ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: 2017ರ ವೃಂದ ಮತ್ತು ನೇಮಕಾತಿ ನಿಯಮಗಳಿಂದ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸುವ ಸಲುವಾಗಿ ಅಗಸ್ಟ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ತಾಲೂಕು ಘಟಕದ ವತಿಯಿಂದ ಮಾನ್ಯ ತಹಸಿಲ್ದಾರ್ ಶ್ರೀಮತಿ ಶೋಭಾಲಕ್ಷ್ಮೀ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರವಾಗಿ ಮ್ಯಾನೇಜರ್ ರೇಖಾ ಮೇಡಂಗೆ ಚಳುವಳಿ ಪತ್ರಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮ ಮೊಗವೀರ, ಕೋಶಾಧಿಕಾರಿ ಶ್ರೀನಾಥ ಜಿ ಪೂಜಾರಿ, ಗೌರವಾಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷ ಶಶಿಧರ ಶೆಟ್ಟಿ, ಸಹಕಾರ್ಯದರ್ಶಿ ಸತೀಶ ಎಚ್ ಆರ್ ಮತ್ತು ಚಂದ್ರಕಲಾ ಜಿಲ್ಲಾ ಪ್ರತಿನಿಧಿ ಯಶೋಧ ತಾಲೂಕು ಸಂಘಟನೆಯ ಉಷಾ ಚಿಕನ್ ಸಾಲು ದೇವನಾಯ್ಕ ಅಶೋಕ ಹೊಳ್ಳ ಹಾಗೂ ಕಛೇರಿ ಅಧಿಕ್ಷರಾದ ಮಲ್ಲಿಕಾ ಮೇಡಂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂತೋಷಕುಮಾರ ಶೆಟ್ಟಿ ಬಿ.ಐ.ಇ.ಆರ್.ಟಿ ಶಂಕರ ಕುಲಾಲ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗರಾಜ ಆಚಾರ್ಯ ಹಾಗೂ ಕುಂದಾಪುರ ವಲಯದ 50ಕ್ಕೂ ಹೆಚ್ಚು ಶಿಕ್ಷಕರು ಉಪಸ್ಥಿತರಿದ್ದರು.











