ವಕ್ವಾಡಿ :ಗುರುಕುಲದಲ್ಲಿ “ಆಲೋಕ – 2.O ಸಂಭ್ರಮ“

0
23

Click Here

Click Here

ಕುಂದಾಪುರ ಮಿರರ್ ಸುದ್ದಿ… 

Click Here

ಕುಂದಾಪುರ : ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ‘’ಆಲೋಕ – 2.O” ಎಂಬ ಪರಿಕಲ್ಪನೆಯಲ್ಲಿ ಪಂಚವಟಿ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ದೀಪಾವಳಿಯನ್ನು ವಿಶೇಷ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಸಾಹಿತಿಗಳೂ, ವಿದ್ವಾಂಸರು ಆದ ವಿದ್ವಾನ್ ಡಾ.ರಾಘವೇಂದ್ರರಾವ್ ಅಧ್ಯಾಪಕರು ಗಣಪತಿ ಹೈಸ್ಕೂಲ್ ಪಡುಬಿದ್ರೆ ಇವರು ಉದ್ಘಾಟಿಸಿ ಮಾತನಾಡುತ್ತ,” ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಭಯದಿಂದ ನಿರ್ಭಯದೆಡೆಗೆ ಸಾಗುವುದಕ್ಕೆ ಮೂಲ ಪ್ರೇರಕ ಶಕ್ತಿಯಾಗಿ ದೀಪಾವಳಿ ಹಬ್ಬವು ಗತದಿಂದ ವರ್ತಮಾನದವರೆಗೂ ನಡೆಯುತ್ತಾ ಬಂದಿದೆ. ಈ ನಾಡು ತ್ಯಾಗ ಭೂಮಿ, ಕರ್ಮಭೂಮಿ. ದೀಪ ಜ್ಯೋತಿಯ ಮೂಲಕ ನಮ್ಮ ಬದುಕಿನಲ್ಲಿ ಸಕಲ ಸದ್ವಿಚಾರಗಳನ್ನು ಹೊಂದುವುದಕ್ಕೆ ಪ್ರೇರಕ ಶಕ್ತಿಯಾಗಿ ದೀಪಾವಳಿ ಆಚರಣೆ ಮಹತ್ವದ್ದಾಗಿದೆ ಎಂದರು.
ಗೌರವ ಉಪಸ್ಥಿತಿಯಿಂದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿ ಯವರು ಮಾತನಾಡುತ್ತಾ – ಜನಪದ ಸಂಸ್ಕೃತಿಯಲ್ಲಿ ದೀಪಾವಳಿಗೆ ವಿಶೇಷ ಸ್ಥಾನಮಾನವಿದೆ. ಇದು ನಮ್ಮ ಆದಿ ಸಂಸ್ಕೃತಿಯ ಹೆಗ್ಗುರುತಾಗಿದೆ. ನಮ್ಮ ಕೃಷಿ ಸಂಸ್ಕೃತಿಯು ಕೂಡ ದೀಪಾವಳಿಯನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಿ ಆಚರಿಸುತ್ತಾ ಬಂದಿದೆ ಎಂದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ.ಸುಭಾಶ್ಚಂದ್ರ ಶೆಟ್ಟಿಯವರು ಅಧ್ಯಕ್ಷತೆ ಮಾತನಾಡಿ – ದೀಪಾವಳಿ ಮಹತ್ವ ತಿಳಿಸುತ್ತಾ ಸರ್ವರಿಗೂ ಶುಭ ಕೋರಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾ ದರಂಗ ಗುರುಕುಲ ರಂಗ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಿಂದ “ಲಂಬ ಕರಣನ ಉಷ್ಣಿಷ ‘’ ಎಂಬ ನಾಟಕವನ್ನು ಪ್ರಥಮ ಪ್ರಯೋಗವಾಗಿ ಪ್ರದರ್ಶಿಸಲಾಯಿತು. ಈ ನಾಟಕವನ್ನು ಶ್ರೀ ಶ್ರೀಶ ತೆಕ್ಕ ಟ್ಟೆ ನಿರ್ದೇಶಿಸಿದರು.ವಿದ್ಯಾರ್ಥಿನಿ ತನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಸ್ಟಾಗತಿಸಿದರು. ಕುಮಾರಿ ರಿಷಿಕ ವಂದಿಸಿದರು.

Click Here

LEAVE A REPLY

Please enter your comment!
Please enter your name here