ಕುಂದಾಪುರ ಮಿರರ್ ಸುದ್ದಿ…

ಕೋಟ :ಬಡವರ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿ ವಹಿಸುವವರು ಅತಿ ವಿರಳ ಆದರೆ ಅಂತವರನ್ನು ಹುಡುಕಿ ಅವರಿಗೊಂದು ಸೂರಿನ ನೆರವು ಕಲ್ಪಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಕೋಟ ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು.
ಕೋಟತಟ್ಟು ಪಡುಕರೆ ಅಶಕ್ತ ಕುಟುಂಬವಾದ ಅಕ್ಕಣಿ ಪೂಜಾರಿ ಇವರಿಗೆ ಟೀಮ್ ಯೋಗೇಂದ್ರ ಪುತ್ರನ್ ನೇತ್ರತ್ವದ ತಂಡದಿಂದ ನಿರ್ಮಿಸಿದ ಹೊಸ ಮನೆ ನಂದೀಕೇಶ್ಚರ ಉದ್ಘಾಟಿಸಿ ಮಾತನಾಡಿ ಅಶಕ್ತರ ಬಗ್ಗೆ ಮಿಡಿಯುವ ಹಾಗೂ ಅಂತವರ ಬಗ್ಗೆ ಕಾಳಜಿ ವಹಿಸಿ ಅವರ ನೋವು ನಲಿವುಗಳಿಗೆ ಸ್ಪಂದಿಸುವ ಟೀಮ್ ಯೋಗೇಂದ್ರ ಪುತ್ರನ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಇದು ಇನ್ನಷ್ಟು ಯುವ ಮನಸ್ಸುಗಳಿಗೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾ ಭಾಗವಹಿಸಿದ ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿ ಪ್ರದಾನಕಾರ್ಯದರ್ಶಿ ಕೆ.ದಿನೇಶ್ ಗಾಣಿಗ ನಾವುಗಳು ಅನೇಕ ದಾನಗಳನ್ನು ಈ ವ್ಯವಸ್ಥೆಯಲ್ಲಿ ಕಾಣುತ್ತೇವೆ ಆದರೆ ಅದರಲ್ಲಿ ಗೃಹನಿರ್ಮಾಣ ಕಾರ್ಯ ಸರ್ವಶ್ರೇಷ್ಢತೆಯನ್ನು ಪಡೆಯುತ್ತದೆ. ಸಮಾಜಮುಖಿಯಾಗಿ ಸದಾ ಚಿಂತಿಸುವ ಯುವ ಸಮೂಹದ ಇಂತಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮನೆ ನಿರ್ಮಾಣದಲ್ಲಿ ಕೈಜೋಡಿಸಿದ ಕರಾವಳಿ ಓಸಿಯನ್ ಪ್ರಾಡಕ್ಟ್ ಪಾಲುದಾರ ಲೋಹಿತ್ ಕುಂದರ್ ಇದರ ಸಿಬ್ಬಂದಿಗಳಾದ ಸುರೇಂದ್ರ ಪೂಜಾರಿ, ನಾಗೇಶ್ , ಕೋಟತಟ್ಟು ಗ್ರಾ.ಪಂ ಮಾಜಿ ಸದಸ್ಯ ಬಸವ ಪೂಜಾರಿ, ಮನೆ ನಿರ್ಮಾಣದಲ್ಲಿ ಸಹಕಾರ ನೀಡಿದ ಭರತ್ ಗಾಣಿಗ, ಭಾಸ್ಕರ್ ದೇವಾಡಿಗ, ಉದ್ಯಮಿ ಶ್ರೀನಿವಾಸ್ ಮೆಂಡನ್, ಮನೆ ಯಜಮಾನಿ ಅಕ್ಕಣಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟೀಮ್ ಯೋಗೇಂದ್ರ ಪುತ್ರನ್ ನಿರೂಪಿಸಿ ವಂದಿಸಿದರು.











