Category: ಸುದ್ದಿ

  • ಕುಂದಾಪುರ :ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೊರ್ ಡ್ರೈವರ್ ಅಸೋಸಿಯೇಷನ್ (ರಿ) ವಾರ್ಷಿಕ ಮಹಾಸಭೆ

    ಕುಂದಾಪುರ :ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೊರ್ ಡ್ರೈವರ್ ಅಸೋಸಿಯೇಷನ್ (ರಿ) ವಾರ್ಷಿಕ ಮಹಾಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಅಭಿವೃದ್ಧಿ ಪಥದಲ್ಲಿರುವ ಕುಂದಾಪುರದ ಪರಿಸರಕ್ಕೆ ಆಟೋ ರಿಕ್ಷಾ, ಟ್ಯಾಕ್ಸಿ ,ಸೇವೆಯ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು.

    ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 42ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

    ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಂಘಟಿತರಾಗಿ ಸವಾಲುಗಳನ್ನು ಎದುರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಹೊಸ ಸದಸ್ಯರ ನೋಂದಣಿಗೆ ಸಹಕರಿಸ ಬೇಕು ಎಂದು ಹೇಳಿದರು ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು.

    ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಚಂದ್ರಶೇಖರ್ ಶೇರಿಗಾರ (ಅಣ್ಣಪ್ಪಣ್ಣ) ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಅವರನ್ನ ಸನ್ಮಾನಿಸಿ , ಗೌರವಿಸಲಾಯಿತು.

    ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಾಣಿ ಉದಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸದಸ್ಯರಾದ ಚಂದ್ರ ಆಚಾರಿ ಮತ್ತು ಅಬ್ಬು ಸಾಲ್ಯಾರವರಿಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.

    ಸಭೆಯಲ್ಲಿ ಗೌರವ ಅಧ್ಯಕ್ಷರಾದ ಭಾಸ್ಕರ ಪೂಜಾರಿ ವಕ್ವಾಡಿ, ಉಪಾಧ್ಯಕ್ಷರಾದ ಶಂಕರ್ ಕುಂದರ್, ಮಹಾಬಲ, ಶೇಖರ್ ಪೂಜಾರಿ, ಜೇಮ್ಸ್ ರೆಬೆರೋ ಭಾಸ್ಕರ್ ಶೇರಿಗಾರ ,ವಿ ಎನ್.ಗುಂಡು ಪಾರಿಜಾತ ,ಜೊತೆ ಕಾರ್ಯದರ್ಶಿ ಅಸ್ಲಾಂ, ಆಲ್ಫೋನ್ಸ್ ಕ್ರಾಸ್ತ, ವಿಜಯ ಪೂಜಾರಿ ,ಸಲಹೆಗಾರರಾದ ಗೋಪಾಲ ಪೂಜಾರಿ, ಜಯರಾಮ ಶೆಟ್ಟಿ ಕಾಳಾವರ ಅಣ್ಣಪ್ಪ ಶೇರಿಗಾರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

    ಮಹಾಸಭೆಗೆ ಸದಸ್ಯರಾದ ಸದಾನಂದ ಶೇರಿಗಾರ್ ಸ್ವಾಗತಿಸಿ ಜನಾರ್ದನ್ ಖಾರ್ವಿಯವರು ವಂದಿಸಿದರು.

  • ಬೈಂದೂರು :ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರಪಾಲು

    ಬೈಂದೂರು :ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರಪಾಲು

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ತಾಲೂಕಿನ ಶಿರೂರು ಭಾಗದಲ್ಲಿ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ಅಳ್ವೆಗದ್ದೆಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಬ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ.ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಸಮುದ್ರ ಪಾಲಾಗಿದ್ದಾರೆ.ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾರರು ಕಳೆಬರಹದ ಶೋಧಕ್ಕಾಗಿ ಪ್ರಯತ್ನಿಸಿದರು ಕೂಡ ಪತ್ತೆಯಾಗಿಲ್ಲ.ಶೋಧ ಕಾರ್ಯ ಮುಂದುವರಿದಿದೆ

    ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ,ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ,ತಹಶೀಲ್ದಾರರು ಹಾಗೂ ಸ್ಥಳೀಯ ಮೀನುಗಾರರು ಹಾಜರಿದ್ದರು.

