Category: ಸುದ್ದಿ

  • ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ

    ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ವಿದ್ಯಾಕುಮಾರಿ ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಡಿಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಡಾ.ವಿದ್ಯಾಕುಮಾರಿ 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ.

  • ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆ

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಸ್ಥಳೀಯ ಶಿಕ್ಷಣ ತಜ್ಞರು ದಿನಕರ ಹೆಗ್ಡೆಯವರು ನೆರವೇರಿಸಿದರು. ಬಳಿಕ ಮಾತನಾಡಿ ಮಕ್ಕಳಿಗೆ ಇಂದು ಶಾಲಾ ವ್ಯವಸ್ಥೆಯಲ್ಲಿ ಮಾಡುವ ಈ ಜವಾಬ್ದಾರಿ ಮುಂದೆ ಜೀವನದಲ್ಲಿ ನಾಯಕತ್ವಕ್ಕೆ ನೈಜ ಪಾಠ ನೀಡುತ್ತದೆ ಎಂದರು.

    ಶಾಲಾ ವಿದ್ಯಾರ್ಥಿ ನಾಯಕ ನಾಗಾರ್ಜುನ, ಉಪನಾಯಕ ದಿಶಾಂತ್, ಸಭಾಪತಿ ಪ್ರವೀಣ್ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಇತರ ಮಂತ್ರಿಗಳೂ ವೇದಿಕೆಯಲ್ಲಿ ಅತಿಥಿಗಳ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾ ವಿಧಿಯನ್ನು ಮಾರ್ಗದರ್ಶಕ ಶಿಕ್ಷಕಿ ಶ್ರೀಲತಾರವರು ಬೋಧಿಸಿದರು.

    2023ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 615 ಅಂಕ ಪಡೆದು ಶಾಲೆಗೆ ಪ್ರಥಮ ಬಂದ ವಿದ್ಯಾರ್ಥಿ ನಚಿಕೇತನಿಗೆ ದಿ. ರಾಜೀವ ಶೆಟ್ಟಿಯವರ ಸ್ಮರಣಾರ್ಥ ಮಗಳು ಶ್ರೀಲತಾರವರು ಕೊಡಮಾಡಿದ ನಗದು ಬಹುಮಾನ ನೀಡಲಾಯಿತು.

    ಸಭಾಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ವಹಿಸಿದ್ದರು. ಶಾಲಾ ವನಸಿರಿ ಪರಿಸರ ಸಂಘದ ಅಧ್ಯಕ್ಷೆ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅಮೂಲ್ಯ ವಂದಿಸಿದರು.

  • ಕೋಟ :ತ್ಯಾಜ್ಯ ಎಸೆಯುವ ಕೈಗೆ ಕೋಡಿ ಗ್ರಾಮಪಂಚಾಯತ್ ಎಚ್ಚರಿಕೆಯ ಸೂಚನಾ ಫಲಕ ಅನಾವರಣ

    ಕೋಟ :ತ್ಯಾಜ್ಯ ಎಸೆಯುವ ಕೈಗೆ ಕೋಡಿ ಗ್ರಾಮಪಂಚಾಯತ್ ಎಚ್ಚರಿಕೆಯ ಸೂಚನಾ ಫಲಕ ಅನಾವರಣ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಡಿ ಗ್ರಾಮ ಪಂಚಾಯತ್, ಕೋಟ ಸಹಕಾರಿ ವ್ಯವಸಾಯಕ ಸಂಘ ಇವರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಿ, ಅನಾವರಣ ಗೊಳಿಸಲಾಯಿತು.

    ಕಾರ್ಯಕ್ರಮದಲ್ಲಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ,ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಪಂಚಾಯತ್, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ , ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ , ಕೋಟ ಪಂಚಾಯತ್ ಸದಸ್ಯರಾದ ಗೀತಾ ಖಾರ್ವಿ, ಕೃಷ್ಣ ಪೂಜಾರಿ ಪಿ , ಸತೀಶ್ ಜಿ ಕುಂದರ್, ಸಂಜೀವಿನಿ ಸಂಘದ ಎಂಬಿಕೆ ಅನಿತಾ ಹಾಗೂ ಪದಾಧಿಕಾರಿಗಳು, ಸದಸ್ಯರು, ಕೃಷಿ ಸಖಿ ಶಾಂತಾ , ಎಸ್ ಎಲ್ ಆರ್ ಎಮ್ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಕುಂದಾಪುರ: ಬಿಸಿಯೂಟ ನೌಕರರನ್ನು ಡಿ ಗ್ರೂಫ್ ಗೆ ಸೇರಿಸಿ – ನೌಕರರಿಂದ ಪ್ರತಿಭಟನೆ

