Category: ರಾಜಕೀಯ

  • ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪೂರ್ವಭಾವಿ ಸಭೆ

    ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪೂರ್ವಭಾವಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಮಾರ್ಚ್ 12ರಂದು ಕುಂದಾಪುರ ಮಂಡಲದಲ್ಲಿ ನಡೆಯಲಿರುವ ಜಿಲ್ಲಾ ಮಹಿಳಾ ಬೃಹತ್ ಸಮಾವೇಶ ಹಾಗೂ ರಾಜ್ಯಾದ್ಯಂತ ಸಂಚರಿಸಲಿರುವ ವಿಜಯ ಸಂಕಲ್ಪ ಯಾತ್ರೆ ಮಾರ್ಚ್ 14 ರಂದು ಕುಂದಾಪುರ ಮಂಡಲಕ್ಕೆ ಪ್ರವೇಶಿಸಿ ಸಾರ್ವಜನಿಕ ಸಭೆ ನಡೆಯಲಿರುವ ಮತ್ತು ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಸಂಚಲಿಸಲಿರುವ ಸರ್ಕಾರದ ಅಭಿವೃದ್ದಿ ಕುರಿತಾದ ಪ್ರಗತಿ ರಥದ ಕಾರ್ಯಕ್ರಮಗಳ ಕುರಿತಾಗಿ ಪೂರ್ವಭಾವಿ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆಯಿತು, ಕಾರ್ಯಕ್ರಮದ ರೂಪುರೇಷೆಗಳ ಕುರಿತಾಗಿ ಚರ್ಚಿಸಲಾಯಿತು.

    ಸಭೆಯಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜ್ಯ ಆಹಾರ ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಜಿಲ್ಲಾ ಮೋರ್ಚಾಗಳ ಸಮಾವೇಶ ಸಂಚಾಲಕ ಪ್ರವೀಣ್ ಶೆಟ್ಟಿ ಕುಪ್ಪೆಟ್ಟು, ಸಹಸಂಚಾಲಕ ಶ್ರೀನಿಧಿ ಹೆಗ್ಡೆ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ವೀಣಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಕುಂದಾಪುರ ಮಂಡಲ ಚುನಾವಣಾ ಉಸ್ತುವಾರಿ ಶ್ಯಾಮಲಾ ಕುಂದರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ಹಾಗೂ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾ, ಪ್ರಕೋಷ್ಠ, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಬೂತ್ ಅಧ್ಯಕ್ಷರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  • ಬೈಂದೂರು :ಸುಳ್ಳೇ ಬಿಜೆಪಿ ಬಂಡವಾಳ-ಬಿ.ಕೆ ಹರಿಪ್ರಸಾದ್  – ವಂಡ್ಸೆ ಮತ್ತು ಸಿದ್ಧಾಪುರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ

    ಬೈಂದೂರು :ಸುಳ್ಳೇ ಬಿಜೆಪಿ ಬಂಡವಾಳ-ಬಿ.ಕೆ ಹರಿಪ್ರಸಾದ್ – ವಂಡ್ಸೆ ಮತ್ತು ಸಿದ್ಧಾಪುರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಬಿಜೆಪಿ ಅಭಿವೃದ್ದಿ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಧರ್ಮ, ಜಾತಿಯ ವಿಷಯವೇ ಪ್ರಮುಖ ಅಜೆಂಡಾವನ್ನಾಗಿಸಿಕೊಂಡಿದೆ. ಸುಳ್ಳೇ ಬಿಜೆಪಿ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಸರ್ಕಾರ ಸಂಪೂರ್ಣ ಭೃಷ್ಟಾಚಾರದಲ್ಲಿ ಮುಳುಗಿದ್ದು ಭೃಷ್ಟಾಚಾರವನ್ನು ವೈಭವೀಕರಣ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.

    ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕರಾವಳಿ ಪ್ರಜಾ ಧ್ವನಿ ಯಾತ್ರೆ ಬೃಹತ್ ಸಮಾವೇಶ ಫೆ.19 ವಂಡ್ಸೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

    ಬಿಜೆಪಿಗರು ಭೃಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬರುವಾಗ ವಿಜಯೋತ್ಸವ ಆಚರಿಸುವ ಮಟ್ಟಿಗೆ ಭೃಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಬಿಟ್ಟು ಸಂವಿಧಾನದ ವಿರುದ್ಧ ಹೋಗುತ್ತಿದೆ. ಇಂದು ಬಿಜೆಪಿಯಲ್ಲಿ ಇರುವುದು ದೇಶಭಕ್ತಿಯಲ್ಲ, ದ್ವೇಷಭಕ್ತಿ ಎಂದು ಗುಡುಗಿದರು.

    ಚುನಾವಣೆ ಸಮೀಸುತ್ತಿರುವಾಗ ಪ್ರಧಾನಿ ಮೋದಿ, ಅಮಿತ್ ಷಾ, ನಡ್ಡಾ ಎಲ್ಲರೂ ಕರಾವಳಿ ಭಾಗಕ್ಕೆ ಬರುತ್ತಾರೆ. ಆದರೆ ಪ್ರವಾಹ, ಸಮುದ್ರ ಕೊರೆತಬಂದಾಗ, ನೆರೆ ಹಾವಳಿ ಸಂಭವಿಸಿ ಜನ ಅತಂತ್ರರಾಗುವ ಸಮಯದಲ್ಲಿ ಯಾವ ನಾಯಕರು ಈ ಕಡೆ ಬರುವುದಿಲ್ಲ. ಇದು ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 40% ಕಮಿಷನ್ ಆರೋಪ ಇವತ್ತು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಗುತ್ತಿಗೆದಾರರ ಸಂಘ ಪ್ರಧಾನಿಗಳಿಗೆ ಮನವಿ ಸಲ್ಲಿಸಿ ಒಂದುವರೆ ವರ್ಷವಾದರೂ ಪ್ರಧಾನಿಯಿಂದ ಉತ್ತರವಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರೋಗ್ಯ, ಶಿಕ್ಷಣ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ಪ್ರನಾಳಿಕೆ ಬಿಡುಗಡೆ ಮಾಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. 10 ಜನರಲ್ಲಿಯೇ ಭಾರತದ ಸಂಪತ್ತು ಹಂಚಿಕೆಯಾಗಬಾರದು. ಕಾಂಗ್ರೆಸ್ ಪಕ್ಷ ಜನರ ಬದುಕಿನ ಬಗ್ಗೆ ಮಾತಾಡುತ್ತದೆ ವಿನಃ ಭಾವನೆಗಳ ಬಗ್ಗೆ ಅಲ್ಲ ಎಂದರು.

    ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರಜೆಗಳ ಧ್ವನಿಯನ್ನು ಆಲಿಸಿ, ಸಮಸ್ಯೆ ಕ್ರೋಢೀಕರಿಸಿ, ರಾಜ್ಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಪ್ರಜಾಧ್ವನಿ ಯಾತ್ರೆಯ ಉದ್ದೇಶವಾಗಿದೆ. ಕರಾವಳಿ ಭಾಗದಲ್ಲಿ ಐಟಿ ಪಾರ್ಕ್, ಗಾರ್ಮೆಂಟ್ಸ್ ಪಾರ್ಕ್ ಸ್ಥಾಪನೆ, ಮೀನುಗಾರಿಕೆಯಲ್ಲಿ ಆಕಸ್ಮಿಕ ಸಾವನ್ನಪ್ಪಿದರೆ 10 ಲಕ್ಷ ವಿಮೆ, ನಾಡ ದೋಣಿ, ಬೋಟ್‍ಗಳಿಗೆ 25% ಸಹಾಯಧನ, ಸಬ್ಸಿಡಿಯಲ್ಲಿ ಸೀಮೆಎಣ್ಣೆ, ಡಿಸೇಲ್ ವಿತರಣೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ ಬಡ್ಡಿರಹಿತ ಸಾಲ ನೀಡಲು ಕ್ರಮ ತಗೆದುಕೊಳ್ಳಲಾಗುವುದು. ಸೂಕ್ಷ್ಮ ಹಿಂದುಳಿದ ಸಮುದಾಯಗಳನ್ನು ಒಟ್ಟುಗೂಡಿಸಿ ಅಭಿವೃದ್ದಿ ನಿಗಮ ರಚನೆ ಮಾಡಿ 250 ಕೋಟಿ ವಾರ್ಷಿಕ ಮೀಸಲಿಡಲಾಗುವುದು ಎಂದರು.

    ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರ ನೀಡಿದ ದತ್ತಕವಾದ ಅಧಿಕಾರವನ್ನು ಚಲಾಯಿಸುವಲ್ಲಿ ಬೈಂದೂರು ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ. 5 ವರ್ಷದ ಅವಧಿಯಲ್ಲಿ ಅಕ್ರಮ-ಸಕ್ರಮ ಸಭೆಯನ್ನೇ ಮಾಡಿಲ್ಲ. ಇವತತು ಬಿಜೆಪಿ ಹೊಸ ಘೋಷಣೆ ಮಾಡುತ್ತಿದೆ. ಯಾವ ಕಾರಣಕ್ಕಾಗಿ ಇವತ್ತು ಬಿಜೆಪಿ ಭರವಸೆ? ನಾರಾಯಣ ಗುರುಗಳ ವಿಚಾರವನ್ನು ಫಠ್ಯ ಪುಸ್ತಕದಿಂದ ತೆಗೆದಾಗ , ಈ ಭಾಗದಲ್ಲಿ ಹುಟ್ಟಿದ ಬ್ಯಾಂಕ್‍ಗಳ ವಿಲೀನ ವಾದಾಗ ಏಕೆ ಸ್ಥಳೀಯ ಶಾಸಕರು ಮಾತನಾಡಿಲ್ಲ. ಶಾಸಕರ ಕಛೇರಿಯ ಬಣ್ಣ ಬದಲಾಯಿಸಿ, ಜನರನ್ನು ಶಾಸಕರ ಕಚೇರಿಯಿಂದ ದೂರ ಇಟ್ಟಿರುವುದೇ ಇವರ ಸಾಧನೆ ಎಂದರು.
    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಪರೇಶ ಮೇಸ್ತ ವಿಷಯವನ್ನು ಇಟ್ಟುಕೊಂಡು ಜನರಿಗೆ ಸುಳ್ಳನ್ನು ನಂಬಿಸಿ ಗೆದ್ದ ಶಾಸಕರು ತಮ್ಮದೇ ಪಕ್ಷದ ಕಾರ್ಯಕರ್ತ ಉದಯ ಗಾಣಿಗರನ್ನು ತಮ್ಮದೇ ಪಕ್ಷದ ಗ್ರಾ.ಪಂ.ಅಧ್ಯಕ್ಷ ಕೊಲೆ ಮಾಡಿದಾಗ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ. ಬೇರೆ ಬೇರೆ ಕೊಲೆಗಳಲ್ಲಿ ಸಂತೃಪ್ತ ಕುಟುಂಬಕ್ಕೆ 25 ಲಕ್ಷ ಕೊಡುವ ಸರ್ಕಾರ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವಿಗೆ ಏಕೆ ನ್ಯಾಯ ಒದಗಿಸಿಲ್ಲ? ಚುನಾವಣೆಯ ಸಂದರ್ಭ ಐದು ನದಿಗಳ ಜೋಡಣೆ, ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಏನಾಯಿತು? ಬೈಂದೂರು ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆ ಮಾಡಲಾಗಲಿಲ್ಲ. ಅಕ್ರಮ ಸಕ್ರಮ ನಾಲ್ಕುವರೆ ವರ್ಷಕ್ಕೆ 2 ಸಭೆ ಮಾಡಿದ್ದು ಇವರ ಸಾಧನೆ. ಎಷ್ಟು ಜನರಿಗೆ 94ಚ ಕೊಟ್ಟಿದ್ದಿರಿ? ಯಡ್ತರೆ ಬಳಿ ನೀರಿಲ್ಲ ಕೆರೆಯ ಸ್ಥಳದಲ್ಲಿ ಬೈಂದೂರು ಬಸ್ ನಿಲ್ದಾಣ ಮಾಡಲು ಹೊರಟಾಗ ಬಿಜೆಪಿಗರು ಅದು ಹಕ್ಕಿ ನೀರು ಕುಡಿಯುವ ಕೆರೆ ಎಂದು ಗೊಂದಲ ಸೃಷ್ಟಿ ಮಾಡಿದರು. ಬಳಿಕ ಅವರ ಶಾಸಕರೇ ಅಲ್ಲಿ ಗುದ್ದಲಿ ಪೂಜೆ ಮಾಡುತ್ತಾರೆ. ಹೀಗೆ ಹಲವಾರು ಯೋಜನೆಗಳು ನನ್ನ ಕಾಲದಲ್ಲಿ ಮಂಜೂರಾತಿ ಆಗಿದ್ದು, ಈ ಬಿಜೆಪಿಗರು ಕೆಲಸ ಮಾಡಲು ಇರುವುದಲ್ಲ. ಜನರನ್ನು ದಿಕ್ಕು ತಪ್ಪಿಸುವುದರಲ್ಲಿ ನಿರತರಾಗಿದ್ದಾರೆ. ನಾನು ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ಈಗ ನನ್ನಲ್ಲಿ ದುಡ್ಡಿಲ್ಲ, ಜನ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನಲ್ಲಿ ಹಣ ಇಲ್ಲ ನಿಜ, ದುಡ್ಡಿಲ್ಲದೇ ಈ ಚುನಾವಣೆ ಗೆಲ್ತೇನೆ. ಅಭಿವೃದ್ದಿ ತೂಕ ಮಾಡಿ ಜನ ಮತ ಹಾಕುತ್ತಾರೆ. ಬೈಂದೂರು ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ 12ಕ್ಕೂ ಹೆಚ್ಚು ಜನ ಅಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‍ನಲ್ಲಿ ಹಾಗಿಲ್ಲ, ಏಕೈಕ ಅಭ್ಯರ್ಥಿ, ಈಗ ಬಿಜೆಪಿಯೇ ಭರವಸೆ ಎಂದು ಘೋಷಣೆ ಆರಂಭಿಸಿದ್ದಾರೆ. ಅದು ಸರಿ, ಅವರು ಭರವಸೆ ಕೊಡುವುದಕ್ಕಾಗಿಯೇ ಇರುವುದು ಎಂದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪಕ್ಷದ ಪ್ರಮುಖರಾದ ಎಂ.ಎ ಗಫೂರ್, ರಾಜು ಪೂಜಾರಿ, ರಘುರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಾಸುದೇವ ಯಡಿಯಾಳ, ಮದನ್ ಕುಮಾರ್, ರೋಶನ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಅನಂತ ಮೊವಾಡಿ, ಉದಯ ಪೂಜಾರಿ, ಸಂತೋಷ್ ಶೆಟ್ಟ ಮೊದಲಾದವರು ಉಪಸ್ತಿತರಿದ್ದರು.

