Category: ಸುದ್ದಿ

  • ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರ ಪ್ರಾರಂಭೋತ್ಸವ

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರ ಪ್ರಾರಂಭೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರು ಹೊಸ ಶೈಕ್ಷಣಿಕ ವರ್ಷದ ಆರಂಭೋತ್ಸವಕ್ಕೆ ಉತ್ತಮ ತಯಾರಿ ನಡೆಸಿದ್ದು, ಯೋಜನೆಯಂತೆ ಎಸ್ ಡಿ ಎಂ ಸಿ, ಗ್ರಾಮ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಪುಷ್ಪವೃಷ್ಠಿಯೊಂದಿಗೆ ಸ್ವಾಗತಿಸಲಾಯಿತು.

    ನಂತರ ನಡೆದ ಸರಳ ಸಮಾರಂಭದಲ್ಲಿ ಮಕ್ಕಳಿಗೆ ಹೊಸ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿತ್ಯಾನಂದ ದೇವಾಡಿಗ ವಹಿಸಿದ್ದರು. ಗ್ರಾಮ ಪಂ. ಸದಸ್ಯರಾದ ಜಯಪ್ರಕಾಶ್ ಶೆಟ್ಟಿಯವರು ಪುಸ್ತಕ ವಿತರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು.

    ನಿತ್ಯಾನಂದ ದೇವಾಡಿಗರು ಸಮವಸ್ತ್ರ ವಿತರಣೆ ಮಾಡಿ ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶದ ಬಗ್ಗೆ ಪ್ರಶಂಸಿಸಿ ಅಧ್ಯಾಪಕ ವೃಂದವನ್ನು ಅಭಿನಂದಿಸಿದರು.

    ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ವಂದಿಸಿದರು. ಆರಂಭೋತ್ಸವದ ಸವಿನೆನಪಿಗೆ ಮಕ್ಕಳಿಗೆ ಪಾಯಸದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕ ರವಿರಾಜ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.

  • ಕೋಡಿ ಬೇಂಗ್ರೆ ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ – ಶಾಸಕ ಕಿರಣ್ ಕೊಡ್ಗಿ ಭರವಸೆ

    ಕೋಡಿ ಬೇಂಗ್ರೆ ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ – ಶಾಸಕ ಕಿರಣ್ ಕೊಡ್ಗಿ ಭರವಸೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದ ಸಮುದ್ರತೀರದಲ್ಲಿ ಮನೆ ಅನಾದಿ ಕಾಲದಿಂದ ಮನೆ ಕಟ್ಟಿ ಕುಳಿತ ಬಡ ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಈ ವರೆಗೆ ಹಕ್ಕುಪತ್ರ ಮಂಜೂರಾಗಿರಲಿಲ್ಲ. ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಇತ್ತೀಚೆಗೆ ನನಸಾಯಿತು. ಒಟ್ಟು 161 ಕುಟುಂಬಗಳಿಗೆ ಸರಕಾರಿ ಭೂಮಿ ಮಂಜೂರಾತಿ ಆದೇಶ ಆಗಿದೆ. 178ಜನರಿಗೆ ಪರಂಬೋಕು ಜಮೀನು 132. ಜನರಿಗೆ ಸಮುದ್ರ ತೀರ ಎಂದು ನಮೂದಾಗಿದ್ದ ಜಮೀನು ಮಂಜೂರಾಗಲು ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ಜಾಗ ಮಂಜೂರಾಗಿದೆ.

