ಕೋಟ :ಜೈ ಕುಂದಾಪ್ರ ಸೇವಾ ಟ್ರಸ್ಟ್ ರಾಜ್ಯಕ್ಕೆ ಮಾದರಿ -ಭಾಸ್ಕರ್ ಸ್ವಾಮಿ

0
10

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್ ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿ ದೀಪ ಎಂಬ ಧ್ಯೇಯೋದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ 200ಕ್ಕೂ ಹೆಚ್ಚು ಸೇವಾ ಯೋಜನೆ,ಅನಾರೋಗ್ಯ ಪೀಡಿತರಿಗೆ ಸಹಾಯ ಧನ, ಲಾಕ್‍ಡೌನ್ ಸಮಯದಲ್ಲಿ ಒಂದು ಹೊತ್ತಿನ ಅನ್ನದಾನ ಸೇವೆ, ಅಂಗನವಾಡಿ , ಶಾಲೆಗಳಿಗೆ ನೆರವು, ದೇವರ ಮಕ್ಕಳ ಆಶ್ರಮಗಳಿಗೆ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಸಾಮಾಗ್ರಿ ವಿತರಣೆ, ರಕ್ತದಾನ ಶಿಬಿರ ಆಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದೆ ಎಂದು ಕೋಟ ಹಾಡಿಕೆರೆ ಶನೀಶ್ವರ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ಹೇಳಿದರು.

ಭಾನುವಾರ ಶಾಂತಮೂರ್ತಿ ಶನೀಶ್ವರ ಸಭಾಭವನದಲ್ಲಿ ಜೈ ಕುಂದಾಪ್ರ ಸಮ್ಮಿಲನ 2026 ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಜೈ ಕುಂದಾಪ್ರ ಸೇವಾ ಟ್ರಸ್ಟ ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ರೂಪುಗೊಂಡಿದೆ ಎಂದರು.

Click Here

ಈ ಸಂದರ್ಭದಲ್ಲಿ ನಿರಂತರವಾಗಿ ಸಮಾಜಮುಖಿ ಸೇವೆ ತೊಡಗಿಕೊಂಡಿರುವ ಸಂಸ್ಥೆ ಸಂಚಲನ ಬ್ರಹ್ಮಾವರ ಇದರ ಅಧ್ಯಕ್ಷ ನಂದಕಿಶೋರ್ ಹಾಗೂ ಜಾತ್ರೆಗಳಲ್ಲಿ ವಿಶೇಷ ವೇಷ ಧರಿಸಿ ದೇಣಿಗೆ ಸಂಗ್ರಹಿಸಿ ಅಶಕ್ತರಿಗೆ ನೆರವಾಗುವ ಬೆಂಕಿಮಣಿ ಸಂತೋಷ್, ಹಲವಾರು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡಿರುವ ಯಶಸ್ವಿನಿ ಫ್ರೆಂಡ್ಸ್ ಉದ್ಯಾವರ ಸಂಸ್ಥೆಯ ಪ್ರವೀಣ್ ಅಮೀನ್ ಬಳಗ ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಹೊಸ ಸದಸ್ಯರು ಸೇರ್ಪಡೆಗೊಂಡು ಸಂಸ್ಥೆಯ ಮುಖಸ್ಥ ಪುಂಡಲೀಕ ಮೊಗವೀರ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಸಾಮಾಜ ಸೇವಕ ಕೆ. ಶ್ರೀಕಾಂತ್ ಶೆಣೈ ಕೋಟ, ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಯುವ ಉದ್ಯಮಿ ಆದಿತ್ಯ ಕೋಟ, ರಕ್ತ ದಾನಿ, ಸಾಮಾಜ ಸೇವಕ ರವಿಕುಮಾರ್ ಶೆಟ್ಟಿ ನಡೂರು, ನವಮಿ ವೆಲ್ಡಿಂಗ್ ವರ್ಕ್ ಮಾಲಿಕ ಹರೀಶ್ ದೇವಾಡಿಗ ಕೋಟ, ