Category: ಸುದ್ದಿ

  • ಕೋಟ – ಆನಂದ್ ಸಿ ಕುಂದರ್ 75ನೇ ಹುಟ್ಟುಹಬ್ಬದ ಹಿನ್ನಲೆ ರಕ್ತದಾನ ಶಿಬಿರ

    ಕೋಟ – ಆನಂದ್ ಸಿ ಕುಂದರ್ 75ನೇ ಹುಟ್ಟುಹಬ್ಬದ ಹಿನ್ನಲೆ ರಕ್ತದಾನ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಆನಂದ್ ಸಿ ಕುಂದರ್ ಅವರ ಹುಟ್ಟುಹಬ್ಬದ ಅಮೃತ ಮಹೋತ್ಸವದ ಸಲುವಾಗಿ ಜನತಾ ಸಿಬ್ಬಂದಿಗಳ ಆಯೋಜನೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು.

    ಈ ಸಂದರ್ಭದಲ್ಲಿ ಜನತಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಸಿ ಕುಂದರ್ ಅವರು ಸಂಸ್ಥೆಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ ಜೀವದ್ರವವಾದ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ರಕ್ತದಾನವು ಶ್ರೇಷ್ಠ ದಾನವಾಗಿದೆ ಮತ್ತು ಒಬ್ಬ ರಕ್ತದಾನಿಗೆ ಒಂದು ಬಾರಿ ರಕ್ತದಾನ ಮಾಡುವುದರಿಂದ ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸಿದ ಪುಣ್ಯ ಬರುತ್ತದೆ ಎಂದರು.

    ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಜಯದರ್ ಶೆಟ್ಟಿ, ಕೋಶಾಧಿಕಾರಿ ಶಿವರಾಂ ಶೆಟ್ಟಿ ,ಯೂತ್ ರೆಡ್ ಕ್ರಾಸ್‍ನ ಸಂಯೋಜಕರಾದ ಸತ್ಯನಾರಾಯಣ ಪುರಾಣಿಕ್, ಮುಖ್ಯ ಲೆಕ್ಕ ಪರಿಶೋಧಕರಾದ ಅಶ್ವತ್ ಜೆ ಶೆಟ್ಟಿ, ಹಾಗೂ ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿದರು.

  • ಉಡುಪಿ :ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ

    ಉಡುಪಿ :ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬAದಿಸಿದಂತೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಇಂದು ಅಂತಿಮವಾಗಿ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಗುರುರಾಜ ಶೆಟ್ಟಿ ಗಂಟಿಹೊಳೆ , ಕಾಂಗ್ರೆಸ್ ಪಕ್ಷದ ಕೆ,ಗೋಪಾಲ ಪೂಜಾರಿ, ಜನತಾದಳ (ಜಾತ್ಯಾತೀತ)ದ ಮನ್ಸೂರ್ ಇಬ್ರಾಹಿಂ, ಆಮ್ ಆದ್ಮಿ ಪಾರ್ಟಿಯ ಸಿ.ಎ.ರಮಾನಂದ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್, ರಾಷ್ಟ್ರೀಯ ಸಮಾಜದಳ (ಆರ್) ನ ಕೊಲ್ಲೂರು ಮಂಜುನಾಥ ನಾಯ್ಕ, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಜಿ, ಶ್ಯಾಮ ಬಿ, ಎಚ್.ಸುರೇಶ್ ಪೂಜಾರಿ ಚುನಾವಣಾ ಕಣದಲ್ಲಿದ್ದಾರೆ.

    ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಎ.ಕಿರಣ್ ಕುಮಾರ್ ಕೊಡ್ಗಿ, ಕಾಂಗ್ರೆಸ್ ಪಕ್ಷದ ದಿನೇಶ್ ಹೆಗ್ಡೆ ಮೊಳಹಳ್ಳಿ, ಜನತಾದಳ (ಜಾತ್ಯಾತೀತ)ದ ರಮೇಶ, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ ಮತ್ತು ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ಜಿ ಚುನಾವಣಾ ಕಣದಲ್ಲಿದ್ದಾರೆ.

    ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಜನತಾದಳ (ಜಾತ್ಯಾತೀತ)ದ ದಕ್ಷತ್ ಆರ್ ಶೆಟ್ಟಿ, ಆಮ್ ಆದ್ಮಿ ಪಾರ್ಟಿಯ ಪ್ರಭಾಕರ ಪೂಜಾರಿ, ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್, ಬಿ.ಜೆ.ಪಿ ಪಕ್ಷದ ಯಶ್ ಪಾಲ್ ಸುವರ್ಣ, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ರಾಮದಾಸ ಭಟ್, ರಿಪಬ್ಲಿಕನ್ ಪಾರ್ಟಿ ಆರ್ಫ ಇಂಡಿಯಾ (ಕರ್ನಾಟಕ)ದ ಶೇಖರ್ ಹಾವಂಜೆ ಚುನಾವಣಾ ಕಣದಲ್ಲಿದ್ದಾರೆ.

    ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ ಪಕ್ಷದ ವಿನಯ್ ಕುಮಾರ್ ಸೊರಕೆ, ಜನತಾದಳ (ಜಾತ್ಯಾತೀತ)ದ ಸಬಿನಾ ಸಮದ್, ಆಮ್ ಆದ್ಮಿ ಪಾರ್ಟಿಯ ಎಸ್.ಆರ್.ಲೋಬೋ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮಹಮದ್ ಹನೀಫ್ ಚುನಾವಣಾ ಕಣದಲ್ಲಿದ್ದಾರೆ.

    ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಕಾಂಗ್ರೆಸ್ ಪಕ್ಷದ ಉದಯ ಶೆಟ್ಟಿ , ಆಮ್ ಆದ್ಮಿ ಪಾರ್ಟಿ ಯ ಡೇನಿಯಲ್ ಫೆಡ್ರಿಕ್ ರೇಂಜರ್ , ಜಾತ್ಯಾತೀತ ಜನತಾದಳದ ಶ್ರೀಕಾಂತ್ ಪೂಜಾರಿ , ಬಿ.ಜೆ.ಪಿ ಪಕ್ಷದ ವಿ.ಸುನೀಲ್ ಕುಮಾರ್, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ , ಪಕ್ಷೇತರ ಅಭ್ಯರ್ಥಿಗಳಾದ ಪ್ರಮೋದ್ ಮುತಾಲಿಕ್, ಡಾ.ಮಮತಾ ಹೆಗ್ಡೆ, ವಿದ್ಯಾಲಕ್ಷ, ಸುಧಾಕರ ಆಚಾರ್ಯ ಚುನಾವಣಾ ಕಣದಲ್ಲಿದ್ದಾರೆ.

  • ಕುಂದಾಪುರ :ರಾಜ್ಯ ಮಟ್ಟದ ರ್ಯಾಂಕಿನ ಸಂತಸದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಗೆಲುವಿನ ಸ್ಪರ್ಶ

    ಕುಂದಾಪುರ :ರಾಜ್ಯ ಮಟ್ಟದ ರ್ಯಾಂಕಿನ ಸಂತಸದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಗೆಲುವಿನ ಸ್ಪರ್ಶ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್‍ಗಳನ್ನು ಪಡೆಯುವುದರೊಂದಿಗೆ ಅಭೂತ ಪೂರ್ವ ಸಾಧನೆ ಮೆರೆದ ಕುಂದಾಪುರದ ಏಕೈಕ ಕಾಲೇಜ್ ಆಗಿ ಹೊರಹೊಮ್ಮಿದೆ.

    ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನೇಹಾ ಜೆ. ರಾವ್ 594 ಅಂಕಗಳೊಂದಿಗೆ ತೃತೀಯ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್, ಸೃಜನ್ ಭಟ್. ಕೆ 591 ಅಂಕಗಳೊಂದಿಗೆ 6ನೇ ರ್ಯಾಂಕ್, ಪ್ರಜ್ಞಾ , ನಿತೇಶ್, ಪ್ರಣಮ್ಯ ಜಿ.ಎಚ್ 589 ಅಂಕಗಳೊಂದಿಗೆ 8ನೇ ರ್ಯಾಂಕ್, ಮಯೂರ್ ಶೆಟ್ಟಿ 588 ಅಂಕಗಳೊಂದಿಗೆ 9ನೇ ರ್ಯಾಂಕ್, ಉಜ್ವಲ ಶೇಟ್ 587 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ.

    ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನೇಹಾ ಎಸ್. ರಾವ್ 593 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ , ಲಿಪಿಕಾ 592 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 6ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ತೃತೀಯ ರ್ಯಾಂಕ್ , ಎಸ್ . ವೈಷ್ಣವಿ ಕಾಮತ್, ಸಮೃದ್ಧಿ ಪೈ. ಎನ್, 588 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿರುತ್ತಾರೆ.

    ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 141 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 96 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ಈ ಬಾರಿಯ ವಿಜ್ಞಾನ ವಿಭಾಗದಲ್ಲಿ 238 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 135 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 102 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ಭೌತಶಾಸ್ತ್ರ 03, ರಸಾಯನಶಾಸ್ತ್ರ 05, ಗಣಿತಶಾಸ್ತ್ರ್ಲ 09, ಜೀವಶಾಸ್ತ್ರ 03, ಗಣಕ ವಿಜ್ಞಾನ 30, ಬೇಸಿಕ್ ಮ್ಯಾಥ್ಸ 03, ಲೆಕ್ಕಶಾಸ್ತ್ರ 11, ವ್ಯವಹಾರ ಅಧ್ಯಯನ 05, ಸಂಖ್ಯಾಶಾಸ್ತ್ರ್ಲ 04, ಕನ್ನಡ 03, ಸಂಸ್ಕ್ರತ 12 ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.

    ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕುಂದಾಪುರ :ಎಕ್ಸಲೆಂಟ್ ಪಿಯು ಕಾಲೇಜು ಕುಂದಾಪುರ ಪಿ.ಯು.ಸಿ. ಫಲಿತಾಂಶ : ಶೇಕಡಾ 95ಕ್ಕಿಂತ ಅಧಿಕ ಅಂಕಗಳು

    ಕುಂದಾಪುರ :ಎಕ್ಸಲೆಂಟ್ ಪಿಯು ಕಾಲೇಜು ಕುಂದಾಪುರ ಪಿ.ಯು.ಸಿ. ಫಲಿತಾಂಶ : ಶೇಕಡಾ 95ಕ್ಕಿಂತ ಅಧಿಕ ಅಂಕಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಡೆಸಿದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರ ಎಕ್ಸಲೆಂಟ್ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರ್ಯಾಂಕ್ ಪಡೆದಿದ್ದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿನಿ ವಾಸವಿ ಬೋಳಾರ್ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 5 ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿರುತ್ತಾಳೆ. ಸಂಸ್ಥೆಯ ವಿದ್ಯಾರ್ಥಿ ಅಮೋಘ ಶೆಟ್ಟಿ ವಾಣಿಜ್ಯ ವಿಭಾಗದಲ್ಲಿ 591 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 4ನೇ ಸ್ಥಾನ, ಟಿ. ಸ್ನೇಹ 590 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸಿ ಉಡುಪಿ ಜಿಲ್ಲೆಗೆ 5ನೇ ಸ್ಥಾನ, ಪ್ರಣಿತಾ ಅಡಿಗ 588 ಅಂಕಗಳನ್ನು ಪಡೆಯುವುದರ ಮೂಲಕ 9ನೇ ರ್ಯಾಂಕ್ ಹಾಗೂ ಶ್ರೀನಿಧಿ ಶೆಟ್ಟಿ 587 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 10ನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾಳೆ.

    ವಿಜ್ಞಾನ ವಿಭಾಗದಲ್ಲಿ ಅನುಶ್ರೀ ಶೆಟ್ಟಿ 586, ಲತಿಫಾರಫಾ 586, ಪ್ರೇರಣಾ ಪಿ. ನಾಯಕ್ 584, ಪುರುಷೋತಮ್ 579, ಪ್ರಜ್ವಲ್ ಎಸ್. ಶೆಟ್ಟಿ 578, ಸಂಪ್ರೀತ್ ಎಸ್. ಶೆಟ್ಟಿ 578, ಸಂಚಿತಾ ವೈ.ಎಮ್ 578, ಸಿಂಚುಶ್ರೀ ಎನ್ 578, ಸನ್ನಿದಿ ಶೆಟ್ಟಿ 577, ದರ್ಶಿತ್ ಗಜಾನನ ಶೆಟ್ಟಿ 576, ಹರ್ಷಿತಾ 576, ಶೆಟ್ಟಿ ವೈಷ್ಣವಿ ಭಾಸ್ಕರ್ 576, ಫವಾಝ್ ಆಹಮದ್ ಆಲಮ್ 575, ಪಲ್ಲವಿ ವಿಜಯ ಶೆಟ್ಟಿ 575, ಸ್ಮಿತಾ ಕೆ 575, ಅನುಪಮಾ 574, ಅನ್ವಿತ್ ಶೆಟ್ಟಿ 574, ಕೀರ್ತಿ ಎಸ್ 573, ನಿರಿಕ್ಷಾ ವಿ. ಶೆಟ್ಟಿ 572, ಪ್ರಜಯ್ ಚಂದ್ರಶೇಖರ್ ಗಾಣಿಗ 572, ಪ್ರಜ್ವಲ್‍ಎಮ್ 572, ಶ್ರೀಶಾ ಎಸ್ ಶೆಟ್ಟಿ 572, ಶ್ರೀನಿಧಿ ಎಸ್ 572, ಲಿಖಿತಾರವಿ ನಾಯ್ಕ್ 570, ಯಶವಂತ ಪಿ 570 ಅಂಕಗಳು ಮತ್ತು ವಾಣಿಜ್ಯ ವಿಭಾಗದಲ್ಲಿ ಲೆಖಕ್ ಯು ಶೆಟ್ಟಿ 587, ಸಫಾ 585, ಸಹನ ಎಮ್ ಶೆಟ್ಟಿ 585, ಸಹನಾ 585, ಸಮೃದ್ಧಿ ಎಸ್. ಶೆಟ್ಟಿ 584, ವೈಷ್ಣವಿ ಶೆಟ್ಟಿಗಾರ್ 583, ಸಮೀಕ್ಷಾ ಶೆಟ್ಟಿ 581, ಹೃತ್ವೀಕ್ ಎಮ್ 575, ಯಶಸ್ವಿನಿ 575, ಆಯುಷ್ 574, ದೀಕ್ಷಿತಾ 574, ಸಂಜಲಿ 574, ವಾಸವಿ ವಿ ಶೆಟ್ಟಿ 573, ಸವಿನಯ ಕೆ 571 ಅಂಕಗಳನ್ನು ಪಡೆದಿರುತ್ತಾರೆ.

    ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಎರಡು ವರ್ಷಗಳ ಕಾಲ ರಾಜ್ಯದ ನಾನಾ ವಿಭಾಗಗಳ ಅನುಭವಿ ಶಿಕ್ಷಕರ ನೆರವಿನಿಂದ ಗುಣಮಟ್ಟದ ಶಿಕ್ಷಣವನ್ನು ಎಕ್ಸಲೆಂಟ್ ಪಿ.ಯು ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ನೀಡಿದ್ದು, ಇದು ಇಂದು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರಾಂಕ್ಯ್ ಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ತಿಳಿಸಿದ್ದಾರೆ. ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಎಂ.ಎಂ ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು ಅಭಿನಂದನೆ ತಿಳಿಸಿದ್ದಾರೆ.

  • ಕುಂದಾಪುರ :ಎಕ್ಸಲೆಂಟ್ ಪಿಯು ಕಾಲೇಜು ಕುಂದಾಪುರ ಪಿ.ಯು.ಸಿ. ಫಲಿತಾಂಶ : 5 ರಾಜ್ಯ ಮಟ್ಟದ ರ್ಯಾಂಕ್ ಸಾಧನೆ

    ಕುಂದಾಪುರ :ಎಕ್ಸಲೆಂಟ್ ಪಿಯು ಕಾಲೇಜು ಕುಂದಾಪುರ ಪಿ.ಯು.ಸಿ. ಫಲಿತಾಂಶ : 5 ರಾಜ್ಯ ಮಟ್ಟದ ರ್ಯಾಂಕ್ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ :ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಡೆಸಿದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರ ಎಕ್ಸಲೆಂಟ್ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರ್ಯಾಂಕ್ ಪಡೆದಿದ್ದು ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ.

    ಸಂಸ್ಥೆಯ ವಿದ್ಯಾರ್ಥಿನಿ ವಾಸವಿ ಬೋಳಾರ್ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿರುತ್ತಾಳೆ. ಪ್ರಸ್ತುತ ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ಪಿ.ಸಿ.ಎಮ್.ಸಿ ವಿಭಾಗದಲ್ಲಿ ಅಭ್ಯಾಸಿಸಿರುತ್ತಾಳೆ.

    ಸಂಸ್ಥೆಯ ವಿದ್ಯಾರ್ಥಿ ಅಮೋಘ ಶೆಟ್ಟಿ ವಾಣಿಜ್ಯ ವಿಭಾಗದಲ್ಲಿ 591 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 4ನೇ ಸ್ಥಾನಿಯಾಗಿ ಹೊರಹೊಮ್ಮುವುದರ ಜೊತೆಗೆ ಮೂರು ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿರುತ್ತಾನೆ.

    ಸಂಸ್ಥೆಯ ವಿದ್ಯಾರ್ಥಿಗಳಾದ ಸ್ನೇಹ 590 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್‍ಗಳಿಸಿ ಉಡುಪಿ ಜಿಲ್ಲೆಗೆ 5ನೇ ಸ್ಥಾನಿಯಾಗಿ ಹೊರ ಹೊಮ್ಮಿದರೆ, ಪ್ರಣಿತಾ ಅಡಿಗ 588 ಅಂಕಗಳನ್ನು ಪಡೆಯುವುದರ ಮೂಲಕ 9ನೇ ರ್ಯಾಂಕ್ ಹಾಗೂ ಶ್ರೀನಿಧಿ ಶೆಟ್ಟಿ 587 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 10ನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾಳೆ.