    ಇಲ್ಲಿ ಸೆಂಟ್‌ಗೆ 5 ಸಾವಿರ ರೂ. ಕಟ್ಟಿಸಲಾಗುತ್ತಿದ್ದು ಬಡವರಿಗೆ ಕಷ್ಟವಾಗುತ್ತಿದೆ. ಮಲ್ಪೆಯಲ್ಲಿ ಇಂತಹ ಪ್ರಕರಣದಲ್ಲಿ ಸೆಂಟ್‌ಗೆ 500 ರೂ. ಕಟ್ಟಿಸಲಾಗಿದ್ದು ಅದೇ ಮಾದರಿಯಲ್ಲಿ ಇಲ್ಲಿಯೂ ಹಣ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

    ಕೋಡಿ ಕನ್ಯಾನ ಮತ್ತು ಹೊಸ ಬೆಂಗ್ರೆ ಜನತೆಯ ಈ ಭೂಮಿ ಹಕ್ಕಿನ ಹಲವು ಬಗ್ಗೆ ದಶಕಗಳಿಂದಲೂ ಮಾದರಿಯಲ್ಲಿ ಹೋರಾಟಗಳು ನಡೆದಿದ್ದವು. – ಎಲ್ಲ ದಾಖಲೆಗಳ ಸಂಗ್ರಹದ ಮೂಲಕ ಹಾಲಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಆರ್‌ಝಡ್ ಅಧಿಕಾರಿಗಳ ಸಭೆ ನಡೆಸಿ ನಿರಾಕ್ಷೇಪಣ ಪತ್ರ ನೀಡಲಾಗಿದ್ದು, ಕಡತವನ್ನು ಬೆಂಗಳೂರಿಗೆ ಒಯ್ದು ಸಚಿವಾಲಯದ ಹಿಂದೆ ಬಿದ್ದರು. ಅಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸಭೆ ಕರೆದು ಚರ್ಚಿಸಿ ನೂರಾರು ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸಲಾಗಿದೆ ಎಂದರು.

  • ರಾಷ್ಟಮಟ್ಟದ ಅಥ್ಲೀಟ್,ನೌಕರರ ಸಂಘದ ಕಾರ್ಯದರ್ಶಿಯ ವಯೋನಿವೃತ್ತಿ ಅಭಿನಂದನೆ

    ರಾಷ್ಟಮಟ್ಟದ ಅಥ್ಲೀಟ್,ನೌಕರರ ಸಂಘದ ಕಾರ್ಯದರ್ಶಿಯ ವಯೋನಿವೃತ್ತಿ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಕಚೇರಿಯ ಹಿರಿಯ ಪ್ರಯೋಗಶಾಲಾ ಅಧಿಕಾರಿ ಆದ ಹೆಚ್. ಉದಯ ಕುಮಾರ್ ಶೆಟ್ಟಿ ಅವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದು,ಇದರ ಪ್ರಯುಕ್ತ ಉಡುಪಿಯ ಪುರಭವನದಲ್ಲಿ ಇಂದು ನಡೆದ ಅಭಿನಂದನಾ ಸಮಾರಂಭದಲ್ಲಿ,ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

    ಹೆಚ್. ಉದಯ ಕುಮಾರ್ ಶೆಟ್ಟಿ ಅವರು ಆರೋಗ್ಯ ಇಲಾಖೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿದ್ದು, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ 12 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಅತ್ಯುತ್ತಮ ಕ್ರೀಡಾಪಟು ಆಗಿರುವ ಇವರು, ಅಖಿಲ ಭಾರತ ಮಟ್ಟದ ನಾಗರೀಕ ಸೇವಾ ಕ್ರೀಡಾಕೂಟದಲ್ಲಿ 7 ವರ್ಷಗಳ ಕಾಲ ಸತತವಾಗಿ ರಾಜ್ಯವನ್ನು ಪ್ರತಿನಿಧಿಸಿದ್ದು, ಕಂಚಿನ ಪದಕವನ್ನೂ ಹಾಗೂ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಸಹ ಹಲವು ಪದಕಗಳನ್ನು ಪಡೆದಿದ್ದಾರೆ. ಮ್ಯಾರಾಥಾನ್ ಓಟಗಾರರಾಗಿರುವ ಇವರು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ನಡೆದ ಮಾಸ್ಟರ್ ಅಥ್ಲೀಟ್ ಕ್ರೀಡಾಕೂಟಗಳಲ್ಲಿ ಸಹ ಭಾಗವಹಿಸಿ ಪದಕಗಳನ್ನು ಪಡಿದಿದ್ದು, ಅನೇಕ ಯುವ ಅಥ್ಲೀಟ್ ಗಳಿಗೆ ಮಾರ್ಗದರ್ಶಕರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ನೌಕರರ ಸಂಘ, ವಿವಿಧ ಕ್ರೀಡಾ ಸಂಸ್ಥೆಗಳ ವತಿಯಿಂದ ಕೂಡಾ ಉದಯ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

    ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯ್ಯಕ್ಷ ಪ್ರಶಾಂತ್ ಹಾವಂಜೆ, ಕೋಶಾಧಿಕಾರಿ ಷರೀಫ್ ಮ ರೋಣ, ನಿಕಟ ಪೂರ್ವ ಜಿಲ್ಲಾ ಸರಕಾರಿ ನೌಕರರ ಸಂಘದ ಆಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಕಾರ್ಕಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಅರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅಭಿನಂದನೆ ಸಲ್ಲಿಸಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ :ಪ್ರತಿಭಾ ಪ್ರದರ್ಶನ “ಸಂಭ್ರಮ” ಸಂಪನ್ನ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ :ಪ್ರತಿಭಾ ಪ್ರದರ್ಶನ “ಸಂಭ್ರಮ” ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ಪ್ರತಿಭಾ ಪ್ರದರ್ಶನ “ಸಂಭ್ರಮ”ವು ಮೇ 27ರಂದು ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಸಂಪನ್ನಗೊಂಡಿತು.

    ಕಾಲೇಜಿನ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಬಹಳ ವೈಶಿಷ್ಟ್ಯಪೂರ್ಣವಾಗಿ ಕಾರ್ಯಕ್ರಮವು ಮೂಡಿ ಬಂದಿತು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ತೀರ್ಪುಗಾರರಾಗಿ ಆಗಮಿಸಿದ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ್ ಕುಮಾರ್ ಶೆಟ್ಟಿ, ಜನತಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ ನಾಯ್ಕ್ ಹಾಗೂ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗರತ್ನ ಹೇರ್ಳೆ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಶಿಸಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭಹಾರೈಸಿದರು.

    ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಹಿಂದಿ ಪ್ರಾಧ್ಯಾಪಕರಾದ ರೇವತಿ ಉಪಸ್ಥಿತರಿದ್ದರು.

    ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಂತಿಮ ಬಿ.ಕಾಂ. ‘ಸಿ’ ವಿಭಾಗ, ದ್ವಿತೀಯ ಸ್ಥಾನವನ್ನು ಅಂತಿಮ ಬಿ.ಕಾಂ. ‘ಬಿ’ ವಿಭಾಗ, ತೃತೀಯ ಸ್ಥಾನವನ್ನು ಬಿಬಿಎ ವಿಭಾಗ ಪಡೆಯಿತು. ಉತ್ತಮ ಸಮೂಹ ಪ್ರದರ್ಶನ ಪ್ರಶಸ್ತಿಯನ್ನು ಪ್ರಥಮ ಬಿ.ಕಾಂ. ‘ಎ’ ವಿಭಾಗ ಹಾಗೂ ಉತ್ತಮ ನಿರೂಪಕ ಪ್ರಶಸ್ತಿಯನ್ನು ದ್ವಿತೀಯ ಬಿ.ಕಾಂ. ‘ಬಿ’ ವಿಭಾಗದ ಪ್ರಿಯಾಂಕಾ, ಉತ್ತಮ ವೈಯಕ್ತಿಕ ಪ್ರತಿಭೆ ದ್ವಿತೀಯ ಬಿ.ಕಾಂ. ‘ಎ’ ವಿಭಾಗದ ಸ್ವಾತಿ ಪಡೆದುಕೊಂಡರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ಭಾರತೀಯ ಸಂವಿಧಾನ ಪುಸ್ತಕ ಬಿಡುಗಡೆ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ಭಾರತೀಯ ಸಂವಿಧಾನ ಪುಸ್ತಕ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ಹಾಗೂ ಉಡುಪಿಯ ಎಮ್.ಜಿ.ಎಮ್. ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್‍ರವರು ರಚಿಸಿದ ಭಾರತೀಯ ಸಂವಿಧಾನ ಪುಸ್ತಕವನ್ನು ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಮ್.ಜಿ.ಎಮ್. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ. ಸುರೇಂದ್ರನಾಥ ಶೆಟ್ಟಿ ಬಿಡುಗಡೆಗೊಳಿಸಿದರು.

