ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಹೇರಂಬ ಮಹಾಗಣಪತಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ಮಣೂರು ಇದರ ವಾರ್ಷಿಕ ಜಾತ್ರಾ ಸಡಗರ ಇದೇ ಬರುವ ಎ.3 ರಿಂದ 8ತನಕ ಶ್ರೀ ದೇವಳದಲ್ಲಿ ಧಾರ್ಮಿಕ,ಸಾಂಸ್ಕೃತಿಕ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಆ ಪ್ರಯುಕ್ತ ರಥೋತ್ಸವದ ಹಿನ್ನಲೆಯಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡು ಮಾ. 4 ಮಂಗಳವಾರದಂದು ಪ್ರಾತಃ ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರಾ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ಸಂಜೆ : ಬಲಿ, ವಾಸ್ತು ರಾಕೋಘ್ನ ಹೋಮ, ರಟ್ಟು ಬಂಧನ, ಉತ್ಸವಬಲಿ,5 ಬುಧವಾರ ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರ ಪಾಲ ಪೂಜೆ, ಮಹಾಪೂಜೆ,ಮಾ.6ನೇ ಗುರುವಾರ ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ರಥಶುದ್ದಿಹೋಮ, ರಥ ಪೂಜೆ, ರಥಾರೋಹಣ ಬಲಿ ಮಧ್ಯಾಹ್ನ 12.15ಕ್ಕೆ ಶುಭಲಗ್ನದಲ್ಲಿ ರಥಾರೋಹಣ ಅಪರಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ,ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ಕಾರ್ಯಕ್ರಮ ಹಾಗೂ ರಥೋತ್ಸವದ ವಿಶೇಷ ಆಕರ್ಷಣೆಗಳು ಕೀಲುಕುದುರೆ, ಡೊಳ್ಳುಕುಣಿತ, ಚಂಡೆವಾದನ,ಬ್ಯಾಂಡ್‍ಸೆಟ್, ಹುಲಿವೇಷ ಹಾಗೂ ಸಿಡಿಮದ್ದು ಪ್ರದರ್ಶನ, ಮಾ.7ನೇ ಶುಕ್ರವಾರ
ಪ್ರಭೋದೋತ್ಸವ, ಅಷ್ಟಾವಧಾನ ಸೇವೆ, ಹೋಮ, ಕಲಶಾಭಿಷೇಕ ಪೂಜೆಗಳು ಸಂಜೆ : ಸಂಹಾರ ಬಲಿ, ಚೂರ್ಣೋತ್ಸವ ಅವಭ್ರತೆ, ಪೂರ್ಣಾಹುತಿ ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿದ್ದು
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಮಾ.3ನೇ ಸೋಮವಾರ ಸಂಜೆ 6.30ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟನೆ,ಸಂಜೆ 7 ಕ್ಕೆ ಗೋಪಾಲ ಕೃಷ್ಣಮಯ್ಯ, ಹರ್ತಟ್ಟು ಪ್ರಾಯೋಜನೆಯಲ್ಲಿ ಛಾಯ ತರಂಗಿಣಿ ಸಂಗೀತ ಶಾಲೆ ಇವರಿಂದ ನಾದ ಸಂಗೀತ ಲಹರಿ,ಮಾ.4ರಂದು ಮಣೂರು ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಚೇತನ್ ನೈಲಾಡಿ ಇವರ ನೇತ್ರತ್ವದ ಕಲಾಚಿಗುರು ಹೆಂಗ್ಸರ್ ಪಂಚೇತಿ,ಓಂಕಾರ್ ಕಲಾವಿದರು ಕಣ್ಣುಕೆರೆ ಇವರಿಂದ ನಾಟಕ ಅಗೋಚರ,ಮಾ.5ರಂದುಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ ಶುಕ್ರನಂದನೆ ಮಾ.6 ಗುರುವಾರ ಬೆಳಿಗ್ಗೆ 11.00 ಕ್ಕೆ ಶ್ರೀ ರಾಜೇಶ್ ಭಟ್, ತುಳು ಚಲನಚಿತ್ರ ಸಂಗೀತ ನಿರ್ದೇಶಕರು, ಮೂಡಬಿದ್ರೆ ಇವರಿಂದ ಭಕ್ತಿಗಾನ ಸುಧೆ ,ಸಂಜೆ 5.00 ರಿಂದ ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರಿಂದ ಭಜನಾ ಜರಗಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











