ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಗ್ರಾಮ ಪಂಚಾಯತ್ ನೌಕರರನ್ನು ಸರ್ಕಾರೀ ನೌಕರರು ಎಂದು ಪರಿಗಣಿಸಲಾಗದು, ಗಟಾರ್ ಸ್ವಚ್ಛ ಮಾಡುವವರು, ಲೈನ್ ಮ್ಯಾನ್ ಮತ್ತು ವಾಚ್ ಮ್ಯಾನ್ ನಂತಹ ಹುದ್ದೆಗಳು D ಗ್ರೂಪ್ ಗೆ ಸೇರಿಸಲಾಗದು ಎಂದ ಸರ್ಕಾರ ಬಜೆಟ್ ನಲ್ಲಿ ಅದು ಕೊಡ್ತೀನಿ ಇದು ಕೊಡ್ತೀನಿ ಎನ್ನುವ ಮೂಲಕ ಜನಸಾಮಾನ್ಯರ ಕಿವಿಗೆ ಹೂವಿಡುವ ಪ್ರಯತ್ನ ಮಾಡಿದೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಬೆಂಬಲ ಬೆಲೆ ಎನ್ನುವ ಸರ್ಕಾರ ರೈತರ ಸಾಲಮನ್ನಾ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮಾಸಿಕ 2,000ರೂ ಕೊಡುವುದಾಗಿ ಹೇಳಿದ್ದನ್ನೇ ನಕಲು ಮಾಡಿದ ಬಿಜೆಪಿ ಬಜೆಟ್ ನಲ್ಲಿ ಮಹಿಳೆಯರಿಗೆ ಮಾಸಿಕವಾಗಿ 500 ರೂಪಾಯಿ ಕೊಡುವುದಾಗಿ ಹೇಳಿದ್ದಾರೆ ಎಂದು ಶಂಕರ್, ಕರ್ನಾಟಕದಲ್ಲಿ ಖಾಲಿ ಇರುವ ಸುಮಾರು 2 ಲಕ್ಷ 60 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವತ್ತ ಬಜೆಟ್ ನಲ್ಲಿ ಗಮನ ಹರಿಸಿಲಲ್ಲವೆಂದು ಆರೋಪಿಸಿದರು.
ಹೈಕೋರ್ಟ್ ಇದೆ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಸಮವಸ್ತ್ರ ನೀಡದಿದ್ದರೆ ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ, ಸಮವಸ್ತ್ರದ ಬದಲು ಬಸ್ ಪಾಸ್ ನೀಡುತ್ತೇವೆ ಎಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
ಸಾರಿಗೆ ನೌಕರರಿಗೆ ಈ ಬಜೆಟ್ ನಲ್ಲಿ ಯಾವುದೇ ಲಾಭವಿಲ್ಲ ಎಂದಿರುವ ಅವರು, ಬಸವರಾಜ್ ಬೊಮ್ಮಾಯಿ 2023 ರ ಬಜೆಟ್ ಜನರ ಬಾಯಲ್ಲಿ ಭ್ರಮೆಯ ಲಡ್ಡನ್ನು ಹಾಕಿದೆ ಎಂದಿದ್ದಾರೆ.











