Category: ಸುದ್ದಿ

  • ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಸ್ಪರ್ಧಾತ್ಮಕ ಪರೀಕ್ಷೆ PGCET ಕುರಿತು ಮಾಹಿತಿ ಕಾರ್ಯಗಾರ

    ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಸ್ಪರ್ಧಾತ್ಮಕ ಪರೀಕ್ಷೆ PGCET ಕುರಿತು ಮಾಹಿತಿ ಕಾರ್ಯಗಾರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಪ್ರವೇಶಕ್ಕಾಗಿ ನಡೆಸುವ ಪಿಜಿಸಿಇಟಿ ಪರೀಕ್ಷೆಯ ಕುರಿತು ಮಾಹಿತಿ ಕಾರ್ಯಗಾರ ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ಅಭಿಜ್ಞಾ ವಿದ್ಯಾಸಂಸ್ಥೆಯ ನಿರ್ದೇಶಕರಾದ ಅಭಿಲಾಷ್ ಕ್ಷತ್ರಿಯ ಪರೀಕ್ಷೆಯ ತಯಾರಿ ಹೇಗಿರಬೇಕು, ಪರೀಕ್ಷೆ ಯಾವ ಸಂದರ್ಭದಲ್ಲಿ ನಡೆಸಲಾಗುತ್ತದೆ, ಪರೀಕ್ಷೆಯ ಪೂರ್ವ ತಯಾರಿಯೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಪಿಜಿಸಿಇಟಿಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.

    ನಿರ್ವಹಣಾ ವಿಭಾಗದ ಮುಖ್ಯಸ್ಥೆ ನಂದಾ ರೈ ವಂದಿಸಿದರು. ನಿರ್ವಹಣಾ ವಿಭಾಗದ ಉಪನ್ಯಾಸಕರಾದ ಹರೀಶ್ ಬಿ. ಸ್ವಾಗತಿಸಿ, ರಜತ್ ಬಂಗೇರ ಅತಿಥಿಗಳನ್ನು ಪರಿಚಯಿಸಿ, ಅವಿತಾ ಕೊರೆಯಾ ನಿರ್ವಹಿಸಿದರು.

  • ಕೋಟ :ಟೀಮ್ ಯೋಗೇಂದ್ರ ಪುತ್ರನ್ ನೇತ್ರತ್ವದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ

    ಕೋಟ :ಟೀಮ್ ಯೋಗೇಂದ್ರ ಪುತ್ರನ್ ನೇತ್ರತ್ವದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಬಡವರ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿ ವಹಿಸುವವರು ಅತಿ ವಿರಳ ಆದರೆ ಅಂತವರನ್ನು ಹುಡುಕಿ ಅವರಿಗೊಂದು ಸೂರಿನ ನೆರವು ಕಲ್ಪಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಕೋಟ ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು.

    ಕೋಟತಟ್ಟು ಪಡುಕರೆ ಅಶಕ್ತ ಕುಟುಂಬವಾದ ಅಕ್ಕಣಿ ಪೂಜಾರಿ ಇವರಿಗೆ ಟೀಮ್ ಯೋಗೇಂದ್ರ ಪುತ್ರನ್ ನೇತ್ರತ್ವದ ತಂಡದಿಂದ ನಿರ್ಮಿಸಿದ ಹೊಸ ಮನೆ ನಂದೀಕೇಶ್ಚರ ಉದ್ಘಾಟಿಸಿ ಮಾತನಾಡಿ ಅಶಕ್ತರ ಬಗ್ಗೆ ಮಿಡಿಯುವ ಹಾಗೂ ಅಂತವರ ಬಗ್ಗೆ ಕಾಳಜಿ ವಹಿಸಿ ಅವರ ನೋವು ನಲಿವುಗಳಿಗೆ ಸ್ಪಂದಿಸುವ ಟೀಮ್ ಯೋಗೇಂದ್ರ ಪುತ್ರನ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಇದು ಇನ್ನಷ್ಟು ಯುವ ಮನಸ್ಸುಗಳಿಗೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.