    ಈ ಪುಸ್ತಕವನ್ನು ನೂತನ ರಾಷ್ಟ್ರೀಯ ಶಿಕ್ಷಣಾ ನೀತಿಯ ಅನ್ವಯ ಮಂಗಳೂರು ವಿ.ವಿ. ರೂಪಿಸಿದ ಪಠ್ಯಕ್ರಮಕ್ಕೆ ಅನುಗುಣವಾಗಿ ಮೂರನೇ ಅಥವಾ ನಾಲ್ಕನೇಯ ಸೆಮಿಸ್ಟರ್ ಕಡ್ಡಾಯ ಪತ್ರಿಕೆ ಭಾರತೀಯ ಸಂವಿಧಾನ’ದ ಕುರಿತಾಗಿ ರಚಿಸಲಾಗಿದೆ.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ಪ್ರೀತಿ ಹೆಗ್ಡೆ, ವಿದ್ಯಾರ್ಥಿ ಪ್ರತಿನಿಧಿ ವಿಘ್ನೇಶ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಹಾರ ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಅವಿತಾ ಕೊರೆಯಾ ನಿರೂಪಿಸಿದರು.

  • ಕಾರಂತ ಥೀಮ್ ಪಾರ್ಕ್ ಗೆ ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಭೇಟಿ

    ಕಾರಂತ ಥೀಮ್ ಪಾರ್ಕ್ ಗೆ ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಭೇಟಿ

    ಕುಂದಾಪುರ ಮಿರರ್ ಸುದ್ದಿ…

     

    ಕೋಟ : ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ ಗೆ ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಪೂರ್ಣಿಮಾ ಹಾಗೂ ಸದಸ್ಯರಾದ ಜಯಲಕ್ಷ್ಮೀ ಶೆಟ್ಟಿ ಭೇಟಿ ನೀಡಿ ವೀಕ್ಷಿಸಿದರು. ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಂಥಾಲಯ, ಅಂಗನವಾಡಿ, ಆರ್ಟ್ ಗ್ಯಾಲರಿ, ಕಿರು ಸಭಾಂಗಣ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರಂತರ ಬದುಕು ಬರಹವನ್ನು ಮುಂದಿನ ಜನಾಂಗಕ್ಕೆ ರವಾನಿಸುವ ಉದ್ದೇಶದಿಂದ ಸ್ಥಾಪಿತವಾದ ಥೀಮ್ ಪಾರ್ಕ್‍ನಲ್ಲಿ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗಿ ನಡೆಸುತ್ತಿರುವ ಚಟುವಟಿಕೆಗಳು ಶ್ಲಾಘನೀಯ ಎಂದು ಉಪಮೇಯರ್ ಶ್ರೀಮತಿ ಪೂರ್ಣಿಮಾ ಅವರು ಹೇಳಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

  • ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಮಾಸ್ತಿ ಅಮ್ಮ ಕಲ್ಲುಕುಟಿಗ ಪರಿವಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಮಾಸ್ತಿ ಅಮ್ಮ ಕಲ್ಲುಕುಟಿಗ ಪರಿವಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಮಾಸ್ತಿ ಅಮ್ಮ ಕಲ್ಲುಕುಟಿಗ ಪರಿವಾರ ದೇವಸ್ಥಾನ ಗುರುನರಸಿಂಹ ದೇವಸ್ಥಾನ ಸಮೀಪ ಸಾಲಿಗ್ರಾಮ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಖಾವಂದರರು ನೀಡಿದ ಪ್ರಸಾದ ರೂಪದ 100000 ಲಕ್ಷದ ಡಿ.ಡಿ, ಮೊತ್ತವನ್ನು ಯೋಜನಾಧಿಕಾರಿ ರಮೇಶ್, ದೇವಸ್ಥಾನದ ಆಡಳಿತ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರ ಮತ್ತು ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯವರು,ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