  • ಕೆಪಿಎಸ್ ಪ್ರೌಢಶಾಲೆ ಕೋಟೇಶ್ವರ – ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ

    ಕೆಪಿಎಸ್ ಪ್ರೌಢಶಾಲೆ ಕೋಟೇಶ್ವರ – ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಕೆಪಿಎಸ್ ಪ್ರೌಢಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಆತಿಥ್ಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಫುಟ್ಬಾಲ್ ಪಂದ್ಯಾಟ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ಉದ್ಘಾಟಿಸಿದ ಸಂಸ್ಥೆಯ ಪ್ರಭಾರ ಉಪ ಪ್ರಾಂಶುಪಾಲೆ ಜಯಶ್ರೀ ಭಟ್ ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳ ದೇಹ ಮತ್ತು ಮನಸ್ಸುಗಳೆರಡರ ಸಮತೋಲನಕ್ಕೆ ಅತ್ಯಗತ್ಯ ನಮ್ಮ ಶರೀರದ ಸಾಮರ್ಥ್ಯ ಕ್ರೀಡೆಯಿಂದ ಮಾತ್ರ ಪೂರ್ಣ ಪ್ರಮಾಣದಲ್ಲಿ ಅನಾವರಣಗೊಳ್ಳಲು ಸಾಧ್ಯ ಎಂದರು.

    ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯ್ಕ್ ಬಹುಮಾನ ವಿತರಿಸಿದರು. ಸಭೆಯಲ್ಲಿ ಎಸ್‌ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೂರಜ್ ಹಾಗೂ ವಸಂತ್ ಉಪಸ್ಥಿತರಿದ್ದರು. ಪಂದ್ಯಾಟವನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ಸಂಘಟಿಸಿ ನಿರ್ವಹಿಸಿದರು

    ಫಲಿತಾಂಶ
    ಪ್ರಥಮ- ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂದಾಪುರ

    ದ್ವಿತೀಯ – ಥೌಹಿದ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿ

  • ನಾಗೂರು : ಯು.ಮೋನಪ್ಪ ಶೆಟ್ಟಿ ಪ್ಯೂಯಲ್ ಸ್ಟೇಷನ್ ಶುಭಾರಂಭ

    ನಾಗೂರು : ಯು.ಮೋನಪ್ಪ ಶೆಟ್ಟಿ ಪ್ಯೂಯಲ್ ಸ್ಟೇಷನ್ ಶುಭಾರಂಭ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಇಲ್ಲಿನ ನಾಗೂರು ಆಂಜನೇಯ ದೇವಸ್ಥಾನದ ಎದುರುಗಡೆ ಯು.ಮೋನಪ್ಪ ಶೆಟ್ಟಿ ಪ್ಯೂಯಲ್ ಸ್ಟೇಷನ್ (24×7 )ಶನಿವಾರದಂದು ಶುಭಾರಂಭಗೊಂಡಿತು.

    ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಉದ್ಗಾಟಿಸಿ ಮಾತನಾಡಿ ಒಂದು ಊರಿನಲ್ಲಿ ಅತೀ ಹೆಚ್ಚು ಹೊಸ ಹೊಸ ಉದ್ಯಮಗಳು ಆರಂಭವಾದರೆ ಹೊಸ ಹೊಸ ಉದ್ಯೋಗ ಅವಕಾಶಗಳು ಆರಂಭವಾಗುದರ ಜೊತೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಕೂಡ ಜಾಸ್ತಿ ಪೆಟ್ರೋಲ್ ಡೀಸೆಲ್ ದಾಸ್ತಾನಿರಿಸಲು ಅನುಕೂಲವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

    ಪ್ಯೂಯಲ್ ಸ್ಟೇಷನ್ ನಿರ್ಮಾಣ ಆಗುವುದರಲ್ಲಿ ಸಹಕರಿಸಿದ ಗಣ್ಯರನ್ನು ಸಂಸ್ಥೆ ವತಿಯಿಂದ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂಧರ್ಭದಲ್ಲಿ ಭಾರತ್ ಪೆಟ್ರೋಲಿಯಂ ವಲಯ ಮ್ಯಾನೇಜರ್ ಅಮೂಲ್ ಬೋಸ್ಲೆ, ಭಾರತ್ ಪೆಟ್ರೋಲಿಯಮ್ ಅಭಿಯಂತರರಾದ ಆಶೀಶ್ ಕುಮಾರ್, ಅಭಿಷೇಕ್ ಸೇಲ್ಸ್ ಆಫೀಸರ್ ಉಡುಪಿ, ಭಾಸ್ಕರ ಶೆಟ್ಟಿ ಯಡೇರಿ ಉದ್ಯಮಿಗಳು, ಮಂಜಯ್ಯ ಶೆಟ್ಟಿ ಬೆಳ್ಳಾಡಿ ನಿವ್ರತ್ತ ಅಧಿಕಾರಿಗಳು ವಿಜಯ ಬ್ಯಾಂಕ್, ಬಿ.ಎಸ್ ಸುರೇಶ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ವಾದಿರಾಜ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ಸುಕುಮಾರ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ಶಿವರಾಮ ಶೆಟ್ಟಿ ಅಲ್ಛಾಡಿ ತುಂಬಿನಕೆರೆ, ಶೇಖರ್ ಖಾರ್ವಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಿರಿಮಂಜೇಶ್ವರ, ರಘುರಾಮ ಶೆಟ್ಟಿ ಉದ್ಯಮಿಗಳು,
    ಬಾಲಕ್ರಷ್ಣ ಶೆಟ್ಟಿ ಖಂಬದಕೋಣೆ, ರತ್ನಾಕರ್ ಶೆಟ್ಟಿ ಬವಲಾಡಿ, ಜಯಶೀಲ ಶೆಟ್ಟಿ ಕೈಲ್ ಕೇರಿ ಹಾಗು ಮಾಲೀಕರದ ಪ್ರಮೀಳಾ ಮತ್ತು ಪ್ರಕಾಶ್ ಶೆಟ್ಟಿ ಹಾಗು ಅವರ ಬಂಧುಗಳು ಉಪಸ್ಥಿತರಿದ್ದರು.

    ಈಶ್ವರ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಖ್ಯಾತ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

  • ಕುಂದಾಪುರ :ಶ್ರೀ ಮೂಕಾಂಬಿಕಾ ಮಹಿಳಾ ಮಂಡಲ ವತಿಯಿಂದ ವರಮಹಾಲಕ್ಷ್ಮೀ ಪೂಜೆ

    ಕುಂದಾಪುರ :ಶ್ರೀ ಮೂಕಾಂಬಿಕಾ ಮಹಿಳಾ ಮಂಡಲ ವತಿಯಿಂದ ವರಮಹಾಲಕ್ಷ್ಮೀ ಪೂಜೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ಮೂಕಾಂಬಿಕಾ ಮಹಿಳಾ ಮಂಡಲ ವತಿಯಿಂದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಗಳು ಜರಗಿದವು.

    ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ‌ರಾಧಧಾಸ್, ಕುಂದಾಪುರ ರೂರಲ್ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಐತಾಳ್, ಆವರ್ಸೆ ಸುಧಾಕರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ರವಿಶಂಕರ್, ಅನುರಾಧ, ರೇವತಿ, ಶರ್ಮಿಳಾ, ಆಶಾಲತಾ ಶೆಟ್ಟಿ, ಸಿಂಗಾರಿ, ಶೆಶಿಕಲಾ ಆಚಾರ್, ಕಾಂತಿ ಉಪಸ್ಥಿತರಿದ್ದರು. ಸುಲೋಚನ ಭಟ್ ಪೂಜಾ ಕಾರ್ಯಕ್ರಮ ನೆರವೆರಿಸಿದರು. ವೈದ್ಯಕೀಯ ಅಧೀಕ್ಷರು ಸವಿತಾ ಪಿ.ಐತಾಳ್ ಭಜನಾ ಕಾರ್ಯಕ್ರಮ ನೆರವೆರಸಿದರು.

