ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಹಕಾರಿ ಸಂಘಗಳ ಅಡಿಪಾಯವೇ ಸಹಕಾರ. ಸಹಕಾರ ತತ್ತ್ವದ ಮೇಲೇಯೇ ಈ ಸಂಘಗಳು ನಿಂತಿವೆ. ಜಗತ್ತಿಗೆ ಮೊದಲು ಸಹಕಾರಿ ತತ್ತ್ವವನ್ನು ಪರಿಚಯಿಸಿದವನು ಭಗವಂತ ಶ್ರೀ ಕೃಷ್ಣ. ದೇವಾಡಿಗರ ಸಮಾಜಕ್ಕೆ ಈ ಸಹಕಾರಿ ಸಂಘವು ಒಲಿತನ್ನು ಮಾಡಲಿ, ಪರಸ್ಪರ ಸಹಕಾರ ಮನೋಭಾವದಿಂದ ಸಂಘವು ಇನ್ನಷ್ಟು ಉತ್ತುಂಗಕ್ಕೇರಲಿ. ಕೃಷ್ಣ ಅನುಗ್ರಹ, ಶ್ರೀ ರಕ್ಷೆ ನಿರಂತರವಾಗಿರಲಿ ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ -ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು, ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು.
ಅವರು ರವಿವಾರ ತಲ್ಲೂರಿನ ಎಸ್. .ಎಸ್. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ‘ಆರಂಭಗೊಂಡ ತಲ್ಲೂರು ದೇವಾಡಿಗರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಠೇವಣಿಪತ್ರ ಬಿಡುಗಡೆಗೊಳಿಸಿ, ಸಮ್ಮಾನ ಸ್ವೀಕರಿಸಿದ ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಬಾರ್ಕೂರು ಮಾತನಾಡಿ, ಈ ಸಹಕಾರಿ ಸಂಘವು ಸಮಾಜ ಬಾಂಧವರ ಏಳ್ಗೆಯಲ್ಲಿ ಮಹತ್ತರ ಪಾತ್ರ ವಹಿಸಲಿ. ಮಕ್ಕಳ ಶಿಕ್ಷಣ ಸುಧಾರಣೆಗೂ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.
ದೇವಾಡಿಗರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂಜೀವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ರಮೇಶ್ ದೇವಾಡಿಗ ವಂಡ್ಸೆ ಹಾಗೂ ನಾಗರಾಜ ಡಿ. ಪಡುಕೋಣೆ ಅವರನ್ನು ಸಮ್ಮಾನಿಸಲಾಯಿತು.
ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿದರು.
ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳ ದೇವಾಡಿಗರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು, ಸಮಾಜ ಸೇವಕ ಶಂಕರ ಅಂಕದಕಟ್ಟೆ ವಕೀಲ ರಾಜ ಕುಮಾರ್ ನೆಂಪು, ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ಹೊಸ್ಕಳಿ ಶುಭಹಾರೈಸಿದರು.
ಮಾಲಕ ಸುಧಾಕರ ಶೆಟ್ಟಿ, ದೇವಾಡಿಗರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕಿರಣ್ ದೇವಾಡಿಗ, ನಿರ್ದೇಶಕರಾದ ನಾಗೇಶ್ ದೇವಾಡಿಗ ಉಪ್ಪಿನಕುದ್ರು, ಸತೀಶ್ ದೇವಾಡಿಗ, ಮಹೇಶ್ ದೇವಾಡಿಗ, ಸುರೇಶ್ ದೇವಾಡಿಗ, ನಾಗರಾಜ ದೇವಾಡಿಗ, ಜಗನ್ನಾಥ ದೇವಾಡಿಗ, ನಾಗೇಶ ದೇವಾಡಿಗ ಬಾಡ ಬೆಟ್ಟು ದಿನೇಶ್ ದೇವಾಡಿಗ, ಮಹೇಂದ್ರ ದೇವಾಡಿಗ, ಜ್ಯೋತಿ ದೇವಾಡಿಗ, ಶೋಭಾ ದೇವಾಡಿಗ ಉಪಸ್ಥಿತರಿದ್ದರು. ಸಿಇಒ ಕಿರಣ್ ಕುಮಾರ್ ದೇವಾಡಿಗ ಸ್ವಾಗತಿಸಿದರು. ರವಿ ದೇವಾಡಿಗ ನಿರೂಪಿಸಿದರು.












