ಮುಂದಿನ ತಲೆಮಾರಿಗೆ ಪರಿಸರ ಉಳಿಸಿ -ಸಂಪತ್ ಕುಮಾರ್ ಶೆಟ್ಟಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪಂಚವರ್ಣ ಸಂಘಟನೆ ಪ್ರತಿ ಭಾನುವಾರ ಪರಿಸರಕ್ಕಾಗಿ ಸಮರ್ಪಿಸಿಕೊಂಡ ರೀತಿ ಅತ್ಯಂತ ಪ್ರಶಂಸನೀಯ ಎಂದು ಶ್ರೀ ಕೃಷ್ಣಪ್ರಸಾದ್ ಗ್ರೂಪ್ಸ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.
ಭಾನುವಾರ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಕೋಟತಟ್ಟು ಗ್ರಾಮಪಂಚಾಯತ್, ಸಿಂಧೂರ ಸಂಜೀವಿನಿ ಒಕ್ಕೂಟ ಇವರುಗಳ ಸಹಯೋಗದೊಂದಿಗೆ ಕೋಟತಟ್ಟು ಪಡುಕರೆ ಬೀಚ್ ನಲ್ಲಿ 325ನೇ ವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಭಾನುವಾರ ಬಂತ್ತೆಂದರೆ ನಾವುಗಳು ಬಿಡುವು ಮಾಡಿಕೊಳ್ಳವ ವಾರವಾಗಿ ಪರಿಣಮಿಸಿದರೆ ಪಂಚವರ್ಣ ಸಂಘಟನೆ ನಿತ್ಯನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿ ಸಂಘಟನೆಯಾಗಿ ರೂಪುಗೊಂಡಿದೆ ಎಂದರು.
ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ ಮಾತನಾಡಿ ಮುಂದಿನ ತಲೆಮಾರಿಗಾಗಿ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾಯಕ ನಮ್ಮಿಂದಾಗಲಿ ಪ್ರಕೃತಿ ಮಲಿನಗೊಳಿಸುವ ಕಾರ್ಯ ಇನ್ನಾದರೂ ನಿಲ್ಲಲ್ಲಿ ಎಂದರು.
ಈ ಸಂದರ್ಭದಲ್ಲಿ ಸಮುದ್ರತಟದಿಂದ ಸುಮಾರು ಪ್ಲಾಸ್ಟಿಕ್ ತ್ಯಾಜ್ಯ,ಮದ್ಯದ ಬಾಟಲಿ ಸೇರಿದಂತೆ ಅನೇಕ ರೀತಿಯ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಸ್ವಚ್ಛತಾ ಅಭಿಯಾನದ ಮುಂದಾಳತ್ವವನ್ನು ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಶ್ಯಾಮಲ ಸಿ ಪುತ್ರನ್,ಪಂಚವರ್ಣ ಮಹಿಳಾ ಮಂಡಲದ ಸವಿತಾ ನಾಗರಾಜ್,ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್,ಪೂರ್ವಾಧ್ಯಕ್ಷ ಗಿರೀಶ್ ಆಚಾರ್ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಸದಸ್ಯರಾದ ಪ್ರಭಾಕರ್ ಮಣೂರು ನಿರೂಪಿಸಿ ,ರವೀಂದ್ರ ಕೋಟ ಸಂಯೋಜಿಸಿದರು.












