Category: ಸುದ್ದಿ

  • ವಂಡ್ಸೆ :ಸಂಘಟನೆಗಳು ಸಮಾಜಮುಖಿಯಾಗಿರಬೇಕು – ಕೆ.ಗೋಪಾಲ ಪೂಜಾರಿ

    ವಂಡ್ಸೆ :ಸಂಘಟನೆಗಳು ಸಮಾಜಮುಖಿಯಾಗಿರಬೇಕು – ಕೆ.ಗೋಪಾಲ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸಂಘಟನೆಗಳು ಸಮಾಜಮುಖಿಯಾಗಿ ತೊಡಗಿಸಿಕೊಂಡಾಗ ಬದಲಾವಣೆಗೆ ಸಾಧ್ಯವಾಗುತ್ತದೆ. ಸ್ಥಳೀಯ ಪ್ರದೇಶದ ನೋವು-ನಲಿವುಗಳಿಗೆ ಸ್ಪಂದಿಸುವ ಕೆಲಸವನ್ನು ಅಲ್ಲಿನ ಸಂಘಟನೆಗಳು ಮಾಡಬೇಕು. ಅರಿವು, ಮಾರ್ಗದರ್ಶನ, ಪ್ರತಿಭೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸಂಘಟಿತವಾದ ಒಗ್ಗಟ್ಟನ್ನು ಹೊಂದಿರಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

    ವಂಡ್ಸೆ ಆತ್ರಾಡಿಯ ಮಾತೃಭೂಮಿ ಯುವ ಸಂಘಟನೆ ಆತ್ರಾಡಿ-ವಂಡ್ಸೆ ಇದರ ವಾರ್ಷಿಕೋತ್ಸವ ಪ್ರಯುಕ್ತ ಯುವ ಸಂಗಮ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಾತೃಭೂಮಿ ಯುವ ಸಂಘಟನೆಯ ಅಧ್ಯಕ್ಷ ಪ್ರಸಾದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಆತ್ರಾಡಿ ಸ.ಕಿ.ಪ್ರಾ.ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ತೇಜಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಬಹುಮಾನ ವಿತರಿಸಿದರು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಮಂಜರು ಮಾರಣಕಟ್ಟೆ, ತಾ.ಪಂ. ಮಾಜಿ ಸದಸ್ಯರಾದ ಉದಯ ಜಿ.ಪೂಜಾರಿ, ವಂಡ್ಸೆ ಸಿ.ಎ ಬ್ಯಾಂಕ್ ನಿರ್ದೇಶಕ ಸಂಜೀವ ಪೂಜಾರಿ ವಂಡ್ಸೆ, ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಆಡಳಿತ ಮೊಕ್ತೇಸರರಾದ ಚಂದ್ರಯ್ಯ ಆಚಾರ್ಯ ಕಳಿ, ಅರಣ್ಯ ಇಲಾಖಯ ಉಡುಪಿ ‘ಸ್ಕ್ವಾಡ್ ವಿಭಾಗ’ದ ಉಪವಲಯ ಅರಣ್ಯಾಧಿಕಾರಿ ಕರುಣಾಕರ ಜೆ.ಆಚಾರ್ಯ, ರಾಧಾ ದೇವಾಡಿಗ ಅಡಿಕೆಕೊಡ್ಲು, ಬ್ರಹ್ಮಲಿಂಗೇಶ್ವರ ದೇವಸ್ಥಾನ ಆತ್ರಾಡಿ ಇದರ ಆಡಳಿತ ಮೊಕ್ತೇಸರ ಡಾ| ಕುಸುಮಾಕರ ಶೆಟ್ಟಿ, ವಂಡ್ಸೆ ಗ್ರಾ.ಪಂ. ಸದಸ್ಯ ಗೋವರ್ಧನ್ ಜೋಗಿ, ವಂಡ್ಸೆ ಗ್ರಾ.ಪಂ. ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ, ಮಾತೃಭೂಮಿ ಯುವ ಸಂಘಟನೆಯ ಗೌರವಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಕಲ್ಮಾಡಿ, ಕಾರ್ಯದರ್ಶಿ ಚಂದ್ರ ಕೊಲ್ಲಣ್ಕೆ ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ 2021-22ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶ್ವೇತಾ ಹೆಸಿನಗದ್ದೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುರೇಶ ಮೊಗವೀರ ಆತ್ರಾಡಿ ಇವರಿಗೆ ವೈದ್ಯಕೀಯ ನೆರವು ನೀಡಲಾಯಿತು.

    ದಿವ್ಯಾಶ್ರೀ ಪ್ರಾರ್ಥಿಸಿದರು. ಮಾತೃಭೂಮಿ ಯುವ ಸಂಘಟನೆ ಮಾಜಿ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು ಸ್ವಾಗತಿಸಿದರು. ಮಾತೃಭೂಮಿ ಯುವ ಸಂಘಟನೆಯ ಗೌರವ ಸಲಹೆಗಾರರಾದ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಠಲ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಮಾಜಿ ಕಾರ್ಯದರ್ಶಿ ರಾಜು ಪೂಜಾರಿ ಅರೆಕಲ್ಲುಮನೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉದಯ ಅಂಗಡಿಮನೆ ಹೊಸ ಸದಸ್ಯರ ಪಟ್ಟಿ ವಾಚಿಸಿದರು. ಶಂಕರ ಆಚಾರ್ಯ ಸಾಧಕ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಸಂಘಟನೆಯ ಮಹಾಪೋಷಕರು, ಪ್ರೋತ್ಸಾಹಕರನ್ನು ಗೌರವಿಸಲಾಯಿತು. ಶಂಕರ ಆಚಾರ್ಯ ಆತ್ರಾಡಿ ವಂದಿಸಿದರು. ಸ್ಥಾಪಕ ಅಧ್ಯಕ್ಷ ಗಣೇಶ ದೇವಾಡಿಗ ಅಡಿಕೆಕೊಡ್ಲು ಕಾರ್ಯಕ್ರಮ ನಿರ್ವಹಿಸಿದರು.

    ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಸಾಂಸ್ಕøತಿಕ ತಂಡ ಮಂಗಳೂರು ಇವರಿಂದ ನೃತ್ಯ ವೈಭವ, ಪರಮಪದ್ಮ ಕಲಾವಿದರು ಮಂಗಳೂರು ಇವರಿಂದ ‘ಶಿವಪ್ರಸಾದ ಬೊಬ್ಬರ್ಯ’ ನಾಟಕ ಪ್ರದರ್ಶನಗೊಂಡಿತು.

  • ಕೋಡಿ ಕನ್ಯಾಣ – ವೀಣಾ ಪ್ರಸನ್ನ ಶಾನುಭೋಗ್ ಶ್ರೀ ಶಾಂತಿಮತೀ ಪ್ರತಿಷ್ಠಾನದ ಗೌರವ

    ಕೋಡಿ ಕನ್ಯಾಣ – ವೀಣಾ ಪ್ರಸನ್ನ ಶಾನುಭೋಗ್ ಶ್ರೀ ಶಾಂತಿಮತೀ ಪ್ರತಿಷ್ಠಾನದ ಗೌರವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮನಡೆ ತಿಂಗಳ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಮಾ.28ರಂದು ನಡೆಯಿತು.

    ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರೊಜೆಕ್ಟ್ ನ ಭಜನಾ ತರಬೇತುದಾರರಾದ ಇವರು ಸುಮಾರು 25 ಕ್ಕೂ ಹೆಚ್ಚು ತಂಡಗಳಿಗೆ ಭಜನೆ ತರಬೇತಿಯನ್ನು ನೀಡುತ್ತಿದ್ದು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಸಾರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನಲ್ಲೆಯಲ್ಲಿ ಶಾಂತೀಮತಿ ಪ್ರತಿಷ್ಠಾನದ ಮಾರ್ಚ್ ತಿಂಗಳ ಸಾಧಕಿಯಾಗಿ ವೀಣಾ ಪ್ರಸನ್ನ ಶಾನುಭೋಗ್ ಇವರನ್ನು ಗೌರವಿಸಲಾಯಿತು.

