ಗಂಗೊಳ್ಳಿ – ಸಮುದ್ರ ಮೀನು ಸಂರಕ್ಷಣೆಗೆ ಬಂಡೆ ಸಾಲು ಯೋಜನೆ ಅನುಷ್ಠಾನ ಶೀಘ್ರ – ಸಚಿವ ಮಂಕಾಳ್ ವೈದ್ಯ

0
289

Click Here

Click Here

ಕುಂದಾಪುರ ಮಿರರ್ ಸುದ್ದಿ…

ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಳ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಮತ್ತು ಮೀನುಗಳ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಬಂಡೆ ಸಾಲು ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಹೇಳಿದರು.

Click Here

ಭಾನುವಾರ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಡೆದ ಪರಿಹಾರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಮುದ್ರದಲ್ಲಿ ಮೀನುಗಳು ಮರಿ ಹಾಕುವ ಪ್ರಕ್ರಿಯೆಯಿಂದ ಆರಂಭಗೊಂಡು ಮೀನುಗಳು ಬಲಿಷ್ಠವಾಗುವಲ್ಲಿಯವರೆಗೂ ಇತ್ತೀಚಿನ ದಿನಗಳಲ್ಲಿ ತೊಂದರೆಗೆ ಒಳಗಾಗುತ್ತಿದ್ದು ಸಮುದ್ರ ಮೀನುಗಳ ಸಂರಕ್ಷಣೆಗೆ ಸುಮಾರು 5 ಮೀಟರ್ ಆಳದಿಂದ 10 ಮೀಟರ್ ಆಳದವರೆಗೆ ಸಮುದ್ರದಲ್ಲಿ ಕೃತಕ ಬಂಡೆಸಾಲುಗಳನ್ನು ನಿರ್ಮಿಸುವ ಮೂಲಕ ಮೀನು ಸಂರಕ್ಷಣಾ ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಕೇರಳ ರಾಜ್ಯ ಮತ್ತು ತಮಿಳುನಾಡುಗಳಲ್ಲಿ ಈ ರೀತಿಯ ಬಂಡೆಸಾಲು ಯೋಜನೆ ಯಶಸ್ವಿಯಾಗಿದ್ದು, ರಾಜ್ಯದಲ್ಲಿಯೂ ಶೀಘ್ರ ಅನುಷ್ಟಾನಗೊಳ್ಳಲಿದೆ ಎಂದರು.

ಗಂಗೊಳ್ಳಿ ಜೆಟ್ಟಿ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಶೀಘ್ರ ಕೈಗೊಳ್ಳಲಾಗುತ್ತಿದೆ. ತನಿಖೆ ನ್ಯಾಯಾಲಯದಲ್ಲಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದ ಅವರು, ನಮಗಿರುವುದು ಸ್ವಲ್ಪವೇ ದಿನಗಳ ಅವಕಾಶ ಎನ್ನುವ ಅರಿವಿದೆ. ಅಲ್ಪ ಅವಧಿಯಲ್ಲಿ ನಾನು ನನ್ನ ಹೆಸರು ಉಳಿಸಿ ಹೋಗುತ್ತೇನೆ ಎಂದರು. ದೇಶದ ಕಡಲ ತೀರದ ಭದ್ರೆತೆಯ ಬಗ್ಗೆ ಯಾರಿಗೂ ಭಯ ಬೇಡ. ದೇಶದ ಕರಾವಳಿ ತೀರದ ಸೆಕ್ಯೂರಿಟಿಯನ್ನು ನಮ್ಮ ಮೀನುಗಾರರೇ ಮಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಅವರೇ ಮಾಡಿದ್ದಾರೆ. ಮುಮದೆಯೂ ಅವರ ಕಣ್ತಪ್ಪಿಸಿ ಒಂದು ಸೂಜಿ ಮೊನೆಯೂ ಒಳ ಬರುವುದು ಸಾಧ್ಯವಿಲ್ಲ ಎಂದು ಮೀನುಗಾರರನ್ನು ಕೊಂಡಾಡಿದರು.

Click Here

LEAVE A REPLY

Please enter your comment!
Please enter your name here