ಮಣೂರಿನ ಬೆಳ್ಳಿ ಚುಕ್ಕಿ ಮನೆಯಂಗಳದಿ ಮಿಂದೆದ್ದ ಸ್ನೇಹಕೂಟದ ಮಹಿಳಾ ಮಣಿಗಳು..! ‘ಆಷಾಢದ ಘಮ ಘಮದಲ್ಲಿ ಮೇಳೈಸಿದ ತಿಂಡಿಗಳು

0
115

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಸ್ನೇಹಕೂಟ ಸಂಘದ ಆಶ್ರಯದಲ್ಲಿ ಗುರುವಾರ ಆಷಾಢದ ಘಮ ಘಮ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಭಿನ್ನವಾಗಿ ಸಂಪನ್ನಗೊಂಡಿತು.
ಮಣೂರಿನ ‘ಬೆಳ್ಳಿ ಚುಕ್ಕಿ ಮನೆಯಂಗಳದಿ ನಡೆದ ಆಷಾಢ ಸಂಭ್ರಮದಲ್ಲಿ ಮಿಂದೆದ್ದ ಮಹಿಳಾ ಮಣಿಗಳು ಗ್ರಾಮ್ಯ ಸೊಗಡಿಗೆ ಬಣ್ಣ ಬಡಿದರು.
ಬೆಳಿಗ್ಗೆ 10:30ಕ್ಕೆ ಚಾಲನೆಗೊಂಡ ಆಷಾಡಿ ಘಮ ಘಮ ಸಂಭ್ರಮದಲ್ಲಿ ವಿವಿಧ ಗ್ರಾಮೀಣ ಕ್ರೀಡೆ,ತಿನಿಸುಗಳು ವಿಶೇಷವಾಗಿ ಗಮನ ಸೆಳೆದವು.
ಕಾರ್ಯಕ್ರಮಕ್ಕೆ ಸ್ನೇಹಕೂಟದ ಪೋಷಕರಾದ ವಿಷ್ಣುಮೂರ್ತಿ ಮಯ್ಯ ಚಾಲನೆ ನೀಡಿದರು.
ಸ್ನೇಹಕೂಟದ ಅಧ್ಯಕ್ಷೆ ಭಾರತಿ ಮಯ್ಯ,ಗೌರವ ಸಲಹೆಗಾರ ಸುವರ್ಣಲತಾ, ಸಾವಿತ್ರಿ ಮಯ್ಯ,ಕಾರ್ಯದರ್ಶಿ ಸ್ಮೀತಾರಾಣಿ, ಕೋಶಾಧಿಕಾರಿ ವಿಜಯಲಕ್ಷ್ಮೀ ಭಟ್, ಉಪಾಧ್ಯಕ್ಷೆ ಗುಣವತಿ ಶೆಟ್ಟಿ,ವಿನಯ ಉಡುಪ, ಹೊತ್ತಿಲ ಪೂಜೆ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವರದಿಯನ್ನು ಸುಜಾತ ಬಾಯರಿ ವಾಚಿಸಿದರು. ಕಾರ್ಯಕ್ರಮವನ್ನು ವನಿತಾ ಉಪಾಧ್ಯ ನಿರೂಪಿಸಿದರು.
ಆಷಾಢ ವಿಶೇಷತೆಯ ಬಗ್ಗೆ ಮುಕಾಂಬಿಕಾ ಮಯ್ಯ ತಿಳಿಸಿದರು. ಶ್ವೇತಾ ಎಸ್ ಉಪಾಧ್ಯಾ ವಂದಿಸಿದರು.

“ಕಾರ್ಯಕ್ರಮದಲ್ಲಿ ಏನೆಲ್ಲ ವಿಶೇಷತೆ ಯಾವಾವ ಕ್ರೀಡೆ”
ತಿಂಡಿ ತಿನಿಸುಗಳಾದ ಕೊಚ್ಚಿಕ್ಕಿ ಉಂಡೆ, ಪ್ರತ್ರೋಡೆ, ಕೆಸಿನ ಕೊಜ್ಜು, ಚಟ್ಟೆ ಸೊಪ್ಪಿನ ಗೊಜ್ಜು, ಕೊಚ್ಚಿಕ್ಕಿ ಅನ್ನ,ಹೊರಳಿ ಸಾರು, ಪಟ್ಟು ಉಂಡೆ, ಮಾವಿನ ಹಣ್ಣಿನ ಹಲ್ವಾ, ಹಲಸಿನ ಕಡಬು, ಕೊಡು ಬಳೆ, ಅತ್ರಾಸ, ಜಿಲೆಬಿ ಮುಂತಾದ ತಿಂಡಿ,
ರಸ ಪ್ರಶ್ನೆ, ಮೊಜಿನ ಆಟಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗಾಗಿ ಹಲವು ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು.
ವಿವಿಧ ಆಟ-ಸ್ಪರ್ಧೆಗಳಲ್ಲಿ ಗೆದ್ದ ವಿಜೇತರಿಗೆ ದೊಡ್ದ ದೊಡ್ಡ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ರುಚಿಯಾದ ಭೋಜನ ಆಷಾಢ ಮಾಸದ ವಿಶೇಷ ವೈವಿಧ್ಯಮಯ ಹಾಗೂ ರುಚಿಕರ ಅಡುಗೆಗಳ ಮೃಷ್ಟಾನ್ನ ಭೋಜನದ ಸವಿಯುಂಡರು.

Click Here

LEAVE A REPLY

Please enter your comment!
Please enter your name here