    ಮುಖ್ಯ ಅತಿಥಿಗಳಾ ಭಾಗವಹಿಸಿದ ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿ ಪ್ರದಾನಕಾರ್ಯದರ್ಶಿ ಕೆ.ದಿನೇಶ್ ಗಾಣಿಗ ನಾವುಗಳು ಅನೇಕ ದಾನಗಳನ್ನು ಈ ವ್ಯವಸ್ಥೆಯಲ್ಲಿ ಕಾಣುತ್ತೇವೆ ಆದರೆ ಅದರಲ್ಲಿ ಗೃಹನಿರ್ಮಾಣ ಕಾರ್ಯ ಸರ್ವಶ್ರೇಷ್ಢತೆಯನ್ನು ಪಡೆಯುತ್ತದೆ. ಸಮಾಜಮುಖಿಯಾಗಿ ಸದಾ ಚಿಂತಿಸುವ ಯುವ ಸಮೂಹದ ಇಂತಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಮನೆ ನಿರ್ಮಾಣದಲ್ಲಿ ಕೈಜೋಡಿಸಿದ ಕರಾವಳಿ ಓಸಿಯನ್ ಪ್ರಾಡಕ್ಟ್ ಪಾಲುದಾರ ಲೋಹಿತ್ ಕುಂದರ್ ಇದರ ಸಿಬ್ಬಂದಿಗಳಾದ ಸುರೇಂದ್ರ ಪೂಜಾರಿ, ನಾಗೇಶ್ , ಕೋಟತಟ್ಟು ಗ್ರಾ.ಪಂ ಮಾಜಿ ಸದಸ್ಯ ಬಸವ ಪೂಜಾರಿ, ಮನೆ ನಿರ್ಮಾಣದಲ್ಲಿ ಸಹಕಾರ ನೀಡಿದ ಭರತ್ ಗಾಣಿಗ, ಭಾಸ್ಕರ್ ದೇವಾಡಿಗ, ಉದ್ಯಮಿ ಶ್ರೀನಿವಾಸ್ ಮೆಂಡನ್, ಮನೆ ಯಜಮಾನಿ ಅಕ್ಕಣಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟೀಮ್ ಯೋಗೇಂದ್ರ ಪುತ್ರನ್ ನಿರೂಪಿಸಿ ವಂದಿಸಿದರು.

  • ಪಾಂಡೇಶ್ಚರ – ಬಾಂಧವ್ಯ ಬ್ಲಡ್ ನೆರವು ಯೋಜನೆಯಿಂದ ಏಳನೇ ಮನೆ ಹಸ್ತಾಂತರ

    ಪಾಂಡೇಶ್ಚರ – ಬಾಂಧವ್ಯ ಬ್ಲಡ್ ನೆರವು ಯೋಜನೆಯಿಂದ ಏಳನೇ ಮನೆ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬಾಂಧವ್ಯ ಬ್ಲಡ್ ಕರ್ನಾಟಕ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಅಶಕ್ತ ಕುಟುಂಬವಾದ ಪಾಂಡೇಶ್ವರದ ಜ್ಯೋತಿ ಮರಕಾಲ ಇವರಿಗೆ ನೂತನ ಗೃಹ ನಿರ್ಮಿಸಿ ಅದನ್ನು ಸೋಮವಾರ ಹಸ್ತಾಂತರಿಸಲಾಯಿತು.

    ಮನೆ ಹಸ್ತಾಂತರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಪಾಂಡೇಶ್ಚರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಉದ್ಘಾಟಿಸಿದರು.

    ಕಾರ್ಯಕ್ರಮದಲ್ಲಿ ಉಡುಪಿ ಟೌನ್ ಪೊಲೀಸ್ ಠಾಣೆಯ ಎ.ಎಸ್ ಐ ಜಯಕರ ಪೂಜಾರಿ ಐರೋಡಿ, ಪಂಚವರ್ಣ ಯುವಕ ಮಂಡಲದ ಇದರ ಉಪಾಧ್ಯ ಮನೋಹರ್ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ರಕ್ತೇಶ್ಚರಿ ಬಳಗದ ಅಧ್ಯಕ್ಷ ವಿ ನಾರಾಯಣ ಆಚಾರ್ಯ ,ಪಂಚಾಯತ್ ಸದಸ್ಯೆ ಸಂಧ್ಯಾ ಸುಬ್ರಹ್ಮಣ್ಯ ರಾವ್, ಸ್ಥಳೀಯರಾದ ಶೇಖರ್ ಪೂಜಾರಿ, ಶಿವ ಪೂಜಾರಿ, ಕೃಷ್ಣ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.

    ಬಾಂಧವ್ಯ ಬ್ಲಡ್ ಕರ್ನಾಟಕದ ಅಧ್ಯಕ್ಷ ದಿನೇಶ್ ಬಾಂಧವ್ಯ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ಚರ ನಿರೂಪಿಸಿ ವಂದಿಸಿದರು.

  • ಕುಂದಾಪುರ :ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ: ಕುಂದಾಪುರದ ಸಂಗಮ್ ಬಳಿ ರೈತರ ತರಕಾರಿ ಮಾರುಕಟ್ಟೆ ಉದ್ಘಾಟನೆ

    ಕುಂದಾಪುರ :ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ: ಕುಂದಾಪುರದ ಸಂಗಮ್ ಬಳಿ ರೈತರ ತರಕಾರಿ ಮಾರುಕಟ್ಟೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಟಿಎಪಿಸಿಎಂಎಸ್ ಸ್ವಂತ ನಿಧಿಯಿಂದ ನಿರ್ಮಿಸಿಕೊಟ್ಟಿರುವ ರೈತರ ತರಕಾರಿ ಮಾರುಕಟ್ಟೆ ಬೆಳೆಯುತ್ತಿರುವ ಕುಂದಾಪುರ ಪಟ್ಟಣಕ್ಕೆ ಅತ್ಯುತ್ತಮ ಕೊಡುಗೆ. ರೈತರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ನುಡಿದರು.

    ಸೋಮವಾರ ಇಲ್ಲಿನ ಸಂಗಮ್ ಜಂಕ್ಷನ್‍ನಲ್ಲಿ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ(ಟಿಎಪಿಸಿಎಂಎಸ್) ರೂ.14ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರೈತರ ತರಕಾರಿ ಮಾರುಕಟ್ಟೆ ಪ್ರಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

    ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್‍ಕುಮಾರ ದೀಪ ಬೆಳಗಿಸಿ ಶುಭಹಾರೈಸಿದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ ಸಂಸ್ಥೆಯ ವಜ್ರಮಹೋತ್ಸವ ವರ್ಷಾಚರಣೆಯ ಈ ಹೊತ್ತಲ್ಲಿ ಸಂಗಮ್ ಜಂಕ್ಷನ್‍ನಲ್ಲಿರುವ ಸ್ವಂತ ನಿವೇಶದಲ್ಲಿ ರೈತ ಮಾರುಕಟ್ಟೆ ಸ್ಥಾಪಿಸಿದೆ. ರೈತರು ನೇರವಾಗಿ ಮಾರುಕಟ್ಟೆಗೆ ಆಗಮಿಸಿ ವಹಿವಾಟು ನಡೆಸಬಹುದು ಎಂದರು.

    ಟಿಎಪಿಸಿಎಂಎಸ್ ಉಪಾಧ್ಯಕ್ಷ ಶರತ್‍ಕುಮಾರ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೊಳಹಳ್ಳಿ ಮಹೇಶ್ ಹೆಗ್ಡೆ, ರಾಜು ಪೂಜಾರಿ ಯಡ್ತರೆ, ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಯಾಡಿ ಮೋಹನದಾಸ ಶೆಟ್ಟಿ, ಕೆ.ಸುಧಾಕರ ಶೆಟ್ಟಿ ಬಾಂಡ್ಯ, ಆನಂದ ಬಿಲ್ಲವ ಉಪ್ಪಿನಕುದ್ರು, ಕೆ.ಭುಜಂಗ ಶೆಟ್ಟಿ ಕೆರಾಡಿ, ಕೆ.ಮೋಹನ ಪೂಜಾರಿ ಉಪ್ಪುಂದ, ಪ್ರಭಾಕರ ಶೆಟ್ಟಿ ಜಡ್ಕಲ್, ರವಿ ಗಾಣಿಗ ಆಜ್ರಿ, ಎಚ್.ದೀನಪಾಲ ಶೆಟ್ಟಿ ಮೊಳಹಳ್ಳಿ, ಎಸ್.ಜಯರಾಮ ಶೆಟ್ಟಿ ಬೆಳ್ವೆ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ವಂದಿಸಿದರು.

  • ಕೋಟ – ಲಲಿತಾ ಪೂಜಾರಿ ಕೊರವಡಿ ಇವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕೋಟ – ಲಲಿತಾ ಪೂಜಾರಿ ಕೊರವಡಿ ಇವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅಂಗ ನ್ಯೂನತೆಯ ದೇಹಕ್ಕೆ ಹೊರತು ಮನಸ್ಸಿಗಲ್ಲ ಇದನ್ನು ಲಲಿತಾ ಪೂಜಾರಿ ಕಲಾ ಪ್ರಕಾರಗಳಿಗೆ ಜೀವ ತುಂಬಿ ಈ ಜಗತ್ತಿಗೆ ತೋರಿಸಿ ಕೊಟ್ಟಿದ್ದಾಳೆ ಎಂದು ಬೀಜಾಡಿ ಜಿ.ಪಂ. ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

    ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಆಶ್ರಯದಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ ಸಾಧಕರನ್ನು ಗುರುತಿಸಿ ಗೌರವಿಸುವ ರಜತ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ವಿಶೇಷಚೇತನರಾಗಿ ಕಲಾಪ್ರಕಾರಗಳಿಗೆ ಜೀವ ತುಂಬುವ ಕಲಾಮಾತೆ ಲಲಿತಾ ಪೂಜಾರಿ ಕೊರವಡಿ ಇವರಿಗೆ ಪಂಚವರ್ಣ ರಜತ ಗೌರವ ನೀಡಿ ಪುರಸ್ಕರಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು ಆ ಗುರಿಯೇ ಮುಂದಿನಯಶಸ್ಸಿಗೆ ಪ್ರೇರಣೆಯಾಗುತ್ತದೆ. ಇಂಥಹ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಂಚವರ್ಣದ ಸಮಾಜಮುಖಿ ಕಾರ್ಯದ ನಡುವೆ ಸಾಧಕರನ್ನು ಗೌರವಿಸುವ ಮಹತ್ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಲಲಿತಾ ಪೂಜಾರಿ ಇವರಿಗೆ ಬೀಜಾಡಿ ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ರಜತ ಗೌರವದ ಜೊತೆ ನಗದು, ಪ್ರಶಸ್ತಿ ಪತ್ರ ನೀಡಿ ಪ್ರದಾನಿಸಿದರು.

    ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ ಉಪಾಧ್ಯ ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಹಂದಟ್ಟು ಮಹಿಳಾ ಬಳಗದ ಸಂಯೋಜಕಿ ಶಕೀಲ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಇದ್ದರು.ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣದ ಸಾಂಸ್ಕೃತಿಕ ಕಾರ್ಯದರ್ಶಿ ಶಶಿಧರ ತಿಂಗಳಾಯ ವಂದಿಸಿದರು.

  • ಕೋಟ :ಶ್ರೀ ನಟರಾಜ ನೃತ್ಯ ನಿಕೇತನ ವಿದ್ಯಾರ್ಥಿಗಳ ಸಾಧನೆ

    ಕೋಟ :ಶ್ರೀ ನಟರಾಜ ನೃತ್ಯ ನಿಕೇತನ ವಿದ್ಯಾರ್ಥಿಗಳ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: 2022-23ರ ಕರ್ನಾಟಕ ಸರ್ಕಾರದ ಎಸ್ ಎಸ್ ಎಲ್ ಸಿ ಬೋರ್ಡ್ ನಡೆಸಿದ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಸಾಲಿಗ್ರಾಮ, ಕೋಟೇಶ್ವರ, ಕುಂದಾಪುರ ಸಂಸ್ಥೆಯ 18 ವಿದ್ಯಾರ್ಥಿನಿಯರು ಭರತನಾಟ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಪಡೆದು ನೂರಕ್ಕೆ ನೂರು ಪ್ರತಿಶತ ಫಲಿತಾಂಶ ಪಡೆದಿದ್ದಾರೆ.

  • ಕೋಟ :ಕ್ರೀಡೆ ಬದುಕಿನ ಮನೋಲ್ಲಾಸದ ಒಂದು ಭಾಗ – ಗಣೇಶ್ ಪ್ರಸಾದ್ ಕಾಂಚನ್

    ಕೋಟ :ಕ್ರೀಡೆ ಬದುಕಿನ ಮನೋಲ್ಲಾಸದ ಒಂದು ಭಾಗ – ಗಣೇಶ್ ಪ್ರಸಾದ್ ಕಾಂಚನ್

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಕ್ರೀಡೆ ಬದುಕಿನ ಮನೋಲ್ಲಾಸದ ಒಂದು ಭಾಗವಾಗಿದ್ದು, ಒತ್ತಡದ ಜಂಜಾಟದ ಈ ಜೀವನದಲ್ಲಿ ನೆಮ್ಮದಿ ನೀಡಬಲ್ಲ ಭಾಗವಾಗಿದ್ದು, ಆಟಗಾರರು ಸ್ನೇಹ ಸೌಹಾರ್ದತೆಯಿಂದ ಪಂದ್ಯಾಟದಲ್ಲಿ ಭಾಗವಹಿಸಬೇಕು ಎಂದು ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಅವರು ಹೇಳಿದರು.

