Category: ಸುದ್ದಿ

  • ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

    ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ಅ.2ರಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಹೆಚ್. ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ್ ಎಚ್, ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ತಾಲೂಕು ಸಂಯೋಜಕರಾದ ಸಂದೇಶ್, ಕೋಟತಟ್ಟು ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ :ರಾಷ್ಟ್ರಪಿತ ಮಹಾತ್ಮಗಾಂಧಿಯವರ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು.

    ಅಧ್ಯಕ್ಷತೆ ವಹಿಸಿದ್ದ ಪಕ್ಷದ ಹಿರಿಯ ಮುಖಂಡರಾದ ಶೇಖರ ಚಾತ್ರಬೆಟ್ಟು ಮಾತನಾಡಿ “ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗವು ಮಹತ್ತರ ಪಾತ್ರ ವಹಿಸಿತ್ತು. ಮಹಾನ್ ನಾಯಕರೆಲ್ಲ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡಿದ್ದಾರೆ. ನಾವೆಲ್ಲರೂ ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಸಿ ಹೋಗಬೇಕು ಎಂದರು.

    ನ್ಯಾಯವಾದಿಗಳಾದ ಸಚ್ಚಿದಾನಂದ ಎಂ. ಎಲ್ ಗಾಂಧೀಜಿಯವರ ತತ್ವ, ಆದರ್ಶದ ಕುರಿತು ಮಾತನಾಡಿದರು.

    ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಅಭಿಜಿತ್ ಪೂಜಾರಿ ,ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ಕೇಶವ್ ಭಟ್,ಸುನಿಲ್ ಪೂಜಾರಿ, ಜೋಸೆಫ್ ರೆಬೆಲ್ಲೊ, ಸುಶಾಂತ್, ಎಡಾಲ್ಫ್ ಡಿಕೋಸ್ತಾ, ಫ್ರಾನ್ಸಿಸ್ ಮಚಾದೊ, ಜ್ಯೋತಿ ಡಿ ನಾಯ್ಕ್, ದಿನೇಶ, ಪ್ರೀತಮ್ ಕರ್ವಾಲ್ಲೊ, ಕೆ. ಶಿವಕುಮಾರ್, ಶಶಿರಾಜ್ ಪೂಜಾರಿ, ಕೆ. ಪಿ. ಅರುಣ್, ಮೇಬಲ್ ಡಿಸೋಜ, ಸಂತೋಷ್, ಸದಾನಂದ ಖಾರ್ವಿ ಉಪಸ್ಥಿತರಿದ್ದರು.

    ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ಸ್ವಾಗತಿಸಿ ಅಶೋಕ ಸುವರ್ಣ ವಂದಿಸಿದರು.ಕಾರ್ಯದರ್ಶಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :“ಸ್ವಚ್ಛ ಕುಂದಾಪುರ – ನಮ್ಮ ಕುಂದಾಪುರ” ಎಂಬ ಜನಜಾಗೃತಿ ಕಾರ್ಯಕ್ರಮ

    ಕುಂದಾಪುರ :“ಸ್ವಚ್ಛ ಕುಂದಾಪುರ – ನಮ್ಮ ಕುಂದಾಪುರ” ಎಂಬ ಜನಜಾಗೃತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಸ್ವಚ್ಛತೆ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ನಿರ್ವಹಿಸಬೇಕು. ಪ್ರತಿ ಕಾರ್ಯನಿರ್ವಹಣೆಯಲ್ಲಿಯೂ ದೂರದೃಷ್ಟಿ ಇರಬೇಕು. ನಾವು ಎಸೆಯುವ ಒಂದು ಪ್ಲಾಸ್ಟಿಕ್ ಸ್ಟ್ರಾ ಕೂಡ ಬಹುಕಾಲ ಉಳಿಯುವ ಆಮೆಯಂತಹ ಜೀವಿಯ ಜೀವಕ್ಕೆ ಮಾರಕವಾಗಬಹುದು. ಹಾಗಾಗಿ ಪ್ರಜ್ಞಾವಂತರಾದ ನಾವು ಜಾಗೃತರಾಗಿ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹೇಳಿದರು.

    ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ ಕಾಲೇಜು, ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ 2.0” ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಗಾಂಧೀಜಿ ತಾಳ್ಮೆಯ ಪ್ರತೀಕ. ತಾರತಮ್ಯ ನೀತಿಯ ವಿರುದ್ಧ ಅವರ ಛಲ, ತಾಳ್ಮೆಯಿಂದ ಸಾಧಿಸಿದ ಯಶಸ್ಸು ನಮಗೆ ಮಾದರಿಯಾಗುವಂತಹದ್ದು. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಆರ್ಥಿಕತೆಯ ಕುರಿತಾದ ದೂರದೃಷ್ಟಿ ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ, ತಾಲೂಕು ಆರೋಗ್ಯಾಧಿಕಾರಿ ಡಾ.ಶೋಭಾ, ಸಮಾಜಸೇವಕ ದತ್ತಾನಂದ ಗಂಗೊಳ್ಳಿ, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ಯು.ಎಸ್.ಶೆಣೈ, ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಕಾಲೇಜಿನಲ್ಲಿ 1973ನೇ ಸಾಲಿನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪುgದ 23 ವಾರ್ಡ್‍ಗಳಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಯಿತು. ಕಾಲೇಜಿನ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಶಂಕರನಾರಾಯಣ :ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

    ಶಂಕರನಾರಾಯಣ :ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪ್ರಾಥಮಿಕ ಆರೋಗ್ಯ ಕೇಂದ್ರ ಶಂಕರನಾರಾಯಣದಲ್ಲಿ ಆ.1 ಭಾನುವಾರದಂದು ಗ್ರಾಮಪಂಚಾಯತ್ ಶಂಕರನಾರಾಯಣ ಹಾಗೂ ಬಾಡಿಗೆ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

    ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 300ಕ್ಕೂ ಅಧಿಕ ಜನ ಪಾಲ್ಗೊಳ್ಳುವ ಮೂಲಕ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗದ್ದೆ. ವೈದ್ಯಾಧಿಕಾರಿಗಳಾದ ರೂಪ ಪೈ. ಶಂಕರ್ ಶೆಟ್ಟಿ ಮುದ್ದುಮನೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ರವಿ ಕುಲಾಲ್. ಹರಿಪ್ರಸಾದ್ ಆಚಾರ್ ಶಂಕರನಾರಾಯಣ. ಜೆ ಸಿ ವಿರಾಜ್ ಶೆಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧಾಕರ್ ಕುಲಾಲ್. ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಶಂಕರ್ ಶೆಟ್ಟಿಗಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು

  • ಕೋಟ :ಸ್ವಚ್ಛತೆಯೇ ಪ್ರತಿಯೊಬ್ಬರ ಧ್ಯೇಯವಾಕ್ಯವಾಗಲಿ- ಆನಂದ್ ಸಿ ಕುಂದರ್

    ಕೋಟ :ಸ್ವಚ್ಛತೆಯೇ ಪ್ರತಿಯೊಬ್ಬರ ಧ್ಯೇಯವಾಕ್ಯವಾಗಲಿ- ಆನಂದ್ ಸಿ ಕುಂದರ್

    ಕೋಟದ ಪಂಚಾಯತ್ ವಿವಿಧ ಸಂಘಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಹೀ ಸೇವಾ ದಿನ

    ಕೋಟ: ಪ್ರತಿಯೊಬ್ಬರ ಮನೆ ಮನದಲ್ಲಿ ಸ್ವಚ್ಛತೆ ಧ್ಯೇಯವಾಕ್ಯವಾಗಿ ಮೊಳಗಬೇಕು ಆಗ ಮಾತ್ರ ನಮ್ಮ ಪರಿಸರ ಶುಚಿಯಾಗಿರಿಸಲು ಸಾಧ್ಯ ಎಂದು ಕೋಟದ ಸಮಾಜಸೇವಕ ಆನಂದ್ ಸಿ ಕುಂದರ್ ಹೇಳಿದರು.

    ಕೋಟದಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಗೀತಾನಂದ ಫೌಂಡೇಶನ್ ಮಣೂರು, ಮೊಗವೀರ ಯುವ ಸಂಘದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ, ನವೋದಯ ಫ್ರೆಂಡ್ಸ್ ಹರ್ತಟ್ಟು, ಕೋಟ ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ ಸಹಯೋಗದೊಂದಿಗೆ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಇವರ 180ನೇ ಭಾನುವಾರದ ಪರಿಸರಸ್ನೇಹಿ ಸಂಯೋಜನೆಯೊಂದಿಗೆ ಸ್ವಚ್ಛತಾ ಹೀ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದೆಲ್ಲೆಡೆ ಏಕ ಕಾಲದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇದರ ಅರ್ಥ ಪ್ರತಿ ಊರಲ್ಲಿ ವಿವಿಧ ಸಂಘಸಂಸ್ಥೆಗಳು ಇವೆ ಅವರುಗಳ ಮೂಲಕ ಪ್ರತಿವಾರ ಈ ಪರಿಸರಕ್ಕಾಗಿ ಅರ್ಪಿಸಿಕೊಳ್ಳಬೇಕು ಆ ಮೂಲಕ ಸ್ವಚ್ಛ ಪರಿಸರ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಡರು.

    ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಂ ಪ್ರತಿಜ್ಞಾವಿಧಿ ಭೋದಿಸಿದರು.

    ಅಲ್ಲದೆ ಮಾನವ ಸರಪಳಿ ಹಿಡಿದ ಸ್ವಚ್ಛಘೋಷ ಮೊಳಗಿಸಿದರು.
    ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ ,ಸ.ಪ.ಪೂ.ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲ ಡೆನಿಸ್ ಬಾಂಝಿ, ಮೊಗವೀರ ಯುವ ಸಂಘ ಕೋಟ ಘಟಕದ ಅಧ್ಯಕ್ಷ ರಂಜೀತ್ ಕುಮಾರ್, ಕೋಟ ಗ್ರಾ.ಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್,ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ.,ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಕುಂದರ್,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಕಾರ್ಯದರ್ಶಿ ಶೇಖರ್ ಮರವಂತೆ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಡು,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಕೋಟ ಗ್ರಾ.ಪಂ ಸದಸ್ಯರು ಇದ್ದರು.

    ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿದರು. ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ವಂದಿಸಿದರು.ಕೋಟ ,ಕೋಟತಟ್ಟು ವಿವಿಧ ಭಾಗಗಳಲ್ಲಿ ಸ್ವಚ್ಛತಾಕಾರ್ಯ ನಡೆಯಿತು.

  • ಕುಂದಾಪುರ :ಪ್ರಕೃತಿಯನ್ನು ಕಾಪಾಡುವ ಜವಾಬ್ಧಾರಿ ನಮ್ಮದು – ನ್ಯಾ. ಅಬ್ದುಲ್ ರಹೀಂ ಶೇಖ್

    ಕುಂದಾಪುರ :ಪ್ರಕೃತಿಯನ್ನು ಕಾಪಾಡುವ ಜವಾಬ್ಧಾರಿ ನಮ್ಮದು – ನ್ಯಾ. ಅಬ್ದುಲ್ ರಹೀಂ ಶೇಖ್

    ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ 201ನೇ ಸ್ವಚ್ಛತಾ ಅಭಿಯಾನ

    ಕುಂದಾಪುರ ಮಿರರ್ ‌ಸುದ್ದಿ…
    ಕುಂದಾಪುರ: ದೇವರ ಸೃಷ್ಟಿಯಾಗಿರುವ ಪ್ರಕೃತಿಯನ್ನು ರಕ್ಷಿಸುವುದು ನಮ್ಮ ಜವಾಬ್ಧಾರಿಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರವನ್ನು ಸ್ವಚ್ಚವಾಗಿಡುವುದರ ಜೊತೆಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಶೇಕ್ ಹೇಳಿದರು.

    ಗಾಂಧೀ ಜಯಂತಿ ಅಂಗವಾಗಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ 201ನೇ ಸ್ವಚ್ಛತಾ ಅಭಿಯಾನವು ಕೋಡಿಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

    ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಮಾತನಾಡಿ, ಮನುಷ್ಯನ ಅಗತ್ಯತೆಗಳಲ್ಲಿ ಬಹುಮುಖ್ಯವಾದ ಆಮ್ಲಜನಕದ ಕೊಡುಗೆಯಲ್ಲಿ ಸಮುದ್ರದ ಪಾಲು ಬಹಳಷ್ಟಿದೆ ಎಂದರು. ನಾವು ಸಮುದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದಲ್ಲಿ ನಾವು ಸಮಾಜಕ್ಕೆ ನ್ಯಾಯ ಕೊಟ್ಟಂತಾಗುವುದಿಲ್ಲ ಎಂದರು.

    ಕುಂದಾಪುರ ವಕೀಲರ ಸಂಘ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಕರಾವಳಿ ಪೊಲೀಸ್ ಪಡೆ ಗಂಗೊಳ್ಳಿ, ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್ ಬಂಟಕಲ್ಲು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರೆಡ್ ಕ್ರಾಸ್ ಕುಂದಾಪುರ, ಪುರಸಭೆ ಕುಂದಾಪುರ ಇನ್ನಿತರ ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದರು.

    ಹಿರಿಯ ನ್ಯಾಯಾಧೀಶ ರಾಜು ಕೆ, ವಕೀಲರ ಸಂಘದ ಕಾರ್ಯದರ್ಶಿ ಶ್ರೀನಾಥ್, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ ಕೋಶಾಧಿಕಾರಿ ಶಿವರಾಂ ಶೆಟ್ಟಿ, ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಮಂಜಪ್ಪ, ಕೊಲ್ಲೂರು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶೈಲೇಶ್, ಕುಂದಾಪುರ ಸರಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯೆ ಸರಸ್ವತಿ ಪುತ್ರನ್, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಕುಂದಾಪುರ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಸಂಚಾಲಕ ಭರತ್ ಬಂಗೇರ, ಶಶಿಧರ್, ಅರುಣ್, ಸಂತೋಷ್, ಪುಂಡಲೀಕ ಬಂಗೇರ ಪ್ರಖ್ಯಾತ್, ಜೀವಿತ ಪ್ರಖ್ಯಾತ್ ಮಧ್ಯಸ್ಥ, ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಕುಂದಾಪುರ :ಸದ್ಗುರು ಜಗಜೀತ್ ಸಿಂಗ್ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ಆಯ್ಕೆ

    ಕುಂದಾಪುರ :ಸದ್ಗುರು ಜಗಜೀತ್ ಸಿಂಗ್ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಪಂಜಾಬ್ ರಾಜ್ಯದ ಲುಧಿಯಾನದ ಶ್ರೀ ಬೈನಿ ಸಾಹಿಬ್ ಗುರುದ್ವಾರ ನಡೆಸುವ ರಾಷ್ಟ್ರೀಯ ಮಟ್ಟದ ಹಿಂದುಸ್ಥಾನಿ ಖಯಾಲ್ ಗಾಯಕಿ ಕಿರಿಯರ ವಿಭಾಗದ ಆನ್ ಲೈನ್ ಸಂಗೀತ ಸ್ಪರ್ಧೆಯ ಪ್ರಥಮ ಸುತ್ತಿನಲ್ಲಿ ತೇರ್ಗಡೆಯಾದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೇದಾರ್ ಮರವಂತೆ ದ್ವಿತೀಯ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.ದ್ವಿತೀಯ ಸುತ್ತಿನ ಸ್ಪರ್ಧೆಯು ಮಹಾರಾಷ್ಟ್ರದ ಪುಣೆಯಲ್ಲಿ ಇದೇ ನವೆಂಬರ್ 4ಮತ್ತು 5 ರಂದು ನಡೆಯಲಿದೆ.

    ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಗೆ ಆಯ್ಕೆಯಾದ ಕಾಲೇಜಿನ ಉದಯೋನ್ಮುಖ ಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.

  • ಬ್ರಹ್ಮಾವರ : ಸಹಕಾರಿ ಸಂಘಗಳು ಜನಸಾಮಾನ್ಯರಿಗೆ ಸಹಕಾರಿಯಾದಾಗ ಸಮಾಜ ಸ್ವಾಸ್ಥ್ಯ ಸಾಧ್ಯ – ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್

    ಬ್ರಹ್ಮಾವರ : ಸಹಕಾರಿ ಸಂಘಗಳು ಜನಸಾಮಾನ್ಯರಿಗೆ ಸಹಕಾರಿಯಾದಾಗ ಸಮಾಜ ಸ್ವಾಸ್ಥ್ಯ ಸಾಧ್ಯ – ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್

    ಬ್ರಹ್ಮಾವರದಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿಯ 10ನೇ ಶಾಖೆಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಸಮಾಜದಲ್ಲಿ ಅತ್ಯಂತ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಕಾರಿಯಾದಾಗ ಸಹಕಾರಿ ಸಂಘಗಳ ಉದ್ಧೇಶ ಸಾರ್ಥಕವಾಗುತ್ತದೆ. ಹಾಗಾದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಮನ್ಸಿಜೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

    ಅವರು ಬ್ರಹ್ಮಾವರದ ಶ್ರೀರಾಮ್ ಆರ್ಕೆಡ್ ಇದರ ಮೊದಲ ಮಹಡಿಯಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿಯ 10ನೇ ಶಾಖೆಯ ಉದ್ಘಾಟನೆಯನ್ನು ನೆರವರೆಸಿ ಮಾತನಾಡಿದರು.

    ರೋಜರಿ ಕೋ – ಆಪರೇಟಿವ್ ಸೊಸೈಟಿಯು ಸಂಸ್ಥೆಯು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡುವ ಕಾರ್ಯವೈಖರಿ ಶ್ಲಾಘನೀಯ ಎಂದು ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮನ್ಸಿಜೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

    ಬ್ರಹ್ಮಾವರ ಹೋಲಿ ಫೇಮಿಲಿ ಚರ್ಚ್ ಧರ್ಮಗುರುಗಳಾದ ವಂ.ಜೋನ್ ಫರ್ನಾಂಡೀಸ್ ರೋಜರಿ ಸೊಸೈಟಿಯ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚಿಸಿ, ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.

    ಭದ್ರತಾ ಕೊಠಡಿಯನ್ನು ಕುಂದಾಪುರ ವಲಯದ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು. ಕಟ್ಟಡ ಮಾಲಕ ಕಾವ್ರಾಡಿ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ, ನಿರ್ದೇಶಕ ಫಿಲೀಫ್ ಡಿ’ಕೋಸ್ತ್, ಉಪಸ್ಥಿತರಿದ್ದರು.

    ರೋಜರಿ ಕ್ರೆಡಿಟ್ ಸೊಸೈಟಿ ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಸ್ವಾಗತಿಸಿ, ಪ್ರಾಸ್ತಾವಿಸಿದರು. ರೋಜರಿ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್ ಡಿ’ಆಲ್ಮೇಡಾ ವಂದಿಸಿದರು. ಶಾಖಾ ಸಭಾಪತಿ ಡೆರಿಕ್ ಡ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

  • ಕೋಟ :ನಾಲ್ಕೈದು ದಿನಗಳಲ್ಲಿ ಲಾರಿ ಮಾಲಿಕರ ಸಮಸ್ಯೆ ಬಗೆಹರಿಯಲಿದೆ. ಬಿಜೆಪಿಯವರು ಗೊಂದಲ ಸೃಷ್ಠಿಸುವ ಅಗತ್ಯತೆ ಸಲ್ಲ- ಮೊಳಹಳ್ಳಿ ದಿನೇಶ್ ಹೆಗ್ಡೆ

    ಕೋಟ :ನಾಲ್ಕೈದು ದಿನಗಳಲ್ಲಿ ಲಾರಿ ಮಾಲಿಕರ ಸಮಸ್ಯೆ ಬಗೆಹರಿಯಲಿದೆ. ಬಿಜೆಪಿಯವರು ಗೊಂದಲ ಸೃಷ್ಠಿಸುವ ಅಗತ್ಯತೆ ಸಲ್ಲ- ಮೊಳಹಳ್ಳಿ ದಿನೇಶ್ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಲಾರಿ ಮಾಲಿಕ ಹಾಗೂ ಚಾಲಕ ಸಂಘ ಕೋಟ ವಲಯ ಹಾಗೂ ಜಿಲ್ಲಾದ್ಯಂತ ಲಾರಿ ಮಾಲಿಕರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ಕಾಲಿರಿಸಿದೆ. ಈ ಬಗ್ಗೆ ಉಡುಪಿ ಜಿಲ್ಲೆಯ ಶಾಸಕರು ಜಿಲ್ಲಾಡಳಿತ ಹಾಗೂ ಎಸ್ ಪಿ ಸಮ್ಮುಖದಲ್ಲಿ ಮಾತುಕತೆ ನಡೆಸಿಯೂ ಫಲಪ್ರದವಾಗದ ಹಿನ್ನಲ್ಲೆ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

    ಈ ಹಿನ್ನಲ್ಲೆಯಲ್ಲಿ ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಲಾರಿ ಮಾಲಿಕರ ಚಾಲಕ ಪ್ರತಿಭಟನೆ ಹಾಗೂ ಇಲ್ಲಿನ ಮರುಳು, ಕೆಂಪು ಕಲ್ಲು, ಇತರ ಕಟ್ಟಡ ಸಾಮಾಗ್ರಿಗಳನ್ನು ಕಾನೂನು ಬದ್ಧವಾಗಿ ಜಾರಿಗೆ ತರಬೇಕು ಎಂಬ ಎಸ್.ಪಿ ಆದೇಶವನ್ನು ಮುಖಮಂತ್ರಿಗಳ ಗಮನಕ್ಕೆ ತರಲಾಗಿದೆ ನಾಲ್ಕೈದು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಬಿಜೆಪಿ ಶಾಸಕರುಗಳು ಲಾರಿ ಮಾಲಿಕರನ್ನು ಗೊಂದಲಗೊಳಿಸುವ ತಂತ್ರಗಾರಿಕೆ ಫಲ ನೀಡುವುದಿಲ್ಲ ,ಮರಳು ನೀತಿಯನ್ನು ಸಮಗ್ರವಾಗಿ ಅನುಕೂಲಕರವಾಗಿ ಜಾರಿಗೆ ತರುತ್ತೇವೆ ಎಂಬ ನಳಿನ್ ಕುಮಾರ್ ಕಟೀಲ್ ತಮ್ಮ ಸರಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದಾರಾ ಎಂದು ಪ್ರಶ್ಮಿಸಿದರು.

    ಈ ವೇಳೆ ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಮುಖಂಡರಾದ ಭೋಜ ಪೂಜಾರಿ,ದಿನಕರ್ ಪೂಜಾರಿ,ಸುಧೀರ್ ಮಲ್ಯಾಡಿ, ಜನಾರ್ದನ್ ಪೂಜಾರಿ,ವಿನೋದ್ ದೇವಾಡಿಗ, ಪ್ರಶಾಂತ್ ಗಾಣಿಗ, ಮಹಾಬಲ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಪ್ರಮುಖರಾದ ಪ್ರತಾಪ್ ಶೆಟ್ಟಿ ಸಾಸ್ತಾನ,ನಾಗರಾಜ್ ಗಾಣಿಗ ಸಾಲಿಗ್ರಾಮ, ಮತ್ತಿತರರು ಇದ್ದರು.

  • ಕುಂದಾಪುರ :ಉದ್ಯಮ ರಂಗದಲ್ಲಿ ಸಮುದ್ಯತಾ ಹೊಸ ಭಾಷ್ಯ ಬರೆಯುತ್ತಿದೆ – ಆನಂದ್ ಸಿ ಕುಂದರ್

    ಕುಂದಾಪುರ :ಉದ್ಯಮ ರಂಗದಲ್ಲಿ ಸಮುದ್ಯತಾ ಹೊಸ ಭಾಷ್ಯ ಬರೆಯುತ್ತಿದೆ – ಆನಂದ್ ಸಿ ಕುಂದರ್

    ಕುಂದಾಪುರದಲ್ಲಿ ಸಮುದ್ಯತಾ ಇನ್ ಆ್ಯಂಡ್ ಸೂಟ್ ಶುಭಾರಂಭ

    ಕುಂದಾಪುರ: ಉದ್ಯಮ ರಂಗದಲ್ಲಿ ಸಮುದ್ಯತಾ ಮಾದರಿಯಾಗಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ ಇದು ಇಂದಿನ ಯುವಸಮೂಹಕ್ಕೆ ದಾರಿ ದೀಪವಾಗಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