     

  • ಪಂಚವರ್ಣ ಮಹಿಳಾ ಮಂಡಲದಿಂದ ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

    ಪಂಚವರ್ಣ ಮಹಿಳಾ ಮಂಡಲದಿಂದ ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ ಸಹಕಾರದೊಂದಿಗೆ ಮೇ.31ರಂದು ಇದೇ ಮೊದಲ ಬಾರಿಗೆ ಮತ್ತೊಂದು ಸಾಮಾಜಿಕ ಕಾರ್ಯಕ್ರಮ ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ. 4ನೇ ಮಾಲಿಕೆ ಅರಿವು ನಿಮಗಿರಲಿ ನೆರವು ಶೀರ್ಷಿಕೆಯಡಿ ಕೋಟ ಗ್ರಾ.ಪಂ ಸಭಾಭವನದಲ್ಲಿ ಕೋಟ.ಗ್ರಾ.ಪಂ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಬುಧವಾರ ಅಪರಾಹ್ನ 1.00ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂಪನ್ಮೂಲ ವ್ಯಕ್ತಿಯಾಗಿ ಕೋಟದ ಡಾ.ವಿದ್ಯಾ ಹಂದೆ ಭಾಗವಹಿಸಲಿದ್ದಾರೆ ಎಂದು ಪಂಚವರ್ಣ ಮಹಿಳಾ ಮಂಡಲದ ಆಧ್ಯಕ್ಷೆ ಕಲಾವತಿ ಅಶೋಕ್ ತಿಳಿಸಿದ್ದಾರೆ.

  • ಕೋಟ – ಮೇಳದ ಕಲಾವಿದರಿಂದ ಯಜಮಾನರಿಗೆ ಸನ್ಮಾನ

    ಕೋಟ – ಮೇಳದ ಕಲಾವಿದರಿಂದ ಯಜಮಾನರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವತಿಯಿಂದ ನಡೆಸಲ್ಪಡುವ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ಯಕ್ಷಗಾನ ತಿರುಗಾಟ ಸೋಮವಾರ ದೇವರ ಸೇವೆಯ ಮೂಲಕ ತೆರೆಕಂಡಿತು.

    ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೇಳದ ಯಜಮಾನ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳನ್ನು ಮೇಳದ ಕಲಾವಿದರು ಒಗ್ಗೂಡಿ ಸನ್ಮಾನಿಸಿದರು.

    ಮೇಳದ ಮ್ಯಾನೇಜರ್ ಕೋಟ ಸುರೇಶ್ ಮಾತನಾಡಿ ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟ ಕೊನೆಯ ಘಳಿಗೆಯನ್ನು ಮೇಳದ ಯಜಮಾನರಿಗೆ ಸಮರ್ಪಿದ್ದೇವೆ.ಯಕ್ಷಗಾನ ಮೇಳಗಳನ್ನು ಮುನ್ನಡೆಸುವ ಹೊಣೆಗಾರಿಗೆ ವ್ಯವಸ್ಥಾಪಕರಿಗಿಂತ ಯಜಮಾನರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಕಲಾವಿದರನ್ನು ಪ್ರೀತಿಯಿಂದ ಕಾಣುವ ಜೊತೆಗೆ ಅವರ ಆಶೋತ್ತರಗಳನ್ನು ಇಡೇರಿಸುವ ಮನಸ್ಥಿತಿ ನಿಜಕ್ಕೂ ಪ್ರಶಂಸನೀಯ, ಕಲಾರಾಧನೆಯ ಜೊತೆ ಸಾಂಸ್ಕೃತಿಕ ,ಸಾಮಾಜಿಕ ,ಸಹಾಯ ಮಾಡುವ ಅವರ ಕಾರ್ಯತತ್ಪರತೆಯನ್ನು ಕೊಂಡಾಡಿದರು.