    ಹೊಟೇಲ್ ಶಿವಳ್ಳಿ ವೆಜ್‍ನ ಮಾಲಿಕರಾದ ಗಣೇಶ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಸನ್ನಾ ಶಾನುಬೋಗ್ ವಿಷ್ಣುಮಂಗಲ, ಪ್ರತಿಷ್ಠಾನದ ಮಾಜಿ ಅಧ್ಯಕ್ಷ ದಯಾನಂದ ವಾರಂಬಳ್ಳಿ, ವನಿತಾ ಉಪಾಧ್ಯಾಯ ಹಾಗೂ ವೀಣಾ ಪ್ರಸನ್ನ ಶಾನುಭೋಗ್ ಇವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ವಿದ್ವಾನ್ ಡಾ| ವಿಜಯ ಮಂಜರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಲಕ್ಷ್ಮೀ ಭಟ್ ಪ್ರಾರ್ಥಿಸಿ, ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಧನ್ಯವಾದಗೈದರು.

  • ಪಾರಂಪಳ್ಳಿ – ಶ್ರೀ ಮಹಾವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮ, ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

    ಪಾರಂಪಳ್ಳಿ – ಶ್ರೀ ಮಹಾವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮ, ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ಮಹಾ ವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಶ್ರೀ ರಾಮ ಭಜನಾ ಶತಮಾನೋತ್ಸವ, ಅಖಂಡ ಭಜನಾ ಸಪ್ತಾಹ, ಶ್ರೀ ರಾಮಭಜನಾ ವಸಂತೋತ್ಸವ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ಗುರುವಾರ ಚಾಲನೆಗೊಂಡಿತು.

    ಅಖಂಡ ಭಜನೋತ್ಸವವನ್ನು ಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷ ಪಿ ರಾಮಚಂದ್ರ ಉಪಾಧ್ಯಾಯ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

    ಮಾ.22ರಿಂದ ಮೊದಲ್ಗೊಂಡು ಮಾ.29 ರವರೆಗೆ ಪ್ರತಿ ನಿತ್ಯ ಭಜನೆ 6-30 ರಿಂದ 9-30ರ ವರೆಗೆ ನಡೆಯುವ ಶ್ರೀ ರಾಮ ಭಜನೆ, ವಸಂತೋತ್ಸವ,ಶ್ರೀರಾಮನವಮಿ ಗುರುವಾರದಂದು ಮಾ.30ರಿಂದ ಎ.6ರ ವರೆಗೆ ಅಖಂಡ ಭಜನಾ ಸಪ್ತಾಹ ,ಮಹಾ ಅನ್ನಸಂತರ್ಪಣೆ, ದೀಪ ಸ್ಥಾಪನೆ, ಅಖಂಡ ಭಜನೆ ಆರಂಭಿಕ ದಿನದಿಂದ ರಾತ್ರಿ 10.30 ಗಂಟೆಗೆ ಮಹಾಮಂಗಳಾರತಿ ಮತ್ತು,ಶ್ರೀ ಮಹಾವಿಷ್ಣು ದೇವರಿಗೆ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಜನಾ ಸಂಘದ ಗೌರವಾಧ್ಯಕ್ಷರಾದ ಯಜ್ಞನಾರಾಯಣ ಹೇರ್ಳೆ, ಶ್ರೀನಿವಾಸ ಹೇರ್ಳೆ ಉಪಾಧ್ಯಕ್ಷರಾದ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ, ಕಾರ್ಯದರ್ಶಿ ಸೀತಾರಾಮ್ ಐತಾಳ್, ಜೊತೆಕಾರ್ಯದರ್ಶಿ ಲಕ್ಷ್ಮೀನಾರಾಯಣ ಅಡಿಗ, ಕೋಶಾಧಿಕಾರಿ ಚಂದ್ರಶೇಖರ ಕಾರಂತ್, ಆಂತರಿಕ ಲೆಕ್ಕಪರಿಶೋಧಕ ಸಚಿನ್ ಹೇರ್ಳೆ ,ಕಾರ್ಯಕಾರಿ ಮಂಡಳಿಯ ಸದಸ್ಯರಾದ ಚಂದ್ರಶೇಖರ ಅಡಿಗ, ರಘು ಮಧ್ಯಸ್ಥ, ಸೂರ್ಯನಾರಾಯಣ ಹೇರ್ಳೆ, ಆನಂದರಾಮ ಹೇರ್ಳೆ,ರಾಘವೇಂದ್ರ ಹೊಳ್ಳ, ಜನಾರ್ದನ ಹೇರ್ಳೆ, ಶ್ರೀನಿವಾಸ್ ಉಪಾಧ್ಯಾಯ, ಸೂರ್ಯನಾರಾಯಣ ಉಪಾಧ್ಯಾಯ, ಶಶಾಂಕ್ ಐತಾಳ್, ರಾಧಕೃಷ್ಣ ಅಡಿಗ, ಪ್ರಶಾಂತ್ ಹೇರ್ಳೆ, ಮಾಲತಿ ಅಡಿಗ, ಅಧ್ಯಕ್ಷರು ಪದಾಧಿಕಾರಿಗಳು ಮ.ಮಹಿಳಾ ಭಜನಾ ಸಂಘ ಪಾರಂಪಳ್ಳಿ ಇತರರು ಉಪಸ್ಥಿತರಿದ್ದರು.

    ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೆರಿತು.

  • ಶ್ರೀ ಭಗವತ್ ಭಜನಾ ಮಂದಿರದ ಶ್ರೀರಾಮನಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಣೆ, ಶ್ರೀರಾಮನವಮಿ ವಿಶೇಷ ಪೂಜಾ ಕಾರ್ಯಕ್ರಮ

    ಶ್ರೀ ಭಗವತ್ ಭಜನಾ ಮಂದಿರದ ಶ್ರೀರಾಮನಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಣೆ, ಶ್ರೀರಾಮನವಮಿ ವಿಶೇಷ ಪೂಜಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ..

    ಕೋಟ: ಶ್ರೀ ತಿರುಪತಿ ದಾಸಸಾಹಿತ್ಯ ನೊಂದಾಯಿತ ಇಲ್ಲಿನ ಕೋಟತಟ್ಟು ಪಡುಕರೆ ರಾಮಾಮೃತ ಭಜನಾ ಸಂಘ ಇದರ ವತಿಯಿಂದ ಶ್ರೀ ರಾಮ ನವಮಿ ಅಂಗವಾಗಿ ಪಡುಕರೆಯ ಭಗವತ್ ಭಜನಾ ಮಂದಿರದ ಶ್ರೀ ರಾಮ ದೇವರಿಗೆ ಬೆಳ್ಳಿ ಪ್ರಭಾವಳಿ ಸಮರ್ಪಣೆ ಗುರುವಾರ ವಿಜೃಂಭಣೆಯಿಂದ ನಡೆಯಿತು.

    ಪೂರ್ವಾಹ್ನ ಕೋಟತಟ್ಟು ಪಡುಕರೆ ಸದ್ಯೋಜಾತ ದೇವಳದಿಂದ ಕಳಶ ಕುಂಭ ಮೆರವಣಿಗೆ ಮೂಲಕ ಶ್ರೀ ರಾಮದೇಗುಲಕ್ಕೆ ತರಲಾಯಿತು.

    ಶ್ರೀ ದೇವರಿಗೆ ಅರ್ಪಿಸಿ ದೇಗುಲದ ತಂತ್ರಿಗಳಾದ ವೇ.ಮೂ ಮಧುಸೂಧನ ಬಾಯರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು.

    ಭಗವತ್ ಭಜನಾ ಮಂದಿರದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಮಾನಂದ ಮೆಂಡನ್, ಅರ್ಚಕ ಬಾಬು ಪೂಜಾರಿ, ಶ್ರೀರಾಮಾಮೃತ ಭಜನಾ ಸಂಘದ ಪದಾಧಿಕಾರಿಗಳು, ಉದ್ಯಮಿ ಬಿಜು ನಾಯರ್, ಕುಶಲಕರ್ಮಿ ಶ್ರೀಕಾಂತ್ ಆಚಾರ್ಯ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು. ಮಹಾಮಂಗಳಾರತಿ, ಭಜನಾ ಕಾರ್ಯಕ್ರಮ, ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ನೆರವೆರಿತು.

  • ಕೊಮೆ – ಕೊರವಡಿಯಲ್ಲಿ ರಾಮನವಮಿ ವಿಶೇಷ ಕಾರ್ಯಕ್ರಮ

    ಕೊಮೆ – ಕೊರವಡಿಯಲ್ಲಿ ರಾಮನವಮಿ ವಿಶೇಷ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ತೆಕ್ಕಟ್ಟೆ: ಕೊಮೆ-ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರದಲ್ಲಿ ಗುರುವಾರ ಶ್ರೀ ರಾಮನವಮಿ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ರಾಮನವಮಿ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ನಗರ ಭಜನೆಯ ಪ್ರಯುಕ್ತ ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ, ದೀಪ ಸ್ಥಾಪನಾಪೂರ್ವಕಾ ಭಜನೆಯೊಂದಿಗೆ ಸ್ಥಳೀಯ ಭಜನಾ ಮಂಡಳಿಯವರಿಂದ ಸಮೂಹ ಭಜನೆ ರಾಮನಾಮ ಸಂಕೀರ್ತನೆಗಳು ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

    ಕೊಮೆ ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ಎಸ್ ವಿಠಲ ಅನಂತ ಪೈ ಸಾಲಿಗ್ರಾಮ, ಕಾರ್ಯದರ್ಶಿ ರಾಜು ಪೂಜಾರಿ, ಕೊಮೆ ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂಡಳಿ ಅಧ್ಯಕ್ಷ ಕೆ.ಚಂದ್ರ ಕಾಂಚನ್, ಕೊಮೆ ಕೊರವಡಿ ಬೊಬ್ಬರ್ಯ ಮತ್ತು ಹಳೆಯಮ್ಮ ಪರಿವಾರ ದೈವಸ್ಥಾನದ ಮುಕ್ತೇಸರ ಕೆ.ಅಶೋಕ್ ಹತ್ವಾರ್,ಸಮಿತಿಯ ಉಮೇಶ್ ಮೆಂಡನ್, ಜೀರ್ಣೋದ್ಧಾರ ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು, ಕೊಮೆ-ಕೊರವಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

     

  • ಸಾಸ್ತಾನ – ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ವಿಜಯ ಪೂಜಾರಿ ಐರೋಡಿ ಆಯ್ಕೆ

    ಸಾಸ್ತಾನ – ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ವಿಜಯ ಪೂಜಾರಿ ಐರೋಡಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಸಾಸ್ತಾನ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ವಿಜಯ ಪೂಜಾರಿ ಐರೋಡಿ ಆಯ್ಕೆಗೊಂಡಿದ್ದಾರೆ.

    ಉಪಾಧ್ಯಕ್ಷರಾಗಿ ಪ್ರವೀಣ್ ಡಿಸೋಜ ಕುದ್ರು, ಕಾರ್ಯದರ್ಶಿಯಾಗಿ ಬಾಸ್ಕರ ಪುತ್ರನ್ ಪಾತಾಳಬೆಟ್ಟು, ಉಪಕಾರ್ಯದರ್ಶಿಯಾಗಿ ಶಿವರಾಜ್ ಪೂಜಾರಿ ಹೆಬ್ಬಾರ್‍ಬೆಟ್ಟು, ಖಜಾಂಜಿಯಾಗಿ ರಾಘವೇಂದ್ರ ಪೂಜಾರಿ ಪಾಂಡೇಶ್ವರ, ಆಯ್ಕೆಯಾಗಿದ್ದಾರೆ.

  • ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ; ಮೇ 10ರಂದು ಏಕ ಹಂತದ ಚುನಾವಣೆ, ಮೇ 13ಕ್ಕೆ ಫಲಿತಾಂಶ – ಇಂದಿನಿಂದಲೇ ನೀತಿ ಸಂಹಿತೆ ಜಾರಿ

    ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ; ಮೇ 10ರಂದು ಏಕ ಹಂತದ ಚುನಾವಣೆ, ಮೇ 13ಕ್ಕೆ ಫಲಿತಾಂಶ – ಇಂದಿನಿಂದಲೇ ನೀತಿ ಸಂಹಿತೆ ಜಾರಿ

    ಕುಂದಾಪುರ ಮಿರರ್ ಸುದ್ದಿ…

    ನವದೆಹಲಿ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಯಾವಾಗ ಎನ್ನುವ ಪ್ರಶ್ನೆಗೆ ಇಂದು ತೆರೆ ಬಿದ್ದಿದೆ. ರಾಜ್ಯದ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತು ಮಾಹಿತಿ ನೀಡಿದರು.

    ರಾಜ್ಯದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಏಕ ಹಂತದಲ್ಲಿ ಮೇ 10 2023 ರಂದು ಬುಧವಾರ ಮತದಾನ ನಡೆಯಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಮೇ 13 ರಂದು ಮತ ಎಣಿಕೆ ನಡೆಯಲಿದೆ.

    ರಾಜ್ಯದ 224 ಕ್ಶೇತ್ರಗಳಿಗೆ ಚುನಾವಣೆ ನಡೆಯಲಿದ್ದು , ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಮೇ 24ಕ್ಕೆ ಪ್ರಸಕ್ತ ಸರ್ಕಾರದ ಅಧಿಕಾರವಧಿ ಮುಗಿಯಲಿದೆ.

    ವಿಧಾನಸಭೆಯಲ್ಲಿ 224 ಸ್ಥಾನಗಳನ್ನು ಹೊಂದಿರುವ ಕರ್ನಾಟಕವು ಪ್ರಸ್ತುತ ಆಡಳಿತಾರೂಢ ಬಿಜೆಪಿಯು 119 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 75 ಮತ್ತು ಜೆಡಿಎಸ್ 28 ಸ್ಥಾನಗಳನ್ನು ಹೊಂದಿದೆ.

    ಕರ್ನಾಟಕದಲ್ಲಿ ಈ ಬಾರಿ 5 ಕೋಟಿ 21 ಲಕ್ಷ ಮತದಾರರಿದ್ದಾರೆ, ಈ ಪೈಕಿ 12.15 ಲಕ್ಷ ಯುವ ಮತದಾರರಿದ್ದಾರೆ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

  • ಮಣೂರು ಫ್ರೆಂಡ್ಸ್ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

    ಮಣೂರು ಫ್ರೆಂಡ್ಸ್ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮಣೂರು ಫ್ರೆಂಡ್ಸ್ ಮಣೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಇದೇ ಬರುವ ಎ.4ರಂದು ಶ್ರೀ ಮಣೂರು ಹೇರಂಬ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದೆ.

    ಮಣೂರು ಫ್ರೆಂಡ್ಸ್ ಮಣೂರು ಇದರ ಗೌರವಾಧ್ಯಕ್ಷ ಸುರೇಶ್ ಆಚಾರ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

    ಈ ಸಂದರ್ಭದಲ್ಲಿ ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಟ್ರಸ್ಟಿ ಕೃಷ್ಣ ದೇವಾಡಿಗ, ದೇವಳದ ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಅರುಣಾಚಲ ಮಯ್ಯ, ಭಾರತಿ ವಿ ಮಯ್ಯ, ಎಂ.ಎನ್ ಮಧ್ಯಸ್ಥ, ಶಿವರಾಮ್ ಶೆಟ್ಟಿ, ನಾಗರಾಜ್ ಅಮೀನ್ ,ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರರಾದ ಸುಧಾಕರ್ ಆಚಾರ್ಯ, ಗಣೇಶ್ ಆಚಾರ್ಯ, ರವಿಚಂದ್ರ ಆಚಾರ್ಯ, ರಾಘವೇಂದ್ರ ಆಚಾರ್ಯ ಇದ್ದರು.

  • ಮಣೂರು – ಎ.3ರಿಂದ 8 ತನಕ ಮಣೂರು ಶ್ರೀ ಹೇರಂಬ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಸಡಗರ

    ಮಣೂರು – ಎ.3ರಿಂದ 8 ತನಕ ಮಣೂರು ಶ್ರೀ ಹೇರಂಬ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಸಡಗರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಹೇರಂಬ ಮಹಾಗಣಪತಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ಮಣೂರು ಇದರ ವಾರ್ಷಿಕ ಜಾತ್ರಾ ಸಡಗರ ಇದೇ ಬರುವ ಎ.3 ರಿಂದ 8ತನಕ ಶ್ರೀ ದೇವಳದಲ್ಲಿ ಧಾರ್ಮಿಕ,ಸಾಂಸ್ಕೃತಿಕ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಆ ಪ್ರಯುಕ್ತ ರಥೋತ್ಸವದ ಹಿನ್ನಲೆಯಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡು ಮಾ. 4 ಮಂಗಳವಾರದಂದು ಪ್ರಾತಃ ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರಾ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ಸಂಜೆ : ಬಲಿ, ವಾಸ್ತು ರಾಕೋಘ್ನ ಹೋಮ, ರಟ್ಟು ಬಂಧನ, ಉತ್ಸವಬಲಿ,5 ಬುಧವಾರ ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರ ಪಾಲ ಪೂಜೆ, ಮಹಾಪೂಜೆ,ಮಾ.6ನೇ ಗುರುವಾರ ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ರಥಶುದ್ದಿಹೋಮ, ರಥ ಪೂಜೆ, ರಥಾರೋಹಣ ಬಲಿ ಮಧ್ಯಾಹ್ನ 12.15ಕ್ಕೆ ಶುಭಲಗ್ನದಲ್ಲಿ ರಥಾರೋಹಣ ಅಪರಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ,ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ಕಾರ್ಯಕ್ರಮ ಹಾಗೂ ರಥೋತ್ಸವದ ವಿಶೇಷ ಆಕರ್ಷಣೆಗಳು ಕೀಲುಕುದುರೆ, ಡೊಳ್ಳುಕುಣಿತ, ಚಂಡೆವಾದನ,ಬ್ಯಾಂಡ್‍ಸೆಟ್, ಹುಲಿವೇಷ ಹಾಗೂ ಸಿಡಿಮದ್ದು ಪ್ರದರ್ಶನ, ಮಾ.7ನೇ ಶುಕ್ರವಾರ
    ಪ್ರಭೋದೋತ್ಸವ, ಅಷ್ಟಾವಧಾನ ಸೇವೆ, ಹೋಮ, ಕಲಶಾಭಿಷೇಕ ಪೂಜೆಗಳು ಸಂಜೆ : ಸಂಹಾರ ಬಲಿ, ಚೂರ್ಣೋತ್ಸವ ಅವಭ್ರತೆ, ಪೂರ್ಣಾಹುತಿ ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿದ್ದು

    ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಮಾ.3ನೇ ಸೋಮವಾರ ಸಂಜೆ 6.30ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟನೆ,ಸಂಜೆ 7 ಕ್ಕೆ ಗೋಪಾಲ ಕೃಷ್ಣಮಯ್ಯ, ಹರ್ತಟ್ಟು ಪ್ರಾಯೋಜನೆಯಲ್ಲಿ ಛಾಯ ತರಂಗಿಣಿ ಸಂಗೀತ ಶಾಲೆ ಇವರಿಂದ ನಾದ ಸಂಗೀತ ಲಹರಿ,ಮಾ.4ರಂದು ಮಣೂರು ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಚೇತನ್ ನೈಲಾಡಿ ಇವರ ನೇತ್ರತ್ವದ ಕಲಾಚಿಗುರು ಹೆಂಗ್ಸರ್ ಪಂಚೇತಿ,ಓಂಕಾರ್ ಕಲಾವಿದರು ಕಣ್ಣುಕೆರೆ ಇವರಿಂದ ನಾಟಕ ಅಗೋಚರ,ಮಾ.5ರಂದುಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ ಶುಕ್ರನಂದನೆ ಮಾ.6 ಗುರುವಾರ ಬೆಳಿಗ್ಗೆ 11.00 ಕ್ಕೆ ಶ್ರೀ ರಾಜೇಶ್ ಭಟ್, ತುಳು ಚಲನಚಿತ್ರ ಸಂಗೀತ ನಿರ್ದೇಶಕರು, ಮೂಡಬಿದ್ರೆ ಇವರಿಂದ ಭಕ್ತಿಗಾನ ಸುಧೆ ,ಸಂಜೆ 5.00 ರಿಂದ ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರಿಂದ ಭಜನಾ ಜರಗಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಪಾರಂಪಳ್ಳಿ- ಶ್ರೀ ಮಹಾವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮ ,ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಆಯೋಜನೆ

    ಪಾರಂಪಳ್ಳಿ- ಶ್ರೀ ಮಹಾವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮ ,ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಆಯೋಜನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ಮಹಾ ವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಶ್ರೀ ರಾಮ ಭಜನಾ ಶತಮಾನೋತ್ಸವ, ಅಖಂಡ ಭಜನಾ ಸಪ್ತಾಹ , ಶ್ರೀ ರಾಮಭಜನಾ ವಸಂತೋತ್ಸವ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿದೆ. ಇದೇ ಮಾ.22ರಿಂದ ಮೊದಲ್ಗೊಂಡು ಮಾ.29 ರವರೆಗೆ ಪ್ರತಿ ನಿತ್ಯ ಭಜನೆ 6-30 ರಿಂದ 9-30ರ ವರೆಗೆ ನಡೆಯುವ ಶ್ರೀ ರಾಮ ಭಜನೆ, ವಸಂತೋತ್ಸವ,ಶ್ರೀರಾಮನವಮಿ ಗುರುವಾರದಂದು ಮಾ.30ರಿಂದ ಎ.6ರ ವರೆಗೆ ಅಖಂಡ ಭಜನಾ ಸಪ್ತಾಹ ,ಮಹಾ ಅನ್ನಸಂತರ್ಪಣೆ, ದೀಪ ಸ್ಥಾಪನೆ, ಅಖಂಡ ಭಜನೆ ಪ್ರಾರಂಭ ಪ್ರತಿದಿನ ರಾತ್ರಿ 10.30 ಗಂಟೆಗೆ ಮಹಾಮಂಗಳಾರತಿ ಮತ್ತು ವಸಂತೋತ್ಸವ,ಶ್ರೀ ಮಹಾವಿಷ್ಣು ದೇವರಿಗೆ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಮಾ.6 ಗುರುವಾರ ಸಂಜೆ 4.ಗ ರಿಂದ ನಾದಲಹರಿ ದಿ| ಶ್ರೀ ಪಿ. ರಾಮಚಂದ್ರ ಐತಾಳರ ಶಿಷ್ಯ-ಶಿಷ್ಯಯರಿಂದ ಸ. 5.00 ರಿಂದ ರಂಗಪೂಜೆ ಗಂಟೆ 6.00 ರಿಂದ ಧಾರ್ಮಿಕ ಸಭಾಕಾರ್ಯಕ್ರಮ
    ರಾತ್ರಿ7.00 ರಿಂದ ಶ್ರೀ ವಿದ್ಯಾಭೂಷಣ ಇವರಿಂದ ಭಕ್ತಿರಸಸಂಜೆ ನಡೆಯಲಿದೆ ಎಂದು ಭಜನಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.