ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೆ ಪಿ ಎಸ್ ಪ್ರೌಢಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇಲ್ಲಿನ 2023 – 24ನೇ ಸಾಲಿನ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಯುವ ವಕೀಲರಾದ ಪ್ರದೀಪ್ ಕುಮಾರ್ ಶೆಟ್ಟಿ ಶಾಲೆಗಳಲ್ಲಿ ಸಂಸತ್ತು ರಚನೆ ಮಾಡಿ ಶಿಸ್ತು ಸಂಯಮ, ಸಮಯ ಪ್ರಜ್ಞೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸ ಒಳ್ಳೆಯದು. ಶಾಲಾ ಶಿಸ್ತು ಮತ್ತು ನಿಯಮ ಕೇವಲ ಪದಾಧಿಕಾರಿಗಳ ಕರ್ತವ್ಯವಾಗಿರದೆ ಸಮಸ್ತ ವಿದ್ಯಾರ್ಥಿ ಸಮೂಹದ ಕರ್ತವ್ಯವೆಂದು ಭಾವಿಸಿ ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದರು.
ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಇವರು ವಿದ್ಯಾರ್ಥಿ ಸರಕಾರದ ವಿವಿಧ ಮಂತ್ರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ಶಿಕ್ಷಕರಾದ ಪ್ರದೀಪ್ ಶಾನುಭೋಗ್, ವಿದ್ಯಾರ್ಥಿ ನಾಯಕ ಕಿಶನ್ ವಿದ್ಯಾರ್ಥಿ ನಾಯಕಿ ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂತ್ರಿಮಂಡಲ ರಚನೆ : ಶಾಲಾ ವಿದ್ಯಾರ್ಥಿ ನಾಯಕನಾಗಿ ಕಿಶನ್ ಕೆ ಎಸ್, ಉಪ ನಾಯಕ ಆದಿತ್ಯ, ಉಪ ನಾಯಕಿ ರಶ್ಮಿ , ಸ್ಪೀಕರ್ ನಕ್ಷ ಶೆಟ್ಟಿ, ಶಿಕ್ಷಣ ಮಂತ್ರಿಯಾಗಿ ಸುಚಿತ್ರ ಕೆ., ಕ್ರೀಡಾ ಮಂತ್ರಿಯಾಗಿ ಸುಮುಖ ಎಸ್., ಮಾಹಿತಿ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಯತೀಶ್ ಜಿ, ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ ಎಂ., ಆರೋಗ್ಯ ಮಂತ್ರಿಯಾಗಿ ಶ್ರೇಯ ಕೆ. ಎ., ಕೃಷಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ತನ್ಮಯ್, ಆಹಾರ ಮಂತ್ರಿಯಾಗಿ ಸಮೃದ್ಧಿ, ಸ್ವಚ್ಛತಾ ಮಂತ್ರಿಯಾಗಿ ಧರಣಿ, ವಾರ್ತಾ ಮಂತ್ರಿಯಾಗಿ ಶಿಲ್ಪಿಕಾ, ಶಿಸ್ತು ಮತ್ತು ಸಮಯ ಪಾಲನಾ ಮಂತ್ರಿಯಾಗಿ ಸನ್ನಿಧಿ, ರಕ್ಷಣಾ ಮಂತ್ರಿಯಾಗಿ ಪೃಥ್ವಿಕ್ , ಗ್ರಂಥಾಲಯ ಮಂತ್ರಿಯಾಗಿ ಪಲ್ಲವಿ, ನೀರಾವರಿ ಮಂತ್ರಿಯಾಗಿ ಸಾಹಿಲ್, ಪ್ರತಿಪಕ್ಷದ ನಾಯಕನಾಗಿ ಆದಿತ್ಯ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮವನ್ನು ಸಮಾಜ ವಿಜ್ಞಾನ ಶಿಕ್ಷಕಿ ಸುಗುಣ ಸಂಘಟಿಸಿದ್ದರು. ಗೌರವ ಶಿಕ್ಷಕಿ ರಶ್ಮಿ ಬೆರೆಟ್ಟೋ ಸ್ವಾಗತಿಸಿ, ಶಿಕ್ಷಕ ಶ್ರೀಕಾಂತ್ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಂಘಗಳ ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದು, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ. ಸಹಕರಿಸಿದರು.











