಲನೆ ನೀಡಲಾಯಿತು.

    ಕೋಟತಟ್ಟು ಗ್ರಾಮಪಂಚಾಯತ್ ನೇತೃತ್ವದಲ್ಲಿ ಐಟಿಡಿಪಿ ನಿಧಿಯಿಂದ, ರಾಜೀವ್ ಗಾಂಧಿ ನಿಗಮ ಸೇರಿದಂತೆ ದಾನಿಗಳ ಸಹಕಾರದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಭೂಮಿಪೂಜೆ
    ಸಾಕಷ್ಟು ವರ್ಷಗಳಿಂದ ಇಲ್ಲಿನ ಎಂಟು ಕೊರಗ ಕುಟುಂಬಗಳು ಹಳೆಯ ಹಂಚಿನ ಚಾವಣಿ ಮನೆಯಲ್ಲಿ ವಾಸಿಸುತ್ತಿದ್ದರು ಅಲ್ಲದೆ ಸ್ಥಳ ಸಮಸ್ಯೆ ಕೂಡಾ ಎದುರಾಗಿತ್ತು, ಆದರೆ ಇದೀಗ ಕೋಟತಟ್ಟು ಗ್ರಾಮಪಂಚಾಯತ್ ವಿಶೇಷ ಮುತುವರ್ಜಿಯಿಂದ ಈ ಎಲ್ಲಾ ಕುಟುಂಬಗಳಿಗೆ ಕೆಲವೇ ತಿಂಗಳುಗಳಲ್ಲಿ ಸೂರು ಭಾಗ್ಯ ದೊರಯಲಿದೆ.

    ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಶಿಲಾನ್ಯಾಸ ನೆರವೆರಿಸಿದರು.

    ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಇಡೀ ವ್ಯವಸ್ಥೆಯಲ್ಲಿ ಅತಿ ಮುಗ್ಧ ಸಮುದಾಯ ಇದ್ದರೆ ಅದು ಕೊರಗ ಸಮುದಾಯ ಅಂತಹ ಸಮುದಾಯಕ್ಕೆ ದಾನಿಗಳ ನೆರವಿನೊಂದಿಗೆ ಸೂರು ಕಲ್ಪಿಸುವ ಕೋಟತಟ್ಟು ಗ್ರಾಮಪಂಚಾಯತ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಈ ಸುಮುದಾಯ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಎಲ್ಲರಿಗೂ ಮಾದರಿ ಬದುಕು ಕಾಣುವಂತಾಗಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ,ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ತೋಳಾರ್, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಕೊರಗ ಅಭಿವೃದ್ಧಿ ಇಲಾಖಾಧಿಕಾರಿ ವಿಶ್ವನಾಥ ಶೆಟ್ಟಿ, ಕೊರಗ ಮುಖಂಡರಾದ ಗಣೇಶ್ ಕೊರಗ ಕುಂಭಾಶಿ, ಗಣೇಶ್ ಕೊರಗ ಬಾರ್ಕೂರು, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಪಿ.ಡಿ.ಒ ರವೀಂದ್ರ ರಾವ್ ನಿರೂಪಿಸಿದರು.ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.

     

  • ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ರೇವತಿ ತೆಕ್ಕಟ್ಟೆ ಆಯ್ಕೆ

    ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ರೇವತಿ ತೆಕ್ಕಟ್ಟೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟದ ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ತೆಕ್ಕಟ್ಟೆ ಗ್ರಾ.ಪಂ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಆಯ್ಕೆಮಾಡಲಾಗಿದೆ.

    ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ರೇವತಿ ತೆಕ್ಕಟ್ಟೆ ಸ್ವಗೃಹದಲ್ಲಿ ಈ ಕಾರ್ಯಕ್ರಮ ಜರಗಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.