ಕೋಟದ ಪಂಚಾಯತ್ ವಿವಿಧ ಸಂಘಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಹೀ ಸೇವಾ ದಿನ

ಕೋಟ: ಪ್ರತಿಯೊಬ್ಬರ ಮನೆ ಮನದಲ್ಲಿ ಸ್ವಚ್ಛತೆ ಧ್ಯೇಯವಾಕ್ಯವಾಗಿ ಮೊಳಗಬೇಕು ಆಗ ಮಾತ್ರ ನಮ್ಮ ಪರಿಸರ ಶುಚಿಯಾಗಿರಿಸಲು ಸಾಧ್ಯ ಎಂದು ಕೋಟದ ಸಮಾಜಸೇವಕ ಆನಂದ್ ಸಿ ಕುಂದರ್ ಹೇಳಿದರು.
ಕೋಟದಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಗೀತಾನಂದ ಫೌಂಡೇಶನ್ ಮಣೂರು, ಮೊಗವೀರ ಯುವ ಸಂಘದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ, ನವೋದಯ ಫ್ರೆಂಡ್ಸ್ ಹರ್ತಟ್ಟು, ಕೋಟ ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ ಸಹಯೋಗದೊಂದಿಗೆ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಇವರ 180ನೇ ಭಾನುವಾರದ ಪರಿಸರಸ್ನೇಹಿ ಸಂಯೋಜನೆಯೊಂದಿಗೆ ಸ್ವಚ್ಛತಾ ಹೀ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದೆಲ್ಲೆಡೆ ಏಕ ಕಾಲದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇದರ ಅರ್ಥ ಪ್ರತಿ ಊರಲ್ಲಿ ವಿವಿಧ ಸಂಘಸಂಸ್ಥೆಗಳು ಇವೆ ಅವರುಗಳ ಮೂಲಕ ಪ್ರತಿವಾರ ಈ ಪರಿಸರಕ್ಕಾಗಿ ಅರ್ಪಿಸಿಕೊಳ್ಳಬೇಕು ಆ ಮೂಲಕ ಸ್ವಚ್ಛ ಪರಿಸರ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಡರು.
ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಂ ಪ್ರತಿಜ್ಞಾವಿಧಿ ಭೋದಿಸಿದರು.
ಅಲ್ಲದೆ ಮಾನವ ಸರಪಳಿ ಹಿಡಿದ ಸ್ವಚ್ಛಘೋಷ ಮೊಳಗಿಸಿದರು.
ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ ,ಸ.ಪ.ಪೂ.ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲ ಡೆನಿಸ್ ಬಾಂಝಿ, ಮೊಗವೀರ ಯುವ ಸಂಘ ಕೋಟ ಘಟಕದ ಅಧ್ಯಕ್ಷ ರಂಜೀತ್ ಕುಮಾರ್, ಕೋಟ ಗ್ರಾ.ಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್,ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ.,ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಕುಂದರ್,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಕಾರ್ಯದರ್ಶಿ ಶೇಖರ್ ಮರವಂತೆ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಡು,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಕೋಟ ಗ್ರಾ.ಪಂ ಸದಸ್ಯರು ಇದ್ದರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿದರು. ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ವಂದಿಸಿದರು.ಕೋಟ ,ಕೋಟತಟ್ಟು ವಿವಿಧ ಭಾಗಗಳಲ್ಲಿ ಸ್ವಚ್ಛತಾಕಾರ್ಯ ನಡೆಯಿತು.