    ಕುಂದಾಪುರ: ಬಿಸಿಯೂಟ ನೌಕರರನ್ನು ಡಿ ಗ್ರೂಫ್ ಗೆ ಸೇರಿಸಿ – ನೌಕರರಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಾಜ್ಯದ 1 ಲಕ್ಷ 17 ಸಾವಿರ ಮಹಿಳೆಯರು 58 ಲಕ್ಷ 39 ಸಾವಿರ ಮಕ್ಕಳಿಗೆ ಬಿಸಿಯೂಟ ಸೇರಿದಂತೆ ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸುವ ಬಿಸಿಯೂಟ ನೌಕಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ನೌಕರರು ಮಂಗಳವಾರ ತಾಲೂಕು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕನಿಷ್ಟ ಕೂಲಿ 21 ಸಾವಿರ ನೀಡಬೇಕು, ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿ ತರಬೇಕು, ಬಜೆಟ್‍ನಲ್ಲಿ ಘೋಷಿಸಿದ್ದ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡಬೇಕು, ಅಕ್ಷರ ದಾಸೋಹ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರರಿಗೆ ಇಡುಗಂಟು ಜ್ಯಾರಿ ಮಾಡಬೇಕು. ಈ ನೌಕರರಿಗೆ 1 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು.

    ಯೋಜನೆಯ ಪ್ರಾರಂಭದಿಂದಲೂ ಸಾದಿಲ್ವಾರು ಜವಾಬ್ದಾರಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರು ನಿರ್ವಹಿಸಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು. ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಪ್ರತಿ ಶಾಲೆಯಲ್ಲಿ 2 ಜನ ಅಡುಗೆಯವರು ಇರಲೇಬೇಕು.ಬಿಸಿಯೂಟ ನೌಕರರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂಬುದಾಗಿ ತಾಲೂಕು ಪಂಚಾಯತ್ ಇ.ಒ ಭಾರತಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿ.ಎ. ಫೌಂಡೇಶನ್ ಹಾಗೂ ಇಂಟರ್ ಮೀಡಿಯೇಟ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಜುಲೈ10ರಂದು ಸನ್ಮಾನಿಸಲಾಯಿತು.

    ಮೇ 2023ರಲ್ಲಿ ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯ ಗ್ರೂಪ್ ಎರಡರಲ್ಲಿ ತೇರ್ಗಡೆ ಹೊಂದಿದ ಶ್ರಾವ್ಯ, ರೋಹನ್, ಚೇತನಾ, ಮಂದಾರ್ ಮತ್ತು ಗ್ರೂಪ್ ಒಂದರಲ್ಲಿ ತೇರ್ಗಡೆ ಹೊಂದಿದ ನಾದಶ್ರೀ, ರಂಜನ್, ಶಾಂಭವಿ, ಅನುಷಾ ಹಾಗೂ ಡಿಸೆಂಬರ್ 2022ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಂಕಿತ ಮೊಗವೀರ, ಸುಜನರಾಣಿ, ಸುಚಿ ಸಿ. ಶೆಟ್ಟಿ, ಪನ್ನಗ, ಗಣೇಶ್ ಭಟ್ ಇವರೆಲ್ಲರನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿಯವರು ಸನ್ಮಾನಿಸಿದರು.

    ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ಪ್ರೀತಿ ಹೆಗ್ಡೆ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಹಾಗೂ ಕಾಲೇಜಿನ ಸಿ.ಎ. ಮತ್ತು ಸಿ.ಎಸ್. ಸಂಯೋಜಕರಾದ ಸತೀಶ್ ಶೆಟ್ಟಿ ಹೆಸ್ಕತ್ತೂರ್ ಉಪಸ್ಥಿತರಿದ್ದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಬೀಳ್ಕೊಡುಗೆ ಸಮಾರಂಭ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಬೀಳ್ಕೊಡುಗೆ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಜು. 10ರಂದು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಶಿಸ್ತು ಮತ್ತು ಪ್ರಾಮಾಣಿಕತೆ ಭವಿಷ್ಯದ ಜೀವನಕ್ಕೆ ದಾರಿ ದೀಪವಾಗಲಿ, ಕಾಲೇಜಿನಲ್ಲಿ ಪಡೆದ ಪುರಸ್ಕಾರ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.

    ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನೆಲೆಯಲ್ಲಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಮನುಷ್ಯರಾಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಹಾಗೂ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ನಂದಾ ರೈ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

    ಅಂತಿಮ ಪದವಿ ವಿದ್ಯಾರ್ಥಿಗಳಾದ ಪ್ರತೀಕ್ಷಾ, ಸಪ್ತಲಾ, ಪೂರ್ಣಿಮಾ, ರೋಹನ್, ಮೇಘಾ, ಶ್ರೀರಾಮ ಹಾಗೂ ಮಹಿಮಾ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
    ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿ, ಪ್ರೀತಿ ಹೆಗ್ಡೆ ವಂದಿಸಿದರು. ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು.

     

  • ಪಾಂಡೇಶ್ವರ – ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕೆಸರು ಗದ್ದೆ ಸಂಭ್ರಮ

    ಪಾಂಡೇಶ್ವರ – ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕೆಸರು ಗದ್ದೆ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇದರ 11ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೆಸರು ಗದ್ದೆ ಸಂಭ್ರಮ ಕಾರ್ಯಕ್ರಮ ಭಾನುವಾರ ಮೂಡಹಡು ಪರಿಸರದಲ್ಲಿ ನಡೆಯಿತು.

    ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಪಾಂಡೇಶ್ವರ ಮೂಡಹಡು ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅತಿಥಿಯಾಗಿ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ರಮೇಶ್ ರಾವ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ ವಿಜಯ ಪೂಜಾರಿ , ಪಾಂಡೇಶ್ವರ ಗ್ರಾಮಪಂಚಾಯತ್ ಸಂಜೀವಿನಿ ಸಂಘದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ,ಸ್ಥಳೀಯ ಉದ್ಯಮಿ ಶೇಖರ್ ಪೂಜಾರಿ ಮೂಡಕಟ್ಟು ಮನೆ,ಸಿವಿಲ್ ಕಂಟ್ರಾಕ್ಟರ್ ಎಂ.ಸಿ ಚಂದ್ರಶೇಖರ್ ,ಪಾಂಡೇಶ್ವರ ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ ,ಪಾಂಡೇಶ್ವರ ಮೂಡಹಡು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ.ವಿ ಅಚಾರ್, ರವಿ ಪೂಜಾರಿ, ಭವಾನಿ ಬಿಲ್ಡರ್ಸ್, ಉಡುಪಿ ಮಾಲಿಕ ಪುನೀತ್ ಆಚಾರ್, ಸಾಂಸ್ಕ್ರತಿಕ ಚಿಂತಕ ಅಲ್ವಿನ್ ಆಂದ್ರಾದೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.
    ಕೆಸರು ಗದ್ದೆಯಲ್ಲಿ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಿತು.

  • ಕೋಟ ಗ್ರಾಮಪಂಚಾಯತ್ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ

    ಕೋಟ ಗ್ರಾಮಪಂಚಾಯತ್ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ

     

    ನಿಮ್ಮ ಹುಟ್ಟುಹಬ್ಬವನ್ನು ಗಿಡನೆಟ್ಟು ಪರಿಸರಸ್ನೇಹಿಯಾಗಿ ಆಚರಿಸಿಕೊಳ್ಳಿ – ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ರಾಜ್ಯ ಸರಕಾರದ ನಿರ್ದೇಶನದಂತೆ ಕೋಟ ಗ್ರಾಮಪಂಚಾಯತ್, ಉಡುಪಿ ವಲಯ ಅರಣ್ಯ ಇಲಾಖೆ, ಗಿಳಿಯಾರು ಯುವಕ ಮಂಡಲ, ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಘಟಕ ಕೋಟ, ಸಂಯುಕ್ತ ಫ್ರೌಢಶಾಲೆ ಮೂಡುಗಿಳಿಯಾರು, ಸರ್ವಕ್ಷೇಮ ಆಸ್ಪತ್ರೆ ಮೂಡುಗಿಳಿಯಾರು, ಗ್ರಾಮಪಂಚಾಯತ್ ವ್ಯಾಪ್ತಿಯ ಇತರ ಸಂಘಸಂಸ್ಥೆಗಳ ಇವರು ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಮಂಗಳವಾರ ಮೂಡುಗಿಳಿಯಾರು ಶಾಲಾ ವಠಾರದಲ್ಲಿ ನಡೆಯಿತು.

    ಉಡುಪಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ ಮರಗಿಡಗಳಿಲ್ಲದಿದ್ದರೆ ಮನುಕುಲ ಅವನತಿ ಶತಸಿದ್ಧ ಆದ್ದರಿಂದ ಗಿಡ ಮರಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕು, ಇದರಿಂದ ಪರಿಶುದ್ಧ ಆಮ್ಲಜನಕ ನೀಡಲು ಸಾಧ್ಯ,ಹಿಂದಿನ ಕಾಲದವರು ಮರಗಿಡಗಳನ್ನು ನಮ್ಮಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ನೆಟ್ಟು ಪೋಷಿಸುವ ಕೆಲಸ ಮಾಡಿದರು, ಆದರೆ ಇಂದು ಅದನ್ನು ಕಡಿದು ವಾತಾವರಣ ಹಾಳುಗೆಡವುತ್ತಿದ್ದಾರೆ ಇದರಿಂದ ವಾತಾವರಣ ಏರುಪೇರುಗೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ನಿಮ್ಮ ಹುಟ್ಟು ಹಬ್ಬವನ್ನು ಗಿಡ ನೆಟ್ಟು ಸಂಭ್ರಮಿಸಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಿ ಆ ಮೂಲಕ ಪರಿಸರ ರಕ್ಷಣೆ ಮುಂದಾಗಬೇಕಿದೆ ಎಂದರು.

    ಬ್ರಹ್ಮಾವರ ಅರಣ್ಯ ಇಲಾಖೆಯ ಅಧಿಕಾರಿ ಹರೀಷ್ ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ಶೇಖರ್ ಗಿಳಿಯಾರು,ಪಂಚಾಯತ್ ಸದಸ್ಯರಾದ ಜ್ಯೋತಿ ಬಿ ಶೆಟ್ಟಿ, ಸುಚಿತ್ರ ಶೆಟ್ಟಿ, ಯೋಗೆಂದ್ರ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವರಾಮ್ ಭಟ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಮೇಶ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಶೇಖರ್ ಮಾಸ್ಟರ್ ಸ್ವಾಗತಿಸಿ ನಿರೂಪಿಸಿ,ವಂದಿಸಿದರು.

     


     

  • ಕೋಟೇಶ್ವರ :ನಾಯಕತ್ವ ಗುಣಕ್ಕೆ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳು ಸಹಕಾರಿ – ಪ್ರದೀಪ್ ಕುಮಾರ್ ಶೆಟ್ಟಿ

    ಕೋಟೇಶ್ವರ :ನಾಯಕತ್ವ ಗುಣಕ್ಕೆ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳು ಸಹಕಾರಿ – ಪ್ರದೀಪ್ ಕುಮಾರ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೆ ಪಿ ಎಸ್ ಪ್ರೌಢಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇಲ್ಲಿನ 2023 – 24ನೇ ಸಾಲಿನ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಯುವ ವಕೀಲರಾದ ಪ್ರದೀಪ್ ಕುಮಾರ್ ಶೆಟ್ಟಿ ಶಾಲೆಗಳಲ್ಲಿ ಸಂಸತ್ತು ರಚನೆ ಮಾಡಿ ಶಿಸ್ತು ಸಂಯಮ, ಸಮಯ ಪ್ರಜ್ಞೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸ ಒಳ್ಳೆಯದು. ಶಾಲಾ ಶಿಸ್ತು ಮತ್ತು ನಿಯಮ ಕೇವಲ ಪದಾಧಿಕಾರಿಗಳ ಕರ್ತವ್ಯವಾಗಿರದೆ ಸಮಸ್ತ ವಿದ್ಯಾರ್ಥಿ ಸಮೂಹದ ಕರ್ತವ್ಯವೆಂದು ಭಾವಿಸಿ ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದರು.

    ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಇವರು ವಿದ್ಯಾರ್ಥಿ ಸರಕಾರದ ವಿವಿಧ ಮಂತ್ರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ಶಿಕ್ಷಕರಾದ ಪ್ರದೀಪ್ ಶಾನುಭೋಗ್, ವಿದ್ಯಾರ್ಥಿ ನಾಯಕ ಕಿಶನ್ ವಿದ್ಯಾರ್ಥಿ ನಾಯಕಿ ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಮಂತ್ರಿಮಂಡಲ ರಚನೆ : ಶಾಲಾ ವಿದ್ಯಾರ್ಥಿ ನಾಯಕನಾಗಿ ಕಿಶನ್ ಕೆ ಎಸ್, ಉಪ ನಾಯಕ ಆದಿತ್ಯ, ಉಪ ನಾಯಕಿ ರಶ್ಮಿ , ಸ್ಪೀಕರ್ ನಕ್ಷ ಶೆಟ್ಟಿ, ಶಿಕ್ಷಣ ಮಂತ್ರಿಯಾಗಿ ಸುಚಿತ್ರ ಕೆ., ಕ್ರೀಡಾ ಮಂತ್ರಿಯಾಗಿ ಸುಮುಖ ಎಸ್., ಮಾಹಿತಿ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಯತೀಶ್ ಜಿ, ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ ಎಂ., ಆರೋಗ್ಯ ಮಂತ್ರಿಯಾಗಿ ಶ್ರೇಯ ಕೆ. ಎ., ಕೃಷಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ತನ್ಮಯ್, ಆಹಾರ ಮಂತ್ರಿಯಾಗಿ ಸಮೃದ್ಧಿ, ಸ್ವಚ್ಛತಾ ಮಂತ್ರಿಯಾಗಿ ಧರಣಿ, ವಾರ್ತಾ ಮಂತ್ರಿಯಾಗಿ ಶಿಲ್ಪಿಕಾ, ಶಿಸ್ತು ಮತ್ತು ಸಮಯ ಪಾಲನಾ ಮಂತ್ರಿಯಾಗಿ ಸನ್ನಿಧಿ, ರಕ್ಷಣಾ ಮಂತ್ರಿಯಾಗಿ ಪೃಥ್ವಿಕ್ , ಗ್ರಂಥಾಲಯ ಮಂತ್ರಿಯಾಗಿ ಪಲ್ಲವಿ, ನೀರಾವರಿ ಮಂತ್ರಿಯಾಗಿ ಸಾಹಿಲ್, ಪ್ರತಿಪಕ್ಷದ ನಾಯಕನಾಗಿ ಆದಿತ್ಯ ಪ್ರಮಾಣ ವಚನ ಸ್ವೀಕರಿಸಿದರು.

    ಕಾರ್ಯಕ್ರಮವನ್ನು ಸಮಾಜ ವಿಜ್ಞಾನ ಶಿಕ್ಷಕಿ ಸುಗುಣ ಸಂಘಟಿಸಿದ್ದರು. ಗೌರವ ಶಿಕ್ಷಕಿ ರಶ್ಮಿ ಬೆರೆಟ್ಟೋ ಸ್ವಾಗತಿಸಿ, ಶಿಕ್ಷಕ ಶ್ರೀಕಾಂತ್ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು.

    ವಿವಿಧ ಸಂಘಗಳ ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದು, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ. ಸಹಕರಿಸಿದರು.

  • ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಪದಗ್ರಹಣ

    ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಪದಗ್ರಹಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರೆದ ಪದಗ್ರಹಣ ಸಮಾರಂಭ ಆನೆಗುಡ್ಡೆಯ ಶ್ರೀ ವಿನಾಯಕ ಸಭಾ ಗ್ರಹದಲ್ಲಿ ಜರುಗಿತು. ಲಯನ್ಸ್ ಜಿಲ್ಲೆ _317C ಇದರ ಮಾಜಿ ಜಿಲ್ಲಾ ಗವರ್ನರ್,ಲಯನ್ಸ್ ಅಂತರಾಷ್ಟ್ರೀಯ ತರಬೇತುದಾರರಾದ ಎಂಜಿಎಫ್ ನೀಲಕಾಂತ ಎಂ ಹೆಗಡೆಯವರು ನೂತನ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಹಾಗೂ ಅವರ ತಂಡಕ್ಕೆ ಪದ ಪ್ರಧಾನ ಮಾಡಿದರು.

