ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಛಾಯಾಗ್ರಾಹಕರ ವೃತ್ತಿಗೆ ಬಹಳ ಮಹತ್ವವಿದೆ. ಇಂದಿನ ದಿನಗಳಲ್ಲಿ ಇಂಥಹ ಸಹಕಾರಿ ಸಂಸ್ಥೆಗಳ ಪಾತ್ರವೂ ಬಹಳ ಮುಖ್ಯವಾಗುತ್ತದೆ ವೃತ್ತಿಗೆ ಸಂಬಂಧ ಸೌಲಭ್ಯಗಳನ್ನು ಒದಗಿಸಿಕೊಳ್ಳಲು ಹಣಕಾಸಿನ ನೆರವು ನೀಡುವ ಮೂಲಕ ಅಭಿವೃದ್ದಿಗೆ ಕಾರಣವಾಗುತ್ತದೆ. ಇವತ್ತಿನ ಡಿಜಿಟಲ್ ಯುಗದ ಸ್ಪರ್ಧಾತ್ಮಕತೆಯಲ್ಲಿ ಛಾಯಾಗ್ರಾಹಕರು ಅಭಿವೃದ್ದಿ ಹೊಂದಲು ಈ ಸಂಸ್ಥೆ ಕಾರಣವಾಗಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರ ಮುಖ್ಯರಸ್ತೆಯ ಗೀತಾಂಜಲಿ ಟಾಕೀಸಿನ ಎದುರುಗಡೆ ಇರುವ ವಿ.ಎಂ.ಕೆ ಟವರ್‍ನಲ್ಲಿ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಕುಂದಾಪುರ ಇದರ ಸ್ಥಳಾಂತರ ಶಾಖೆ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಅಭಿವೃದ್ದಿ ವಿಚಾರದೊಂದಿಗೆ ಛಾಯಾಗ್ರಾಹಕರು ನಿರ್ಮಿಸಿದ ವಿವಿಧೋದ್ದೇಶ ಸಹಕಾರಿ ಸಂಘ ಯಶಸ್ವಿಯಾಗಿ ಬೆಳೆಯುವುದರೊಂದಿಗೆ ಗ್ರಾಹಕರಿಗೆ ಇನ್ನಷ್ಟು ಅನುಕೂಲತೆಗಳನ್ನು ಒದಗಿಸಿಕೊಡುವ ಸಲುವಾಗಿ ಸ್ಥಳಾಂತರಗೊಂಡಿದೆ. ಇವತ್ತು ಇಂಥಹ ಸಹಕಾರಿ ಸಂಸ್ಥೆಗಳ ಅನಿವಾರ್ಯತೆ ಇದೆ. ಆರ್ಥಿಕ ಅಭಿವೃದ್ದಿಗೆ ಪೂಕರವಾಗಲಿ ಎಂದು ಹೇಳಿದರು.
