Category: ಸುದ್ದಿ

  • ಅಂಪಾರು ಶ್ರೀ ರಾಮ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗು ಏಕಾಹ ಭಜನಾ ಮಹೋತ್ಸವ.

    ಅಂಪಾರು ಶ್ರೀ ರಾಮ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗು ಏಕಾಹ ಭಜನಾ ಮಹೋತ್ಸವ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕಾರ್ತಿಕ ಮಾಸದ ವಿಶೇಷ ಅವಸರದಲ್ಲಿ ಶನಿವಾರದಂದು ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಏಕಾಹ ಭಜನೆಗೆ ವೇದಮೂರ್ತಿ ಸುರೇಂದ್ರನಾಥ್ ಭಟ್ ಹಾಗೂ ಭಜನಾ ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕರು ದೀಪ ಪ್ರಜ್ವಲನ ಮಾಡುವುದರ ಮುಖೇನ ಆರಂಭ ನೀಡಿದರು.
    ಏಕಾಹ ಭಜನೆಯಲ್ಲಿ ಜಿಲ್ಲೆಯ ಜಿ ಎಸ್ ಬಿ ಸಮುದಾಯದ ಪ್ರಸಿದ್ಧ 15 ಕ್ಕೂ ಮಿಕ್ಕಿ ಮಂಡಳಿಗಳು ಭಾಗಿಯಾಗಿದ್ದವು. ಸಂಜೆ ವಿಜ್ರಂಭಣೆಯ ದೀಪೋತ್ಸವ ಜರುಗಿತು.

    ಭಾನುವಾರ ನಡೆದ ವಾರ್ಷಿಕೋತ್ಸವದಲ್ಲಿ ಭಜನಾ ಮಂಗಳ‌, ಮಹಾಪೂಜೆಯ ಬಳಿಕ ಊರಿನ ಜಿ ಎಸ್ ಬಿ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಡಿ. ಮಧುಸೂದನ ಕಾಮತರು ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪುರಸ್ಕರಿಸಿದರು.

    ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಶ್ರೀ ರಾಮ ಭಜನಾ ಮಂದಿರದ ಏಳಿಗೆಗೆ ಹಗಲಿರುಳು ದುಡಿದ ಅಧ್ಯಕ್ಷ ಗೋಪಾಲಕೃಷ್ಣ ನಾಯಕರನ್ನು ಸನ್ಮಾನಿಸಲಾಯಿತು. ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.

    ಮಧುಸೂದನ ಕಾಮತರು ತಮ್ಮ ಮಾತುಗಳಲ್ಲಿ ಅಂಪಾರು ಚಿಕ್ಕ ಊರಾದರು ಇಲ್ಲಿಯ ಜಿ ಎಸ್ ಬಿ ಸಮಾಜ ಬಾಂಧವರು ನಡೆಸುವ ಧಾರ್ಮಿಕ ಕಾರ್ಯಕ್ರಮಗಳು ಶ್ಲಾಘನೀಯ ಎಂದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

    ಸಭೆಯಲ್ಲಿ ಕಾರ್ಯದರ್ಶಿ ದೇವದಾಸ್ ಪ್ರಭು ಸ್ವಾಗತಿಸಿದರು, ಖಜಾಂಚಿ ರಘುವೀರ ಕಿಣಿ ವಂದಿಸಿದರು. ಶಿಕ್ಷಕ ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ದೇವರಿಗೆ ಅರ್ಪಿಸಿದ ಫಲ-ಪ್ರಸಾದದ ಏಲಂ ನಂತರ ಭಕ್ತಾದಿಗಳಿಗೆ ಮಹಾಸಂತರ್ಪಣೆ ನೆರವೇರಿತು.

  • ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಭಾವಗೀತೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಭಾವಗೀತೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಡಿ.4ರಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯವರು ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ ಮೈಸೂರು ವಿಭಾಗ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  • ಕುಂದಾಪುರ :ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್‌ನ ಯುರೋಕಿಡ್ಸ್ ನ ಮತ್ತು ಓಕ್ ವುಡ್ ಇಂಡಿಯನ್ ಸ್ಕೂಲಿನ ವಾರ್ಷಿಕೋತ್ಸವ

    ಕುಂದಾಪುರ :ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್‌ನ ಯುರೋಕಿಡ್ಸ್ ನ ಮತ್ತು ಓಕ್ ವುಡ್ ಇಂಡಿಯನ್ ಸ್ಕೂಲಿನ ವಾರ್ಷಿಕೋತ್ಸವ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಇಲ್ಲಿನ ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್‌ನ ಘಟಕವಾದ ಯುರೋಕಿಡ್ಸ್ ನ 20ನೇ ಮತ್ತು ಓಕ್ ವುಡ್ ಇಂಡಿಯನ್ ಸ್ಕೂಲಿನ 6ನೇಯ ವರ್ಷದ ವಾರ್ಷಿಕೋತ್ಸವವು ಡಿ.೨ರಂದು ಶಾಲಾ ಆವರಣದಲ್ಲಿ ನೆಡೆಯಿತು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ವಹಿಸಿ ಕ್ರೀಡೆ ಮತ್ತು ಪತ್ಯೇತರ ಚಟುವಟಿಕೆಗೆ ಒತ್ತು ಕೊಡುತ್ತಿರುವುದು ಶ್ಲಾಘನೀಯ. ಹಾಗೆಯೇ ರಾಜಕೀಯ ವಿಷಯದ ಬಗ್ಗೆ ಮಕ್ಕಳಿಗೆ ಪರಿಚಯ ಇರಲಿ ಎಂದರು.

    ವೇದಿಕೆಯಲ್ಲಿ ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಕಾರ್ಯದರ್ಶಿ ನೀತಾ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಅಭಿನಂದನ್ ಶೆಟ್ಟಿ, ಟ್ರಸ್ಟಿ ಅರುಣ್ ಕುಮಾ‌ರ್ ಶೆಟ್ಟಿ ಮತ್ತು ಶಾಲಾ ಆಡಳಿತಾಧಿಕಾರಿ ಸಹನಾ ಶೆಟ್ಟಿ, ಪ್ರಾಂಶುಪಾಲರಾದ ಜ್ಯೋತಿ ಸುರೇಶ್ ಉಪಸ್ಥಿತರಿದ್ದರು.

    ಕಾರ್ಯಕ್ರಮವು ದೇವಿಸ್ತುತಿ ನೃತ್ಯದ ಮೂಲಕ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರ್ವಹಿಸಿದರು.

    ಪೋರ್ಟ್‌ ಗೇಟ್‌ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್‌ ಟ್ರಸ್ಟಿ ಮತ್ತು ಕಾರ್ಯದರ್ಶಿ ನೀತಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭಿನಂದನ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಜ್ಯೋತಿ ಸುರೇಶ್ ವರದಿ ವಾಚಿಸಿದರು.

  • ಕುಂದಾಪುರ: ನ್ಯಾಯವಾದಿ ಮೇಲಿನ ಹಲ್ಲೆ ಖಂಡಿಸಿ ಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ

    ಕುಂದಾಪುರ: ನ್ಯಾಯವಾದಿ ಮೇಲಿನ ಹಲ್ಲೆ ಖಂಡಿಸಿ ಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಚಿಕ್ಕಮಗಳೂರಿನ ಯುವ ನ್ಯಾಯವಾದಿ ಪ್ರೀತಮ್ ಅವರ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಇತರ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ಇವತ್ತು ಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು.

    ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು, ತಪ್ಪಿತಸ್ಥ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

    ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಸೋಮನಾಥ ಹೆಗಡೆ ಮಾತನಾಡಿ, ಪೊಲೀಸರು ಹಾಗೂ ನ್ಯಾಯವಾದಿಗಳು ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೇ. ಆದರೆ, ಈಗಿನ ಕಾಲಘಟ್ಟದಲ್ಲಿ ರಾಜ್ಯಾದ್ಯಂತ ಪೊಲೀಸರು, ವಕೀಲರ ವಿರುದ್ಧ ಬೇರೆ ಬೇರೆ ಕಾರಣಕ್ಕೆ ಹಲ್ಲೆ ಮಾಡುತ್ತಿರುವುದು ನೋಡಿದರೆ ವಕೀಲರೆಲ್ಲ ಬೆಚ್ಚಿ ಬೀಳುವ ಸನ್ನಿವೇಶ ನಿರ್ಮಾಣವಾಗಿದೆ. ಈವಾಗಲೇ ವಕೀಲರ ಹಿತ ರಕ್ಷಣಾ ಸಮಿತಿ ಜಾರಿಗೆ ತರಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದೇವೆ ಹಾಗೂ ಯುವ ನ್ಯಾಯವಾದಿಯ ಮೇಲೆ ಅಮಾನುಷ ಹಲ್ಲೆ ನಡೆಸಿದವರ ಮೇಲೆ ತಕ್ಷಣ ಸರ್ಕಾರ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಕುಂದಾಪುರ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

  • ಶ್ರೀ ಕ್ಷೇತ್ರ ಸಿದ್ದೇಶ್ವರ ಕೊಡಚಾದ್ರಿ ಹಲವರಿ ಮಠ ದ ಜೀರ್ಣೋದ್ಧಾರಕ್ಕಾಗಿ ರೂ.3.00 ಲಕ್ಷ ಮೊತ್ತದ ಡಿಡಿ ಹಸ್ತಾಂತರ

    ಶ್ರೀ ಕ್ಷೇತ್ರ ಸಿದ್ದೇಶ್ವರ ಕೊಡಚಾದ್ರಿ ಹಲವರಿ ಮಠ ದ ಜೀರ್ಣೋದ್ಧಾರಕ್ಕಾಗಿ ರೂ.3.00 ಲಕ್ಷ ಮೊತ್ತದ ಡಿಡಿ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ (ರಿ) ಕೋಟೇಶ್ವರ ಯೋಜನಾ ವ್ಯಾಪ್ತಿಯ ಸಿದ್ದಾಪುರ ವಲಯದ ಯಡಾಮೊಗೆ ಗ್ರಾಮದ ಶ್ರೀ ಕ್ಷೇತ್ರ ಸಿದ್ದೇಶ್ವರ ಕೊಡಚಾದ್ರಿ ಹಲವರಿ ಮಠದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂ.3.00 ಲಕ್ಷ ಮೊತ್ತ ಮಂಜೂರು ಮಾಡಿದ್ದು, ಇದರ ಡಿಡಿಯನ್ನು ಡಿ.3ರಂದು ಯೋಜನಾಧಿಕಾರಿ ನಾರಾಯಣ್ ಪಾಲನ್ ಅವರು ಮಠದ ಪೀಠಾಧಿಪತಿಗಳಾದ ಯೋಗಿ ಜಗದೀಶ್ ನಾಥ್ ಜಿ ಇವರಿಗೆ ಹಸ್ತಾಂತರಿಸಿದರು.

    ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಕೆ. ಎಸ್ .ಮಡಿವಾಳ್, ವಲಯ ಮೇಲ್ವಿಚಾರಕರಾದ ಸವಿತಾ ಬಾಯಿ, ವಲಯ ಅಧ್ಯಕ್ಷರಾದ ಉದಯ್ ನಾಯ್ಕ್, ಸೇವಾಪ್ರತಿನಿಧಿ ದಿವ್ಯ, ಹಾಗು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಬಸ್ರೂರು: ಮಾರ್ಗೋಳಿ ಶನೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಸಂಪನ್ನ

    ಬಸ್ರೂರು: ಮಾರ್ಗೋಳಿ ಶನೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಫುರ ತಾಲೂಕಿನ ಬಸ್ರೂರು ಸಮೀಪದ ಮಾರ್ಗೋಳಿಯಲ್ಲಿನ ಶ್ರೀ ಚೆನ್ನಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಸೋಮವಾರ ರಾತ್ರಿ ಸಂಪನ್ನಗೊಂಡಿತು.

    ಇದೇ ಸಂದರ್ಭ ಭಜನಾ ಕಾರ್ಯಕ್ರಮವು ನಡೆಯಿತು. ಇದೇ ಸಂದರ್ಭ ಶನೇಶ್ವರನ ಪಲ್ಲಕ್ಕಿ ಉತ್ಸವವು ಶನೇಶ್ವರ ದೇವಸ್ಥಾನದಿಂದ ಬಸ್ರೂರಿನ ತನಕ ಮೆರವಣಿಗೆಯಲ್ಲಿ ಸಾಗಿದ ಭಕ್ತರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನಕ್ಕೆ ಬರಲಾಯಿತು. ಕಳೆದ ಹತ್ತು ವರ್ಷಗಳಿಂದ ಶನೀಶ್ವರ ದೇವರ ಆರಾಧನೆ ನಡೆಯುತ್ತಿದ್ದು, ಎಲ್ಲಾ ರೀತಿಯ ಪೂಜಾ ವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಊರ ಹಾಗೂ ಪರಊರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಊರ ಹಿರಿಯರಾದ ಅಬ್ಬಕ್ಕ ಮಾರ್ಗೋಳಿ ದೀಪ ಬೆಳಗಿಸಿದರು. ಮರ್ಗೋಳಿ ದೇವಸ್ಥಾನದ ಮೊಕ್ತೇಸರ ಮಹಾಲಿಂಗ, ವೆಂಕಟೇಶ್ವರ ಕಳಂಜಿ, ಶ್ರೀನಿವಾಸ್ ಆಚಾರ್ಯ, ಆನಂದ ಪೂಜಾರಿ, ಗೋವಿಂದ ಮರ್ಗೋಳಿ, ಗೋಪಾಲ ಕಳಂಜೆ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.

  • ಕುಂದಾಪುರ: ರಾಷ್ಟ್ರಮಟ್ಟದ ಕರಾಟೆಯಲ್ಲಿ ನೇರಳಕಟ್ಟೆಯ ಶ್ರೀಶ ಗುಡ್ರಿಗೆ ಚಿನ್ನ ಮತ್ತು ಬೆಳ್ಳಿಯ ಪದಕ.

    ಕುಂದಾಪುರ: ರಾಷ್ಟ್ರಮಟ್ಟದ ಕರಾಟೆಯಲ್ಲಿ ನೇರಳಕಟ್ಟೆಯ ಶ್ರೀಶ ಗುಡ್ರಿಗೆ ಚಿನ್ನ ಮತ್ತು ಬೆಳ್ಳಿಯ ಪದಕ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉಡುಪಿಯ ಹಿರಿಯಡ್ಕದ ಶ್ರೀ ವೀರಭದ್ರ ಸಭಾಂಗಣ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಡಿಸೆಂಬರ್ 2 ಮತ್ತು 3 ರಂದು ನಡೆದ ಆರನೇ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ-2023 (6TH NATIONAL LEVEL OPEN INVITATIONAL KARATE CHAMPIONSHIP-2023) ದಲ್ಲಿ ಕುಂದಾಫುರ ನೇರಳಕಟ್ಟೆಯ ಮಾಸ್ಟರ್ ಶ್ರೀಶ ಗುಡ್ರಿಯವರು ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.

    ಕೊಬುಡೋ ಬುಡೋಕನ್ ಕರಾಟೆ-ಡೋ ಅಸೋಸಿಯೇಷನ್, ಕರ್ನಾಟಕ (ಆರ್.) (ಕರಾಟೆ ಬುಡೋಕನ್ ಇಂಟರ್ನ್ಯಾಶನಲ್ನ ಶಾಖೆ ಕೇಂದ್ರ, ಆಸ್ಟ್ರೇಲಿಯಾ) ಇವರ ಆಯೋಜನೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಾಸ್ಟರ್ ಶ್ರೀಶ ಗುಡ್ರಿ ಇವರು ಭಾಗವಹಿಸಿ ಕುಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನದ ಮೂಲಕ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನದ ಮೂಲಕ ಬೆಳ್ಳಿಯ ಪದಕ ಗೆದ್ದುಕೊಂಡರು. ಶ್ರೀಶ ಗುಡ್ರಿ ಈ ಹಿಂದೆ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಗೆದ್ದಿದ್ದರು. ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರನಾದ ಶ್ರೀಶ ಗುಡ್ರಿ ಇವರು Phoenix Academy Indiaನ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯನಾಗಿದ್ದು, ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

  • ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎ. ಲಕ್ಷ್ಮೀ ನಾರಾಯಣ ಚಾತ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಾತ್ಮಕ ಹಾಗೂ ವಾರ್ಷಿಕ ಪರೀಕ್ಷೆಯ ಕಡೆಗೆ ಹೆಚ್ಚಿನ ಗಮನ ನೀಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು. ಅಂತಹ ವಾತಾವರಣ ಶ್ರೀ ವೆಂಕಟರಮಣ ಸಂಸ್ಥೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಅದಕ್ಕೆ ಸ್ಪಂದಿಸಬೇಕು ಎಂದರು.

    ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈಯವರು ಕಡಿಮೆ ಶುಲ್ಕದಲ್ಲಿ ಮೌಲ್ಯಯುತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಿರಿ ಎಂದರು.

    ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಲಕ್ಷ್ಮೀ ನಾರಾಯಣ ಶೆಣೈ,ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ , ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.

    ಪ್ರಾಂಶುಪಾಲರಾದ ರಾಗಿಣಿ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಪ್ರಣೀತಾ ಸ್ವಾಗತಿಸಿದರು. ಸಿಂಚನಾ ವಂದಿಸಿ, ಕ್ಷಮಾ ಅತಿಥಿಯನ್ನು ಪರಿಚಯಿಸಿದರು. ಅದಿತಿ ಕಾರ್ಯಕ್ರಮ ನಿರೂಪಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  • ಹೆಮ್ಮಾಡಿ :ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆಯಲ್ಲಿ ಸಾಧನೆ ಮೆರೆದ ಜನತಾ ಕಾಲೇಜಿನ ಕಮಲ್ ಕಿಶೋರ್

    ಹೆಮ್ಮಾಡಿ :ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆಯಲ್ಲಿ ಸಾಧನೆ ಮೆರೆದ ಜನತಾ ಕಾಲೇಜಿನ ಕಮಲ್ ಕಿಶೋರ್

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ಕುಂದಾಪುರದ ಭಂಡಾರ್ಕಾರ್ಸ್ ಪ್ರಥಮ ದರ್ಜೆ ಕಾಲೇಜಿನವರು ಆಯೋಜಿಸಿದ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ (ಪಿಯುಸಿ ಮತ್ತು‌ ಡಿಗ್ರಿ ವಿದ್ಯಾರ್ಥಿಗಳಿಗೆ ಒಂದಾಗಿ) ಕನ್ನಡ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಮಲ್ ಕಿಶೋರ್ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.

    ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೆಮ್ಮಾಡಿ: ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಶ್ರುತಿಕಾ ಶೆಟ್ಟಿ ವಿಭಾಗ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆ.

    ಹೆಮ್ಮಾಡಿ: ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಶ್ರುತಿಕಾ ಶೆಟ್ಟಿ ವಿಭಾಗ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ಶೆಟ್ಟಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತಳಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

    ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.