    ಪ್ರಸ್ತುತ ಲಯನ್ಸ್ ಜಿಲ್ಲೆಯಲ್ಲಿ ಮಹಿಳಾ ಲಯನ್ಸ್ ಕ್ಲಬ್ ಗಳಲ್ಲಿ ಕುಂದಾಪುರ ಅಮೃತಧಾರ ತನ್ನದೇ ಆದ ಚಾಪನ್ನು ಬೆಳೆಸಿ ಮಾದರಿಯಾಗಿದೆ, ವಿಶೇಷವಾಗಿ ಪರಿಸರ ಕಾಳಜಿ ಬಗ್ಗೆ ಒತ್ತು ನೀಡುತ್ತಿರುವುದು ಇತರ ಕ್ಲಬ್ ಗಳಿಗೆ ಅನುಕರಣೀಯ ಎಂದು ಪ್ರಶಂಶಿಸಿದರು. ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ಜಿಲ್ಲಾ ಸಮನ್ವಯಾಧಿಕಾರಿ ಅರುಣ್ ಹೆಗ್ಡೆ ,ಪ್ರಾಂತ್ಯ ಅಧ್ಯಕ್ಷ ಏಕನಾಥ ಬೋಳಾರ್ ,ಪ್ರಾಂತ್ಯ ಕಾರ್ಯದರ್ಶಿ ಭೋಜರಾಜ್ ಶೆಟ್ಟಿ, ವಲಯ್ಯಾಧ್ಯಕ್ಷ ನವೀನ್ ಶೆಟ್ಟಿ, ವಿಸ್ತರಣಾಧಿಕಾರಿ ಅಕ್ಷಯ್ ಹೆಗ್ಡೆ , ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಪುತ್ರನ್, ನೂತನ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ಜಯಶೀಲ ಕಾಮತ್ ನೂತನ ಕಾರ್ಯದರ್ಶಿ ಸುಮಶ್ರೀ ಧನ್ಯ, ನೂತನ ಕೋಶಾಧಿಕಾರಿ ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದರು.

    ಜಿಲ್ಲಾ ಸಂಪುಟ ಸದಸ್ಯರುಗಳಾದ ರಮಾನಂದ ಕೆ ,ಪ್ರಕಾಶ್ ಬೆಟ್ಟಿನ್, ಚಂದ್ರಶೇಖರ್ ಕಲ್ಪತರು, ದಿನಕರ್ ಶೆಟ್ಟಿ, ರಮಾ ಬೋಳಾರ್ ,ರಾಜೀವ ಕೋಟ್ಯಾನ್, ಸೀತಾರಾಮ ಶೆಟ್ಟಿ, ಅಡ್ವಕೇಟ್ ಬನ್ನಾಡಿ ಸೋಮನಾಥ ಹೆಗಡೆ, ಜಗದೀಶ್ ಹೊಳ್ಳ, ರವಿಕಿರಣ್ ಡಿ ಕಾಸ್ತಾ, ರಜತ್ ಹೆಗಡೆ,ಶಂಕರ್ ಶೆಟ್ಟಿ ಹಾಗೂ ಕಿರಣ್ ಕುಂದಾಪುರ ಹಾಗೂ ಪ್ರಾಂತ್ಯದ ಲಯನ್ಸ್ ಕ್ಲಬ್ ಅಧ್ಯಕ್ಷರು ಕಾರ್ಯದರ್ಶಿ, ಕೋಶಾಧಿಕಾರಿಗಳು ,ಸದಸ್ಯರು ರೋಟರಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಸರಸ್ವತಿ ಪುತ್ರನ್ ಸ್ವಾಗತಿಸಿ ಪ್ರಸ್ತಾಪಿಸಿದರು. ಕಾರ್ಯದರ್ಶಿ ಸುಮಶ್ರೀ ವಂದಿಸಿದರು ,ಸತ್ಯಶ್ರೀ ಗೌತಮ್ ಕಾರ್ಯಕ್ರಮ ನಿರೂಪಿದರು.