ಕೋಟ ಗ್ರಾಮಪಂಚಾಯತ್ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ

0
246

Click Here

Click Here

 

ನಿಮ್ಮ ಹುಟ್ಟುಹಬ್ಬವನ್ನು ಗಿಡನೆಟ್ಟು ಪರಿಸರಸ್ನೇಹಿಯಾಗಿ ಆಚರಿಸಿಕೊಳ್ಳಿ – ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್

ಕುಂದಾಪುರ ಮಿರರ್ ಸುದ್ದಿ…

ಕೋಟ: ರಾಜ್ಯ ಸರಕಾರದ ನಿರ್ದೇಶನದಂತೆ ಕೋಟ ಗ್ರಾಮಪಂಚಾಯತ್, ಉಡುಪಿ ವಲಯ ಅರಣ್ಯ ಇಲಾಖೆ, ಗಿಳಿಯಾರು ಯುವಕ ಮಂಡಲ, ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಘಟಕ ಕೋಟ, ಸಂಯುಕ್ತ ಫ್ರೌಢಶಾಲೆ ಮೂಡುಗಿಳಿಯಾರು, ಸರ್ವಕ್ಷೇಮ ಆಸ್ಪತ್ರೆ ಮೂಡುಗಿಳಿಯಾರು, ಗ್ರಾಮಪಂಚಾಯತ್ ವ್ಯಾಪ್ತಿಯ ಇತರ ಸಂಘಸಂಸ್ಥೆಗಳ ಇವರು ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಮಂಗಳವಾರ ಮೂಡುಗಿಳಿಯಾರು ಶಾಲಾ ವಠಾರದಲ್ಲಿ ನಡೆಯಿತು.

Click Here

ಉಡುಪಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ ಮರಗಿಡಗಳಿಲ್ಲದಿದ್ದರೆ ಮನುಕುಲ ಅವನತಿ ಶತಸಿದ್ಧ ಆದ್ದರಿಂದ ಗಿಡ ಮರಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕು, ಇದರಿಂದ ಪರಿಶುದ್ಧ ಆಮ್ಲಜನಕ ನೀಡಲು ಸಾಧ್ಯ,ಹಿಂದಿನ ಕಾಲದವರು ಮರಗಿಡಗಳನ್ನು ನಮ್ಮಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ನೆಟ್ಟು ಪೋಷಿಸುವ ಕೆಲಸ ಮಾಡಿದರು, ಆದರೆ ಇಂದು ಅದನ್ನು ಕಡಿದು ವಾತಾವರಣ ಹಾಳುಗೆಡವುತ್ತಿದ್ದಾರೆ ಇದರಿಂದ ವಾತಾವರಣ ಏರುಪೇರುಗೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ನಿಮ್ಮ ಹುಟ್ಟು ಹಬ್ಬವನ್ನು ಗಿಡ ನೆಟ್ಟು ಸಂಭ್ರಮಿಸಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಿ ಆ ಮೂಲಕ ಪರಿಸರ ರಕ್ಷಣೆ ಮುಂದಾಗಬೇಕಿದೆ ಎಂದರು.

ಬ್ರಹ್ಮಾವರ ಅರಣ್ಯ ಇಲಾಖೆಯ ಅಧಿಕಾರಿ ಹರೀಷ್ ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ಶೇಖರ್ ಗಿಳಿಯಾರು,ಪಂಚಾಯತ್ ಸದಸ್ಯರಾದ ಜ್ಯೋತಿ ಬಿ ಶೆಟ್ಟಿ, ಸುಚಿತ್ರ ಶೆಟ್ಟಿ, ಯೋಗೆಂದ್ರ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವರಾಮ್ ಭಟ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಮೇಶ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಶೇಖರ್ ಮಾಸ್ಟರ್ ಸ್ವಾಗತಿಸಿ ನಿರೂಪಿಸಿ,ವಂದಿಸಿದರು.

 


 

Click Here

LEAVE A REPLY

Please enter your comment!
Please enter your name here