ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೀನುಗಾರಿಕಾ ನಿರ್ದೇಶನಾಲಯ ಬೆಂಗಳೂರು ಇವರು ಅತ್ಯುತ್ತಮ ಮೀನುಗಾರಿಕೆ ಸಹಕಾರಿ ಸಂಘಗಳಿಗೆ ನೀಡುವ ಪ್ರಶಸ್ತಿ ರಜತ ಸಂಭ್ರಮದಲ್ಲಿರುವ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಲಭಿಸಿದೆ. ಸಂಘದ ಸಾಧನೆ, ಸೇವೆ, ಪ್ರಗತಿಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನ.21 ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮೀನುಗಾರಿಕೆ ಸಚಿವರಾದ ಮಾಂಕಾಳ್ ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಮೀನುಗಾರಿಕೆ ಇಲಾಖೆ ನಿರ್ದೇಶಕರು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಭಾಸ್ಕರ ಕೆ.ನಾಯ್ಕ್ ಕುಂಟರ್ನೆಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮರ್ ಹಟ್ಟಿಯಂಗಡಿ ಪ್ರಶಸ್ತಿ ಸ್ವೀಕರಿಸಿದರು.
ಸಂಘದ ನಿರ್ದೇಶಕರಾದ ರಾಜೀವ ಎನ್. ಶ್ರೀಯಾನ್, ಶೋಭಾ ಜಿ.ಪುತ್ರನ್, ಲಲಿತಾ ಮೊಗವೀರ, ನಾಗೇಶ ಮೊಗವೀರ, ಸಂಘದ ಪ್ರಧಾನ ಕಛೇರಿಯ ಮುಖ್ಯ ಲೆಕ್ಕಿಗ ಸಂತೋಷ್ ಎಸ್.ಎಂ., ವಂಡ್ಸೆ ಶಾಖಾಧಿಕಾರಿ ಗಣೇಶ ಬಳೆಗಾರ್, ಶಂಕರನಾರಾಯಣ ಶಾಖಾಧಿಕಾರಿ ಸಂತೋಷ್ ಆರ್.ಎಂ., ಸಂಘದ ಸಿಬ್ಬಂದಿಗಳಾದ ಪ್ರವೀಣ ಬೈಂದೂರು, ಸುಕೇಶ ಉಪ್ಪಿನಕುದ್ರು, ಶ್ರೀನಿವಾಸ, ಸವಿತಾ, ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಶಾಖಾಧ್ಯಕ್ಷ ಮಹಾಬಲ ಎಂ. ಸುವರ್ಣ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲ ಜಿ. ಚಂದನ್, ಮೊಗವೀರ ಯುವ ಸಂಘಟನೆ ಮಾಜಿ ಗೌರವಾಧ್ಯಕ್ಷ ಅನಂದ ಕೆ.ನಾಯ್ಕ್, ಬಿ.ಆರ್ ನಾಯ್ಕ, ಸುಮತಿ ಯು. ಹಟ್ಟಿಯಂಗಡಿ, ರೇವತಿ ಆರ್. ಶ್ರೀಯಾನ್, ರಾಜೀವ ಜಿ. ನಾಯ್ಕ್ ವಂಡ್ಸೆ, ಚೈತ್ರಾ ಹಟ್ಟಿಯಂಗಡಿ, ಧನ್ಯ ಕುಂಟರ್ನೆಲು, ಲಕ್ಷ್ಮೀ ಎಸ್. ಸುಳ್ಸೆ, ಸಾಕ್ಷಿ ಸುಳ್ಸೆ, ಸಂಗೀತಾ ಎಸ್.ತೊಪ್ಲು, ಸಾಕ್ಷಿ ತೊಪ್ಲು, ಪೂರ್ಣಿಮಾ ಜಿ. ಕಟ್‍ಬೇಲ್ತೂರು, ಸಾತ್ವಿಕ್ ಸುಳ್ಸೆ ಮೊದಲಾದವರು ಉಪಸ್ಥಿತರಿದ್ದರು.











