ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೇಂದ್ರ ಬಜೆಟ್-2023 ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ ಎಂಬ ಮಾತಿನಂತೆ ಈ ಬಜೆಟ್ ಆಶಾದಾಯವಾಗಿದೆ. ಭಾರತದಂತಹ ದೇಶಕ್ಕೆ ಆಶಾದಾಯಕ ಬಜೆಟ್ ನ್ನು ಮಂಡಿಸಲು ದೂರ ದೃಷ್ಟಿತ್ವ ಇಟ್ಟುಕೊಂಡಿರುವ ಸಶಕ್ತ ಸರ್ಕಾರಗಳಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ 2023ರ ಬಜೆಟ್ ಅಭಿವೃದ್ದಿ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಹೇಳಿದರು.
ಅವರು ಕುಂದಾಪುರ ಮಂಡಲ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯಾನಂತರ ನೂತನ ಸೆಂಟ್ರಲ್ ವಿಸ್ತಾ ಯೋಜನೆಯ ಹಿನ್ನೆಲೆಯಲ್ಲಿ ಪ್ರಸಕ್ತ ಪಾರ್ಣಮೆಂಟ್ ಭವನದ ಮಂಡಿಸಿರುವ ಕೊನೆಯ ಬಜೆಟ್ ಇದಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ 2ನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಇದು ಎನ್ನುವುದು ವಿಶೇಷ. ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ ಆಗಿದೆ. ಈ ಬಜೆಟ್‍ನಲ್ಲಿ ವಿತ್ತೇಯ ಕೊರತೆ 5.9% ಆಗಿದ್ದು, 2022-23ರ ಬಜೆಟ್‍ಗೆ ಹೋಲಿಸಿದರೆ 14% ಪ್ರಗತಿ ಗಮನಿಸಬಹುದು.
ಬಿಜೆಪಿ ಸರಕಾರದ 8 ವರೆ ವರ್ಷದ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿ ದೀಪ ಮತ್ತು ಮಾನದಂಡವಾಗಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಆಗುತ್ತಿದೆ. 2022 ನೇ ವರ್ಷದಲ್ಲಿ ಸುಮಾರು ರೂ.7400 ಕೋಟಿ ವ್ಯವಹಾರವಾಗಿದೆ. ಡಿಜಿಟಲ್ ವ್ಯವಹಾರವಾಗಿದೆ. ದೇಶದಲ್ಲಿ 1.74 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ಸುಮಾರು 9.4 ಕೋಟಿ ಉಚಿತ ಗ್ಯಾಸ್ ಸಂಪರ್ಕ ಮಾಡಲಾಗಿದೆ. 220 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆ ನೀಡಲಾಗಿದೆ. 47.8 ಕೋಟಿ ಜನ್‍ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ರೂ. 44.64 ಕೋಟ ಆಯುಷ್ಯಾನ್ ಆರೋಗ್ಯ ವಿಮೆ ಪಾವತಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 1.4 ಕೋಟಿ ರೈತರಿಗೆ ರೂ.2.20 ಲಕ್ಷ ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ ಎಂದರು.
ಮಹಿಳೆಯರ ಆರ್ಥಿಕ ಸಶಕ್ತೀಕರಣ, ಮಹಿಳಾ ಉಳಿತಾಯ ಪತ್ರ ಬಿಡುಗಡೆ ಮತ್ತು 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಸಾಂಪ್ರದಾಯಕ ಕುಶಲ ಕರ್ಮಿಗಳ ಕೌಶಲ್ಯ, ಪ್ರವಾಸೋದ್ಯಮ ಗುರುತಿಸಿ ಅಭಿವೃದ್ಧಿ ಪಡಿಸುವುದು, ಹಸಿರೇ ಉಸಿರು ಎಂಬಂತೆ ಎಲ್ಲದರಲ್ಲಿಯೂ ಹಸಿಲಗೆ ಉತ್ತೇಜನ ಒಳಗೊಂಡ ಬಹುಮುಖ್ಯ ನಾಲ್ಕು ಅವಕಾಶಗಳನ್ನು ಗುರುತಿಸಿ ಅದನ್ನು ಸದೃಢಗೊಳಿಸಲು ಪೂರಕ ವ್ಯವಸ್ಥೆ ಒದಗಿಸಲಾಗಿದೆ.
ಬಜೆಟ್ ವಿನಿಯೋಗವನ್ನು 7 ಮಜಲುಗಳನ್ನಾಗಿ ವಿಂಗಡಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ ಹಣಕಾಸನ್ನು ಒದಗಿಸಲಾಗಿದೆ. ಶ್ರೀ ಅನ್ನ ಯೋಜನೆ, ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ, ಕೌಶಲ್ಯಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ, ಹಸಿರು ಹೊದಿಕೆ, ಮೂಲ ಸೌಕರ್ಯ ಹೆಚ್ಚಿಸುವುದು, ಡಿಜಿಟಲ್ ಟಚ್ ಇದರಲ್ಲಿದೆ ಎಂದರು.
ಆದಾಯ ತೆರಿಗೆಯ ಹೊಸ ನಿಯಮದಲ್ಲಿ ಐತಿಹಾಸಿಕ ಬದಲಾವಣೆ ಮಾಡಲಾಗಿದ್ದು ರೂ.7ರ ವರೆಗೆ ತೆರಿಗೆ ವಿನಾಯತಿ ನೀಡಲಾಗಿದೆ. ವೇತನದಾರರಿಗೆ ರೂ.50,000 ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಿದೆ. ಬಿಜೆಪಿ ಸರ್ಕಾರ ಬರುವ ಮೊದಲು ಬಜೆಟ್ ಗಾತ್ರ ರೂ.15.00 ಲಕ್ಷ ಕೋಟಿ ಆಗಿದ್ದು ಪ್ರಸ್ತಕ್ತ ಬಜೆಟ್ ಗಾತ್ರ ರೂ.45.03ಲಕ್ಷ ಕೋಟಿಆಗಿದೆ. ಅದೇ ರೀತಿ 2013ರಲ್ಲಿ ಜಿ.ಡಿ.ಪಿ ರೂ.112 ಲಕ್ಷ ಕೋಟಿ ಆಗಿದ್ದು ಈಗ ರೂ.270 ಲಕ್ಷ ಕೋಟಿ ಆಗಿದೆ. ಅಂದರೆ ಎರಡುವರೆ ಪಟ್ಟು ಹೆಚ್ಚಳವಾಗಿದೆ. ದೇಶದ ವಿದೇಶಿ ವಿನಿಮಯ ಗಾತ್ರ 600 ಬಿಲಿಯನ್ ಡಾಲರ್ ತಲುಪಿದೆ. ಐ.ಎಂ.ಎಫ್ ವಿಶ್ವಬ್ಯಾಂಕ್ ಮತ್ತು ತಜ್ಞರ ಅಂದಾಜಿನ ಪ್ರಕಾರ 2030ಕ್ಕೆ ಭಾರತವು 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. 2045ಕ್ಕೆ ಭಾರತವು 2ನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ, ಸತೀಶ ಪೂಜಾರಿ ವಕ್ವಾಡಿ, ಮಾಧ್ಯಮ ವಿಭಾಗದ ಶ್ರಿನಿಧಿ ಉಪಸ್ಥಿತರಿದ್ದರು.