    ಅವರು ಶ್ರೀವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ-ಯಡ್ತಾಡಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಫ್ರೌಡಶಾಲೆ ಸಾೈಬ್ರಕಟ್ಟೆ ಮೈದಾನದಲ್ಲಿ ನಡೆದ ಶ್ರೀಕೃಷ್ಣ ಟ್ರೋಫಿ-2023(ನೆನಪಿನ ಕನವರಿಕೆ) ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡುತ್ತಿದ್ದರು.

    ಉದ್ಯಮಿ ವೈ ಸಂಕಯ್ಯ ಶೆಟ್ಟಿ ಮಾತನಾಡಿ ಶ್ರೀ ವಿನಾಯಕ ಯುವಕ ಮಂಡಲವು ಸಾಮಾಜಿಕ ಕಾರ್ಯಕ್ರಮದ ಜೊತೆಗೆ ಇಂತಹ ಕ್ರೀಡಾಕೂಟ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಸಭಾ ಕಾರ್ಯಕ್ರಮದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಯುವಕ ಮಂಡಲದ ಅಧ್ಯಕ್ಷ ನಂದೀಶ್ ನಾಯ್ಕ, ಉಪಾಧ್ಯಕ್ಷ ಅಮೃತ್ ಪೂಜಾರಿ, ಕಾರ್ಯದರ್ಶಿ ರಾಜೇಶ್ ನಾಯ್ಕ ಉಪಸ್ಥಿತರಿದ್ದರು. ಏಕದಂತ ಬಿ ತಂಡ ಚಾಪಿಂಯನ್ ಆಗಿ ಶ್ರೀಕೃಷ್ಣ ಟ್ರೋಫಿ-2023ನ್ನು ಮುಡಿಗೇರಿಸಿಕೊಂಡು, ಪೋರ್ ಫ್ಲಸ್ ಪೋರ್ ಮಧುವನ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿತು. ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕಾರ್ತಿಕ್ ಬೀಜಾಡಿ ಅವರು ಪಡೆದುಕೊಂಡರು.

  • ಕುಂದಾಪುರ ಶಾಸ್ತ್ರವೃತ್ತ, ಲಾಲ್ ಬಹದ್ದೂರ್ ಶಾಸ್ತ್ರೀಯವರ ನೂತನ ಪುತ್ಥಳಿ ಅನಾವರಣ

    ಕುಂದಾಪುರ ಶಾಸ್ತ್ರವೃತ್ತ, ಲಾಲ್ ಬಹದ್ದೂರ್ ಶಾಸ್ತ್ರೀಯವರ ನೂತನ ಪುತ್ಥಳಿ ಅನಾವರಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಇಲ್ಲಿನ ಪುರಸಭಾ ವ್ಯಾಪ್ತಿಯ ಕುಂದಾಪುರ ಶಾಸ್ತ್ರೀ ವೃತ್ತವನ್ನು ನವೀಕರಣಗೊಳಿಸಲಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರೀಯವರ ನೂತನ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾ.25ರಂದು ನಡೆಯಿತು. ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ನವೀಕರಿಸಲಾದ ಶಾಸ್ತ್ರೀವೃತ್ತವನ್ನು ಉದ್ಘಾಟಿಸಿ, ಲಾಲ್ ಬಹದ್ದೂರ್ ಶಾಸ್ತ್ರೀಯವರ ಪುತ್ಥಳಿ ಅನಾವರಣ ಮಾಡಿದರು.

    ಉಪಾಧ್ಯಕ್ಷ ಸಂದೀಪ್ ಖಾರ್ವಿ, ಹಿರಿಯ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಕುಂದಾಪುರ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನೂತನ ಪುತ್ಥಳಿಯನ್ನು ಚಾರ್ಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಕೊಡಮಾಡಿತು.

  • ಪಡುಕೋಣೆ : ಗಾಳಿಗೊಡ್ಡಿದ ದೀಪದಂತೆ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಡಿ – ರೆ. ಫಾ. ಫಿಲಿಪ್ ನೇರಿ ಆರನ್ಹಾ

    ಪಡುಕೋಣೆ : ಗಾಳಿಗೊಡ್ಡಿದ ದೀಪದಂತೆ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಡಿ – ರೆ. ಫಾ. ಫಿಲಿಪ್ ನೇರಿ ಆರನ್ಹಾ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಗಾಳಿಗೊಡ್ಡಿದ ದೀಪದಂತೆ ಬೆಳಗುವುದನ್ನು ಸವಾಲಾಗಿ ಸ್ವೀಕರಿಸಿದಾಗ ಸುತ್ತಲೂ ಬೆಳಕಾಗುತ್ತದೆ. ದೀಪ ಗಾಳಿಯ ಜೊತೆಗೆ ಸೆಣಸುತ್ತಾ ಸಮಾಜಕ್ಕೆ ಬೆಳಕು ನೀಡುವಂತೆ ಮನುಷ್ಯನೂ ಬದುಕಿನೊಂದಿಗೆ ಸೆಣಸುತ್ತಾ ಸಮಾಜಕ್ಕೆ ಬೆಳಕಾದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಬಾರ್ಕೂರು ಇಗರ್ಜಿಯ ಧರ್ಮ ಗುರು ರೆ. ಫಾ. ಫಿಲಿಪ್ ನೇರಿ ಆರನ್ಹಾ ಹೇಳಿದರು.

    ಅವರು ಪಡುಕೋಣೆ ಗ್ರೆಗರಿ ಪ್ರೌಢಶಾಲೆ ಮೈದಾನದಲ್ಲಿ ಪಡುಕೋಣೆ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋರ್ಟ್ಸ್ ವತಿಯಿಂದ ದಿವಂಗತ ಸುರೇಶ ಪಡುಕೋಣೆ ಹಾಗೂ ದಿವಂಗತ ಪ್ರಭು ಆರ್ಥರ್ ಪೀರೇರಾ ಇವರ ಸ್ಮರಣಾರ್ಥ ನಡೆದ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಾಟ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

    ಸಮಾರಂಭ ಉದ್ಘಾಟಿಸಿ ಮುಂಬೈ ಉದ್ಯಮಿ ನಾಗರಾಜ್ ಪಡುಕೋಣೆ ಮಾತನಾಡಿ, ಪಡುಕೋಣೆ ಊರಿನ ಹೆಸರನ್ನು ಜಗದಗಲ ಪಸರಿಸಬೇಕು ಇಲ್ಲಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಶಿಕ್ಷಣ ಹಾಗೂ ಕ್ರೀಡಾ ಪಟುಗಳಿಗೆ ಹೆಚ್ಚಿನ ನೆರವು ನೀಡಬೇಕು ಎನ್ನುವ ಉದ್ದೇಶದಿಂದ ಹುಟ್ಟಿಕೊಂಡ ಪಡುಕೋಣೆ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋರ್ಟ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.

    ಪಡುಕೋಣೆ ಇಗರ್ಜಿಯ ಧರ್ಮಗುರು ರೆ. ಫಾ. ಫ್ರಾನ್ಸಿಸ್ ಕರ್ನೆಲಿಯೋ ಅಧ್ಯಕ್ಷತೆವಹಿಸಿದ್ದರು. ಮುಂಬೈ ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಬಡಾಕೆರೆ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿ ಸಿಲ್ವ, ಬೆಂಗಳೂರು ಹೋಟೆಲ್ ಉದ್ಯಮಿ ದಿನಕರ ಶೆಟ್ಟಿ, ಮುಂಬೈ ಉದ್ಯಮಿ ಒಸ್ವಲ್ಡ್ ಫ್ರಾನ್ಸಿಸ್ ಡಿ’ಸೋಜ, ಹಾಸನ ಉದ್ಯಮಿ ಪ್ರತೀಶ್ ಕುಮಾರ್ ಶೆಟ್ಟಿ, ಬೆಂಗಳೂರು ಉದ್ಯಮಿ ಶಿವ ಪೂಜಾರಿ ಆನಗೋಡ, ಕುಸುಮ ನಾಗರಾಜ್ ಪಡುಕೋಣೆ,ಊರಿನ ಹಿರಿಯರಾದ ಅನಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಇದೇ ಸಂದರ್ಭ ಸಮಾಜ ಸೇವಕರಾದ ನಾಗರಾಜ್ ಪಡುಕೋಣೆ, ವೆನಾನ್ಸಿಯಸ್ ಪಿರೇರ, ಸುರೇಶ ಎಸ್ ಪಡುಕೋಣೆ ಹಾಗೂ ವಾಲಿಬಾಲ್ ಆಟಗಾರ ವಿನೀಶ್ ಡಿ’ಸೋಜ, ಕುಸ್ತಿ ಪಟು ನಿಶ್ಚಲ್ ಡಿ’ಸೋಜರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಜೋಸೆಫ್ ಡಿ ‘ಸಿಲ್ವ ಸ್ವಾಗತಿಸಿದರು. ಸ್ಮಿತಾ ಡಿಸೋಜ ಹಾಗೂ ಸರಿಟಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿ ಸಚಿನ್ ಅಲ್ಮೇಡಾ ವಂದಿಸಿದರು.

