Category: ಸುದ್ದಿ

  • ಕೋಟ :ಡಿ.5 – 6ರಂದು ಕೋಟದಲ್ಲಿ ಉಡುಪಿ ಜಿಲ್ಲಾ  ಸಾಹಿತ್ಯ ಸಮ್ಮೇಳನ

    ಕೋಟ :ಡಿ.5 – 6ರಂದು ಕೋಟದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ

    ಕುಂದಾಪುರ ಮಿರರ್ ಸುದ್ದಿ…
    ಕೋಟ : ಕ.ಸಾ.ಪ. ಉಡುಪಿ ಜಿಲ್ಲೆ ಆಶ್ರಯದಲ್ಲಿ, ಕೋಟ ವಿವೇಕ ವಿದ್ಯಾಸಂಘದ ಸಹಕಾರದಲ್ಲಿ, ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ಡಿ.೫-೬ರಂದು ಉಡುಪಿ ಜಿಲ್ಲಾ ೧೬ನೇ ಸಾಹಿತ್ಯ ಸಮ್ಮೇಳನ ಜರಗಲಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನ.೨೪ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಸಮ್ಮೇಳನದ ಪ್ರಯುಕ್ತ ಡಿ.೫ರಂದು ಸಾಲಿಗ್ರಾಮ ಗುರುನರಸಿಂಹ ದೇಗುಲದಿಂದ ಕೋಟ ವಿವೇಕ ವಿದ್ಯಾಸಂಸ್ಥೆ ತನಕ ಪುರಮೆರವಣಿಗೆ ನಡೆಯಲಿದ್ದು, ಬೆಳಗ್ಗೆ ೧೦.೩೦ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಕ.ಸಾ.ಪ. ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಪುಸ್ತಕ ಮಳಿಗೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಅಪರಾಹ್ನ ೨ಗಂಟೆಗೆ ಕವಿಗೋಷ್ಠಿ, ೩ಗಂಟೆಗೆ ಕುಂದಾಪ್ರ ಭಾಷಿ ಕುರಿತು ಮನುಹಂದಾಡಿಯವರಿಂದ ಗೋಷ್ಠಿ ಅನಂತರ ಶತಮಾನದ ಅಚ್ಚರಿ ಕೋಟ ಲಕ್ಷ್ಮೀ ನಾರಾಯಣ ಕಾರಂತ ಮತ್ತು ಆಡಳಿತದಲ್ಲಿ ಕನ್ನಡ ವಿಚಾರಗೋಷ್ಠಿ, ನಾಟಕ ಪ್ರದರ್ಶನ ನಡೆಯಲಿದೆ.

    ಡಿ.೬ರಂದು ಬೆಳಗ್ಗೆ ೧೦ಗಂಟೆಗೆ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಒಂದಷ್ಟು ಹೊತ್ತು ಮಾತು-ಕತೆ, ಶಿಕ್ಷಣ, ಶಿಕ್ಷಕ -ವ್ಯವಸ್ಥೆ ವಿಚಾರಗೋಷ್ಠಿ, ಅಪರಾಹ್ನ೧.೩೦ಕ್ಕೆ ಚಿಣ್ಣರ ಜಗುಲಿ ಬಹುವಿಧ ಗೋಷ್ಠಿ ಅನಂತರ ಯಕ್ಷಗಾನ ಪ್ರಸಂಗದ ಕುರಿತು ವಿಚಾರಗೋಷ್ಠಿ ಅಪರಾಹ್ನ ೩ಕ್ಕೆ ಬಹಿರಂಗ ಅಧಿವೇಶನ, ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ, ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

    ಅಮಂತ್ರಣ ಬಿಡುಗಡೆ :-
    ಇದೇ ಸಂದರ್ಭ ಜಿಲ್ಲಾ ಸಮ್ಮೇಳನದ ಆಮಂತ್ರಣವನ್ನು ವಿವೇಕ ವಿದ್ಯಾಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ರಾಮದೇವ ಐತಾಳ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಪದಾದಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ರಾಮಚಂದ್ರ ಐತಾಳ, ಮನೋಹರ ಪಿ., ಉಪೇಂದ್ರ ಸೋಮಯಾಜಿ, ಸುಜಯೀಂದ್ರ ಹಂದೆ, ಅಚ್ಯುತ್ ಪೂಜಾರಿ, ವಿವೇಕ ವಿದ್ಯಾಸಂಸ್ಥೆಯ ಪ್ರತಿನಿಽಗಳಾದ ಜಗದೀಶ್ ನಾವಡ, ಮಂಜುನಾಥ ಉಪಾಧ್ಯ, ಜಗದೀಶ್ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ್ ಉಡುಪ, ಸಂಜೀವ ಗುಂಡ್ಮಿ ಮೊದಲಾದವರಿದ್ದರು.

