ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ ಮರು ಆಯ್ಕೆ

0
252

ಕುಂದಾಪುರ ಮಿರರ್ ಸುದ್ದಿ…

ಕೋಟ: ಗೆಳೆಯರ ಬಳಗ ಕಾರ್ಕಡ ಇದರ 36ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ .ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗಿತು.

ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ಶೀನ ಹಾಗೂ ಅಡಿಟ್ ಮಾಡಿದ ಆಯವ್ಯಯ ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು.

ನಂತರ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನವರನ್ನು ಮುಂದಿನ 3 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೆಳೆಯರ ಬಳಗದ ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ ಅವಿರೋಧವಾಗಿ ಮರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕೆ. ಶಶಿಧರ ಮಯ್ಯ, ಕಾರ್ಯದರ್ಶಿಯಾಗಿ ಕೆ.ಶೀನ, ಜೊತೆ ಕಾರ್ಯದರ್ಶಿಯಾಗಿ ಕೆ. ಶ್ರೀಕಾಂತ ಐತಾಳ.
ಖಜಾಂಚಿ ನಾಗರಾಜ ಉಪಾಧ್ಯ, ಕಾರ್ಯಕಾರಿ ಸಮಿತಿಯ ಪ್ರಮುಖರಾಗಿ ಕೆ. ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ, ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ.ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ,ಬಡಾಹೋಳಿ ಕೆ. ಶೇಖರ, ಕೆ. ರಘ ಭಂಡಾರಿ , ಇವರುಗಳು ಆಯ್ಕೆ ಆಗಿದ್ದಾರೆ.

Click Here

LEAVE A REPLY

Please enter your comment!
Please enter your name here