    ಕೋಟ ಸಮುದ್ಯತಾ ಗ್ರೂಪ್ಸ್ ಸಂಸ್ಥೆಯ ಇದರ ಭಾಗವಾಗಿ ಕುಂದಾಪುರ ಮೀನುಮಾರುಕಟ್ಟೆ ಸನಿಹ ಆರಂಭಗೊಂಡ ಸಮುದ್ಯತಾ ಇನ್ ಆ್ಯಂಡ್ ಸೂಟ್ ಹೊಸ ಉದ್ಯಮಕ್ಕೆ ಚಾಲನೆ ನೀಡಿ ಮಾತನಾಡಿ ಜೀವನದಲ್ಲಿ ಗುರು ಮತ್ತು ಗುರಿ ಎರಡು ಇರಬೇಕು ಅದೇ ರೀತಿ ಸಮುದ್ಯತಾ ಸಂಸ್ಥೆಯಲ್ಲಿರುವ ಯುವ ಸಮೂಹ ಕೂಡಾ ಅದೆರಡನ್ನು ಇರಿಸಿಕೊಂಡು ಸಾಧನೆಯ ಶಿಖರವೆರಿದೆ.

    ಒಂದು ಸಂಸ್ಥೆ ಹುಟ್ಟು ಹಾಕುವುದು ಆರಂಭದಲ್ಲಿ ಸ್ವಲ್ಪ ಸುಲಭವಾಗಿರುತ್ತದೆ ಆದರೆ ಅದನ್ನು ಮುನ್ನಡೆಸಿ ಯಶಸ್ಸಿನ ತೇರಾಗಿಸುವುದು ಪ್ರಶಂಸನೀಯ ಎಂದು ಮಾಲಕ ಯೋಗೇಂದ್ರ ತಿಂಗಳಾಯ ಅವರ ಉದ್ಯಮ ಹಾಗೂ ಸಾಮಾಜಿಕ ಕಾರ್ಯವೈಖರಿಯನ್ನು ಕೊಂಡಾಡಿದರು.

    ಈ ಸಂದರ್ಭದಲ್ಲಿ ಬ್ರಹ್ಮಾವರದ ಚಾರ್ಟರ್ಡ್ ಅಕೌಂಟೆಂಟ್ ಪದ್ಮನಾಭ ಕಾಂಚನ್, ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್, ಸಂಕೀರ್ಣದ ಮಾಲಿಕ ಸುಧೀಂದ್ರ ಪೂಜಾರಿ ಎಸ್ ಪಿ, ಸಮುದ್ಯತಾ ಗ್ರೂಪ್ಸ್‍ನ ಯೋಗೇಂದ್ರ ತಿಂಗಳಾಯ ಇದ್ದರು.

    ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಿಲ್ವರ್ ಸ್ಪೂನ್ ರೆಸ್ಟೋ ರೆಂಟ್, ಲಕ್ಸುರಿ ರೂಮ್, 8 ಸರ್ವೀಸ್ ಅಪಾರ್ಟ್‍ಮೆಂಟ್, ಸೀಬೇ ಫ್ಯಾಮಿಲಿ ರೆಸ್ಟೋರೆಂಟ್, ಸಂಭ್ರಮ ಹಾಲ್, ಸಂಬುಕಾ ಜೂಸ್ ಬಾರ್, ಸರ್ಪೈಸ್ ಇನ್ ಟೌನ್’ ಎನ್ನುವ ಹಲವು ಸೇವೆಗಳು ಜನರಿಗೆ ಲಭ್ಯವಿವೆ. ಕುಂದಾಪುರದಲ್ಲಿ ಮೊದಲ ಬಾರಿಗೆ ಸರ್ವೀಸ್ ಅಪಾರ್ಟ್ ಮೆಂಟ್ಸ್ ಸೌಲಭ್ಯ ಗಳನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ನಿರೂಪಕರಾದ ಅವಿನಾಶ್ ಕಾಮತ್, ಸಂದೇಶ್ ಶೆಟ್ಟಿ ಸೆಳ್ವಾಡಿ, ಸಂದೀಪ್ ಭಕ್ತ,ನರೇಶ್ ಕೋಟೇಶ್ವರ, ಆಕಾಶ್ ಹೆಬ್ಬಾರ್, ಆರ್.ಜೆ ಚೇತನ್ ನಿರೂಪಿಸಿದರು.