  • ಪಂಚವರ್ಣ ಸಂಸ್ಥೆಯಿಂದ ಮೂಡುಗಿಳಿಯಾರು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ

    ಪಂಚವರ್ಣ ಸಂಸ್ಥೆಯಿಂದ ಮೂಡುಗಿಳಿಯಾರು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕಾರ್ಕಡ ಗೆಳೆಯರ ಬಳಗ ಸಹಯೋಗದೊಂದಿಗೆ ಗಿಳಿಯಾರು ಯುವಕ ಮಂಡಲ ಗಿಳಿಯಾರು ಸಂಯೋಜನೆಯಲ್ಲಿ ಪರಿಸರಸ್ನೇಹಿ 9ನೇ ಸರಣಿ ಪರಿಸರ ಮಾಹಿತಿ ಕಾರ್ಯಾಗಾರ ಮಾಲಿಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಕ್ರಾಂತಿ ಸೃಷ್ಟಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ಕಾರ್ಯಾಗಾರ ಆ.26 ಪೂ.10.ಗ ಸರಕಾರಿ ಸಂಯುಕ್ತ ಫ್ರೌಢಶಾಲೆ ಮೂಡುಗಿಳಿಯಾರು ಇಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಚಿಂತಕಿ ,ಪರಿಸರಸ್ನೃಹಿ ಅಭಿಯಾನಗಳ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಲ್ಪನಾ ಭಾಸ್ಕರ್ ಗೋಪಾಡಿ ಭಾಗವಹಿಸಲಿದ್ದಾರೆ.

  • ಕೋಟ ಅಮೃತೇಶ್ವರಿ ದೇವಳದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

    ಕೋಟ ಅಮೃತೇಶ್ವರಿ ದೇವಳದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ವೇ.ಮೂ ಮಧುಸೂದನ್ ಬಾಯರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು
    ಸಾವಿರಾರು ಭಕ್ತರು ಶ್ರೀ ಅಮೃತೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ಮಹಿಳಾ ಭಕ್ತರು ಶ್ರೀ ದೇವಿಗೆ ಕುಂಕುಮಾರ್ಚನೆ, ಹರಿವಾಣನೈವೆದ್ಯ, ಪಂಚಾಮೃತ ಅಭಿಷೇಕ,ಮಂಗಳಾರತಿ ನೀಡಿ ಪ್ರಸಾದ ಸ್ವೀಕರಿಸಿದರು.

    ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್, ಸದ್ಯರಾದ ಸತೀಶ್ ಹೆಗ್ಡೆ,ಸುಶೀಲ ಸೋಮಶೇಖರ್, ಜ್ಯೋತಿ ಬಿ ಶೆಟ್ಟಿ, ಚಂದ್ರ ಪೂಜಾರಿ, ಸುಂದರ್,ಸುಬ್ರಾಯ ಆಚಾರ್, ದೇವಸ್ಥನಾದ ಅರ್ಚಕರಾದ ದಾಮೋದರ ಜೋಗಿ ಮತ್ತಿತರರು ಇದ್ದರು.

  • ಕೋಟ ಶ್ರೀ ನಾರಾಯಣಗುರು ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ

    ಕೋಟ ಶ್ರೀ ನಾರಾಯಣಗುರು ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬ್ರಹ್ಮ ಶ್ರೀನಾರಾಯಣಗುರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕೋಟ ಇದರ ವತಿಯಿಂದ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೋಟ ಇಲ್ಲಿ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಗಳು ಜರಗಿದವು.

    ವೇ.ಮೂ ಮಹೇಶ್ ಶಾಂತಿ ಕಟಪಾಡಿ ಇವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೆರಿತು.

