ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗದೇ ಇದ್ದರೂ ಸರ್ಕಾರದ ಅನುದಾನಗಳನ್ನು ಕ್ಷೇತ್ರಕ್ಕೆ ತರಿಸಿ, ಸಮಾಜಸೇವೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿದವರು ಉದ್ಯಮಿ ವೆಂಕಟೇಶ್ ಕಿಣಿಯವರು ಎಂದು ಕೊಲ್ಲೂರು ಕ್ಷೇತ್ರದ ಮಾಜೀ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಹೇಳಿದರು.
ಅವರು ಭಾನುವಾರ ಬೈಂದೂರಿನ ತಾಲೂಕು ಕಚೇರಿ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬೈಂದೂರು ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರಿನಲ್ಲಿ ಮೂಕಾಂಬಿಕ ರೈಲು ನಿಲ್ದಾಣಕ್ಕೆ ವೆಂಕಟೇಶ್ ಕಿಣಿ ಕೊಡುಗೆ ಅಪಾರ. ಇದೀಗ ಬೈಂದೂರಿನಲ್ಲಿ ವಸತಿ ಸಮುಚ್ಛಯದ ಮೂಲಕ ಗ್ರಾಮೀಣ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಇದೇ ಸಂದರ್ಭ ಸಂಸ್ಥೆಯ ಪಾಲುದಾರ, ಕೇರಳದ ಪ್ರತಿಷ್ಟಿತ ಬಿಲ್ಡರ್ ರಾಜೀವ ಹಾಗೂ ಸಾಜು ಹಾಗೂ ಮಹಿಮಾರನ್ನು ಗೌರವಿಸಲಾಯಿತು. ರಾಜೀವ ಅವರು ಬರೆದ “ಮಾರ್ಕೆಟಿಂಗ್ ಪುಶ್ ದ ಕಸ್ಟಮರ್ಸ್ ಟು ಪುಲ್ ದ ಬ್ರ್ಯಾಂಡ್” ಪುಸ್ತಕ ಬಿಡುಗಡೆಗೊಳಿಸಲಾಯಿತು.
ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬೈಂದೂರು ಪ್ಯಾಲೇಸ್ ವಸತಿ ಸಮುಚ್ಛಯದಲ್ಲಿ ಉದ್ಘಾಟನೆಯ ಪ್ರಯುಕ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಕೊನೆಯ 10 ವಸತಿಗೃಹಗಳು ಮಾತ್ರ ಬಾಕಿಯಿದ್ದು ಕೇವಲ 29.9 ಲಕ್ಷ ರೂ. ನಿಗಧಿ ಮಾಡಲಾಗಿದೆ. ಈಜುಕೊಳ ಸೇರಿದಂತೆ ಸಾಮಾನ್ಯ 20 ಸೇವೆ ದೊರೆಯಲಿದೆ. ರಾಮನಾಥ ಗ್ರೂಫ್ ಆ್ಯಂಡ್ ಕಂ. ಹಾಗೂ ಆರ್.ಎಸ್. ವೆಂಚರ್ ಜಂಟಿಯಾಗಿ ಬೈಂದೂರು ಪ್ಯಾಲೇಸ್ ಪ್ರವರ್ತಕರಾಗಿದ್ದು ಬೈಂದೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಮೊದಲ ವಸತಿ ಸಮುಚ್ಛಯ ಇದಾಗಿದೆ ಎಂದು ಪ್ರವರ್ತಕ ಕೆ. ವೆಂಕಟೇಶ್ ಕಿಣಿ ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕ್ರೆಡೈ ಉಡುಪಿ ಗೌರವ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ, ಕುಂದಾಪುರ ಶ್ರೀರಾಮ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ನಾಗರಾಜ್ ಕಾಮಧೇನು ಉಪಸ್ಥಿತರಿದ್ಧರು.
ಸಂಸ್ಥೆಯ ಪ್ರವರ್ಥಕ ಕೆ. ವೆಂಕಟೇಶ್ ಕಿಣಿ ಸ್ವಾಗತಿಸಿದರು. ಉದಯಾಚಾರ್ ಪ್ರಾರ್ಥಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











