ಬ್ರಹ್ಮಾವರದಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿಯ 10ನೇ ಶಾಖೆಯ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಮಾಜದಲ್ಲಿ ಅತ್ಯಂತ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಕಾರಿಯಾದಾಗ ಸಹಕಾರಿ ಸಂಘಗಳ ಉದ್ಧೇಶ ಸಾರ್ಥಕವಾಗುತ್ತದೆ. ಹಾಗಾದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಮನ್ಸಿಜೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಬ್ರಹ್ಮಾವರದ ಶ್ರೀರಾಮ್ ಆರ್ಕೆಡ್ ಇದರ ಮೊದಲ ಮಹಡಿಯಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿಯ 10ನೇ ಶಾಖೆಯ ಉದ್ಘಾಟನೆಯನ್ನು ನೆರವರೆಸಿ ಮಾತನಾಡಿದರು.
ರೋಜರಿ ಕೋ – ಆಪರೇಟಿವ್ ಸೊಸೈಟಿಯು ಸಂಸ್ಥೆಯು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡುವ ಕಾರ್ಯವೈಖರಿ ಶ್ಲಾಘನೀಯ ಎಂದು ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮನ್ಸಿಜೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಬ್ರಹ್ಮಾವರ ಹೋಲಿ ಫೇಮಿಲಿ ಚರ್ಚ್ ಧರ್ಮಗುರುಗಳಾದ ವಂ.ಜೋನ್ ಫರ್ನಾಂಡೀಸ್ ರೋಜರಿ ಸೊಸೈಟಿಯ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚಿಸಿ, ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.
ಭದ್ರತಾ ಕೊಠಡಿಯನ್ನು ಕುಂದಾಪುರ ವಲಯದ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು. ಕಟ್ಟಡ ಮಾಲಕ ಕಾವ್ರಾಡಿ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ, ನಿರ್ದೇಶಕ ಫಿಲೀಫ್ ಡಿ’ಕೋಸ್ತ್, ಉಪಸ್ಥಿತರಿದ್ದರು.
ರೋಜರಿ ಕ್ರೆಡಿಟ್ ಸೊಸೈಟಿ ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಸ್ವಾಗತಿಸಿ, ಪ್ರಾಸ್ತಾವಿಸಿದರು. ರೋಜರಿ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್ ಡಿ’ಆಲ್ಮೇಡಾ ವಂದಿಸಿದರು. ಶಾಖಾ ಸಭಾಪತಿ ಡೆರಿಕ್ ಡ’ಸೋಜಾ ಕಾರ್ಯಕ್ರಮ ನಿರೂಪಿಸಿದರು.











