ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಡೆಸಿದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರ ಎಕ್ಸಲೆಂಟ್ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರ್ಯಾಂಕ್ ಪಡೆದಿದ್ದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿನಿ ವಾಸವಿ ಬೋಳಾರ್ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 5 ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿರುತ್ತಾಳೆ. ಸಂಸ್ಥೆಯ ವಿದ್ಯಾರ್ಥಿ ಅಮೋಘ ಶೆಟ್ಟಿ ವಾಣಿಜ್ಯ ವಿಭಾಗದಲ್ಲಿ 591 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 4ನೇ ಸ್ಥಾನ, ಟಿ. ಸ್ನೇಹ 590 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸಿ ಉಡುಪಿ ಜಿಲ್ಲೆಗೆ 5ನೇ ಸ್ಥಾನ, ಪ್ರಣಿತಾ ಅಡಿಗ 588 ಅಂಕಗಳನ್ನು ಪಡೆಯುವುದರ ಮೂಲಕ 9ನೇ ರ್ಯಾಂಕ್ ಹಾಗೂ ಶ್ರೀನಿಧಿ ಶೆಟ್ಟಿ 587 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 10ನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ ಅನುಶ್ರೀ ಶೆಟ್ಟಿ 586, ಲತಿಫಾರಫಾ 586, ಪ್ರೇರಣಾ ಪಿ. ನಾಯಕ್ 584, ಪುರುಷೋತಮ್ 579, ಪ್ರಜ್ವಲ್ ಎಸ್. ಶೆಟ್ಟಿ 578, ಸಂಪ್ರೀತ್ ಎಸ್. ಶೆಟ್ಟಿ 578, ಸಂಚಿತಾ ವೈ.ಎಮ್ 578, ಸಿಂಚುಶ್ರೀ ಎನ್ 578, ಸನ್ನಿದಿ ಶೆಟ್ಟಿ 577, ದರ್ಶಿತ್ ಗಜಾನನ ಶೆಟ್ಟಿ 576, ಹರ್ಷಿತಾ 576, ಶೆಟ್ಟಿ ವೈಷ್ಣವಿ ಭಾಸ್ಕರ್ 576, ಫವಾಝ್ ಆಹಮದ್ ಆಲಮ್ 575, ಪಲ್ಲವಿ ವಿಜಯ ಶೆಟ್ಟಿ 575, ಸ್ಮಿತಾ ಕೆ 575, ಅನುಪಮಾ 574, ಅನ್ವಿತ್ ಶೆಟ್ಟಿ 574, ಕೀರ್ತಿ ಎಸ್ 573, ನಿರಿಕ್ಷಾ ವಿ. ಶೆಟ್ಟಿ 572, ಪ್ರಜಯ್ ಚಂದ್ರಶೇಖರ್ ಗಾಣಿಗ 572, ಪ್ರಜ್ವಲ್‍ಎಮ್ 572, ಶ್ರೀಶಾ ಎಸ್ ಶೆಟ್ಟಿ 572, ಶ್ರೀನಿಧಿ ಎಸ್ 572, ಲಿಖಿತಾರವಿ ನಾಯ್ಕ್ 570, ಯಶವಂತ ಪಿ 570 ಅಂಕಗಳು ಮತ್ತು ವಾಣಿಜ್ಯ ವಿಭಾಗದಲ್ಲಿ ಲೆಖಕ್ ಯು ಶೆಟ್ಟಿ 587, ಸಫಾ 585, ಸಹನ ಎಮ್ ಶೆಟ್ಟಿ 585, ಸಹನಾ 585, ಸಮೃದ್ಧಿ ಎಸ್. ಶೆಟ್ಟಿ 584, ವೈಷ್ಣವಿ ಶೆಟ್ಟಿಗಾರ್ 583, ಸಮೀಕ್ಷಾ ಶೆಟ್ಟಿ 581, ಹೃತ್ವೀಕ್ ಎಮ್ 575, ಯಶಸ್ವಿನಿ 575, ಆಯುಷ್ 574, ದೀಕ್ಷಿತಾ 574, ಸಂಜಲಿ 574, ವಾಸವಿ ವಿ ಶೆಟ್ಟಿ 573, ಸವಿನಯ ಕೆ 571 ಅಂಕಗಳನ್ನು ಪಡೆದಿರುತ್ತಾರೆ.
ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಎರಡು ವರ್ಷಗಳ ಕಾಲ ರಾಜ್ಯದ ನಾನಾ ವಿಭಾಗಗಳ ಅನುಭವಿ ಶಿಕ್ಷಕರ ನೆರವಿನಿಂದ ಗುಣಮಟ್ಟದ ಶಿಕ್ಷಣವನ್ನು ಎಕ್ಸಲೆಂಟ್ ಪಿ.ಯು ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ನೀಡಿದ್ದು, ಇದು ಇಂದು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರಾಂಕ್ಯ್ ಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ತಿಳಿಸಿದ್ದಾರೆ. ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಎಂ.ಎಂ ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು ಅಭಿನಂದನೆ ತಿಳಿಸಿದ್ದಾರೆ.











