ಕುಂದಾಪುರ ಮಿರರ್ ಸುದ್ದಿ…
ಕೋಟ: ಗಾಣಿಗ ಯುವ ಸಂಘಟನೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗರನ್ನು ನ.5 ರಂದು ಆಜ್ರಿಯಲ್ಲಿ ಸಮ್ಮಾನಿಸಲಾಯಿತು.
ಸಂಘಟನೆಯ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಮಾತನಾಡಿ, ನಮ್ಮ ಸಂಘಟನೆಯ ವತಿಯಿಂದ ಸಮಾಜದ ಸಾಧಕರನ್ನು ಗುರುತಿಸಿ, ಗೌರವಿಸುತ್ತಿದ್ದೇವೆ. ಆಜ್ರಿ ಗೋಪಾಲ ಗಾಣಿಗ ಸಮಾಜದ ಅತೀ ದೊಡ್ಡ ಆಸ್ತಿ. ಅವರ ಕೊಡುಗೆಗೆ ಇನ್ನೂ ಹೆಚ್ಚಿನ ಗೌರವ ಸಿಗಲಿ ಎಂದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಆಜ್ರಿಯವರು, ಯಕ್ಷರಂಗಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ್ದೇನೆ. ಕಲೆ ಹೊರತುಪಡಿಸಿ ನನಗೆ ಬೇರೇನು ತಿಳಿದಿಲ್ಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿನಿಂದ ಸಾಕಷ್ಟು ಖುಷಿ ನೀಡಿದೆ. ನನ್ನನ್ನು ಗೌರವಿಸಿದ್ದಕ್ಕಾಗಿ ಗಾಣಿಗ ಯುವ ಸಂಘಟನೆಗೆ ಧನ್ಯವಾದಗಳು ಎಂದರು.
ಸಂಘಟನೆಯ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ ಕಾರ್ಕಡ, ಮಹಿಳಾ ಸಂಘಟನೆಯ ಅಧ್ಯಕ್ಷೆ ರೇಖಾ ಗಣೇಶ್ ಚಿತ್ರಪಾಡಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಉಪಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಯುವ ಸಂಘಟನೆಯ ಮಾಜಿ ಅಧ್ಯಕ್ಷ ವಿಶ್ವನಾಥ ಗಾಣಿಗ, ಮಾಜಿ ಕಾರ್ಯದರ್ಶಿ ಗಣೇಶ್ ಚಿತ್ರಪಾಡಿ ಉಪಸ್ಥಿತರಿದ್ದರು.
ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.