ಭದ್ರತಾ ಕೊಠಡಿಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಸಹಕಾರ ರತ್ನ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಕೆ.ಪಿ.ಎ ದ.ಕ-ಉಡುಪಿ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಮಾತನಾಡಿ, ಸುಮಾರು 4ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಎಸ್.ಕೆ.ಪಿ.ಎ ಬಲಿಷ್ಠ ಸಂಘಟನೆಯಾಗಿದೆ.ಛಾಯಾ ಸುರಕ್ಷಾ, ವಿದ್ಯಾನಿಧಿ ಯೋಜನೆಯ ಮೂಲಕ ಗುರುತಿಸಿಕೊಂಡ ಸಂಘಟನೆ ರಾಜ್ಯದಲ್ಲಿ ಪ್ರಥಮ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಿಸಿದ ಹೆಗ್ಗಳಿಕೆಯನ್ನು ಹೊಂದಿದೆಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕುಂದಾಪುರ ಇದರ ಅಧ್ಯಕ್ಷರಾದ ಗಿರೀಶ್ ಕೆ ಮಾತನಾಡಿ ಛಾಯಾಗ್ರಾಹಕರ ಬಗ್ಗೆ ವಿಶೇಷ ಕಾಳಜಿ, ಸಂಘಟನೆ ಹಾಗೂ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪನೆಯಲ್ಲಿ ಅಶೋಕ್ ಕುಮಾರ್ ಶೆಟ್ಟಿಯವರ ಪಾತ್ರ ಮಹತ್ವದ್ದು. ಛಾಯಾಗ್ರಾಹಕರ ವೃತ್ತಿಗೆ ಸಂಬಂಧಪಟ್ಟ ಉಪಕರಣಗಳ ಖರೀಧಿಸಲು ಹಣಕಾಸಿನ ನೆರವು ಸುಲಭದಲ್ಲಿ ಸಿಗುವಂತಾಗಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಅಶೋಕ್ ಶೆಟ್ಟಿಯವರು, ದಿನೇಶ ಗೋಡೆಯವರು ಈ ಸಂಸ್ಥೆಯನ್ನು ಮುನ್ನೆಡೆಸಿದ್ದಾರೆ. ಯಶಸ್ವಿಯಾಗಿ ಸಂಘ ಮುನ್ನೆಡೆಯುತ್ತಿದೆ. ಛಾಯಾಗ್ರಾಹಕರ ಅನೇಕ ಸಮಸ್ಯೆ, ಬೇಡಿಕೆಗಳಿವೆ. ಅದನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದೇವೆ. ಛಾಯಾಗ್ರಾಹಕರ ಬೇಡಿಕೆಗಳನ್ನು ಶೀಘ್ರವಾಗಿ ಸರ್ಕಾರಕ್ಕೆ ನಿಯೋಗವೊಂದನ್ನು ಕೊಂಡೊಯ್ಯಲು ಚಿಂತನೆ ನಡೆಸಿದ್ದೇವೆ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಅಧ್ಯಕ್ಷರಾದ ಕೆ.ವಾಸುದೇವ ರಾವ್, ಎಸ್.ಕೆ.ಪಿ.ಎ ಕುಂದಾಪುರ ಬೈಂದೂರು ವಲಯ ಅಧ್ಯಕ್ಷರಾದ ದಿವಾಕರ ಶೆಟ್ಟಿ, ವಿ.ಎಂ.ಕೆ ಟವರ್ಸ್ ಕಟ್ಟಡ ಮಾಲಕರಾದ ಕೆ.ರಮೇಶ ಕಾಮತ್, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ನಿರ್ದೇಶಕರಾದ ಗಣೇಶ್ ಕೆ., ಎಸ್.ಕೆ.ಪಿ.ಎ ಕುಂದಾಪುರ ಬೈಂದೂರು ವಲಯ ಪ್ರಧಾನ ಕಾರ್ಯದರ್ಶಿ ದಿನೇಶ ರಾಯಪ್ಪನಮಠ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಗಣೇಶ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ, ನಿರ್ದೇಶಕರಾದ ರಾಘವೇಂದ್ರ ಐತಾಳ್, ಪುಂಡಲೀಕ ಶ್ಯಾನುಭಾಗ್, ಎಸ್.ದಿನೇಶ ಗೋಡೆ, ಶ್ರೀಧರ ಹೆಗ್ಡೆ, ಗ್ರೇಶನ್ ಡಯಾಸ್, ಗೋಪಾಲ ಕಾಂಚನ್, ಅನ್ನಪೂರ್ಣ, ಸುಕುಪಾಲ್ ಖಾರ್ವಿ, ಸರಿತಾ, ರಾಜೀವ ದೇವಾಡಿಗ, ದೊಟ್ಟಯ್ಯ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಲಪತ್ರ ಠೇವಣಿ ಪತ್ರವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಗಿರೀಶ್ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ ಶೇಟ್ ಪ್ರಾರ್ಥನೆ ಮಾಡಿದರು. ಸಂಘದ ನಿರ್ದೇಶಕರಾದ ಪ್ರೀತಿ ಶೆಟ್ಟಿ ವಂದಿಸಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.











