ಕೋಟ- ಕೃಷಿಯಿಂದ ನಷ್ಟ ಆರೋಪ ಸಲ್ಲ, ಯಾಂತ್ರಿಕ ಸಾವಯವ ಕೃಷಿಯ ಕಡೆ ಮುಖ ಮಾಡಿ – ಶಿವಮೂರ್ತಿ ಉಪಾಧ್ಯ ಕರೆ

0
245

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೃಷಿಯಲ್ಲಿ ನಷ್ಟ ಖಂಡಿತಾ ಇಲ್ಲ ಆದರೆ ನಾವು ಕೃಷಿಯಲ್ಲಿ ಅನುಸರಿಸುವ ನೀತಿ ಬದಲಾವಣೆ ಅಗತ್ಯ ಎಂದು ಕೋಟತಟ್ಟು ಪಡುಕರೆ ಹಿರಿಯ ಕೃಷಿಕ ಕೆ. ಶಿವಮೂರ್ತಿ ಉಪಾಧ್ಯ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 24ನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಮಣೂರು ಪಡುಕರೆ ಕೃಷ್ಣ ಹಂದೆ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಯಾಂತ್ರಿಕ ಕೃಷಿ ಪದ್ಧತಿಯತ್ತ ರೈತ ಸಮುದಾಯ ಮುನ್ನುಗ್ಗಬೇಕು,ಸಾವಯವ ಕೃಷಿ ನೀತಿ ಅನುಸರಿಸಿ ಆರೋಗ್ಯವಂತ ಸಮಾಜಕ್ಕೆ ಮುನ್ನುಡಿ ಬರಯಬೇಕು ಆ ಮೂಲಕ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ ಎಂದರಲ್ಲದೆ ಕೃಷಿಗೆ ಬಗ್ಗೆ ತಾತ್ಸಾರ ಸಲ್ಲ ಬದಲಾಗಿ ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿಯಲ್ಲಿ ತೋಡಗಿಕೊಳ್ಳುವಂತೆ ಕರೆ ನೀಡಿ ಸಂಘಸಂಸ್ಥೆಗಳ ರೈತರನ್ನು ಗುರುತಿಸುವ ಕಾಯಕ ನಿಜಕ್ಕೂ ಶ್ಲಾಘನೀಯ ಕಾರ್ಯ, ಇದರಿಂದ ಇನ್ನಷ್ಟು ಜನ ಕೃಷಿಯಲ್ಲಿ ತೋಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

Click Here

ಕಾರ್ಯಕ್ರಮದಲ್ಲಿ ಹಿರಿಯ ಅನುಭವಿ ಕೃಷಿಕ ಮಣೂರು ಪಡುಕರೆ ಕೃಷ್ಣ ಹಂದೆಯವರನ್ನು ಕೃಷಿ ಪರಿಕರದೊಂದಿಗೆ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣೂರು ಭಾಸ್ಕರ ಶೆಟ್ಟಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕರಾದ ಸದಾಶಿವ ಹೊಳ್ಳ,ಹರಿಕೃಷ್ಣ ಹೊಳ್ಳ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಸಮಾಜಸೇವಕ ರಾಜಶೇಖರ ಹಂದೆ,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ,ಯುವ ಕೃಷಿಕ ಅವಿನಾಶ್ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ,ಕೋಶಾಧಿಕಾರಿ ಸವಿತಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾನಪತ್ರವನ್ನು ಪಂಚವರ್ಣದ ಸದಸ್ಯ ನಾಗೇಶ್ ಮಯ್ಯ ಮಣೂರು ವಾಚಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಪಂಚವರ್ಣ ಯುವಕ ಮಂಡಲದ ಕೇಶವ ಆಚಾರ್ಯ ವಂದಿಸಿದರು.

Click Here

LEAVE A REPLY

Please enter your comment!
Please enter your name here