ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ 201ನೇ ಸ್ವಚ್ಛತಾ ಅಭಿಯಾನ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇವರ ಸೃಷ್ಟಿಯಾಗಿರುವ ಪ್ರಕೃತಿಯನ್ನು ರಕ್ಷಿಸುವುದು ನಮ್ಮ ಜವಾಬ್ಧಾರಿಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರವನ್ನು ಸ್ವಚ್ಚವಾಗಿಡುವುದರ ಜೊತೆಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಶೇಕ್ ಹೇಳಿದರು.
ಗಾಂಧೀ ಜಯಂತಿ ಅಂಗವಾಗಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ 201ನೇ ಸ್ವಚ್ಛತಾ ಅಭಿಯಾನವು ಕೋಡಿಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಮಾತನಾಡಿ, ಮನುಷ್ಯನ ಅಗತ್ಯತೆಗಳಲ್ಲಿ ಬಹುಮುಖ್ಯವಾದ ಆಮ್ಲಜನಕದ ಕೊಡುಗೆಯಲ್ಲಿ ಸಮುದ್ರದ ಪಾಲು ಬಹಳಷ್ಟಿದೆ ಎಂದರು. ನಾವು ಸಮುದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದಲ್ಲಿ ನಾವು ಸಮಾಜಕ್ಕೆ ನ್ಯಾಯ ಕೊಟ್ಟಂತಾಗುವುದಿಲ್ಲ ಎಂದರು.
ಕುಂದಾಪುರ ವಕೀಲರ ಸಂಘ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಕರಾವಳಿ ಪೊಲೀಸ್ ಪಡೆ ಗಂಗೊಳ್ಳಿ, ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್ ಬಂಟಕಲ್ಲು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರೆಡ್ ಕ್ರಾಸ್ ಕುಂದಾಪುರ, ಪುರಸಭೆ ಕುಂದಾಪುರ ಇನ್ನಿತರ ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದರು.
ಹಿರಿಯ ನ್ಯಾಯಾಧೀಶ ರಾಜು ಕೆ, ವಕೀಲರ ಸಂಘದ ಕಾರ್ಯದರ್ಶಿ ಶ್ರೀನಾಥ್, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ ಕೋಶಾಧಿಕಾರಿ ಶಿವರಾಂ ಶೆಟ್ಟಿ, ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಮಂಜಪ್ಪ, ಕೊಲ್ಲೂರು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶೈಲೇಶ್, ಕುಂದಾಪುರ ಸರಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯೆ ಸರಸ್ವತಿ ಪುತ್ರನ್, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಕುಂದಾಪುರ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಸಂಚಾಲಕ ಭರತ್ ಬಂಗೇರ, ಶಶಿಧರ್, ಅರುಣ್, ಸಂತೋಷ್, ಪುಂಡಲೀಕ ಬಂಗೇರ ಪ್ರಖ್ಯಾತ್, ಜೀವಿತ ಪ್ರಖ್ಯಾತ್ ಮಧ್ಯಸ್ಥ, ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.