    ಈ ಸಂಧರ್ಭದಲ್ಲಿ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

    ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ವಂದಿಸಿದರು. ಸುನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

  • ಕೋಟ :ಇದೊಂದು ಕಿವಿಗೆ ಹೂ ಇಡುವ ಬಜೆಟ್ – ಶಂಕರ್ ಎ ಕುಂದರ್

    ಕೋಟ :ಇದೊಂದು ಕಿವಿಗೆ ಹೂ ಇಡುವ ಬಜೆಟ್ – ಶಂಕರ್ ಎ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಗ್ರಾಮ ಪಂಚಾಯತ್ ನೌಕರರನ್ನು ಸರ್ಕಾರೀ ನೌಕರರು ಎಂದು ಪರಿಗಣಿಸಲಾಗದು, ಗಟಾರ್ ಸ್ವಚ್ಛ ಮಾಡುವವರು, ಲೈನ್ ಮ್ಯಾನ್ ಮತ್ತು ವಾಚ್ ಮ್ಯಾನ್ ನಂತಹ ಹುದ್ದೆಗಳು D ಗ್ರೂಪ್ ಗೆ ಸೇರಿಸಲಾಗದು ಎಂದ ಸರ್ಕಾರ ಬಜೆಟ್ ನಲ್ಲಿ ಅದು ಕೊಡ್ತೀನಿ ಇದು ಕೊಡ್ತೀನಿ ಎನ್ನುವ ಮೂಲಕ ಜನಸಾಮಾನ್ಯರ ಕಿವಿಗೆ ಹೂವಿಡುವ ಪ್ರಯತ್ನ ಮಾಡಿದೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತರಿಗೆ ಬೆಂಬಲ ಬೆಲೆ ಎನ್ನುವ ಸರ್ಕಾರ ರೈತರ ಸಾಲಮನ್ನಾ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮಾಸಿಕ 2,000ರೂ ಕೊಡುವುದಾಗಿ ಹೇಳಿದ್ದನ್ನೇ ನಕಲು ಮಾಡಿದ ಬಿಜೆಪಿ ಬಜೆಟ್ ನಲ್ಲಿ ಮಹಿಳೆಯರಿಗೆ ಮಾಸಿಕವಾಗಿ 500 ರೂಪಾಯಿ ಕೊಡುವುದಾಗಿ ಹೇಳಿದ್ದಾರೆ ಎಂದು ಶಂಕರ್, ಕರ್ನಾಟಕದಲ್ಲಿ ಖಾಲಿ ಇರುವ ಸುಮಾರು 2 ಲಕ್ಷ 60 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವತ್ತ ಬಜೆಟ್ ನಲ್ಲಿ ಗಮನ ಹರಿಸಿಲಲ್ಲವೆಂದು ಆರೋಪಿಸಿದರು.

    ಹೈಕೋರ್ಟ್ ಇದೆ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಸಮವಸ್ತ್ರ ನೀಡದಿದ್ದರೆ ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ, ಸಮವಸ್ತ್ರದ ಬದಲು ಬಸ್ ಪಾಸ್ ನೀಡುತ್ತೇವೆ ಎಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

    ಸಾರಿಗೆ ನೌಕರರಿಗೆ ಈ ಬಜೆಟ್ ನಲ್ಲಿ ಯಾವುದೇ ಲಾಭವಿಲ್ಲ ಎಂದಿರುವ ಅವರು, ಬಸವರಾಜ್ ಬೊಮ್ಮಾಯಿ 2023 ರ ಬಜೆಟ್ ಜನರ ಬಾಯಲ್ಲಿ ಭ್ರಮೆಯ ಲಡ್ಡನ್ನು ಹಾಕಿದೆ ಎಂದಿದ್ದಾರೆ.

  • ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪೂರ್ವಭಾವಿ ಸಭೆ

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪೂರ್ವಭಾವಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :2023 ರ ವಿಧಾನಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರು ಫೆಬ್ರವರಿ 20 ರಂದು ಉಡುಪಿ ಜಿಲ್ಲೆಗೆ ಆಗಮಿಸಿ, ಬೆಳಿಗ್ಗೆ 10ಗಂಟೆಗೆ ಸರಿಯಾಗಿ ಜಿಲ್ಲಾ ಬೂತ್ ಸಮಿತಿ ಸಮಾವೇಶದಲ್ಲಿ ಭಾಗವಹಿಸಲಿದ್ದು ಆ ನಿಟ್ಟಿನಲ್ಲಿ ಕುಂದಾಪುರ ಮಂಡಲದಿಂದ ಕಾರ್ಯಕರ್ತರು ಪಾಲ್ಗೊಳ್ಳುವ ಸಲುವಾಗಿ ಇಂದು ಮಂಡಲ ಕಚೇರಿಯಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ
    ಸಭೆ ನಡೆಯಿತು.

    ಕುಂದಾಪುರ ಮಂಡಲ ಚುನಾವಣಾ ಪ್ರಭಾರಿ ಶ್ಯಾಮಲಾ ಕುಂದರ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು, ಚುನಾವಣಾ ದೃಷ್ಟಿಯಿಂದಲೇ ಫೆಬ್ರವರಿ 20 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಉಡುಪಿಗೆ ಆಗಮಿಸಿ ಜಿಲ್ಲಾ ಬೂತ್ ಸಮಿತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ, ಕುಂದಾಪುರ ಮಂಡಲದ 222 ಬೂತ್ ಗಳಿಂದ ಬೂತ್ ಸಮಿತಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶ್ವಸ್ವಿಗೊಳಿಸಬೇಕು ಎಂದರು.

    ಸಭೆಯಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ನಿಕಟಪೂರ್ವ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಹಾಗೂ ಸತೀಶ್ ಪೂಜಾರಿ, ಮಂಡಲ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ, ವಿವಿಧ ಮೋರ್ಚಾ, ಪ್ರಕೋಷ್ಠಗಳ ಅಧ್ಯಕ್ಷರು ಪ್ರಧಾನಕಾರ್ಯದರ್ಶಿಗಳು, ಬೂತ್ ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಭಾಗಿ

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಭಾಗಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಗೋಪಾಡಿ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರದಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಅವರು ಬೂತ್ ಅಧ್ಯಕ್ಷರ ಮನೆ ಮತ್ತು ಬೂತ್ ನ ಹತ್ತಾರು ಮನೆಗಳನ್ನು ಸಂಪರ್ಕಿಸಿ ಗೋಡೆ ಬರಹ, ಪೋಸ್ಟರ್, ಪಕ್ಷದ ಸ್ಟಿಕರ್ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆ ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿ ಬೂತ್ ವಿಜಯ ಸಂಕಲ್ಪ ಅಭಿಯಾನ ನೆರವೇರಿಸಿದರು.

    ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಕಾರ್ಯದರ್ಶಿ ಸುರೇಂದ್ರ ಕಾಂಚನ್, ಶಕ್ತಿಕೇಂದ್ರ ಅಧ್ಯಕ್ಷ ಪ್ರಕಾಶ್ ಕಾಂಚನ್, ಫಲಾನುಭವಿಗಳ ಪ್ರಕೋಷ್ಠ ಸಂಚಾಲಕ ಪ್ರಸನ್ನ, ಗೋಪಾಡಿ ಪಂಚಾಯತ್ ಅಧ್ಯಕ್ಷೆ ಸರೋಜಾ ಪೂಜಾರಿ, ಸದಸ್ಯೆ ನೇತ್ರಾವತಿ ಮಡಿವಾಳ, ಬೂತ್ ಅಧ್ಯಕ್ಷ ಗಿರೀಶ್, ಪ್ರಮುಖರಾದ ಗಣೇಶ್ , ಪ್ರಸನ್ನ, ಶೇಷಗಿರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕುಂದಾಪುರ : 2023ರ ಬಜೆಟ್ ದೂರದೃಷ್ಟಿ ಹೊಂದಿದ ಅಭಿವೃದ್ದಿ ಪರ ಬಜೆಟ್ – ಶಿವಕುಮಾರ್

    ಕುಂದಾಪುರ : 2023ರ ಬಜೆಟ್ ದೂರದೃಷ್ಟಿ ಹೊಂದಿದ ಅಭಿವೃದ್ದಿ ಪರ ಬಜೆಟ್ – ಶಿವಕುಮಾರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೇಂದ್ರ ಬಜೆಟ್-2023 ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ ಎಂಬ ಮಾತಿನಂತೆ ಈ ಬಜೆಟ್ ಆಶಾದಾಯವಾಗಿದೆ. ಭಾರತದಂತಹ ದೇಶಕ್ಕೆ ಆಶಾದಾಯಕ ಬಜೆಟ್ ನ್ನು ಮಂಡಿಸಲು ದೂರ ದೃಷ್ಟಿತ್ವ ಇಟ್ಟುಕೊಂಡಿರುವ ಸಶಕ್ತ ಸರ್ಕಾರಗಳಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ 2023ರ ಬಜೆಟ್ ಅಭಿವೃದ್ದಿ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಹೇಳಿದರು.

    ಅವರು ಕುಂದಾಪುರ ಮಂಡಲ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಸ್ವಾತಂತ್ರ್ಯಾನಂತರ ನೂತನ ಸೆಂಟ್ರಲ್ ವಿಸ್ತಾ ಯೋಜನೆಯ ಹಿನ್ನೆಲೆಯಲ್ಲಿ ಪ್ರಸಕ್ತ ಪಾರ್ಣಮೆಂಟ್ ಭವನದ ಮಂಡಿಸಿರುವ ಕೊನೆಯ ಬಜೆಟ್ ಇದಾಗಿದೆ.

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ 2ನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಇದು ಎನ್ನುವುದು ವಿಶೇಷ. ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ ಆಗಿದೆ. ಈ ಬಜೆಟ್‍ನಲ್ಲಿ ವಿತ್ತೇಯ ಕೊರತೆ 5.9% ಆಗಿದ್ದು, 2022-23ರ ಬಜೆಟ್‍ಗೆ ಹೋಲಿಸಿದರೆ 14% ಪ್ರಗತಿ ಗಮನಿಸಬಹುದು.

    ಬಿಜೆಪಿ ಸರಕಾರದ 8 ವರೆ ವರ್ಷದ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿ ದೀಪ ಮತ್ತು ಮಾನದಂಡವಾಗಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಆಗುತ್ತಿದೆ. 2022 ನೇ ವರ್ಷದಲ್ಲಿ ಸುಮಾರು ರೂ.7400 ಕೋಟಿ ವ್ಯವಹಾರವಾಗಿದೆ. ಡಿಜಿಟಲ್ ವ್ಯವಹಾರವಾಗಿದೆ. ದೇಶದಲ್ಲಿ 1.74 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ಸುಮಾರು 9.4 ಕೋಟಿ ಉಚಿತ ಗ್ಯಾಸ್ ಸಂಪರ್ಕ ಮಾಡಲಾಗಿದೆ. 220 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆ ನೀಡಲಾಗಿದೆ. 47.8 ಕೋಟಿ ಜನ್‍ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ರೂ. 44.64 ಕೋಟ ಆಯುಷ್ಯಾನ್ ಆರೋಗ್ಯ ವಿಮೆ ಪಾವತಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 1.4 ಕೋಟಿ ರೈತರಿಗೆ ರೂ.2.20 ಲಕ್ಷ ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ ಎಂದರು.

    ಮಹಿಳೆಯರ ಆರ್ಥಿಕ ಸಶಕ್ತೀಕರಣ, ಮಹಿಳಾ ಉಳಿತಾಯ ಪತ್ರ ಬಿಡುಗಡೆ ಮತ್ತು 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಸಾಂಪ್ರದಾಯಕ ಕುಶಲ ಕರ್ಮಿಗಳ ಕೌಶಲ್ಯ, ಪ್ರವಾಸೋದ್ಯಮ ಗುರುತಿಸಿ ಅಭಿವೃದ್ಧಿ ಪಡಿಸುವುದು, ಹಸಿರೇ ಉಸಿರು ಎಂಬಂತೆ ಎಲ್ಲದರಲ್ಲಿಯೂ ಹಸಿಲಗೆ ಉತ್ತೇಜನ ಒಳಗೊಂಡ ಬಹುಮುಖ್ಯ ನಾಲ್ಕು ಅವಕಾಶಗಳನ್ನು ಗುರುತಿಸಿ ಅದನ್ನು ಸದೃಢಗೊಳಿಸಲು ಪೂರಕ ವ್ಯವಸ್ಥೆ ಒದಗಿಸಲಾಗಿದೆ.

    ಬಜೆಟ್ ವಿನಿಯೋಗವನ್ನು 7 ಮಜಲುಗಳನ್ನಾಗಿ ವಿಂಗಡಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ ಹಣಕಾಸನ್ನು ಒದಗಿಸಲಾಗಿದೆ. ಶ್ರೀ ಅನ್ನ ಯೋಜನೆ, ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ, ಕೌಶಲ್ಯಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ, ಹಸಿರು ಹೊದಿಕೆ, ಮೂಲ ಸೌಕರ್ಯ ಹೆಚ್ಚಿಸುವುದು, ಡಿಜಿಟಲ್ ಟಚ್ ಇದರಲ್ಲಿದೆ ಎಂದರು.

    ಆದಾಯ ತೆರಿಗೆಯ ಹೊಸ ನಿಯಮದಲ್ಲಿ ಐತಿಹಾಸಿಕ ಬದಲಾವಣೆ ಮಾಡಲಾಗಿದ್ದು ರೂ.7ರ ವರೆಗೆ ತೆರಿಗೆ ವಿನಾಯತಿ ನೀಡಲಾಗಿದೆ. ವೇತನದಾರರಿಗೆ ರೂ.50,000 ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಿದೆ. ಬಿಜೆಪಿ ಸರ್ಕಾರ ಬರುವ ಮೊದಲು ಬಜೆಟ್ ಗಾತ್ರ ರೂ.15.00 ಲಕ್ಷ ಕೋಟಿ ಆಗಿದ್ದು ಪ್ರಸ್ತಕ್ತ ಬಜೆಟ್ ಗಾತ್ರ ರೂ.45.03ಲಕ್ಷ ಕೋಟಿಆಗಿದೆ. ಅದೇ ರೀತಿ 2013ರಲ್ಲಿ ಜಿ.ಡಿ.ಪಿ ರೂ.112 ಲಕ್ಷ ಕೋಟಿ ಆಗಿದ್ದು ಈಗ ರೂ.270 ಲಕ್ಷ ಕೋಟಿ ಆಗಿದೆ. ಅಂದರೆ ಎರಡುವರೆ ಪಟ್ಟು ಹೆಚ್ಚಳವಾಗಿದೆ. ದೇಶದ ವಿದೇಶಿ ವಿನಿಮಯ ಗಾತ್ರ 600 ಬಿಲಿಯನ್ ಡಾಲರ್ ತಲುಪಿದೆ. ಐ.ಎಂ.ಎಫ್ ವಿಶ್ವಬ್ಯಾಂಕ್ ಮತ್ತು ತಜ್ಞರ ಅಂದಾಜಿನ ಪ್ರಕಾರ 2030ಕ್ಕೆ ಭಾರತವು 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. 2045ಕ್ಕೆ ಭಾರತವು 2ನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ, ಸತೀಶ ಪೂಜಾರಿ ವಕ್ವಾಡಿ, ಮಾಧ್ಯಮ ವಿಭಾಗದ ಶ್ರಿನಿಧಿ ಉಪಸ್ಥಿತರಿದ್ದರು.

  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆ ಮಾಡಿದ ಸಾರ್ವಜನಿಕ ಉದ್ದಿಮೆಗಳ ಮಾರಾಟ ಮಾಡಿರುವ ಬಿಜೆಪಿ ಸರ್ಕಾರಕ್ಕೆ ನೈತಿಕತೆ ಎಲ್ಲಿದೆ?-ಬಿ.ಕೆ ಹರಿಪ್ರಸಾದ್

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆ ಮಾಡಿದ ಸಾರ್ವಜನಿಕ ಉದ್ದಿಮೆಗಳ ಮಾರಾಟ ಮಾಡಿರುವ ಬಿಜೆಪಿ ಸರ್ಕಾರಕ್ಕೆ ನೈತಿಕತೆ ಎಲ್ಲಿದೆ?-ಬಿ.ಕೆ ಹರಿಪ್ರಸಾದ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆ ಮಾಡಿದ್ದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವ ನೈತಿಕತೆ ಎಲ್ಲಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

    ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ದೇಶದಲ್ಲಿ ಆಡಳಿತ ನೀಡಿದ್ದರಿಂದಾಗಿ ಜನಸಾಮಾನ್ಯರಾದ ನರೇಂದ್ರ ಮೋದಿಯವರಿಗೂ ಈ ದೇಶದ ಪ್ರಧಾನ ಮಂತ್ರಿಯಾಗುವ ಭಾಗ್ಯ ಒಲಿದಿದೆ. ಪ್ರಧಾನಿ ಮೋದಿಯವರಿಗೆ ದೇಶದ ಕಾಳಜಿಗಿಂತ ಅವರ ಹಿಂಬಾಲಕರ ಕಾಳಜಿ ವಹಿಸುವುದೇ ಆದ್ಯತೆಯಾಗಿದೆ. 15 ಲಕ್ಷ ಬ್ಯಾಂಕ್ ಖಾತೆಗೆ ಬರುತ್ತದೆ ಎನ್ನುವ ಸುಳ್ಳು ಭರವಸೆಯೊಂದಿಗೆ ದೇಶದ ಜನರನ್ನು ಮರಳು ಮಾಡಿದ ಬಿಜೆಪಿಗರಿಗೆ ಭರವಸೆಗಳ ಮೇಲೆ ನಂಬಿಕೆ ಇಲ್ಲದೆ ಇರುವುದರಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಹೇಗೆ ಪೂರ್ಣಗೊಳಿಸಲಾಗುತ್ತೆ ಎನ್ನುವ ಅನುಮಾನ ಅವರನ್ನು ಕಾಡುತ್ತಿದೆ. ಎಂದು ಹೇಳಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅಧ್ಬುತ ಭಾಷಾ ಸೊಗಡನ್ನು ಹೊಂದಿರುವ ‘ ಕುಂದಗನ್ನಡದ ‘ ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

    ಯಾವುದೇ ರಾಜಕಾರಣಿಗಳ ಮಕ್ಕಳು ಧರ್ಮ ರಾಜಕಾರಣಕ್ಕಾಗಿ ಹಾಗೂ ಧರ್ಮ ಸಂಘರ್ಷಕ್ಕಾಗಿ ಬೀದಿಗಿಳಿದು ಪ್ರಾಣ ಚಲ್ಲುವುದಿಲ್ಲ. ಜೈಲೂ ಸೇರುವುದಿಲ್ಲ. ಬಡ ಮಕ್ಕಳನ್ನು ಈ ಕಾರ್ಯಕ್ಕೆ ಪ್ರಚೋದಿಸುವ ನಾಯಕರು ತಮ್ಮ ತಮ್ಮ ಮಕ್ಕಳನ್ನು ಈ ಕಾರ್ಯಕ್ಕೆ ಕಳುಹಿಸುವ ಧೈರ್ಯ ತೋರಬೇಕು. ಅಭಿವೃದ್ಧಿಯ ರಾಜಕಾರಣದ ಪಾಠ ಹೇಳದೆ, ಲವ್ ಜಿಹಾದ್‍ನಂತಹ ಧರ್ಮ ರಾಜಕಾರಣದ ಪಾಠವನ್ನು ಬೋಧಿಸುವ ಬಿಜೆಪಿ ಪಕ್ಷದ ಅಧ್ಯಕ್ಷರ ಪಕ್ಷದ ಆಡಳಿತ ಬೇಕಾ ? ಅಥವಾ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವ ರಾಷ್ಟ್ರಭಕ್ತ ಕಾಂಗ್ರೆಸ್ ಸರ್ಕಾರ ಬೇಕಾ ಎನ್ನುವುದನ್ನು ಮತದಾರರು ಈ ಬಾರಿ ತೀರ್ಮಾನಿಸಬೇಕಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಂದಾಪುರ-ಗಂಗೊಳ್ಳಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಎರಡು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಂದು ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ಕೇಂದ್ರಿಕರಿಸಿಕೊಂಡು ಹಾಗೂ ಇನ್ನೊಂದು ಆಯಾ ಭೌಗೋಳಿಕ ಪ್ರದೇಶಗಳ ವ್ಯಾಪ್ತಿಯನ್ನು ಕೇಂದ್ರಿಕರಿಸಿಕೊಂಡು ಮಾಡಲಾಗಿದೆ. ಗ್ರಹ ಜ್ಯೋತಿ, ಗ್ರಹ ಲಕ್ಷ್ಮೀ ಯೋಜನೆಗಳ ಜೊತೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ 2,500 ಕೋಟಿ ವಾರ್ಷಿಕ ಅನುದಾನದಲ್ಲಿ ಕರಾವಳಿ ಪ್ರದೇಶಾಭಿವೃದ್ದಿ, ಮಂಗಳೂರಿನಲ್ಲಿ ಐಟಿ ಪಾರ್ಕ್, ಮೀನುಗಾರರಿಗೆ 10 ಲಕ್ಷ ವಿಮಾ ಯೋಜನೆ, ಮೀನುಗಾರರ ಅಭಿವೃದ್ಧಿಗೆ ಕಾರ್ಯಕ್ರಮಗಳು, ವಾರ್ಷಿಕ 250 ಕೋಟಿ ರೂ. ಅನುದಾನದಲ್ಲಿ ಬಿಲ್ಲವ ಹಾಗೂ ಬಂಟ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ನೀಡಲಾದ ಪಡಿತರ ಚೀಟಿಗಳನ್ನು ರದ್ದು ಮಾಡಿ, ಇದೀಗ ನಾವು ಸರಿ ಮಾಡಿ ಕೊಡುತ್ತೇವೆ ಎಂದು ನಂಬಿಸುವ ಪ್ರಯತ್ನ ಆಡಳಿತ ಪಕ್ಷದವರಿಂದ ನಡೆಯುತ್ತಿದೆ. ನೆರೆಯ ಕೇರಳ ರಾಜ್ಯದಲ್ಲಿ ನೀಡುವಂತೆ ಕರ್ನಾಟಕ ನಾಡಾ ದೋಣಿ ಮೀನುಗಾರರರಿಗೂ ತಲಾ 300 ಲೀಟರ್ ಸಬ್ಸಿಡಿ ಸೀಮೆಎಣ್ಣೆ ನೀಡುವ ಸಿದ್ಧರಾಮಯ್ಯ ಅವರ ನೇತ್ರತ್ವದ ಸರ್ಕಾರದ ತೀರ್ಮಾನವನ್ನು ಗಾಳಿಗೆ ತೂರಲಾಗಿದೆ. ಕೇವಲ ರಾಜಕೀಯದ ಕಾರಣಕ್ಕಾಗಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎನ್ನುವ ಬಿಜೆಪಿ ಪಕ್ಷದವರಿಗೆ ಮೀನುಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇಲ್ಲ. ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಅವರ ಸಾವನ್ನು, ಸುಳ್ಳು ಹೇಳಿ ರಾಜಕೀಯ ಲಾಭ ಮಾಡಿಕೊಂಡಿದ್ದ ಬಿಜೆಪಿಗರು ಇದೀಗ ಸಿಬಿಐ ವರದಿ ಬಂದ ಬಳಿಕ ತುಟಿ ಬಿಚ್ಚುತ್ತಿಲ್ಲ ಎಂದರು.

    ಎಐಸಿಸಿ ಕಾರ್ಯದರ್ಶಿ ರೋಝಿ ಜೋನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು.

    ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರಾದ ದಿನೇಶ್ ಪುತ್ರನ್, ಅಲೆವೂರು ಹರೀಶ್ ಕಿಣಿ, ಕೆ.ವಿಕಾಸ್ ಹೆಗ್ಡೆ, ರಾಜು ಎಸ್ ಪೂಜಾರಿ, ದೇವಕಿ ಪಿ ಸಣ್ಣಯ್ಯ, ಪ್ರಸನ್ನಕುಮಾರ ಕೆರಾಡಿ, ಪಕ್ಷದ ಪ್ರಮುಖರಾದ ಕೊಳ್ಕೆಬೈಲು ಕಿಶನ್‍ಕುಮಾರ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬೀಜಾಡಿ ಅಶೋಕ ಪೂಜಾರಿ, ಶ್ಯಾಮಲಾ ಭಂಡಾರಿ, ಸುರೇಂದ್ರ ಶೆಟ್ಟಿ, ಬಿ.ಹೆರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ದೇವಾನಂದ ಶೆಟ್ಟಿ ಬಸ್ರೂರು, ಮದನಕುಮಾರ ಉಪ್ಪುಂದ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಶಂಕರ ಕುಂದರ್ ಕೋಟ, ರೋಶನ್‍ಕುಮಾರ ಶೆಟ್ಟಿ, ಸೌರಭ್ ಬಲ್ಲಾಳ್, ಇಚ್ಚಿತಾರ್ಥ ಶೆಟ್ಟಿ, ಶೇಖರ ಪೂಜಾರಿ ಬೈಂದೂರು, ಮುನಾಫ್ ಕೋಡಿ, ಎನ್‍ಎಸ್‍ಯುಐ ಮುಖಂಡ ಸುಜನ್ ಶೆಟ್ಟಿ ಇದ್ದರು

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.

    ಬೈಂದೂರು ಶಾಸಕರಿಗೆ ಭರವಸೆ ಮರೆತು ಹೋಗಿದೆ
    ಬೈಂದೂರು ವಿಧಾನ ಸಭಾ ಚುನಾವಣೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಸುಳ್ಳು ಹಾಗೂ ಅಪಪ್ರಚಾರದಿಂದ ಚುನಾವಣೆಯನ್ನು ಗೆದ್ದಿರುವ ಬಿಜೆಪಿಗರಿಗೆ ಚುನಾವಣೆ ಮುಗಿದ ಬಳಿಕ ತಮ್ಮ ಮಾತುಗಳೇ ಮರೆತು ಹೋಗುತ್ತದೆ. ಬೈಂದೂರಿನಲ್ಲಿ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐದು ಹೊಳೆಗಳ ಜೋಡಣೆÉ ಏನಾಯಿತು ? ಕಾಂಗ್ರೆಸ್ ಅವಧಿಯಲ್ಲಿ ನಿರ್ಮಾಣ ಮಾಡಲಾದ ಮಂಗಳೂರು ವಿಮಾನ ನಿಲ್ದಾಣ ಮಾರಾಟ ಮಾಡುವವರು ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾದರು ಹೇಗೆ ? -ಕೆ.ಗೋಪಾಲ ಪೂಜಾರಿ, ಮಾಜಿ ಶಾಸಕರು

  • ಕೋಟ ಬ್ಲಾಕ್ ಆಶ್ರಯದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಆಯೋಜನೆ  – ರಾಜ್ಯ ಸರಕಾರದ ದುರಾಡಳಿತಕ್ಕೆ ಜನ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ – ಬಿ.ಕೆ ಹರಿಪ್ರಸಾದ್

    ಕೋಟ ಬ್ಲಾಕ್ ಆಶ್ರಯದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಆಯೋಜನೆ – ರಾಜ್ಯ ಸರಕಾರದ ದುರಾಡಳಿತಕ್ಕೆ ಜನ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ – ಬಿ.ಕೆ ಹರಿಪ್ರಸಾದ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಎರಡುವರೆ ಸಾವಿರ ಕೋಟಿ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರ.

    ಕೋಟ ಮಾಂಗಲ್ಯ ಮಂದಿರದಲ್ಲಿ ಕೋಟ ಬ್ಲಾಕ್ ಆಶ್ರಯದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ ಪ್ರಸ್ತುತವಿರುವ ಕೇಂದ್ರ ಹಾಗೂ ರಾಜ್ಯದಲ್ಲಿ ಇರುವ ಬಿಜೆಪಿ ಸರಕಾರ ದುರಾಡಳಿತದಿಂದ ಕೂಡಿದ ಸರಕಾರವಾಗಿದೆ ಬಡವರ ರಕ್ತ ಹೀರುತ್ತಿದೆ ಜನಸಾಮಾನ್ಯರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದೆ.

    ಶಾಸಕರು ,ಸಂಸದೆ ಶೋಭಾ ಅಭಿವೃದ್ಧಿ ಬಿಟ್ಟು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಜನರ ದಿಕ್ಕು ತಪ್ಪಿಸಿ ಅಧಿಕಾರ ಹಿಡಿಯುತ್ತಾರೆ. ಕರಾವಳಿ ಭಾಗದ ಜನರ ಹಕ್ಕುಪತ್ರ ಸಮಸ್ಯೆ, ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್, ಸೀಮೆ ಎಣ್ಣೆ ನೀಡಲು ವಿಫಲವಾಗಿದೆ. ಸರಕಾರ ಭ್ರಷ್ಟಾಚಾರದಲ್ಲೆ ಕಾಲಹರಣ ಮಾಡುತ್ತಿದೆ ಇದೊಂದು 40 ಪರ್ಸೆಂಟ್ ಸರಕಾರವಾಗಿದೆ, ಬಡ ಹಾಗೂ ಮಧ್ಯಮವರ್ಗದವರು ಬದುಕಲು ಸಾಧ್ಯವಿಲ್ಲವೆನ್ನುವಂತೆ ಬೆಲೆ ಗಗನಕ್ಕೆರಿಸಿ ಆಡಳಿತ ನಡೆಸುತ್ತಿದೆ, ಜನರ ತೆರಿಗೆ ಹಣ ಅದಾನಿ, ಅಂಬಾನಿ ಪಾಲಾಗುತ್ತಿವೆ, ಇದೊಂದು ಲೂಟಿ ಹೊಡೆಯುವ ಸರಕಾರವಾಗಿದೆ, ಜಾತಿ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ನಡುವೆ ವಿಷ ಬೀಜ ಬಿತ್ತಿ ಕೊಲೆಗಡುಕರ ಸರಕಾರವಾಗಿದೆ ಎಂದು ಕಟುಕಿದರಲ್ಲದೆ , ಇತ್ತ ಜನರ ದಾರಿ ತಪ್ಪಿಸಿ ಗುಜರಾತ್ ಮಾದರಿ ಸರಕಾರ ಮಾಡಲು ಹೊರಟಿದ್ದೇವೆ ಎಂದು ಹೇಳುತ್ತಾರೆ, ನಮ್ಮ ರಾಜ್ಯ ಇನ್ನೊಂದು ಗುಜರಾತ್ ಆಗುವುದು ಬೇಡ ನಮ್ಮ ರಾಜ್ಯ ಹಿಂದಿನ ಆಡಳಿತ ನಡೆಸಿದ ಸರಕಾರವೇ ಸಾಧನೆಯ ಪುಟ ತೆರೆಸಿದೆ. ಪ್ರಧಾನಿ ಹಾಗೂ ಕೇಂದ್ರದ ಸಚಿವರು ಚುನಾವಣಾ ಸಂದರ್ಭದಲ್ಲಿ ಮಾತ್ರ ಕರ್ನಾಟಕ ನೆನಪಾಗುತ್ತದೆ ಇನ್ನುಳಿದ ಸಂದರ್ಭ ಈ ರಾಜ್ಯದ ಕಡೆ ಮುಖವೇ ಮಾಡುವುದಿಲ್ಲ ಎಂದು ಲೇವಡಿ ಮಾಡಿದರು.ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಯುವ ಸಮೂಹವನ್ನು ದಿಕ್ಕು ತಪ್ಪಿಸಿ ಪೊಳ್ಳು ಹಿಂದುತ್ವ ಪ್ರದರ್ಶಿಸುತ್ತಿದ್ದಾರೆ, ಇದಕ್ಕೆ ಇತ್ತೀಚಿಗಿ ಪ್ರವೀಣ್ ಪೂಜಾರಿ,ಪ್ರವೀಣ್ ನೆಟ್ಯಾರು ಪ್ರಕರಣಗಳೆ ಸಾಕ್ಷಿ , ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಮಂಪರು ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದರು. ಒರ್ವ ರಾಜ್ಯದ ಮುಖ್ಯಮಂತ್ರಿಯಾಗಿ ಧರ್ಮ ,ಜಾತಿ ಇಲ್ಲದೆ ರಾಜಕಾರಣ ಮಾಡಬೇಕು ಆದರೆ ಹತ್ಯೆಯಾದ ಫಾಜಿಲ್,ಮಸೂದ್ ಮನೆಗೆ ಸಾಂತ್ವನ ಹೇಳಲು ಹೋಗದೆ ಒಂದು ಧರ್ಮದ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ,ಇದೊಂದು ಭೇದಭಾವ ಮಾಡುವ ಆಡಳಿತವಾಗಿದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು,ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದು ಬಿಜೆಪಿ ಸರಕಾರದ ಕೊಡುಗೆಯಾಗಿದೆ, ಇಲ್ಲಿನ ಇರ್ವರು ಸಚಿವರಾದ ಕೋಟ ಹಾಗೂ ಸುನೀಲ್ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿ ಕುಂದಾಪುರ ಕುಂದಗನ್ನಡದ ಭಾಷೆ ಪರಿಕಲ್ಪನೆ ಬಗ್ಗೆ ಅಭಿವೃದ್ಧಿಗೊಳಿಸಲುವಲ್ಲಿ ವಿಫಲ ರಾಗಿದ್ದಾರೆ ಎಂದು ಆರೋಪಿಸಿ ಸಿದ್ಧರಾಮಯ್ಯ ನೇತ್ರತ್ವದಲ್ಲಿ ಸರಕಾರ ಬಡವರ ,ಮಧ್ಯಮವರ್ಗದವರ ಪರವಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಆದರೆ ಬಿಜೆಪಿ ನೇತ್ರತ್ವದ ಈಗಿನ ಸರಕಾರ ಆ ಯೋಜನೆಗಳನ್ನು ಮೂಲೆಗುಂಪಾಗಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಿ ತನ್ನಿ ಆ ಮೂಲಕ ಜನಸಾಮಾನ್ಯರ ಸರಕಾರವಾಗಿಸಲು ಕರೆಇತ್ತರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಐ.ಸಿ.ಸಿ ಕಾರ್ಯದರ್ಶಿ ರೋಝಿ ಎಂ ಜಾನ್, ವಿನಯ ಕುಮಾರ್ ಸೊರೆಕೆ, ಎಂ ಎ ಗಫೂರ್,ಅಶೋಕ ಕುಮಾರ್ ಕೊಡವೂರ,ಶ್ಯಾಮಲಾ ಭಂಢಾರಿ,ಮಲ್ಯಾಡಿ ಶಿವರಾಮ ಶೆಟ್ಟಿ, ಶೇಖರ್ ಪೂಜಾರಿ,ರಾಜು ಪೂಜಾರಿ,ದಿನೇಶ್ ಹೆಗ್ಡೆ ಮೊಳಹಳ್ಳಿ,ಕಿಶನ್ ಹೆಗ್ಡೆ,ಅಶೋಕ್ ಪೂಜಾರಿ,ತಿಮ್ಮ ಪೂಜಾರಿ,ಹರೀಷ್ ಕಿಣಿ,ರಮೇಶ್ ಕುಂದರ್,ರೋಶನಿ ಒಲಿವೇರ ಮತ್ತಿತರರು ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಢಾರಿ ಪ್ರಾಸ್ತಾವನೆಗೈದರು. ಕಾರ್ಯಕ್ರಮವನ್ನು ಅಕ್ಷಯ ಶೆಟ್ಟಿ ನಿರೂಪಿಸಿದರು.ಚಂದ್ರ ಆಚಾರ್ಯ ,ಹಾಗೂ ಗಣೇಶ್ ಪೂಜಾರಿ ಸಹಕರಿಸಿದರು.

  • ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಕಾರ್ಯಕರ್ತರ ತುರ್ತು ಸಭೆ

    ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಕಾರ್ಯಕರ್ತರ ತುರ್ತು ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರಾಜ್ಯ ಬಿಜೆಪಿಯ ನಿರ್ದೇಶನದಂತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚುನಾವಣಾ ತಯಾರಿಯ ನಿಟ್ಟಿನಲ್ಲಿ ಕುಂದಾಪುರ ಮಂಡಲದಲ್ಲಿ ಕಾರ್ಯಕರ್ತರ ತುರ್ತು ಸಭೆ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.

    ಚುನಾವಣೆ ಸಮೀಪಿಸುತ್ತಿರುವ ನಿಟ್ಟಿನಲ್ಲಿ ಪಕ್ಷದಿಂದ ನೀಡುವ ಎಲ್ಲಾ ಕಾರ್ಯಕ್ರಮವನ್ನು ಕುಂದಾಪುರ ಮಂಡಲದಲ್ಲಿ ಅಚ್ಚುಕಟ್ಟಾಗಿ ನಡೆಯುವಂತೆ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರ ಜವಾಬ್ದಾರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಮತ್ತು ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದ ಅಂತರದಲ್ಲಿ ವಿಜಯಗಳಿಸುವ ಕುರಿತಾಗಿ ಚರ್ಚಿಸಲಾಯಿತು.

    ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಮಂಡಲ ಉಪಾಧ್ಯಕ್ಷ ಶ್ರೀಧರ್, ಮಂಡಲ ವಿಸ್ತಾರಕರಾದ ಯೋಗೀಶ್ ಮಾನೆ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಮಂಡಲ ಪಧಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರ ಅಧ್ಯಕ್ಷರು, ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕುಂದಾಪುರ: ಬಿಜೆಪಿ ಯುವಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನ

    ಕುಂದಾಪುರ: ಬಿಜೆಪಿ ಯುವಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲದ ನೇತೃತ್ವದಲ್ಲಿ ಇಂದು ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಿತು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸಿ ಸದಸ್ಯತ್ವ ನೋಂದಣಿ ಮಾಡಿಸಲಾಯಿತು.

    ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ , ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಬೀಜಾಡಿ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಯುವಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಯುವಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ ಸುನಿಲ್ ಖಾರ್ವಿ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಯುವಮೋರ್ಚಾ ಕುಂದಾಪುರ ನಗರ ಅಧ್ಯಕ್ಷ ಸಂಪತ್ ಸೇರಿಗಾರ್, ಕಾರ್ಯದರ್ಶಿ ಅರುಣ್ ಕುಮಾರ್, ದೀಕ್ಷಿತ್ ಶೆಟ್ಟಿ ಹಲವರು ಉಪಸ್ಥಿತರಿದ್ದರು.