ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರತಿವರ್ಷ ಕೋಡಿ ಹೊಸಬೇಂಗ್ರೆ ಕಡಲ್ಕೊರೆತ ಸ್ಥಳಗಳಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಅಲ್ಲಿನ ಸಮುದ್ರ ತಟದಲ್ಲಿ ವಾಸ್ತವ್ಯ ಹೊಂದಿದ ಹಕ್ಕುಪತ್ರದಿಂದ ವಂಚಿತರಾದ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರು. ಅಲ್ಲದೆ ಬೀಚ್ ಸನಿಹದಲ್ಲಿ ತಲೆ ಎತ್ತಿದ ರೆಸಾರ್ಟ್‍ಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಆರ್ ಐ ರಾಜು, ಕೋಟ ಆರ್ ಐ ಮಂಜು ಬಿಲ್ಲವ,ಸ್ಥಳೀಯ ಗ್ರಾಮ ಲೆಕ್ಕಿಗ ಗಿರೀಶ್ ಕುಮಾರ್, ಸಹಾಯಕಿ ಸರೋಜ, ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಕರಾವಳಿ ಕಾವಲು ಪಡೆಯ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.