  • ಕೋಟ :ನ.27ಕ್ಕೆ ಪಂಚವರ್ಣ ಸಂಸ್ಥೆಯಿಂದ ಸಾಸ್ತಾನದ ಐರೋಡಿ ಗೋಳಿಬೆಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ

    ಕೋಟ :ನ.27ಕ್ಕೆ ಪಂಚವರ್ಣ ಸಂಸ್ಥೆಯಿಂದ ಸಾಸ್ತಾನದ ಐರೋಡಿ ಗೋಳಿಬೆಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಗೋಳಿಬೆಟ್ಟು ಬೊಬ್ಬರ್ಯ ಕಲಾವೇದಿಕೆ ಸಂಯೋಜನೆಯೊಂದಿಗೆ ಪರಿಸರಸ್ನೇಹಿ 10ನೇ ಸರಣಿ ಪರಿಸರ ಮಾಹಿತಿ ಕಾರ್ಯಾಗಾರ ಮಾಲಿಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಕ್ರಾಂತಿ ಸೃಷ್ಟಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ಕಾರ್ಯಾಗಾರ ನ.27ರ ಪೂ.10.ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಸಾಸ್ತಾನ ಇಲ್ಲಿ ನಡೆಯಲಿದೆ.

    ಸಂಪನ್ಮೂಲ ವ್ಯಕ್ತಿಯಾಗಿ ತೆಕ್ಕಟ್ಟೆ ಗ್ರಾ.ಪಂ ಎಸ್‍ಎಲ್‍ಆರ್‍ಎಂ ಘಟಕದ ಮುಖ್ಯಸ್ಥೆ ,ಸಾಮಾಜಿಕ ಚಿಂತಕಿ ರೇವತಿ ತೆಕ್ಕಟ್ಟೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

  • ಉಡುಪಿ :ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಸಹಿಸಲ್ಲ – ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ

    ಉಡುಪಿ :ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಸಹಿಸಲ್ಲ – ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿಳಂಬ ಧೋರಣೆಯನ್ನು ತಾಳದೆ, ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.

    ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರ ಬಂದರು, ಗಂಗೊಳ್ಳಿ ಮೀನುಗಾರಿಕೆ ಬಂದರಿನ ಮರು ನಿರ್ಮಾಣ ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಷನ್ ಚಾನೆಲ್‌ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಕೈಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಂದರು ಇಲಾಖೆ ಹಾಗೂ ಸಿಆರ್ ಝ್ ನವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಳ್ಳುವುದರೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

    ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮಳೆ, ಬೆಳೆ ರಸಗೊಬ್ಬರಗಳ ದಾಸ್ತಾನುಗಳ ಬಗ್ಗೆ ಮಾತನಾಡಿದ ಅವರು, ಈ ಬಾರಿ ಭತ್ತದ ಇಳುವರಿ ಶೇಕಡ 50 ರಷ್ಟು ಕಡಿಮೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ತಾಲೂಕುವಾರು ವಿವರವನ್ನು ಸಂಗ್ರಹಿಸುವಂತೆ ಸೂಚಿಸಿದರು.

    ಬರ ನಿರ್ವಹಣೆ ಕಾರ್ಯವನ್ನು ಸಮರ್ಥವಾಗಿ ಎದುರಿಸಲು ಸೂಚನೆ
    ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡ 22 ರಷ್ಟು ಕಡಿಮೆ ಮಳೆಯಾಗಿದ್ದು, ಅಂತರ ಜಲಮಟ್ಟವೂ ಶೇಕಡ 24ರಷ್ಟು ಕಡಿಮೆಯಾಗಿದ್ದು, ಮುಂಬರುವ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಬಾಕಿ ಉಳಿದಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು.
    ಜಿಲ್ಲೆಯಲ್ಲಿಯೇ 604 ಕಿಂಡಿ ಅಣೆಕಟ್ಟುಗಳಿದ್ದು, ಅವುಗಳಲ್ಲಿ 357 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದಿರುವ 343 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಈ ಕೂಡಲೇ ಅಳವಡಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜೊತೆಗೆ ಉಡುಪಿ ನಗರಕ್ಕೆ ವಾರಾಹಿಯ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

    ಉಪ್ಪು ನೀರು, ಸಿಹಿ ನೀರಿಗೆ ಬೆರೆಸುವುದನ್ನು ತಡೆಯುವ ಖಾರ್ ಲ್ಯಾಂಡ್ ನಿರ್ಮಾಣದ 11 ಕಾಮಗಾರಿ ವರದಿಗೆ ಪ್ರಾದೇಶಿಕ ನಿರ್ದೇಶಕರಿಂದ (ಪರಿಸರ) ಅನುಮೋದನೆ ಪಡೆದು ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದರು.

    ಪೂರ್ಣ ಪ್ರಮಾಣದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಸೂಚನೆ
    ಜಿಲ್ಲೆಯಲ್ಲಿ 3.12 ಲಕ್ಷ ಕುಟುಂಬ ಗಳಿದ್ದು, ಈ ಪೈಕಿ 1,83,072 ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗ ರವರು ಗೃಹಲಕ್ಷ್ಮಿ ಯೋಜನೆ ತಲುಪುವ ದೃಷ್ಟಿಯಿಂದ ವಿಶೇಷ ಅಭಿಯಾನ ಮಾಡಬೇಕು, ಯಾವುದೇ ಕುಟುಂಬಕ್ಕೂ ಈ ಯೋಜನೆ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

    ಅಲ್ಲದೆ, ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗಳಲ್ಲಿ, ಅನುಮೋದನೆಯಾದ 71 ಕಾಮಗಾರಿಗಳಲ್ಲಿ 32 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

    ಕೋಳಿ ಅಂಕಕ್ಕೆ ಅನುಮತಿ
    ಕರಾವಳಿಯ ಪಾರಂಪರಿಕ ಕ್ರೀಡೆಯಾದ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.

    ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಲ್ಲಿಸಿದ ಮನವಿಯನ್ನು ಆಲಿಸಿದ ಸಚಿವರು, ಕೋಳಿ ಅಂಕದ ವೇಳೆ ಯಾವುದೇ ಜೂಜು ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಹೇಳಿದರು.

    ಡೀಮ್ಡ್ ಫಾರೆಸ್ಟ್ ಪ್ರಕರಣಗಳ ಬಗ್ಗೆ ಸಭೆಯಲ್ಲಿ
    ಸುದೀರ್ಘವಾಗಿ ಚರ್ಚಿಸಲಾಯಿತು.

    ಜೊತೆಗೆ ಕುಂಕ್ಕಿ ಜಾಗದಲ್ಲಿ ಮನೆಕಟ್ಟಿರುವ 1994 ಸಿಸಿಯಡಿಯಲ್ಲಿ ಅರ್ಜಿ ಹಾಕಿರುವ ಬಗ್ಗೆಯೂ ಚರ್ಚೆ ನಡೆಯಿತು. ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮಾಡಬಾರದು. ಅವುಗಳನ್ನು ನಿಯಾನುಸಾರವಾಗಿ ವಿಲೇವಾರಿ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದರು.

    ದೋಣಿ ಅಗ್ನಿ ದುಂತರಕ್ಕೆ ಶೀಘ್ರ ಪರಿಹಾರ
    ಕಳೆದ ವಾರ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ಸಂಭವಿಸಿದ ದೋಣಿ ಅಗ್ನಿ ದುರಂತದ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ಕೊಡಿಸುವ ಭರವಸೆ ನೀಡಿದರು.

    ಸಭೆಯಲ್ಲಿ ಶಾಸಕರುಗಳಾದ ಯಶ್‌ಪಾಲ್ ಎ ಸುವರ್ಣ, ವಿ ಸುನಿಲ್ ಕುಮಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಡಿಎಫ್‌ಒ ಗಣಪತಿ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

  • ರೋಟರಿ ಕ್ಲಬ್ ವತಿಯಿಂದ ರಕ್ತಲೇಪನ ಸಂಗ್ರಹಣೆ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರ

    ರೋಟರಿ ಕ್ಲಬ್ ವತಿಯಿಂದ ರಕ್ತಲೇಪನ ಸಂಗ್ರಹಣೆ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ ಕೋಟ ಮತ್ತು ತೋಳಾರ್ ಓಷಿಯನ್ ಪ್ರಾಡಕ್ಟ್ ಪಡುಕೆರೆ ಇವರ ಜಂಟಿ ಆಶ್ರಯದಲ್ಲಿ ಆನೆಕಾಲು ರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ರಕ್ತಲೇಪನ ಸಂಗ್ರಹಣೆ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವನ್ನು ಪಡುಕರೆ ತೋಳಾರ್ ಓಷಿಯನ್ ಪ್ರಾಡಕ್ಟ್ ಕಾರ್ಮಿಕರಿಗೆ ನಡೆಸಲಾಯಿತು.

    ಕಾರ್ಯಕ್ರಮವನ್ನು ವಲಯ ಸಹಾಯಕ ಗವರ್ನರ್ ನರಸಿಂಹ ಪ್ರಭು ಉದ್ಘಾಟಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ದೇವಪ್ಪ ಪಟಗಾರ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ತೋಳಾರ್ ಓಷಿಯನ್ ಪ್ರಾಡಕ್ಟ್ ಮ್ಯಾನೇಜರ್ ಯೋಗೇಶ್ ಭಾಗವಹಿಸಿ ಕಾರ್ಮಿಕರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರ ಕೋಟ ಇದರ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ, ಆರೋಗ್ಯ ನಿರೀಕ್ಷಣಾಧಿಕಾರಿ ಹರಿಶ್ಚಂದ್ರ ನಾಯಕ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂದಾ ನಾಯಕ್, ಬೇಬಿ, ಆಶಾ ಕಾರ್ಯಕರ್ತೆಯರಾದ ಶೈಲಜಾ ಮತ್ತು ಸುಧಾ ಈ ಶಿಬಿರವನ್ನು ನಡೆಸಿಕೊಟ್ಟರು.

  • ಕೋಟ ಸರಕಾರ ಹಿರಿಯ ಪ್ರಾಥಮಿಕ ಶಾಲೆ ಪ್ರತಿಭಾ ಪುರಸ್ಕಾರ ಸಮಾರಂಭ

    ಕೋಟ ಸರಕಾರ ಹಿರಿಯ ಪ್ರಾಥಮಿಕ ಶಾಲೆ ಪ್ರತಿಭಾ ಪುರಸ್ಕಾರ ಸಮಾರಂಭ

    ಆಂಗ್ಲ ಮಾಧ್ಯಮದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಕಷ್ಟ- ಕೆ.ಅನಂತಪದ್ಮನಾಭ ಐತಾಳ್

    ಕುಂದಾಪುರ ಮಿರರ್ ಸುದ್ದಿ…
    ಕೋಟ : ಸರಕಾರಿ ಅಥವಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಆಂಗ್ಲ ಮಾಧ್ಯಮ ಶಾಲೆಗಳೆ ಕಾರಣ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್ ಹೇಳಿದರು.

    ಶುಕ್ರವಾರ ಕೋಟ ಸರಕಾರ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹಸ್ತ ಲಿಖಿತ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಪ್ರತಿಯೊಬ್ಬ ಪೋಷಕರು ನೆನಪಿಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಜೊತೆಗೆ ನೈಜ ಶಿಕ್ಷಣದ ವ್ಯವಸ್ಥೆ ಸಿಗುತ್ತಿದ್ದು ಖಾಸಗಿ ಆಂಗ್ಲ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಸಂಸ್ಕಾರಭರಿತ ಶಿಕ್ಷಣ ಸಿಗುತ್ತಿಲ್ಲ ಬರೇ ಅಂಕದ ಮೇಲೆ ಆ ಮಕ್ಕಳ ಭವಿಷ್ಯ ಸೃಷ್ಠಿಯಾಗುತ್ತಿದೆ. ಇದು ಬೇಸರದ ಸಂಗತಿಯಾಗಿದೆ. ಅಲ್ಲದೆ ಮಕ್ಕಳನ್ನು ಮೊಬೈಲ್ ನಿಂದ ಮುಕ್ತರಾಗಿಸಲು ಪೋಷಕರಿಗೆ ಕರೆಇತ್ತರಲ್ಲದೆ ಶಾಲಾಭಿವೃದ್ಧಿಯಲ್ಲಿ ಶಾಲಾ ಎಸ್ ಡಿ ಎಂ ಸಿ ಹಾಗೂ ಮುಖ್ಯ ಶಿಕ್ಷಕರ ಪಾತ್ರ ಅಷ್ಟೆ ಗಣನೀಯವಾದದ್ದು ಎಂದು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಲಾ ಹಳೇ ವಿದ್ಯಾರ್ಥಿ ಸುಬ್ರಹ್ಮಣ್ಯ ಹೊಳ್ಳ, ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ, ಕಾಮಧೇನು ಸೊಸೈಟಿ ಪ್ರಭಂಧಕಿ ಸವಿತಾ, ,ನಿರ್ಮಿತಿ ಕೇಂದ್ರ ಉಡುಪಿ ಇದರ ಯೋಜನಾಧಿಕಾರಿ ವಿಜಯ ಕುಮಾರ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.

    ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ವಿತರಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ವಹಿಸಿ ಸ್ವಾಗತಿಸಿದರು.

    ಮುಖ್ಯ ಅಭ್ಯಾಗತರಾಗಿ ಗುತ್ತಿಗೆದಾರರಾದ ಎಂ.ಸುಬ್ರಾಯ ಆಚಾರ್, ,ಬ್ರಹ್ಮಾವರ ಹೋಬಳಿ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ವಾಸು ಪೂಜಾರಿ,ಶಾಲಾ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ,ಬಿ.ಆರ್.ಪಿ ಉದಯ್ ಕೋಟ,ವಿದ್ಯಾರ್ಥಿ ಮುಖಂಡರಾದ ಮನೋಜ್,ಅನಘ ಎಮ್ ಹೊಳ್ಳ, ಉಪಸ್ಥಿತರಿದ್ದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಮಹಾಲಕ್ಷ್ಮಿ ಎಂ.ಪಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ರೂಬಿ ಪಿಂಟೋ ನಿರೂಪಿಸಿದರು.ಶಿಕ್ಷಕಿ ವಿನಯ ಕುಮಾರಿ ವಂದಿಸಿದರು. ಶಿಕ್ಷಕಿ ಪುಷ್ಭಲತಾ ಸಹಕರಿಸಿದರು.

  • ಕೋಟ :ಜಿಲ್ಲಾಧಿಕಾರಿ ಕಡಲ್ಕೊರೆತ ಸ್ಥಳಗಳಿಗೆ ಭೇಟಿ, ಹಕ್ಕುಪತ್ರ ವಂಚಿತರೊಂದಿಗೆ ಚರ್ಚೆ

    ಕೋಟ :ಜಿಲ್ಲಾಧಿಕಾರಿ ಕಡಲ್ಕೊರೆತ ಸ್ಥಳಗಳಿಗೆ ಭೇಟಿ, ಹಕ್ಕುಪತ್ರ ವಂಚಿತರೊಂದಿಗೆ ಚರ್ಚೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರತಿವರ್ಷ ಕೋಡಿ ಹೊಸಬೇಂಗ್ರೆ ಕಡಲ್ಕೊರೆತ ಸ್ಥಳಗಳಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಅಲ್ಲಿನ ಸಮುದ್ರ ತಟದಲ್ಲಿ ವಾಸ್ತವ್ಯ ಹೊಂದಿದ ಹಕ್ಕುಪತ್ರದಿಂದ ವಂಚಿತರಾದ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರು. ಅಲ್ಲದೆ ಬೀಚ್ ಸನಿಹದಲ್ಲಿ ತಲೆ ಎತ್ತಿದ ರೆಸಾರ್ಟ್‍ಗಳ ಬಗ್ಗೆ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಆರ್ ಐ ರಾಜು, ಕೋಟ ಆರ್ ಐ ಮಂಜು ಬಿಲ್ಲವ,ಸ್ಥಳೀಯ ಗ್ರಾಮ ಲೆಕ್ಕಿಗ ಗಿರೀಶ್ ಕುಮಾರ್, ಸಹಾಯಕಿ ಸರೋಜ, ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಕರಾವಳಿ ಕಾವಲು ಪಡೆಯ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.

