ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಸ್ಥಳೀಯ ಶಿಕ್ಷಣ ತಜ್ಞರು ದಿನಕರ ಹೆಗ್ಡೆಯವರು ನೆರವೇರಿಸಿದರು. ಬಳಿಕ ಮಾತನಾಡಿ ಮಕ್ಕಳಿಗೆ ಇಂದು ಶಾಲಾ ವ್ಯವಸ್ಥೆಯಲ್ಲಿ ಮಾಡುವ ಈ ಜವಾಬ್ದಾರಿ ಮುಂದೆ ಜೀವನದಲ್ಲಿ ನಾಯಕತ್ವಕ್ಕೆ ನೈಜ ಪಾಠ ನೀಡುತ್ತದೆ ಎಂದರು.
ಶಾಲಾ ವಿದ್ಯಾರ್ಥಿ ನಾಯಕ ನಾಗಾರ್ಜುನ, ಉಪನಾಯಕ ದಿಶಾಂತ್, ಸಭಾಪತಿ ಪ್ರವೀಣ್ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಇತರ ಮಂತ್ರಿಗಳೂ ವೇದಿಕೆಯಲ್ಲಿ ಅತಿಥಿಗಳ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾ ವಿಧಿಯನ್ನು ಮಾರ್ಗದರ್ಶಕ ಶಿಕ್ಷಕಿ ಶ್ರೀಲತಾರವರು ಬೋಧಿಸಿದರು.
2023ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 615 ಅಂಕ ಪಡೆದು ಶಾಲೆಗೆ ಪ್ರಥಮ ಬಂದ ವಿದ್ಯಾರ್ಥಿ ನಚಿಕೇತನಿಗೆ ದಿ. ರಾಜೀವ ಶೆಟ್ಟಿಯವರ ಸ್ಮರಣಾರ್ಥ ಮಗಳು ಶ್ರೀಲತಾರವರು ಕೊಡಮಾಡಿದ ನಗದು ಬಹುಮಾನ ನೀಡಲಾಯಿತು.
ಸಭಾಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ವಹಿಸಿದ್ದರು. ಶಾಲಾ ವನಸಿರಿ ಪರಿಸರ ಸಂಘದ ಅಧ್ಯಕ್ಷೆ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅಮೂಲ್ಯ ವಂದಿಸಿದರು.