  • ಕೋಟೇಶ್ವರ :ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರ ಅವರಿಗೆ ಮೇರು ಗಾಯಕಿ ಡಾ.ಎಸ್.ಜಾನಕಿ ರಾಷ್ಟ್ರೀಯ ಪುರಸ್ಕಾರ ಪ್ರದಾನ

    ಕೋಟೇಶ್ವರ :ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರ ಅವರಿಗೆ ಮೇರು ಗಾಯಕಿ ಡಾ.ಎಸ್.ಜಾನಕಿ ರಾಷ್ಟ್ರೀಯ ಪುರಸ್ಕಾರ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಇದು ಜಾನಕಿ ಅಮ್ಮನ ಪ್ರೇರಣೆ ಈ ಪ್ರಶಸ್ತಿ ಪಡೆದ ನಾನೇ ಪುಣ್ಯವಂತಳು ಎಂದು ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರ ಹೇಳಿದರು.

    ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೊಡಲ್ಪಡುವ ಡಾ.ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

    ಮನಸ್ಮಿತ ರಾಷ್ಟ್ರೀಯ ಪುರಸ್ಕಾರವನ್ನ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಫಲಕವನ್ನು ಅನಾವರಣಗೈದ ನಾಡೋಜ ಡಾ. ಜಿ.ಶಂಕರ್ ಮಾತನಾಡಿ, ಇರ್ವರಿಗೆ ಪ್ರಶಸ್ತಿ ನೀಡಿದ್ದು ಅರ್ಥಪೂರ್ಣ, ಚಿತ್ರ ಅವರಂತಹ ಶ್ರೇಷ್ಠ ಗಾಯಕಿಗೆ ಪ್ರಶಸ್ತಿ ನೀಡುತ್ತಿರುವುದು ಈ ಕರಾವಳಿ ಭಾಗದ ಹೆಮ್ಮೆ ಇಂಥಹ ಕಾರ್ಯಕ್ರಮಗಳು ಕುಂದಾಪುರದ ಕಂಪನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.

    ಅಧ್ಯಕ್ಷತೆಯನ್ನು ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ವಹಿಸಿದ್ದರು.

    ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಯುವ ಮೆರಿಡಿಯನ್ ಒಪೆರಾ ಪಾರ್ಕನ ಪಾಲುದಾರ ವಿನಯ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ನಿರ್ದೇಶಕ ಪ್ರಶಾಂತ್ ಕುಂದರ್, ನೇಹಾ ಸತೀಶ್ ಪೂಜಾರಿ, ಕವಿತಾ ಪ್ರಕಾಶ್ ತೋಳಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಸತೀಶ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಡಾ.ಉಮೇಶ್ ಪುತ್ರನ್ ಸನ್ಮಾನ ಪತ್ರ ವಾಚಿಸಿದರು.

    ಕಾರ್ಯಕ್ರಮವನ್ನು ಉಡುಪಿ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿ ವಂದಿಸಿದರು.

    ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಹಾಗೂ ಮನಸ್ಥಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತೃತ್ವದಲ್ಲಿ ಕರ್ನಾಟಕದ ಶ್ರೇಷ್ಠ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ನಡೆಯಿತು. ಮುಕ್ತ ಅವಕಾಶ ಕಲ್ಪಿಸಿದ್ದರ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಭಾಗಿಯಾದರು.