ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ದಾನಿಗಳ ನೆರವಿನೊಂದಿಗೆ ಸುಮಾರು 8 ಕೊರಗ ಕುಟುಂಬಗಳಿಗೆ ನವಸೂರು ಕಲ್ಪಿಸುವ ಕಾರ್ಯಕ್ರಮ ಶುಕ್ರವಾರ ಚಾಲನೆ ನೀಡಲಾಯಿತು.
ಕೋಟತಟ್ಟು ಗ್ರಾಮಪಂಚಾಯತ್ ನೇತೃತ್ವದಲ್ಲಿ ಐಟಿಡಿಪಿ ನಿಧಿಯಿಂದ, ರಾಜೀವ್ ಗಾಂಧಿ ನಿಗಮ ಸೇರಿದಂತೆ ದಾನಿಗಳ ಸಹಕಾರದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ಭೂಮಿಪೂಜೆ
ಸಾಕಷ್ಟು ವರ್ಷಗಳಿಂದ ಇಲ್ಲಿನ ಎಂಟು ಕೊರಗ ಕುಟುಂಬಗಳು ಹಳೆಯ ಹಂಚಿನ ಚಾವಣಿ ಮನೆಯಲ್ಲಿ ವಾಸಿಸುತ್ತಿದ್ದರು ಅಲ್ಲದೆ ಸ್ಥಳ ಸಮಸ್ಯೆ ಕೂಡಾ ಎದುರಾಗಿತ್ತು, ಆದರೆ ಇದೀಗ ಕೋಟತಟ್ಟು ಗ್ರಾಮಪಂಚಾಯತ್ ವಿಶೇಷ ಮುತುವರ್ಜಿಯಿಂದ ಈ ಎಲ್ಲಾ ಕುಟುಂಬಗಳಿಗೆ ಕೆಲವೇ ತಿಂಗಳುಗಳಲ್ಲಿ ಸೂರು ಭಾಗ್ಯ ದೊರಯಲಿದೆ.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಶಿಲಾನ್ಯಾಸ ನೆರವೆರಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಇಡೀ ವ್ಯವಸ್ಥೆಯಲ್ಲಿ ಅತಿ ಮುಗ್ಧ ಸಮುದಾಯ ಇದ್ದರೆ ಅದು ಕೊರಗ ಸಮುದಾಯ ಅಂತಹ ಸಮುದಾಯಕ್ಕೆ ದಾನಿಗಳ ನೆರವಿನೊಂದಿಗೆ ಸೂರು ಕಲ್ಪಿಸುವ ಕೋಟತಟ್ಟು ಗ್ರಾಮಪಂಚಾಯತ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಈ ಸುಮುದಾಯ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಎಲ್ಲರಿಗೂ ಮಾದರಿ ಬದುಕು ಕಾಣುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ,ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ತೋಳಾರ್, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಕೊರಗ ಅಭಿವೃದ್ಧಿ ಇಲಾಖಾಧಿಕಾರಿ ವಿಶ್ವನಾಥ ಶೆಟ್ಟಿ, ಕೊರಗ ಮುಖಂಡರಾದ ಗಣೇಶ್ ಕೊರಗ ಕುಂಭಾಶಿ, ಗಣೇಶ್ ಕೊರಗ ಬಾರ್ಕೂರು, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಿ.ಡಿ.ಒ ರವೀಂದ್ರ ರಾವ್ ನಿರೂಪಿಸಿದರು.ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.