  • ಬೈಂದೂರು :ವಂಚನೆ ಪ್ರಕರಣ ಕ್ರಿಕೆಟಿಗ ಶ್ರೀಶಾಂತ್ ಹಾಗೂ ಉದ್ಯಮಿ ಕಿಣಿ ಪಾತ್ರವಿಲ್ಲ,:ಉದ್ಯಮಿ ರಾಜೀವ್ ಕುಮಾರ ಸ್ಪಷ್ಟನೆ

    ಬೈಂದೂರು :ವಂಚನೆ ಪ್ರಕರಣ ಕ್ರಿಕೆಟಿಗ ಶ್ರೀಶಾಂತ್ ಹಾಗೂ ಉದ್ಯಮಿ ಕಿಣಿ ಪಾತ್ರವಿಲ್ಲ,:ಉದ್ಯಮಿ ರಾಜೀವ್ ಕುಮಾರ ಸ್ಪಷ್ಟನೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು: ಹಣಕಾಸು ವ್ಯವಹಾರಕ್ಕೆ ಕುರಿತಂತೆ ಖ್ಯಾತ ಕ್ರಿಕೆಟಿಗ ಶ್ರೀಶಾಂತ್,ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ ಸೇರಿದಂತೆ ಮೂವರ ವಿರುದ್ದ 18.75 ಲಕ್ಷ ಹಣ ವಂಚನೆಯಾಗಿದೆ ಎಂದು ಕಣ್ಣೂರು ಮೂಲದ ಸುರೇಶ್ ಗೋಪಾಲನ್ ದೂರು ದಾಖಲಿಸಿದ ವರದಿ ಮಾದ್ಯಮಗಳಲ್ಲಿ ಬಂದಿದ್ದು ಈ ಪ್ರಕರಣದಲ್ಲಿ ಶ್ರೀಶಾಂತ್ ಹಾಗೂ ವೆಂಕಟೇಶ ಕಿಣಿ ಪಾತ್ರವಿಲ್ಲ.ಅನಗತ್ಯವಾಗಿ ಅವರುಗಳ ಹೆಸರುಗಳನ್ನು ಸೇರಿಸಲಾಗಿದೆ.ಎಂದು ಓಂ ಭಾರತ್ ಸಂಸ್ಥೆ ಪಾಲುದಾರ ರಾಜೀವ ಕುಮಾರ ಸ್ಪಷ್ಟನೆ ನೀಡಿದ್ದಾರೆ.

    ಪ್ರಕರಣದ ಹಿನ್ನಲೆ: ಕೇರಳ ಮೂಲದ ರಾಜೀವ ಕುಮಾರ ಹಾಗೂ ಸಾಜು ಓಂ ಭಾರತ್ ಸಂಸ್ಥೆ ಮೂಲಕ ಬೈಂದೂರಿನ ವೆಂಕಟೇಶ ಕಿಣಿ ಜೊತೆ ವಸತಿ, ವಾಣಿಜ್ಯ ಸಂಕೀರ್ಣ, ಸೇರಿದಂತೆ ವ್ಯವಹಾರದಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದರು.
    2019 ರಲ್ಲಿ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡಮೆ ಸ್ಥಾಪಿಸುವ ಕುರಿತು ಖ್ಯಾತ ಕ್ರಿಕೆಟಿಗ ಶ್ರೀಶಾಂತ್ ಯೋಜನೆ ರೂಪಿಸಿದ್ದರು. ಕಿಣಿಯವರು ಸಹಕರಿಸಿದ್ದರು. ಕೋವಿಡ್ ಹಾಗೂ ತಾಂತ್ರಿಕ ಸಮಸ್ಯೆ ಕಾರಣ ಇದನ್ನು ಕೈ ಬಿಡಲಾಗಿತ್ತು. ಕಿಣಿ ಹಾಗೂ ಓಂ ಭಾರತ್ ಸಂಸ್ಥೆ ನಡುವೆ ಅಕಾಡಮೆ ಕುರಿತಂತೆ ಯಾವುದೆ ಹಣಕಾಸು ವ್ಯವಹಾರಗಳಿರಲಿಲ್ಲ.

    ಓಂ ಭಾರತ ಸಂಸ್ಥೆಯ ರಾಜೀವ್ ರವರ ವ್ಯವಹಾರದಲ್ಲಿ ವೆಂಕಟೇಶ್ ಕಿಣಿ ಹೆಸರು ಸೇರಿಸಿ ಹಣದ ವಂಚನೆ ಆಗಿದೆ ಎಂದು ಅಪಪ್ರಚಾರ ನಡೆಸಲಾಗಿದೆ.

    ಈ ಕುರಿತು ಪ್ರತಿಕ್ರಯಿಸಿದ ರಾಜೀವ ಕುಮಾರ ಇದರಲ್ಲಿ ಶ್ರೀಶಾಂತ್ ಹಾಗೂ ಕಿಣಿಯವರ ಪಾತ್ರ ಎಳ್ಳಷ್ಟು ಇಲ್ಲವಾಗಿದೆ ಮತ್ತು ಈ ಕುರಿತು ಕಾನೂನು ಕ್ರಮ ಕೂಡ ಕೈಗೊಳ್ಖಲಾಗುವುದು. ನನ್ನಿಂದಾಗಿ ಕ್ರಿಕೆಟಿಗ ಶ್ರೀಶಾಂತ ಹಾಗೂ ಉದ್ಯಮಿ ವೆಂಕಟೇಶ ಕಿಣಿ ವ್ಯಕ್ತಿತ್ವಕ್ಕೆ ಧಕ್ಜೆಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸುತಿದ್ದೇನೆ.

    ದೂರು ನೀಡಿದ ಸುರೇಶ ಗೋಪಾಲನ್ ರವರಿಗೆ ಬರಬೇಕಾದ ಹಣಕಾಸು ವ್ಯವಹಾರ ಕೂಡ ಸಂದಾಯವಾಗಿದೆ. ಈ ಕುರಿತು ಅವರು ಮಾದ್ಯಮ ಹೇಳಿಕೆ ಕೂಡ ನೀಡಲಿದ್ದಾರೆ ಎಂದಿದ್ದಾರೆ.

    ವೆಂಕಟೇಶ ಕಿಣಿಯವರ ಬೆಳವಣಿಗೆ ಸಹಿಸದ ಕೆಲವು ವ್ಯಕ್ತಿಗಳು ಅನಗತ್ಯ ಅಪಪ್ರಚಾರ ಮಾಡಿದ್ದು ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.ಈ ಪ್ರಕರಣದಲ್ಲಿ ಯಾವುದೆ ರೀತಿಯ ವಂಚನೆಯಾಗಿಲ್ಲ. ಕಾನೂನು ರೀತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ರಾಜೀವ್ ಮಾದ್ಯಮಕ್ಕೆ ತಿಳಿಸಿದ್ದಾರೆ.

  • ಕುಂದಾಪುರ :ಶಿಸ್ತು ಬದ್ಧ ವಿದ್ಯಾರ್ಥಿಜೀವನಕ್ಕೆ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಹಕಾರಿ – ರವಿರಾಜ ಉಪಾಧ್ಯ

    ಕುಂದಾಪುರ :ಶಿಸ್ತು ಬದ್ಧ ವಿದ್ಯಾರ್ಥಿಜೀವನಕ್ಕೆ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಹಕಾರಿ – ರವಿರಾಜ ಉಪಾಧ್ಯ

    ಭಾರತ್ ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ ಉತ್ಸವ 2023 ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಭಾರತ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಸತ್ ಚಿಂತನೆ, ಸದಾಚಾರಯುಕ್ತ ಸಂಸ್ಕಾರ ವಿಕಾಸನಗೊಳ್ಳುತ್ತದೆ. ನಾಯಕತ್ವದ ಗುಣ, ನಮ್ಮನ್ನು ಸಮಾಜದ ಮುಂದೆ ತೋರ್ಪಡಿಸುವ ವ್ಯಕ್ತಿತ್ವ ಇದರಿಂದ ಬೆಳೆಯುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ನ ಕೊಡುಗೆ ದೊಡ್ಡದು ಎಂದು ಶ್ರೀ ವಿನಾಯಕ ಸಭಾಗೃಹ ಮುಖ್ಯಸ್ಥರಾದ ರವಿರಾಜ ಉಪಾಧ್ಯ ಹೇಳಿದರು.

    ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ನೇತೃತ್ವದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆದ ಭಾರತ್ ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ ಉತ್ಸವ 2023 ಉದ್ಘಾಟಿಸಿ ಮಾತನಾಡಿದರು.

    ಭಾರತ ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ಭಾಗವಹಿಸುವುದರಿಂದ ಸತ್ ಚಿಂತನೆ, ಸದಾಚಾರಯುಕ್ತ ಸಂಸ್ಕಾರ ವಿಕಾಸನಗೊಳ್ಳುತ್ತದೆ. ನಾಯಕತ್ವದ ಗುಣ, ನಮ್ಮನ್ನು ಸಮಾಜದ ಮುಂದೆ ತೋರ್ಪಡಿಸುವ ವ್ಯಕ್ತಿತ್ವ ಇದರಿಂದ ಬೆಳೆಯುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್‍ನ ಕೊಡುಗೆ ದೊಡ್ಡದು ಎಂದರು.

    ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆ ಅಧ್ಯಕ್ಷೆ ಗುಣರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿತ್ವ ವಿಕಾಸವಾಗಲು ಸ್ಕೌಟ್ ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು, ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಎರಡು ದಿನಗಳ ಕಾಲ ರ್ಯಾಲಿಯನ್ನು ಆಯೋಜಿಸಲಾಗುವುದು. ರಾಜ್ಯ ಸಂಸ್ಥೆ ನೀಡಿದ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದೇವೆ. ಪಿ.ಜಿ ಆರ್ ಸಿಂಧ್ಯಾ ಅವರು ನಿರಂತರ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ ಎಂದರು.

    ಕೊರ್ಗಿ ವಿಠಲ ಶೆಟ್ಟಿ ಚಾರಿಟೇಟಲ್ ಟ್ರಸ್ಟ್‍ನ ಅಧ್ಯಕ್ಷರಾದ ವಿಠಲ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮನೋಭಾವ ಮೈಗೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲಕ್ಷಾಮ ಕಂಡುಬರಲಿದೆ. ಭವಿಷ್ಯದ ದೃಷ್ಟಿಯಿಂದ ಪರಿಸರ ಪ್ರೇಮವನ್ನು ಪಾಲಿಸಬೇಕು ಎಂದರು.
    ಭಾರತ ಸ್ಕೌಟ್ಸ್-ಗೈಡ್ಸ್ ರಾಜ್ಯ ಸಹಸಂಘಟನಾ ಕಾರ್ಯದರ್ಶಿ ಸುಮನಾ ಶೇಖರ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್ ನಾಯಕ್,ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಕುಮಾರ್ ಶೆಟ್ಟಿ,ಹಿರಿಯ ಸ್ಕೌಟ್ ಶಿಕ್ಷಕ ಪದ್ಮನಾಭ ಅಡಿಗ, ಸ್ಥಳೀಯ ಸಂಸ್ಥೆ ಅಧ್ಯಕ್ಷೆ ರೇಖಾ ಯು ಉಪಸ್ಥಿತರಿದ್ದರು.

    ಭಾರತ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಅನಂದ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ವಿನಾಯಕ ಸಭಾಗೃಹದ ಮುಖ್ಯಸ್ಥರಾದ ರವಿರಾಜ ಉಪಾಧ್ಯ, ಕೊರ್ಗಿ ವಿಠಲ ಶೆಟ್ಟಿ, ಪದ್ಮನಾಭ ಅಡಿಗ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅರಂಭದಲ್ಲಿ ರಜೌರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಮಂಗಳೂರಿನ ಕ್ಯಾ| ಪ್ರಾಂಜಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಸ್ಕೌಟ್ ಶಿಕ್ಷಕಿ ತಾರಾದೇವಿ ಸ್ವಾಗತಿಸಿದರು. ವೀರೇಂದ್ರ ವಂದಿಸಿದರು. ಸದಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
    ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ರ್ಯಾಲಿಗೆ ಹಿರಿಯ ಸ್ಕೌಟ್ ಶಿಕ್ಷಕ ಪದ್ಮನಾಥ ಅಡಿಗ ಚಾಲನೆ ನೀಡಿದರು.

  • ವಂಡ್ಸೆ ಗ್ರಾಮ ಪಂಚಾಯಿತಿಯ ನೂತನ ಕಛೇರಿ ಕಟ್ಟಡಕ್ಕೆ ಶಿಲಾನ್ಯಾಸ

    ವಂಡ್ಸೆ ಗ್ರಾಮ ಪಂಚಾಯಿತಿಯ ನೂತನ ಕಛೇರಿ ಕಟ್ಟಡಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ವಂಡ್ಸೆ :ಕುಂದಾಪುರ ಅಭಿವೃದ್ದಿ ಎನ್ನುವುದು ಗ್ರಾಮಗಳಿಂದ ಆರಂಭವಾಗುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಉತ್ತಮ ಕಟ್ಟಡವಿರಬೇಕು. ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲ ಗ್ರಾಮ ಪಂಚಾಯತ್‍ಗಳು ಅಭಿವೃದ್ದಿಯಾಗಬೇಕು ಎನ್ನುವುದು ನನ್ನ ಯೋಚನೆ. ಗ್ರಾಮದ ಬಗ್ಗೆ ದೂರದೃಷ್ಟಿಯ ಚಿಂತನೆಯೊಂದಿಗೆ ಸರಕಾರಿ ಕಟ್ಟಡಗಳ ನಿರ್ಮಿಸುವುದು ಹೆಚ್ಚು ಸೂಕ್ತ. ಯೋಜನೆಗಳು ಭವಿಷ್ಯದ ದೂರದೃಷ್ಟಿ ಹೊಂದಿರಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.

    ನೂಜಾಡಿ ಕ್ರಾಸ್ ಸಮೀಪದ ಸರಕಾರಿ ಕಚೇರಿಗಳ ಸಂಕೀರ್ಣದಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿನ ನೂತನ ಕಛೇರಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
    ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಹೋಬಳಿ ಕೇಂದ್ರವಾಗಿರುವ ವಂಡ್ಸೆಯಲ್ಲಿ ಎಲ್ಲ ಸರ್ಕಾರಿ ಕಛೇರಿಗಳನ್ನು ಒಂದೇ ಕಡೆ ನಿರ್ಮಿಸುವ ಸಲುವಾಗಿ ಸ್ಥಳ ಕಾದಿರಿಸಲಾಗಿದೆ. ವಂಡ್ಸೆ ಗ್ರಾಮದ ಭವಿಷ್ಯದ ದೂರದೃಷ್ಟಿಯ ಯೋಜನೆ ಇದಾಗಿದೆ. ಈಗಾಗಲೇ ಪಶು ಚಿಕಿತ್ಸಾಲಯ, ರೈತ ಸಂಪರ್ಕ ಕೇಂದ್ರ, ಸಭಾಭವನ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡವನ್ನು ಇಲ್ಲಿ ನಿರ್ಮಿಸುವ ಸಲುವಾಗಿ ಯೋಜನೆ ಸಿದ್ಧಪಡಿಸಲಾಗಿದೆ. ಸುಮಾರು 4 ಸಾವಿರ ಚದರ ಅಡಿಯ ಕಟ್ಟಡವನ್ನು ಸುಮಾರು 1.21ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗೋವರ್ದನ್ ಜೋಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ವಂಡ್ಸೆ, ಶಶಿಕಲಾ ವಂಡ್ಸೆ, ಸುಬ್ಬು, ಸುಶೀಲ, ಜಿ.ಪಂ ಮಾಜಿ ಸದಸ್ಯ ಎಚ್.ಮಂಜಯ್ಯ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿ.ಕೆ ಶಿವರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಚಿತ್ತೂರು ಗ್ರಾ.ಪಂ ಅಧ್ಯಕ್ಷ ರವಿರಾಜ ಶೆಟ್ಟಿ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಜಿ.ಶ್ರೀಧರ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆಶಾ, ವಿಕಲಚೇತನ ಇಲಾಖೆಯ ರಂಜಿತ್, ಉದ್ಯಮಿ ರಮೇಶ ದೇವಾಡಿಗ ಅಡಿಕೆಕೊಡ್ಲು, ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಪೂಜಾರಿ, ಗೋಪಾಲ ಶೆಟ್ಟಿ ಕೊಳ್ತ, ಸುಧೀರ್ ಕುಮಾರ್ ಶೆಟ್ಟಿ, ನಿರ್ಮಲ ಶೆಟ್ಟಿ ವಂಡ್ಸೆ, ವೆಂಕಟೇಶ್ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ರಫೀಕ್ ಸಾಹೇಬ್, ಅನಿಲ್ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಶೇಟ್ ಸ್ವಾಗತಿಸಿದರು. ಉಪಾಧ್ಯಕ್ಷ ಗೋವರ್ಧನ್ ಜೋಗಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಅತ್ಯುತ್ತಮ ಮೀನುಗಾರಿಕಾ ಸಹಕಾರ ಸಂಘ ಪ್ರಶಸ್ತಿ

    ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಅತ್ಯುತ್ತಮ ಮೀನುಗಾರಿಕಾ ಸಹಕಾರ ಸಂಘ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮೀನುಗಾರಿಕಾ ನಿರ್ದೇಶನಾಲಯ ಬೆಂಗಳೂರು ಇವರು ಅತ್ಯುತ್ತಮ ಮೀನುಗಾರಿಕೆ ಸಹಕಾರಿ ಸಂಘಗಳಿಗೆ ನೀಡುವ ಪ್ರಶಸ್ತಿ ರಜತ ಸಂಭ್ರಮದಲ್ಲಿರುವ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಲಭಿಸಿದೆ. ಸಂಘದ ಸಾಧನೆ, ಸೇವೆ, ಪ್ರಗತಿಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ನ.21 ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮೀನುಗಾರಿಕೆ ಸಚಿವರಾದ ಮಾಂಕಾಳ್ ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಮೀನುಗಾರಿಕೆ ಇಲಾಖೆ ನಿರ್ದೇಶಕರು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಭಾಸ್ಕರ ಕೆ.ನಾಯ್ಕ್ ಕುಂಟರ್ನೆಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮರ್ ಹಟ್ಟಿಯಂಗಡಿ ಪ್ರಶಸ್ತಿ ಸ್ವೀಕರಿಸಿದರು.

    ಸಂಘದ ನಿರ್ದೇಶಕರಾದ ರಾಜೀವ ಎನ್. ಶ್ರೀಯಾನ್, ಶೋಭಾ ಜಿ.ಪುತ್ರನ್, ಲಲಿತಾ ಮೊಗವೀರ, ನಾಗೇಶ ಮೊಗವೀರ, ಸಂಘದ ಪ್ರಧಾನ ಕಛೇರಿಯ ಮುಖ್ಯ ಲೆಕ್ಕಿಗ ಸಂತೋಷ್ ಎಸ್.ಎಂ., ವಂಡ್ಸೆ ಶಾಖಾಧಿಕಾರಿ ಗಣೇಶ ಬಳೆಗಾರ್, ಶಂಕರನಾರಾಯಣ ಶಾಖಾಧಿಕಾರಿ ಸಂತೋಷ್ ಆರ್.ಎಂ., ಸಂಘದ ಸಿಬ್ಬಂದಿಗಳಾದ ಪ್ರವೀಣ ಬೈಂದೂರು, ಸುಕೇಶ ಉಪ್ಪಿನಕುದ್ರು, ಶ್ರೀನಿವಾಸ, ಸವಿತಾ, ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಶಾಖಾಧ್ಯಕ್ಷ ಮಹಾಬಲ ಎಂ. ಸುವರ್ಣ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲ ಜಿ. ಚಂದನ್, ಮೊಗವೀರ ಯುವ ಸಂಘಟನೆ ಮಾಜಿ ಗೌರವಾಧ್ಯಕ್ಷ ಅನಂದ ಕೆ.ನಾಯ್ಕ್, ಬಿ.ಆರ್ ನಾಯ್ಕ, ಸುಮತಿ ಯು. ಹಟ್ಟಿಯಂಗಡಿ, ರೇವತಿ ಆರ್. ಶ್ರೀಯಾನ್, ರಾಜೀವ ಜಿ. ನಾಯ್ಕ್ ವಂಡ್ಸೆ, ಚೈತ್ರಾ ಹಟ್ಟಿಯಂಗಡಿ, ಧನ್ಯ ಕುಂಟರ್ನೆಲು, ಲಕ್ಷ್ಮೀ ಎಸ್. ಸುಳ್ಸೆ, ಸಾಕ್ಷಿ ಸುಳ್ಸೆ, ಸಂಗೀತಾ ಎಸ್.ತೊಪ್ಲು, ಸಾಕ್ಷಿ ತೊಪ್ಲು, ಪೂರ್ಣಿಮಾ ಜಿ. ಕಟ್‍ಬೇಲ್ತೂರು, ಸಾತ್ವಿಕ್ ಸುಳ್ಸೆ ಮೊದಲಾದವರು ಉಪಸ್ಥಿತರಿದ್ದರು.