    ಸಂಸ್ಥೆಯ ಒಟ್ಟು 225 ವಿದ್ಯಾರ್ಥಿಗಳಲ್ಲಿ 143 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಂಸ್ಥೆಯ 69 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಉತ್ತಮ ಸಾಧನೆಯನ್ನು ತೋರ್ಪಡಿಸಿದ್ದಾರೆ. ಸಂಸ್ಥೆಯ 44 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಅಧಿಕ ಅಂಕ ಗಳಿಸುವುದರ ಮೂಲಕ ಸಂಸ್ಥೆ ಮತ್ತು ತಮ್ಮ ಪೋಷಕರು ಹೆಮ್ಮೆಪಡುವಂತ ಫಲಿತಾಂಶವನ್ನು ನೀಡಿರುತ್ತಾರೆ.

    ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಎರಡು ವರ್ಷಗಳ ಕಾಲ ರಾಜ್ಯದ ನಾನಾ ವಿಭಾಗಗಳ ಅನುಭವಿ ಶಿಕ್ಷಕರ ನೆರವಿನಿಂದ ಗುಣಮಟ್ಟದ ಶಿಕ್ಷಣವನ್ನು ಎಕ್ಸಲೆಂಟ್ ಪಿ.ಯು ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ನೀಡಿದ್ದು, ಇದು ಇಂದು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ರಮೇಶ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ತಿಳಿಸಿದ್ದಾರೆ. ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಎಂ.ಎಂ ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಅಭಿನಂದನೆ ತಿಳಿಸಿದ್ದಾರೆ.

  • ದ್ವಿತೀಯ ಪಿಯು ಫಲಿತಾಂಶ : ಕುಂದಾಪುರದ ನೇಹಾ ಜೆ. ರಾವ್ ವಿಜ್ಞಾನದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ!

    ದ್ವಿತೀಯ ಪಿಯು ಫಲಿತಾಂಶ : ಕುಂದಾಪುರದ ನೇಹಾ ಜೆ. ರಾವ್ ವಿಜ್ಞಾನದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ!

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದ್ವಿತೀಯ ಪಿಯುಸಿಯ ಫಲಿತಾಂಶ ಇಂದು ಹೊರಬಿದ್ದಿದ್ದು, ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನೇಹಾ ಜೆ ರಾವ್ ವಿಜ್ಞಾನ ವಿಭಾಗದ ಪಿಸಿಎಂಸಿಯಲ್ಲಿ 594 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

    ಕುಂದಾಪುರ ತಾಲೂಕಿನ ಬಸ್ರೂರು ಮೂರುಕೈ ಸಮೀಪದ ಬ್ಯಾಂಕರ್ಸ್ ಕಾಲೊನಿ ನಿವಾಸಿಯಾಗಿರುವ, ಜಗದೀಶ್ ರಾವ್ ಹಾಗೂ ಸ್ಮಿತಾ ಜೆ ರಾವ್ ಅವರ ಪುತ್ರಿಯಾಗಿರುವ ನೇಹಾ, ಹಗಲು ರಾತ್ರಿ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.

    ಮಧ್ಯಮ ವರ್ಗದ ಕುಟುಂಬದಲ್ಲಿರುವ ನೇಹಾಳ ಸಹೋದರ ಯಜ್ಞೇಶ್ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ತಾತ ಎನ್.ಎನ್.ರಾವ್ ನಿವೃತ್ತ ಶಿಕ್ಷಕರಾಗಿದ್ದು ನನ್ನ ಓದಿಗೆ ಉತ್ತೇಜನ ನೀಡಿದ್ದರು. ತಂದೆ ತಾಯಿಯವರೂ ಹುರಿದುಂಬಿಸುತ್ತಿದ್ದರು ಎಂದಿರುವ ನೇಹಾ ಜೆ ರಾವ್, ಮುಂದೆ ಬಿ.ಟೆಕ್ ಮಾಡಿ ಇಂಜಿನಿಯರ್ ಆಗಬೇಕು ಎನ್ನುವ ಕನಸು ಕಂಡಿದ್ದಾರೆ. ನೇಹಾಳ ಸಾಧನೆಗೆ ಮನೆಯವರು ಸಂಭ್ರಮಿಸಿದ್ದು, ಸಿಹಿ ಹಂಚಿ ಖುಷಿಪಟ್ಟಿದ್ದಾರೆ.

    ನೇಹಾಳ ಸಾಧನೆಗೆ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.

  • ಗಂಗೊಳ್ಳಿ: ಕಾಮಗಾರಿ ಅಪೂರ್ಣ – ಪರಿಹಾರ ದೊರಕದಿದ್ದರೆ ಬೃಹತ್ ಪ್ರತಿಭಟನೆ, ಚುನಾವಣೆಗೆ ಗೈರಾಗಲು ನಿರ್ಧಾರ

    ಗಂಗೊಳ್ಳಿ: ಕಾಮಗಾರಿ ಅಪೂರ್ಣ – ಪರಿಹಾರ ದೊರಕದಿದ್ದರೆ ಬೃಹತ್ ಪ್ರತಿಭಟನೆ, ಚುನಾವಣೆಗೆ ಗೈರಾಗಲು ನಿರ್ಧಾರ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ : ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಕೇರಳ ಮಾದರಿಯ ಔಟ್ ಡೋರ್ ಬಂದರಿನ ಒಂದನೇ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತು ಎರಡು ವರ್ಷಗಳಾದರೂ ಕಾಮಗಾರಿ ಆರಂಭಗೊಂಡಿಲ್ಲ. ಸಹನೆ, ತಾಳ್ಮೆ ಕಳೆದುಕೊಳ್ಳುತ್ತಿರುವ ಈ ಭಾಗದ ಮೀನುಗಾರರು, ಕಾಮಗಾರಿಯನ್ನು ಪ್ರಾರಂಭಿಸುವಂತೆ ರಾಜ್ಯದ ಮುಖ್ಯಮಂತ್ರಿಗಳು, ಇಲಾಖೆ ಸಚಿವರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಿದ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಈ ಸಂಬಂಧ ಸೂಕ್ತ ಪರಿಹಾರ ಮತ್ತು ಭರವಸೆ ದೊರಕದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ವಾಸುದೇವ ಖಾರ್ವಿ ತಿಳಿಸಿದ್ದಾರೆ.
    ಮರವಂತೆ ಹೊರಬಂದರು ಪ್ರದೇಶದಲ್ಲಿ ಗುರುವಾರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
    ಸುಮಾರು 10 ಸಾವಿರಕ್ಕೂ ಮಿಕ್ಕಿ ಜನರು ಮರವಂತೆ ಬಂದರನ್ನು ಅವಲಂಬಿಸಿದ್ದಾರೆ. ಬದುಕಿಗಾಗಿ ಹೋರಾಟ ನಡೆಸುತ್ತಿರುವ ಈ ಭಾಗದ ಮೀನುಗಾರರಿಗೆ ಸರಕಾರ ಮೀನುಗಾರರಿಗೆ ದುಡಿಯಲು ಬಿಡುತ್ತಿಲ್ಲ. ಅಪೂರ್ಣ ಕಾಮಗಾರಿಯಿಂದ ಮೀನುಗಾರರ ಮನೆ, ಸ್ವತ್ತುಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಮಳೆಗಾಲದಲ್ಲಿ ತೂಫಾನ್ ಪ್ರಾರಂಭವಾದರೂ ಮೀನುಗಾರರಿಗೆ ಮೀನುಗಾರಿಕೆಗೆ ತೆರಳು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. 4 ರಿಂದ 5 ಸಾವಿರ ಮಂದಿ ಮೀನುಗಾರರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮೀನುಗಾರರು ಬೀದಿಗೆ ಬರುವ ಸಾಧ್ಯತೆಗಳಿದ್ದು, ಮಳೆಗಾಲದ ಒಳಗಾಗಿ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಈಗ ನಿರ್ಮಿಸಲಾಗಿರುವ ಹೊರ ಬಂದರು ಕೊಚ್ಚಿ ಹೋಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
    ಈಗ ಮತ್ತು ಈ ಹಿಂದೆ ಆಡಳಿತ ನಡೆಸಿದ ಸರಕಾರಗಳು, ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಮರವಂತೆ ಬಂದರಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದ್ದು, ಬಂದರು ಹಂತ ಹಂತವಾಗಿ ಕುಸಿತಕ್ಕೊಳಗಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಂದರು ಕಾಣಲು ಸಿಗುದಿಲ್ಲ. ಮುಂದಿನ ದಿನಗಳಲ್ಲಿ ಮೀನುಗಾರರು ಗಂಗೊಳ್ಳಿ ಅಥವಾ ಭಟ್ಕಳ ಬಂದರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಹೊಂದಿಲ್ಲ. ಪ್ರತಿವರ್ಷ ಮೀನುಗಾರರು ತಮ್ಮ ದುಡಿಮೆ ಹಣದಲ್ಲೇ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ದೋಣಿ ನಿಲುಗಡೆಗೆ ಕೆರೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಮೀನುಗಾರರ ಪರಿಸ್ಥಿತಿ ತುಂಬಾ ಕಷ್ಟವಿದೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸಹಿತ ಯಾರಿದಂದಲೂ ಯಾವುದೇ ಕೆಲಸ ಆಗುತ್ತಿಲ್ಲ. ಚುನಾವಣೆ ಸಂದರ್ಭ ಕಾರ್ಯಕ್ರಮಗಳಿಗೆ ಜನ ಸೇರಿಸಲು ಮೀನುಗಾರರನ್ನು ಬಳಸಿಕೊಳ್ಳುತ್ತಾರೆಯೇ ಹೊರತು ಮೀನುಗಾರರ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಾಗೂ ಮರವಂತೆ ಬಂದರು ವಿಚಾರದಲ್ಲಿ ಸರಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದರು.
    ಮರವಂತೆ ಮೀನುಗಾರರ ಸೇವಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರ ಖಾರ್ವಿ ಮಾತನಾಡಿ, ಮೀನುಗಾರಿಕೆ ಪ್ರಾರಂಭವಾಗಿ 8 ತಿಂಗಳು ಕಳೆದಿದ್ದರೂ, ಸರಕಾರ ಈವರೆಗೆ ಕೇವಲ 360 ಲೀಟರ್ ಸೀಮೆಎಣ್ಣೆ ಮಾತ್ರ ನೀಡಿದೆ. ಪ್ರತಿ ತಿಂಗಳು 300 ಲೀಟರ್ ಸೀಮೆಎಣ್ಣೆ ನೀಡುವುದಾಗಿ ಭರವಸೆ ನೀಡಿದ್ದ ಸರಕಾರ ಸೀಮೆಎಣ್ಣೆ ನೀಡದೆ ಮೀನುಗಾರರನ್ನು ವಂಚಿಸುತ್ತಿದೆ. ಮುಖ್ಯಮಂತ್ರಿಗಳ ಸಹಿತ ಕೇಂದ್ರ ಮತ್ತು ರಾಜ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಖುದ್ದಾಗಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸರಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
    ಮರವಂತೆ ಮೀನುಗಾರರ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಮೋಹನ ಖಾರ್ವಿ, ಸೋಮಯ್ಯ ಖಾರ್ವಿ, ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ಎಂ.ಶಂಕರ ಖಾರ್ವಿ ಮಾತನಾಡಿದರು. ಮಾಜಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ಸುರೇಶ ಖಾರ್ವಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಧರ ಖಾರ್ವಿ ಸ್ವಾಗತಿಸಿ ವಂದಿಸಿದರು.
  • ಕೋಟ- ಕೃಷಿಯಿಂದ ನಷ್ಟ ಆರೋಪ ಸಲ್ಲ, ಯಾಂತ್ರಿಕ ಸಾವಯವ ಕೃಷಿಯ ಕಡೆ ಮುಖ ಮಾಡಿ – ಶಿವಮೂರ್ತಿ ಉಪಾಧ್ಯ ಕರೆ

    ಕೋಟ- ಕೃಷಿಯಿಂದ ನಷ್ಟ ಆರೋಪ ಸಲ್ಲ, ಯಾಂತ್ರಿಕ ಸಾವಯವ ಕೃಷಿಯ ಕಡೆ ಮುಖ ಮಾಡಿ – ಶಿವಮೂರ್ತಿ ಉಪಾಧ್ಯ ಕರೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೃಷಿಯಲ್ಲಿ ನಷ್ಟ ಖಂಡಿತಾ ಇಲ್ಲ ಆದರೆ ನಾವು ಕೃಷಿಯಲ್ಲಿ ಅನುಸರಿಸುವ ನೀತಿ ಬದಲಾವಣೆ ಅಗತ್ಯ ಎಂದು ಕೋಟತಟ್ಟು ಪಡುಕರೆ ಹಿರಿಯ ಕೃಷಿಕ ಕೆ. ಶಿವಮೂರ್ತಿ ಉಪಾಧ್ಯ ಹೇಳಿದರು.

    ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 24ನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಮಣೂರು ಪಡುಕರೆ ಕೃಷ್ಣ ಹಂದೆ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಯಾಂತ್ರಿಕ ಕೃಷಿ ಪದ್ಧತಿಯತ್ತ ರೈತ ಸಮುದಾಯ ಮುನ್ನುಗ್ಗಬೇಕು,ಸಾವಯವ ಕೃಷಿ ನೀತಿ ಅನುಸರಿಸಿ ಆರೋಗ್ಯವಂತ ಸಮಾಜಕ್ಕೆ ಮುನ್ನುಡಿ ಬರಯಬೇಕು ಆ ಮೂಲಕ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ ಎಂದರಲ್ಲದೆ ಕೃಷಿಗೆ ಬಗ್ಗೆ ತಾತ್ಸಾರ ಸಲ್ಲ ಬದಲಾಗಿ ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿಯಲ್ಲಿ ತೋಡಗಿಕೊಳ್ಳುವಂತೆ ಕರೆ ನೀಡಿ ಸಂಘಸಂಸ್ಥೆಗಳ ರೈತರನ್ನು ಗುರುತಿಸುವ ಕಾಯಕ ನಿಜಕ್ಕೂ ಶ್ಲಾಘನೀಯ ಕಾರ್ಯ, ಇದರಿಂದ ಇನ್ನಷ್ಟು ಜನ ಕೃಷಿಯಲ್ಲಿ ತೋಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಹಿರಿಯ ಅನುಭವಿ ಕೃಷಿಕ ಮಣೂರು ಪಡುಕರೆ ಕೃಷ್ಣ ಹಂದೆಯವರನ್ನು ಕೃಷಿ ಪರಿಕರದೊಂದಿಗೆ ಸನ್ಮಾನಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣೂರು ಭಾಸ್ಕರ ಶೆಟ್ಟಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕರಾದ ಸದಾಶಿವ ಹೊಳ್ಳ,ಹರಿಕೃಷ್ಣ ಹೊಳ್ಳ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಸಮಾಜಸೇವಕ ರಾಜಶೇಖರ ಹಂದೆ,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ,ಯುವ ಕೃಷಿಕ ಅವಿನಾಶ್ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ,ಕೋಶಾಧಿಕಾರಿ ಸವಿತಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾನಪತ್ರವನ್ನು ಪಂಚವರ್ಣದ ಸದಸ್ಯ ನಾಗೇಶ್ ಮಯ್ಯ ಮಣೂರು ವಾಚಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಪಂಚವರ್ಣ ಯುವಕ ಮಂಡಲದ ಕೇಶವ ಆಚಾರ್ಯ ವಂದಿಸಿದರು.

  • ಬೈಂದೂರು ವಿಧಾನಸಭಾ ಕ್ಷೇತ್ರ :ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ನಾಮಪತ್ರ ಸಲ್ಲಿಕೆ

    ಬೈಂದೂರು ವಿಧಾನಸಭಾ ಕ್ಷೇತ್ರ :ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬೈಂದೂರು ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ನಾಮಪತ್ರ ಸ್ವೀಕರಿಸಿದರು.

    ಈ ಸಂದರ್ಭ ಜೆಡಿಎಸ್ ಮುಖಂಡರುಗಳಾದ ಶ್ರೀಕಾಂತ್ ಅಡಿಗ, ಸಂದೇಶ್ ಭಟ್ ಉಪ್ಪುಂದ, ಜಯಶೀಲ ಶೆಟ್ಟಿ, ಮಕ್ಡ್ಯಾಮ್ ಇಸ್ಮಾಹಿಲ್, ರಿಯಾಜ್ ನಾವುಂದ, ಗಿರೀಶ್ ಮರವಂತೆ, ಯಾಸಿನ್ ಉಪ್ಪುಂದ, ವಾಹಬ್ ಇಬ್ರಾಹಿಂ ಮಾರುತಿ ಕೊಲ್ಲೂರು ಇದ್ದರು.

  • ಕುಂದಾಪುರ ವಿಧಾನಸಭಾ ಕ್ಷೇತ್ರ: ೩ ನಾಮಪತ್ರ ಸಲ್ಲಿಕೆ.

    ಕುಂದಾಪುರ ವಿಧಾನಸಭಾ ಕ್ಷೇತ್ರ: ೩ ನಾಮಪತ್ರ ಸಲ್ಲಿಕೆ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ ಕ್ಕೆ ಸಂಬಂಧಿಸಿದಂತೆ ಸೋಮವಾರದ ತನಕ ಒಟ್ಟು ೩ ನಾಮಪತ್ರಗಳು ಸಲ್ಲಿಕೆಯಾಗಿದೆ.

    ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ ಹೆಗ್ಡೆ ಮೊಳಹಳ್ಳಿ, ಬಿಜೆಪಿಯ ಅಭ್ಯರ್ಥಿಯಾಗಿ ಕಿರಣ್ ಕುಮಾರ್ ಕೊಡ್ಗಿ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ್ ದೀಪಕ್ ಮೆಂಡೋನ್ಸಾ ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಸಲು ಏಪ್ರಿಲ್ ೨೦ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ ೨೧ ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ ೨೪ ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ.