ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿಯ ಮನೆಯ ಮಹಡಿಯ ಮೇಲೆ ವಿಮಾನ ನಿಂತಿದೆ. ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಕುಂದಾಪುರ ನಂದಿಬೆಟ್ಟು ರಸ್ತೆಯ ಸಂತೋಷ್ ಕುಲಾಲ್ ಅವರು ಗೋವಾದಲ್ಲಿ ಹೋಟೆಲ್ ಉದ್ಯಮಿ. ಅವರಿಗೆ ಕುಂದಾಪುರದಲ್ಲಿ ವಿಮಾನ ನಿಲ್ದಾಣ ಆಗಬೇಕು ಎನ್ನುವ ಕನಸಂತೆ. ಮುಂದೆ ಯಾವಾಗಲೋ ಕುಂದಾಪುರದಲ್ಲಿ ವಿಮಾನ ನಿಲ್ದಾಣ ಆಗಬಹುದು. ಆದರೆ ಈಗ ಕುಂದಾಪುರದಲ್ಲೊಂದು ವಿಮಾನ ಮಾದರಿ ಆಗಬೇಕು ಎನ್ನುವ ಬಯಕೆಯಿಂದ ಕಾರವಾರದಲ್ಲಿ ಈ ವಿಮಾನ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ಕುಂದಾಪುರ ಏರ್ ಲೈನ್ಸ್ ಎಂದು ಹೆಸರಿಟ್ಟಿದ್ದಾರೆ. ಬೃಹತ್ ವಿಮಾನವನ್ನು ಅಲ್ಲಿಂದ ತಂದು ತನ್ನ ಮನೆಯ ಮಹಡಿ ಮೇಲೆ ಪಿಕ್ಸ್ ಮಾಡಿದ್ದಾರೆ.
ಕುಂದಾಪುರ ಏರ್ ಲೈನ್ಸ್ ವಿಮಾನ ಮಾದರಿ ಎಲ್ಲರ ಕುತೂಹಲವಾಗಿದೆ. ದೂರದಿಂದಲೇ ಈ ವಿಮಾನ ಮಾದರಿ ಗಮನ ಸಳೆಯುತ್ತಿದೆ. ವಿಮಾನ ಅಳವಡಿಸಿದ ಕೂಡಲೇ ಎಲ್ಲರು ವಿಮಾನನೋಡಲು ಆಗಮಿಸುತ್ತಿದ್ದಾರೆ. ಸಂತೋಷ್ ಕುಲಾಲ್ ಕೂಡ ಸಂತೋಷ ಪಟ್ಟಿದ್ದಾರೆ.









