Category: ಸುದ್ದಿ

  • ಉಡುಪಿ :ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಯಘಾತದಿಂದ ನಿಧನ

    ಉಡುಪಿ :ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಯಘಾತದಿಂದ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಯಘಾತದಿಂದ ನಿಧನ ಹೊಂದಿದ್ದಾರೆ.

    ಗುರವಾರ ಬೆಳಿಗ್ಗೆ ಉಡುಪಿಯ ಮನೆಯಲ್ಲಿದ್ದಾಗ ಧಿಢೀರಾಗಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನ ನಗರದ ಅಸ್ಪತ್ರೆಗೆ ತೋರಿಸಿದಾಗ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ಅಂಬುಲ್ಯಾನ್ಸ್ ನಲ್ಲಿ ಕರೆದಯ್ತೂತ್ತಿದ್ದಾಗ ದಾರಿ ಮದ್ಯೆ ಹೆಮ್ಮಣ್ಣ ತೀವ್ರ ಅಸ್ವಸ್ಥ ಗೊಂಡಿದ್ದರು.ಮಣಿಪಾಲ ಅಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣರವರು ರಾತ್ರಿ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು.

    1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ – “ಕ್ಷಿತಿಜ” ಎನ್ನುವ ಸ್ವಂತ ವಾರ ಪತ್ರಿಕೆ ಅರಂಭಿಸಿ , ಮುಖ್ಯ ಸಂಪಾದಕರಾಗಿದ್ದರು.ಬಳಿಕ ಈ ಟಿವಿ ಕನ್ನಡ ,ಡಿಡಿ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.ಹಲವು ಉದಯೋನ್ಮುಕ ಪತ್ರಕರ್ತರಿಗೆ ಪ್ರೇರಕರಾಗಿದ್ದ ಹೆಮಣ್ಣ ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು ,ಸರಕಾರದ ಗಮನ ಸೆಳೆಯುವಲ್ಲಿ ಪ್ದಮುಖ ಪಾತ್ರ ವಹಿಸಿದ್ದರು‌.

    ಇತ್ತೀಚೆಗಷ್ಟೇ ಕನೆಕ್ಟ್ ಮಿಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ ,ಹಲವು ಯೋಜನೆಗಳನ್ನು ರಾಜ್ಯದಾದ್ಯಂತ ಅರಂಭಿಸುವ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದರು.ರಾಜಕೀಯ ಸಮೀಕ್ಷೆಗಳಲ್ಲಿ ಎತ್ತಿದ ಕೈಯಾಗಿದ್ದ ಇವರಿಗೆ ಹಲವಾರು ರಾಜಕೀಯ ನಾಯಕರನ್ನು ಬೆಳೆಸಿದ ಕೀರ್ತಿ ಸಲ್ಲುತ್ತದೆ.

    ಪರಿಸರ ಪ್ರೇಮಿಯೂ ,ಕೃಷಿ ಪ್ರೇಮಿಯೂ ಅಗಿದ್ದ ಇವರು ,ಕರಾವಳಿಯಲ್ಲಿ ಕಾಂಡ್ಲವನ ಯೋಜನೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
    ಕರಾವಳಿಯಲ್ಲಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು,ನೆಲ‌ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನೀರು ಅರುವ ಮುನ್ನ ಕಾರ್ಯಕ್ರಮದ ಮೂಂಚಣಿಯಲ್ಲಿದ್ದವರು. ಸಮಾಜಿಕ ಕಳಕಳಿ ಇದ್ದ ನೇರ ನಡೆಯ ಧೀಮಂತ ಪತ್ರಕರ್ತ ಎಂದು ಹೆಸರಾಗಿದ್ದರು.

    ಮೃತರು ತಂದೆ ತಾಯಿ,ಪತ್ನಿ , ಪುತ್ರ , ನಾಲ್ಕು ಜನ ಸಹೋದರು ಹಾಗೂ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

    ಹಿರಿಯ ಪತ್ರಕರ್ತರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ‌ ಮಿಡಿದಿದ್ದಾರೆ.

    ಅಂತಿಮ ಅಂತ್ಯಕ್ರಿಯು ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯಲ್ಲಿರುವ ಕುಟುಂಬದ ಸ್ವಗೃಹದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9.30 ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

  • ಉಡುಪಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ 10ರ ವರೆಗೆ ಪಟಾಕಿ ಸಿಡಿಸಲು ಅವಕಾಶ

    ಉಡುಪಿ ಜಿಲ್ಲೆಯಲ್ಲಿ ರಾತ್ರಿ 8 ರಿಂದ 10ರ ವರೆಗೆ ಪಟಾಕಿ ಸಿಡಿಸಲು ಅವಕಾಶ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಪಟಾಕಿಗಳನ್ನು ಬಳಸುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಕುಂದಾಪುರ :ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ

    ಕುಂದಾಪುರ :ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಎನ್.ಸಿ.ಸಿ. ಘಟಕದ ಜಂಟಿ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಮೆಟ್ಟಿಲನ್ನೇ ಹತ್ತದ ಹಾಜಬ್ಬರು ತನ್ನೂರಿನಲ್ಲಿ ಶಾಲೆ ತೆರೆಯುವ ಮೂಲಕ ನಮಗೆಲ್ಲ ಮಾದರಿಯಾದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು. ಸಾಧನೆಗೆ ಶ್ರೀಮಂತಿಕೆ, ಜಾತಿ, ಧರ್ಮದ ಅಗತ್ಯವಿಲ್ಲ. ಛಲ ಹಾಗೂ ಸಾಧಿಸುವ ಮನಸ್ಸು ಜತೆಗೆ ದೇಶಪ್ರೇಮ ಇದ್ದರೆ ಹರೇಕಳ ಹಾಜಬ್ಬರಂತೆ ಅಕ್ಷರ ಕ್ರಾಂತಿ ಮಾಡಲು ಸಾಧ್ಯ ಎಂದರು.

    ಜೆಸಿ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಅತಿಥಿ ನೆಲೆಯ ಮಾತುಗಳನ್ನಾಡಿದರು. ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ ಅತಿಥಿಗಳನ್ನು ಪರಿಚಯಿಸಿದರು. ಎನ್.ಸಿ.ಸಿ. ಅಧಿಕಾರಿಗಳಾದ ಶರತ್ ಕುಮಾರ್ ಸ್ವಾಗತಿಸಿ, ಹರೀಶ್ ಬಿ. ವಂದಿಸಿದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು.

  • ಕುಂದಾಪುರ :ಆಜ್ರಿಗೋಪಾಲ ಗಾಣಿಗರಿಗೆ ಗಾಣಿಗ ಯುವ ಸಂಘಟನೆಯಿಂದ ಗೌರವಾರ್ಪಣೆ

    ಕುಂದಾಪುರ :ಆಜ್ರಿಗೋಪಾಲ ಗಾಣಿಗರಿಗೆ ಗಾಣಿಗ ಯುವ ಸಂಘಟನೆಯಿಂದ ಗೌರವಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗಾಣಿಗ ಯುವ ಸಂಘಟನೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗರನ್ನು ನ.5 ರಂದು ಆಜ್ರಿಯಲ್ಲಿ ಸಮ್ಮಾನಿಸಲಾಯಿತು.

    ಸಂಘಟನೆಯ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಮಾತನಾಡಿ, ನಮ್ಮ ಸಂಘಟನೆಯ ವತಿಯಿಂದ ಸಮಾಜದ ಸಾಧಕರನ್ನು ಗುರುತಿಸಿ, ಗೌರವಿಸುತ್ತಿದ್ದೇವೆ. ಆಜ್ರಿ ಗೋಪಾಲ ಗಾಣಿಗ ಸಮಾಜದ ಅತೀ ದೊಡ್ಡ ಆಸ್ತಿ. ಅವರ ಕೊಡುಗೆಗೆ ಇನ್ನೂ ಹೆಚ್ಚಿನ ಗೌರವ ಸಿಗಲಿ ಎಂದರು.

    ಸಮ್ಮಾನ ಸ್ವೀಕರಿಸಿ ಮಾತನಾಡಿದ ಆಜ್ರಿಯವರು, ಯಕ್ಷರಂಗಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ್ದೇನೆ. ಕಲೆ ಹೊರತುಪಡಿಸಿ ನನಗೆ ಬೇರೇನು ತಿಳಿದಿಲ್ಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿನಿಂದ ಸಾಕಷ್ಟು ಖುಷಿ ನೀಡಿದೆ. ನನ್ನನ್ನು ಗೌರವಿಸಿದ್ದಕ್ಕಾಗಿ ಗಾಣಿಗ ಯುವ ಸಂಘಟನೆಗೆ ಧನ್ಯವಾದಗಳು ಎಂದರು.
    ಸಂಘಟನೆಯ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ ಕಾರ್ಕಡ, ಮಹಿಳಾ ಸಂಘಟನೆಯ ಅಧ್ಯಕ್ಷೆ ರೇಖಾ ಗಣೇಶ್ ಚಿತ್ರಪಾಡಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಉಪಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಯುವ ಸಂಘಟನೆಯ ಮಾಜಿ ಅಧ್ಯಕ್ಷ ವಿಶ್ವನಾಥ ಗಾಣಿಗ, ಮಾಜಿ ಕಾರ್ಯದರ್ಶಿ ಗಣೇಶ್ ಚಿತ್ರಪಾಡಿ ಉಪಸ್ಥಿತರಿದ್ದರು.

    ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

  • ನ.10ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

    ನ.10ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

    ಚಿತ್ರರಂಗದ ಶ್ರೇಷ್ಠ ನಟ ದೊಡ್ಡಣ್ಣರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ‌ಸುದ್ದಿ…
    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಸದ್ಭಾವನಾ 2023 ನಾಡುನುಡಿಗೆ ಭಾವನಮನ ಎಂಬ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದೇ ನ. 10ರ ಶುಕ್ರವಾರ ಸಂಜೆ 6ಕ್ಕೆ ಕೋಟದ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಪ್ರತಿವರ್ಷ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಈ ಬಾರಿ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಎಸ್.ದೊಡ್ಡಣ ರವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಪ್ರಶಸ್ತಿ ಬೆಳ್ಳಿ ಫಲಕ ಒಳಗೊಂಡಿದೆ.

    ಇದೇ ವೇಳೆ ವಿಶೇಷ ಅಭಿನಂದನೆಯನ್ನು ಅಮ್ಮಚ್ಚಿ ಎಂಬ ನೆನಪು ಚಿತ್ರದ ನಾಯಕ ರಂಗನಟ ಡಾ.ರಾಧಕೃಷ್ಣ ಉರಾಳ ಇವರಿಗೆ ನೀಡಲಿದ್ದು, ವಿಶೇಷ ಪುರಸ್ಕಾರವನ್ನು ಪರಿಸರಸ್ನೇಹಿ ಸಂಘಟನೆ ಕ್ಲೀನ್ ತ್ರಾಸಿ ಮರವಂತೆ ತಂಡಕ್ಕೆ ನೀಡಲಿದೆ ಅಲ್ಲದೆ ಪಂಚವರ್ಣ ಮಹಿಳಾ ಸಾಧಕಿ ಪರಸ್ಕಾರವನ್ನು ಸಮಾಜಸೇವಕಿ ಆಶಾ ವಿ ಪಡೆಯಲಿದ್ದಾರೆ.

    ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ , ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನಡೆಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಮಯೂರಿ ನೃತ್ಯ ತಂಡ ಕುಂಭಾಶಿ,ಮಂಗಳೂರಿನ ಪ್ರಸಿದ್ಧ ನಾಟಕ ತಂಡ ದೇವದಾಸ್ ಕಾಪಿಕಾಡ್ ನಿರ್ದೇಶನದ ಹಾಸ್ಯಮಯ ನಾಟಕ ಹೆಸರಿಟಾಯ್ತು ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ತಿಳಿಸಿದ್ದಾರೆ.

  • ಕುಂದಾಪುರ :ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಳಾಂತರ ಶಾಖೆ ಉದ್ಘಾಟನೆ

    ಕುಂದಾಪುರ :ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಳಾಂತರ ಶಾಖೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಛಾಯಾಗ್ರಾಹಕರ ವೃತ್ತಿಗೆ ಬಹಳ ಮಹತ್ವವಿದೆ. ಇಂದಿನ ದಿನಗಳಲ್ಲಿ ಇಂಥಹ ಸಹಕಾರಿ ಸಂಸ್ಥೆಗಳ ಪಾತ್ರವೂ ಬಹಳ ಮುಖ್ಯವಾಗುತ್ತದೆ ವೃತ್ತಿಗೆ ಸಂಬಂಧ ಸೌಲಭ್ಯಗಳನ್ನು ಒದಗಿಸಿಕೊಳ್ಳಲು ಹಣಕಾಸಿನ ನೆರವು ನೀಡುವ ಮೂಲಕ ಅಭಿವೃದ್ದಿಗೆ ಕಾರಣವಾಗುತ್ತದೆ. ಇವತ್ತಿನ ಡಿಜಿಟಲ್ ಯುಗದ ಸ್ಪರ್ಧಾತ್ಮಕತೆಯಲ್ಲಿ ಛಾಯಾಗ್ರಾಹಕರು ಅಭಿವೃದ್ದಿ ಹೊಂದಲು ಈ ಸಂಸ್ಥೆ ಕಾರಣವಾಗಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಅವರು ಕುಂದಾಪುರ ಮುಖ್ಯರಸ್ತೆಯ ಗೀತಾಂಜಲಿ ಟಾಕೀಸಿನ ಎದುರುಗಡೆ ಇರುವ ವಿ.ಎಂ.ಕೆ ಟವರ್‍ನಲ್ಲಿ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಕುಂದಾಪುರ ಇದರ ಸ್ಥಳಾಂತರ ಶಾಖೆ ಉದ್ಘಾಟಿಸಿ ಮಾತನಾಡಿದರು.

    ಆರ್ಥಿಕ ಅಭಿವೃದ್ದಿ ವಿಚಾರದೊಂದಿಗೆ ಛಾಯಾಗ್ರಾಹಕರು ನಿರ್ಮಿಸಿದ ವಿವಿಧೋದ್ದೇಶ ಸಹಕಾರಿ ಸಂಘ ಯಶಸ್ವಿಯಾಗಿ ಬೆಳೆಯುವುದರೊಂದಿಗೆ ಗ್ರಾಹಕರಿಗೆ ಇನ್ನಷ್ಟು ಅನುಕೂಲತೆಗಳನ್ನು ಒದಗಿಸಿಕೊಡುವ ಸಲುವಾಗಿ ಸ್ಥಳಾಂತರಗೊಂಡಿದೆ. ಇವತ್ತು ಇಂಥಹ ಸಹಕಾರಿ ಸಂಸ್ಥೆಗಳ ಅನಿವಾರ್ಯತೆ ಇದೆ. ಆರ್ಥಿಕ ಅಭಿವೃದ್ದಿಗೆ ಪೂಕರವಾಗಲಿ ಎಂದು ಹೇಳಿದರು.

    ಭದ್ರತಾ ಕೊಠಡಿಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಸಹಕಾರ ರತ್ನ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಕೆ.ಪಿ.ಎ ದ.ಕ-ಉಡುಪಿ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಮಾತನಾಡಿ, ಸುಮಾರು 4ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಎಸ್.ಕೆ.ಪಿ.ಎ ಬಲಿಷ್ಠ ಸಂಘಟನೆಯಾಗಿದೆ.ಛಾಯಾ ಸುರಕ್ಷಾ, ವಿದ್ಯಾನಿಧಿ ಯೋಜನೆಯ ಮೂಲಕ ಗುರುತಿಸಿಕೊಂಡ ಸಂಘಟನೆ ರಾಜ್ಯದಲ್ಲಿ ಪ್ರಥಮ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಿಸಿದ ಹೆಗ್ಗಳಿಕೆಯನ್ನು ಹೊಂದಿದೆಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕುಂದಾಪುರ ಇದರ ಅಧ್ಯಕ್ಷರಾದ ಗಿರೀಶ್ ಕೆ ಮಾತನಾಡಿ ಛಾಯಾಗ್ರಾಹಕರ ಬಗ್ಗೆ ವಿಶೇಷ ಕಾಳಜಿ, ಸಂಘಟನೆ ಹಾಗೂ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪನೆಯಲ್ಲಿ ಅಶೋಕ್ ಕುಮಾರ್ ಶೆಟ್ಟಿಯವರ ಪಾತ್ರ ಮಹತ್ವದ್ದು. ಛಾಯಾಗ್ರಾಹಕರ ವೃತ್ತಿಗೆ ಸಂಬಂಧಪಟ್ಟ ಉಪಕರಣಗಳ ಖರೀಧಿಸಲು ಹಣಕಾಸಿನ ನೆರವು ಸುಲಭದಲ್ಲಿ ಸಿಗುವಂತಾಗಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಅಶೋಕ್ ಶೆಟ್ಟಿಯವರು, ದಿನೇಶ ಗೋಡೆಯವರು ಈ ಸಂಸ್ಥೆಯನ್ನು ಮುನ್ನೆಡೆಸಿದ್ದಾರೆ. ಯಶಸ್ವಿಯಾಗಿ ಸಂಘ ಮುನ್ನೆಡೆಯುತ್ತಿದೆ. ಛಾಯಾಗ್ರಾಹಕರ ಅನೇಕ ಸಮಸ್ಯೆ, ಬೇಡಿಕೆಗಳಿವೆ. ಅದನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದೇವೆ. ಛಾಯಾಗ್ರಾಹಕರ ಬೇಡಿಕೆಗಳನ್ನು ಶೀಘ್ರವಾಗಿ ಸರ್ಕಾರಕ್ಕೆ ನಿಯೋಗವೊಂದನ್ನು ಕೊಂಡೊಯ್ಯಲು ಚಿಂತನೆ ನಡೆಸಿದ್ದೇವೆ ಎಂದರು.

    ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಅಧ್ಯಕ್ಷರಾದ ಕೆ.ವಾಸುದೇವ ರಾವ್, ಎಸ್.ಕೆ.ಪಿ.ಎ ಕುಂದಾಪುರ ಬೈಂದೂರು ವಲಯ ಅಧ್ಯಕ್ಷರಾದ ದಿವಾಕರ ಶೆಟ್ಟಿ, ವಿ.ಎಂ.ಕೆ ಟವರ್ಸ್ ಕಟ್ಟಡ ಮಾಲಕರಾದ ಕೆ.ರಮೇಶ ಕಾಮತ್, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ನಿರ್ದೇಶಕರಾದ ಗಣೇಶ್ ಕೆ., ಎಸ್.ಕೆ.ಪಿ.ಎ ಕುಂದಾಪುರ ಬೈಂದೂರು ವಲಯ ಪ್ರಧಾನ ಕಾರ್ಯದರ್ಶಿ ದಿನೇಶ ರಾಯಪ್ಪನಮಠ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಗಣೇಶ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ, ನಿರ್ದೇಶಕರಾದ ರಾಘವೇಂದ್ರ ಐತಾಳ್, ಪುಂಡಲೀಕ ಶ್ಯಾನುಭಾಗ್, ಎಸ್.ದಿನೇಶ ಗೋಡೆ, ಶ್ರೀಧರ ಹೆಗ್ಡೆ, ಗ್ರೇಶನ್ ಡಯಾಸ್, ಗೋಪಾಲ ಕಾಂಚನ್, ಅನ್ನಪೂರ್ಣ, ಸುಕುಪಾಲ್ ಖಾರ್ವಿ, ಸರಿತಾ, ರಾಜೀವ ದೇವಾಡಿಗ, ದೊಟ್ಟಯ್ಯ ಪೂಜಾರಿ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಸಾಲಪತ್ರ ಠೇವಣಿ ಪತ್ರವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಗಿರೀಶ್ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ ಶೇಟ್ ಪ್ರಾರ್ಥನೆ ಮಾಡಿದರು. ಸಂಘದ ನಿರ್ದೇಶಕರಾದ ಪ್ರೀತಿ ಶೆಟ್ಟಿ ವಂದಿಸಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.

  • ಬೆಂಗಳೂರು, ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಸೇನಾಪುರದಲ್ಲಿ  ಪ್ರತಿಭಟನೆ

    ಬೆಂಗಳೂರು, ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಸೇನಾಪುರದಲ್ಲಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೊಂಕಣ ರೈಲ್ವೇ ವ್ಯಾಪ್ತಿಗೆ ಬರುವ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

    ಕಳೆದ ಹಲವು ದಶಕಗಳಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಲೋಕಲ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದ್ದವು. ಆದರೆ ಸೇನಾಪುರ ಸುತ್ತಮುತ್ತಲಿನ ಪ್ರದೇಶದ ಬಹುತೇಕ ಜನರು ದೂರದ ಬೆಂಗಲೂರು ಮತ್ತು ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದು, ರೈಲು ಪ್ರಯಾಣಕ್ಕಾಗಿ ಬೈಂದೂರು ಅಥವಾ ಕುಂದಾಪುರ ರೈಲು ನಿಲ್ದಾಣಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಇದರಿಂದಾಗಿ ಪ್ರಯಾಣದ ಸಮಯ ಮತ್ತು ವೆಚ್ಚ ಹೆಚ್ಚಾಗುತ್ತಿದ್ದವು. ಇದರಿಂದ ಆಕ್ರೋಶಿತಗೊಂಡ ಸೇನಾಪುರ ರೈಲು ನಿಲ್ದಾಣದ ಫಲಾನುಭವಿ ಗ್ರಾಮಸ್ಥರು ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಸೇನಾಪುರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಕಾಲಿಕ ಮಳೆಯಬ್ಬರವನ್ನೂ ಲೆಕ್ಕಿಸದ ಜನ ತಮ್ಮ ಹಕ್ಕೊತ್ತಾಯವನ್ನು ಪ್ರತಿಭಟನೆಯ ಮೂಲಕ ಮಂಡಿಸಿದರು.

    ಈ ಸಂದರ್ಭ ಭೇಟಿ ನೀಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಸಂಸದ ಬಿ.ವೈ ರಾಘವೇಂದ್ರ ಜೊತೆಗೆ ಚರ್ಚಿಸಿದ್ದೇನೆ. ಒಂದು ತಿಂಗಳೊಳಗೆ ಸೇನಾಪುರದಲ್ಲಿ ಬೆಂಗಲೂರು ಮತ್ತು ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು.

    ಕುಂದಾಫುರ ತಾಲೂಕು ಪಂಚಾಯಿತಿ ಮಾಜೀ ಅಧ್ಯಕ್ಷ ಶಂಕರ್ ಶೆಟ್ಟಿ ಮಾತನಾಡಿ, ಹಲವು ದಶಕಗಳಿಂದ ನಮ್ಮ ಊರಿನ ಜನರ ಸಮಸ್ಯೆಗಳನ್ನು ಶಾಮತವಾಗಿಯೇ ಹೇಳುತ್ತಾ ಬಂದಿದ್ದೇವೆ. ಆದರೆ ಇದರಿಮದ ಪ್ರಯೋಜನವಾಗಿರಲಿಲ್ಲ. ಅದಕ್ಕಾಗಿ ಇಡೀ ಊರಿನ ಗ್ರಾಮಸ್ಥರು ಇಂದು ಒಟ್ಟಾಗಿ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪ್ರತಿಭಟನೆಗೆ ಜಯ ಸಿಗುತ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು.

    ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆಯೊಂದೇ ದಾರಿಯಾಗಿದೆ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಭಾಗವಹಿಸಿದ್ದಾರೆ. ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಯ ಜೊತೆಗೆ ಗೂಡ್ಸ್ ರೈಲು ನಿಲುಗಡೆಯಾದರೆ ನಮ್ಮ ಊರು ಇನ್ನಷ್ಟು ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ತೀವ್ರವಾಗಲಿದೆ ಎಂದು ಕುಂದಾಪುರ ತಾಲೂಕು ಪಂಚಾಯತ್ ಮಾಜೀ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಹೇಳಿದರು.

  • ಬೈಂದೂರಿನಲ್ಲಿ ಸುಸಜ್ಜಿತ ಬೈಂದೂರು ಪ್ಯಾಲೇಸ್ ಲೋಕಾರ್ಪಣೆ

    ಬೈಂದೂರಿನಲ್ಲಿ ಸುಸಜ್ಜಿತ ಬೈಂದೂರು ಪ್ಯಾಲೇಸ್ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗದೇ ಇದ್ದರೂ ಸರ್ಕಾರದ ಅನುದಾನಗಳನ್ನು ಕ್ಷೇತ್ರಕ್ಕೆ ತರಿಸಿ, ಸಮಾಜಸೇವೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿದವರು ಉದ್ಯಮಿ ವೆಂಕಟೇಶ್ ಕಿಣಿಯವರು ಎಂದು ಕೊಲ್ಲೂರು ಕ್ಷೇತ್ರದ ಮಾಜೀ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಹೇಳಿದರು.

    ಅವರು ಭಾನುವಾರ ಬೈಂದೂರಿನ ತಾಲೂಕು ಕಚೇರಿ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬೈಂದೂರು ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರಿನಲ್ಲಿ ಮೂಕಾಂಬಿಕ ರೈಲು ನಿಲ್ದಾಣಕ್ಕೆ ವೆಂಕಟೇಶ್ ಕಿಣಿ ಕೊಡುಗೆ ಅಪಾರ. ಇದೀಗ ಬೈಂದೂರಿನಲ್ಲಿ ವಸತಿ ಸಮುಚ್ಛಯದ ಮೂಲಕ ಗ್ರಾಮೀಣ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

    ಇದೇ ಸಂದರ್ಭ ಸಂಸ್ಥೆಯ ಪಾಲುದಾರ, ಕೇರಳದ ಪ್ರತಿಷ್ಟಿತ ಬಿಲ್ಡರ್ ರಾಜೀವ ಹಾಗೂ ಸಾಜು ಹಾಗೂ ಮಹಿಮಾರನ್ನು ಗೌರವಿಸಲಾಯಿತು. ರಾಜೀವ ಅವರು ಬರೆದ “ಮಾರ್ಕೆಟಿಂಗ್ ಪುಶ್ ದ ಕಸ್ಟಮರ್ಸ್ ಟು ಪುಲ್ ದ ಬ್ರ್ಯಾಂಡ್” ಪುಸ್ತಕ ಬಿಡುಗಡೆಗೊಳಿಸಲಾಯಿತು.

    ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬೈಂದೂರು ಪ್ಯಾಲೇಸ್ ವಸತಿ ಸಮುಚ್ಛಯದಲ್ಲಿ ಉದ್ಘಾಟನೆಯ ಪ್ರಯುಕ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಕೊನೆಯ 10 ವಸತಿಗೃಹಗಳು ಮಾತ್ರ ಬಾಕಿಯಿದ್ದು ಕೇವಲ 29.9 ಲಕ್ಷ ರೂ. ನಿಗಧಿ ಮಾಡಲಾಗಿದೆ. ಈಜುಕೊಳ ಸೇರಿದಂತೆ ಸಾಮಾನ್ಯ 20 ಸೇವೆ ದೊರೆಯಲಿದೆ. ರಾಮನಾಥ ಗ್ರೂಫ್ ಆ್ಯಂಡ್ ಕಂ. ಹಾಗೂ ಆರ್.ಎಸ್. ವೆಂಚರ್ ಜಂಟಿಯಾಗಿ ಬೈಂದೂರು ಪ್ಯಾಲೇಸ್ ಪ್ರವರ್ತಕರಾಗಿದ್ದು ಬೈಂದೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಮೊದಲ ವಸತಿ ಸಮುಚ್ಛಯ ಇದಾಗಿದೆ ಎಂದು ಪ್ರವರ್ತಕ ಕೆ. ವೆಂಕಟೇಶ್ ಕಿಣಿ ಹೇಳಿದರು.

    ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕ್ರೆಡೈ ಉಡುಪಿ ಗೌರವ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ, ಕುಂದಾಪುರ ಶ್ರೀರಾಮ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ನಾಗರಾಜ್ ಕಾಮಧೇನು ಉಪಸ್ಥಿತರಿದ್ಧರು.

    ಸಂಸ್ಥೆಯ ಪ್ರವರ್ಥಕ ಕೆ. ವೆಂಕಟೇಶ್ ಕಿಣಿ ಸ್ವಾಗತಿಸಿದರು. ಉದಯಾಚಾರ್ ಪ್ರಾರ್ಥಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  • ಬ್ರಹ್ಮಾವರ:  ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಕಾರ್ಯಕ್ರಮ

    ಬ್ರಹ್ಮಾವರ: ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಯಕ್ಷಗುರು ಮೊಗೆಬೆಟ್ಟು ಪ್ರಸಾದ್‌ ಕುಮಾರ್ ಅಭಿಮಾನಿ ಬಳಗ ಮತ್ತು ಶಿಷ್ಯವೃಂದ, ಗೀತಾನಂದ ಫೌಂಡೇಶನ್ ಮಣೂರು, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಅಣಲಾಡಿ ಮಠ ಆಶ್ರಯದಲ್ಲಿ ಯಕ್ಷಗಾನ ಗುರು, ಪ್ರಸಂಗಕರ್ತ ಮೊಗೆಬೆಟ್ಟು ಪ್ರಸಾದ್‌ ಕುಮಾರ್‌ ಅವರ ಯಕ್ಷಜೀವನದ ಬೆಳ್ಳಿಹಬ್ಬ ಸಂಭ್ರಮ, ಗುರುವಂದನೆ, ನ. 4ರಂದು ಬ್ರಹ್ಮಾವರ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ಜರಗಿತು.

    ನಾಡೋಜ ಡಾ| ಜಿ.ಶಂಕರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲೆಗೆ ಮೊಗೆಬೆಟ್ಟು ಅವರ ಕೊಡುಗೆ ಅನನ್ಯವಾದದ್ದು, ಅವರ ಯಕ್ಷಪಯಣಕ್ಕೆ ನಾವೆಲ್ಲರೂ ಸಹಕರಿಸಬೇಕು ಎಂದರು.

    ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ| ಟಿ.ಶ್ಯಾಮ್ ಭಟ್ ರಜತ ಗೌರವ ಪ್ರದಾನಿಸಿ ಮಾತನಾಡಿ, ಪ್ರಸಾದ್ ಮೊಗೆಬೆಟ್ಟು ಯಕ್ಷರಂಗದ ಅದ್ಬುತ ಪ್ರತಿಭೆ. ಓರ್ವ ಗುರುವಾಗಿ, ಸಾಹಿತಿಯಾಗಿ, ಪ್ರಸಂಗಕರ್ತರಾಗಿ, ಕಲಾವಿದರಾಗಿ ಅವರ ಕೊಡುಗೆ ದೊಡ್ಡದು ಎಂದರು.

    ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಅಭಿನಂದನಾ ಭಾಷಣಗೈದರು. ಪತ್ರಕರ್ತ ಎಸ್.ಸತೀಶ್ ಕುಮಾರ್ ಕೋಟೇಶ್ವರ ಗುರುಗೌರವದ ಸಹಯೋಗ ವಹಿಸಿದ್ದರು. ಈ ಸಂದರ್ಭ ಪ್ರಸಾದ್ ಮೊಗೆಬೆಟ್ಟು ಅವರ ತಂದೆ ಹೆರಿಯ ನಾಯ್ಕ್ ಹಾಗೂ ತಾಯಿ ಗುಲಾಬಿ ಅವರನ್ನು ಗೌರವಿಸಲಾಯಿತು.

    ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದ‌ರ್ ಸಭಾಧ್ಯಕ್ಷತೆ ವಹಿಸಿದ್ದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ಸ್ಥಾಪಕ ಋಷಿಕುಮಾರ್ ಮಯ್ಯ, ಭುವನಪ್ರಸಾದ್ ಹೆಗ್ಡೆ, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಗೋಳಿಗರಡಿ ಮೇಳದ ಯಜಮಾನ ವಿಟ್ಠಲ ಪೂಜಾರಿ, ಪ್ರಸಂಗಕರ್ತ ಪವನ್ ಕಿರಣ್ ಕೆರೆ, ಯಕ್ಷಾಂತರಂಗ ಯಕ್ಷತಂಡದ ಸಂಚಾಲಕ ಕೃಷ್ಣಮೂರ್ತಿ ಉರಾಳ, ವಕೀಲ ಟಿ.ಮಂಜುನಾಥ ಗಿಳಿಯಾರು, ಪ್ರಸಂಗಕರ್ತೆ ಶಾಂತಾವಾಸುದೇವ ಆನಗಳ್ಳಿ,ಸಾಂಸ್ಕೃತಿಕ ಚಿಂತಕ ವಿಶ್ವನಾಥ ಶೆಣೈ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರುಳೀ ಕಡೇಕಾರ್, ಯಕ್ಷಗಾನ ಕಲಾವಿದ ಜಲವಳ್ಳಿ ವಿದ್ಯಾಧರ ರಾವ್, ಯಶಸ್ವಿ ಕಲಾವೃಂದದ ಮುಖ್ಯಸ್ಥ ವೆಂಕಟೇಶ್ ವೈದ್ಯ ಮೊದಲಾದವರಿದ್ದರು.

    ಮೊಗಬೆಟ್ಟು ಅಭಿಮಾನಿ ಬಳಗದ ಅಧ್ಯಕ್ಷ ಶಶಾಂಕ್ ಪಾಟೀಲ್ ಸ್ವಾಗತಿಸಿ, ಸಂಚಾಲಕ ಕೋಡಿ ರಾಘವೇಂದ್ರ ಕರ್ಕೇರ ಪ್ರಾಸ್ತಾವಿಕ ಮಾತನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು.

  • ಕೋಟ :ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

    ಕೋಟ :ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ದರ್ಸೆಯ ಶಿಕ್ಷಕಿ ಯಶೋಧ, ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಚೆಸ್ ಸ್ಪರ್ಧೆಯಲ್ಲಿ 5 ಪಂದ್ಯಗಳನ್ನು ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ. 22, 2023 ರಂದು ಗೋವಾದಲ್ಲಿ ನಡೆಯುವ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಶಾಲೆಯ ಮುಖ್ಯ ಶಿಕ್ಷಕರು ,ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.