    ಸಂಘದ ಅಧ್ಯಕ್ಷೆ ಸುಧಾ ಎ ಪೂಜಾರಿ ,ಕಾರ್ಯದರ್ಶಿ ಸ್ಮಿತಾ ರಾಘವೇಂದ್ರ, ಉಪಾಧ್ಯಕ್ಷೆ ರಾಧ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

  • ಗುಂಡ್ಮಿ – ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ

    ಗುಂಡ್ಮಿ – ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಇದರ ಕೋಟ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಂಡಿತು.

    ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಜಿ.ರಾಮಚಂದ್ರ ಐತಾಳ ಉದ್ಘಾಟಿಸಿ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಸ್ವಾವಲಂಬಿ ಬದುಕಿಗೆ ಜ್ಞಾನವಿಕಾಸ ಸಹಕಾರಿಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಬೀದಿ ನಾಟಕದ ಮೂಲಕ ನೀರನ್ನು ಮಿತವ್ಯಯವಾಗಿ ಬಳಕೆ ಮಾಡುವ ಬಗ್ಗೆ ಹಾಗೂ ಇಂಗು ಗುಂಡಿಗಳ ಮೂಲಕ ನೀರನ್ನು ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಜ್ಞಾನವಿಕಾಸ ಯುಟ್ಯೂಬ್ ಚಾನೆಲ್ ನೋಡುವುದರಿಂದ ಏನಲ್ಲ ಪ್ರಯೋಜನಗಳಿವೆ ಎನ್ನುವ ಬಗ್ಗೆ ಬೀದಿ ನಾಟಕದ ಮೂಲಕ ಶಿರೂರಿನ ಶ್ರೀವಿನಾಯಕ ಬೀದಿ ನಾಟಕ ತಂಡದವರು ಪ್ರದರ್ಶನದ ಮೂಲಕ ಪ್ರಚುರಪಡಿಸಿದರು.

    ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಸದಸ್ಯೆ ಸುಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಕ್ಕಿವೆ, ಸ್ವಉದ್ಯೋಗದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇನ್ನೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಕನಕ, ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ಸೇವಾ ಪ್ರತಿನಿಧಿ ಶಶಿಕಲಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

  • ಆ.27ಕ್ಕೆ ಪಂಚವರ್ಣ ಸಂಸ್ಥೆಯ 177ನೇ ಪರಿಸರಸ್ನೇಹಿ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ

    ಆ.27ಕ್ಕೆ ಪಂಚವರ್ಣ ಸಂಸ್ಥೆಯ 177ನೇ ಪರಿಸರಸ್ನೇಹಿ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಜನತಾ ಸಂಸ್ಥೆ ಕೋಟ,
    ಕರ್ನಾಟಕ ಪಶುವೈದ್ಯಕೀಯ ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ,ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ರಾಷ್ಟ್ರೀಯ ಸೇವಾ ಯೋಜನೆ , ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್, ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜು, ಕೋಟ ಗ್ರಾ.ಪಂ ,ಘನ ಹಾಗೂ ದ್ರವ ತ್ಯಾಜ್ಯ ಘಟಕ ಇವರುಗಳ ಸಹಯೋಗದಲ್ಲಿ 177ನೇ ಭಾನುವಾರದ ಪರಿಸರ ಸ್ನೇಹಿ ಅಭಿಯಾನ ಕಾರ್ಯಕ್ರಮ ಇದೇ ಆ.27ರ ಭಾನುವಾರ ಕೋಟದ ಧರ್ಮರತ್ನಾಕರ, ಸಮಾಜಸೇವಕ ಆನಂದ್ ಸಿ ಕುಂದರ್ ರವರ 75ನೇ ವರ್ಷದ ಹುಟ್ಟುಹಬ್ವದ ಅಂಗವಾಗಿ ಈ ಅಭಿಯಾನ ಕೋಟ ಪಡುಕರೆಯಲ್ಲಿ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಲಿದೆ.