ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶ ಪ್ರಕಟಗೊಂಡಿದ್ದು ಗ್ರಾಮೀಣ ಭಾಗದ ಹೆಮ್ಮಾಡಿಯ ಜನತಾ ಪಿಯು ಕಾಲೇಜ್ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ವಿಶಿಷ್ಟ ಸಾಧನೆ ಮೆರೆದಿದ್ದಾರೆ
ವಿದ್ಯಾರ್ಥಿಗಳಾದ ಸಾನಿಕ ಎಸ್ ದೇವಾಡಿಗ 576 (98.98)ಪರ್ಸೆಂಟೈಲ್, ಮನೀತ್ 539 (97. 64) ಪರ್ಸೆಂಟೈಲ್,ಧೀರಜ್ ಜಿ.ಡಿ 527(97.05) ಪರ್ಸೆಂಟೈಲ್, ಹಾಗೂ ಪ್ರೀತಿಕಾ ಮತ್ತು ಇಂಚರ 500ಕ್ಕೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋಧಕ ಭೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.












