ಕೋಟ :ಡಿ.5 – 6ರಂದು ಕೋಟದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ

0
433

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ : ಕ.ಸಾ.ಪ. ಉಡುಪಿ ಜಿಲ್ಲೆ ಆಶ್ರಯದಲ್ಲಿ, ಕೋಟ ವಿವೇಕ ವಿದ್ಯಾಸಂಘದ ಸಹಕಾರದಲ್ಲಿ, ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ಡಿ.೫-೬ರಂದು ಉಡುಪಿ ಜಿಲ್ಲಾ ೧೬ನೇ ಸಾಹಿತ್ಯ ಸಮ್ಮೇಳನ ಜರಗಲಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನ.೨೪ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ಪ್ರಯುಕ್ತ ಡಿ.೫ರಂದು ಸಾಲಿಗ್ರಾಮ ಗುರುನರಸಿಂಹ ದೇಗುಲದಿಂದ ಕೋಟ ವಿವೇಕ ವಿದ್ಯಾಸಂಸ್ಥೆ ತನಕ ಪುರಮೆರವಣಿಗೆ ನಡೆಯಲಿದ್ದು, ಬೆಳಗ್ಗೆ ೧೦.೩೦ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಕ.ಸಾ.ಪ. ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಪುಸ್ತಕ ಮಳಿಗೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಅಪರಾಹ್ನ ೨ಗಂಟೆಗೆ ಕವಿಗೋಷ್ಠಿ, ೩ಗಂಟೆಗೆ ಕುಂದಾಪ್ರ ಭಾಷಿ ಕುರಿತು ಮನುಹಂದಾಡಿಯವರಿಂದ ಗೋಷ್ಠಿ ಅನಂತರ ಶತಮಾನದ ಅಚ್ಚರಿ ಕೋಟ ಲಕ್ಷ್ಮೀ ನಾರಾಯಣ ಕಾರಂತ ಮತ್ತು ಆಡಳಿತದಲ್ಲಿ ಕನ್ನಡ ವಿಚಾರಗೋಷ್ಠಿ, ನಾಟಕ ಪ್ರದರ್ಶನ ನಡೆಯಲಿದೆ.

ಡಿ.೬ರಂದು ಬೆಳಗ್ಗೆ ೧೦ಗಂಟೆಗೆ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಒಂದಷ್ಟು ಹೊತ್ತು ಮಾತು-ಕತೆ, ಶಿಕ್ಷಣ, ಶಿಕ್ಷಕ -ವ್ಯವಸ್ಥೆ ವಿಚಾರಗೋಷ್ಠಿ, ಅಪರಾಹ್ನ೧.೩೦ಕ್ಕೆ ಚಿಣ್ಣರ ಜಗುಲಿ ಬಹುವಿಧ ಗೋಷ್ಠಿ ಅನಂತರ ಯಕ್ಷಗಾನ ಪ್ರಸಂಗದ ಕುರಿತು ವಿಚಾರಗೋಷ್ಠಿ ಅಪರಾಹ್ನ ೩ಕ್ಕೆ ಬಹಿರಂಗ ಅಧಿವೇಶನ, ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ, ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

Click Here

ಅಮಂತ್ರಣ ಬಿಡುಗಡೆ :-
ಇದೇ ಸಂದರ್ಭ ಜಿಲ್ಲಾ ಸಮ್ಮೇಳನದ ಆಮಂತ್ರಣವನ್ನು ವಿವೇಕ ವಿದ್ಯಾಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ರಾಮದೇವ ಐತಾಳ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಪದಾದಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ರಾಮಚಂದ್ರ ಐತಾಳ, ಮನೋಹರ ಪಿ., ಉಪೇಂದ್ರ ಸೋಮಯಾಜಿ, ಸುಜಯೀಂದ್ರ ಹಂದೆ, ಅಚ್ಯುತ್ ಪೂಜಾರಿ, ವಿವೇಕ ವಿದ್ಯಾಸಂಸ್ಥೆಯ ಪ್ರತಿನಿಽಗಳಾದ ಜಗದೀಶ್ ನಾವಡ, ಮಂಜುನಾಥ ಉಪಾಧ್ಯ, ಜಗದೀಶ್ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ್ ಉಡುಪ, ಸಂಜೀವ ಗುಂಡ್ಮಿ ಮೊದಲಾದವರಿದ್ದರು.

Click Here

LEAVE A REPLY

Please enter your comment!
Please enter your name here