ಕುಂದಾಪುರ ಮಿರರ್ ಸುದ್ದಿ…
ತೆಕ್ಕಟ್ಟೆ: ಕೊಮೆ-ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರದಲ್ಲಿ ಗುರುವಾರ ಶ್ರೀ ರಾಮನವಮಿ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ರಾಮನವಮಿ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ನಗರ ಭಜನೆಯ ಪ್ರಯುಕ್ತ ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ, ದೀಪ ಸ್ಥಾಪನಾಪೂರ್ವಕಾ ಭಜನೆಯೊಂದಿಗೆ ಸ್ಥಳೀಯ ಭಜನಾ ಮಂಡಳಿಯವರಿಂದ ಸಮೂಹ ಭಜನೆ ರಾಮನಾಮ ಸಂಕೀರ್ತನೆಗಳು ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕೊಮೆ ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ಎಸ್ ವಿಠಲ ಅನಂತ ಪೈ ಸಾಲಿಗ್ರಾಮ, ಕಾರ್ಯದರ್ಶಿ ರಾಜು ಪೂಜಾರಿ, ಕೊಮೆ ಕೊರವಡಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂಡಳಿ ಅಧ್ಯಕ್ಷ ಕೆ.ಚಂದ್ರ ಕಾಂಚನ್, ಕೊಮೆ ಕೊರವಡಿ ಬೊಬ್ಬರ್ಯ ಮತ್ತು ಹಳೆಯಮ್ಮ ಪರಿವಾರ ದೈವಸ್ಥಾನದ ಮುಕ್ತೇಸರ ಕೆ.ಅಶೋಕ್ ಹತ್ವಾರ್,ಸಮಿತಿಯ ಉಮೇಶ್ ಮೆಂಡನ್, ಜೀರ್ಣೋದ್ಧಾರ ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು, ಕೊಮೆ-ಕೊರವಡಿ ಗ್ರಾಮಸ್ಥರು ಉಪಸ್ಥಿತರಿದ್ದರು.