    ಈ ಸಂದರ್ಭದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ,ಮತ್ತಿತರರು ಕಲಾವಿದರು ,ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ನಿರೂಪಿಸಿದರು. ವಂದಿಸಿದರು.

    ಶ್ರೀ ಕ್ಷೇತ್ರದ ಮೇಳದ ಯಜಮಾನ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳನ್ನು ಮೇಳದ ಕಲಾವಿದರು ಒಗ್ಗೂಡಿ ಸನ್ಮಾನಿಸಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ ಮತ್ತಿತರರು ಉಪಸ್ಥಿತರಿದ್ದರು.

  • ಕೋಡಿ ಹೊಸ ಬೇಂಗ್ರೆಯ ಕೊರಗ ಪೂಜಾರಿ ಇವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕೋಡಿ ಹೊಸ ಬೇಂಗ್ರೆಯ ಕೊರಗ ಪೂಜಾರಿ ಇವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮನೆಗೆ ತೆರಳಿ ಸಾಧಕರನ್ನು ಗೌರವಿಸುವ ಸಂಘಟನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಬೆಳ್ಳಿ ಹಬ್ಬದ ವರ್ಷಾಚರಣೆ ಪ್ರಯುಕ್ತ ರಜತ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕೊರಗ ಪೂಜಾರಿಯಂತಹ ಒರ್ವ ಶ್ರೇಷ್ಠ ಸಾಧಕನನ್ನು ಆಯ್ಕೆಗೊಳಿಸಿ ಅಭಿನಂದಿಸುವ ಕಾರ್ಯ ಇತರ ಸಂಘಸಂಸ್ಥೆಗಳಿಗೆ ಪ್ರೇರಣೆಯಾಗಲಿದೆ. ಓರ್ವ ಸಾಧಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಯನಶೀಲ ವ್ಯಕ್ತಿತ್ವವುಳ್ಳವರು, ತಾನು ಬೆಳೆಯಬೇಕೆಂಬ ತುಡಿತ ಇಲ್ಲದೆ ಇತರ ಸಂಸ್ಥೆಗಳನ್ನು, ವ್ಯಕ್ತಿಗಳ ಅಭಿವೃದ್ಧಿಗೆ ಸದಾ ಚಿಂತಿಸುವ ಇವರ ಕಾರ್ಯವೈಕರಿಯನ್ನು ಕೊಂಡಾಡಿದರು. ಅಲ್ಲದೆ ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯ ನಿಜಕ್ಕೂ ಇತರ ಸಾಧಕರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.

    ಈ ಸಂದರ್ಭದಲ್ಲಿ ಸಹಕಾರಿ, ಕೃಷಿ,ಹೈನುಗಾರಿಗೆ, ಮೀನುಗಾರಿಕೆ ಕ್ಷೇತ್ರದ ಸಾಧನೆಯ ಹಿನ್ನಲ್ಲೆಯಲ್ಲಿ ಕೋಡಿ ಹೊಸ ಬೇಂಗ್ರೆಯ ಕೊರಗ ಪೂಜಾರಿ ಇವರಿಗೆ ಪಂಚವರ್ಣ ರಜತ ಗೌರವ ನೀಡಿ ಗೌರವಿಸಲಾಯಿತು.

    ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ರವೀಂದ್ರ ಜೋಗಿ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್,ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಕೋಟ ಗ್ರಾಮಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ,ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು,ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ,ಉಡುಪಿ ಜಿಲ್ಲಾಸಹಕಾರಿ ಯೂನಿಯನ್ ಪ್ರತಿನಿಧಿ ವಿಶ್ವನಾಥ,ಕೋಡಿ ಮೀನುಗಾರಿಕಾ ಸಂಘದ ಕಾರ್ಯದರ್ಶಿ ಅಕ್ಷಯ್, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿದರು. ಶಶಿಧರ ತಿಂಗಳಾಯ ವಂದಿಸಿದರು.