ವಂಡ್ಸೆ :ಎಸ್.ಎಸ್.ಎಲ್.ಸಿ: ಅವಳಿ ಸೋದರಿಯರಿಗೆ ಸಮಾನ ಅಂಕ

0
118

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅವಳಿ ಸಹೋದರಿಯರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಬ್ಬರೂ ಕೂಡಾ ಒಂದೇ ರೀತಿ ಅಂಕ ಪಡೆಯುವ ಮೂಲಕ ಗಮನ ಸಳೆದಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ-ನೆಂಪು ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಹಾಗೂ ಪ್ರತೀಕ್ಷಾ ಎಸ್.ಪೂಜಾರಿ ಇಬ್ಬರೂ ಕೂಡಾ 602 ಅಂಕ ಪಡೆದಿದ್ದಾರೆ. ಇವರಿಬ್ಬರೂ ಕೂಡಾ ಕಲಿಕೆಯಲ್ಲೂ ಸಾಮ್ಯಾತೆ ಹೊಂದಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದಿರುವುದು ವಿಶೇಷವಾಗಿದೆ.
ಇನ್ನೊಂದು ವಿಶೇಷವೆಂದರೆ ಇವರು ಬಸ್ರೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಇಸಿಓ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ್ ಹಾಗೂ ಪ್ರೇಮಾ ಅವರ ಪುತ್ರಿಯರು. ತಂದೆ ಸರಕಾರಿ ಶಾಲೆಯ ಶಿಕ್ಷಕರಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿ ಮಾದರಿಯಾಗಿದ್ದಾರೆ. ಇವರು 7ನೇ ತರಗತಿ ತನಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ಓದಿದ್ದು, ಬಳಿಕ ಕೆಪಿಎಸ್ ನೆಂಪುವಿನಲ್ಲಿ ಪ್ರೌಢಶಿಕ್ಷಣ ಮುಂದುವರಿಸಿದ್ದರು.

 

Click Here

LEAVE A REPLY

Please enter your comment!
Please enter your name here