ಕುಂದಾಪುರ ಮಿರರ್ ಸುದ್ದಿ…
ಕೋಟ: ಮನೆಗೆ ತೆರಳಿ ಸಾಧಕರನ್ನು ಗೌರವಿಸುವ ಸಂಘಟನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಬೆಳ್ಳಿ ಹಬ್ಬದ ವರ್ಷಾಚರಣೆ ಪ್ರಯುಕ್ತ ರಜತ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕೊರಗ ಪೂಜಾರಿಯಂತಹ ಒರ್ವ ಶ್ರೇಷ್ಠ ಸಾಧಕನನ್ನು ಆಯ್ಕೆಗೊಳಿಸಿ ಅಭಿನಂದಿಸುವ ಕಾರ್ಯ ಇತರ ಸಂಘಸಂಸ್ಥೆಗಳಿಗೆ ಪ್ರೇರಣೆಯಾಗಲಿದೆ. ಓರ್ವ ಸಾಧಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಯನಶೀಲ ವ್ಯಕ್ತಿತ್ವವುಳ್ಳವರು, ತಾನು ಬೆಳೆಯಬೇಕೆಂಬ ತುಡಿತ ಇಲ್ಲದೆ ಇತರ ಸಂಸ್ಥೆಗಳನ್ನು, ವ್ಯಕ್ತಿಗಳ ಅಭಿವೃದ್ಧಿಗೆ ಸದಾ ಚಿಂತಿಸುವ ಇವರ ಕಾರ್ಯವೈಕರಿಯನ್ನು ಕೊಂಡಾಡಿದರು. ಅಲ್ಲದೆ ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯ ನಿಜಕ್ಕೂ ಇತರ ಸಾಧಕರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರಿ, ಕೃಷಿ,ಹೈನುಗಾರಿಗೆ, ಮೀನುಗಾರಿಕೆ ಕ್ಷೇತ್ರದ ಸಾಧನೆಯ ಹಿನ್ನಲ್ಲೆಯಲ್ಲಿ ಕೋಡಿ ಹೊಸ ಬೇಂಗ್ರೆಯ ಕೊರಗ ಪೂಜಾರಿ ಇವರಿಗೆ ಪಂಚವರ್ಣ ರಜತ ಗೌರವ ನೀಡಿ ಗೌರವಿಸಲಾಯಿತು.
ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ರವೀಂದ್ರ ಜೋಗಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್,ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಕೋಟ ಗ್ರಾಮಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ,ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು,ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ,ಉಡುಪಿ ಜಿಲ್ಲಾಸಹಕಾರಿ ಯೂನಿಯನ್ ಪ್ರತಿನಿಧಿ ವಿಶ್ವನಾಥ,ಕೋಡಿ ಮೀನುಗಾರಿಕಾ ಸಂಘದ ಕಾರ್ಯದರ್ಶಿ ಅಕ್ಷಯ್, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿದರು. ಶಶಿಧರ ತಿಂಗಳಾಯ ವಂದಿಸಿದರು.











