ಬಳ್ಕೂರು : ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 1.75ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕುಂದಾಪುರ ಮಿರರ್ ಸುದ್ದಿ…

Video :

ಕುಂದಾಪುರ : ಬಳ್ಕೂರು ಗ್ರಾ.ಪಂ. ವ್ಯಾಪ್ತಿಯ ರೂ.1.75ಕೊ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕುಂದಾಪುರ ಮಾಜಿ ತಾ.ಪಂ. ಉಪಾಧ್ಯಕ್ಷ ಕಿಶನ್ ಹೆಗ್ಡೆ ಬುಧವಾರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, “ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಫಾರಸು ಮೇರೆಗೆ ಕಬ್ಬಿನ ಗದ್ದೆ ರಸ್ತೆ 50ಲಕ್ಷ, ಗುಬ್ಬಿ ಹಾಡಿ ರಸ್ತೆ 25ಲಕ್ಷ, ಸಾಲಿಮನೆ ಬೆಟ್ಟಿನ ರಸ್ತೆ 50ಲಕ್ಷ, ಪಾನಕದಕಟ್ಟೆಯಿಂದ ಗುತ್ತಿಕೆರೆ ರಸ್ತೆ 50ಲಕ್ಷ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಳ್ಕೂರು ಗ್ರಾ.ಪಂ.ಅಧ್ಯಕ್ಷ ನಿಶ್ಚಿತ್ ಶೆಟ್ಟಿ, ಗ್ರಾ.ಪಂ. ಸದಸ್ಯ ನಾಗೇಶ್ ಶೇರುಗಾರ್, ಅಕ್ಷತ್ ಶೇರುಗಾರ್, ಗಿರಿಜಾ, ಸುಶೀಲಾ, ಕಾರ್ತಿಕ್ ಸ್ಕ್ಯಾನಿಂಗ್ ಮಾಲಕರಾದ ವೆಂಕಟ್ ರಮಣ ಉಡುಪ, ಮಾಜಿ ಸದಸ್ಯ ಗಣೇಶ್ ಆಚಾರ್ಯ, ಸದಾನಂದ ಬಳ್ಕೂರು, ಲಕ್ಷಣ್ ಪೂಜಾರಿ, ತಿಲಕ್, ಮಾಜಿ ತಾ.ಪಂ. ಸದಸ್ಯೆ ಪೂರ್ಣಿಮ, ನಾಗರಾಜ್ ಬಸ್ರೂರು, ಶ್ಯಾಮಲ, ಪೂರ್ಣಿಮ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts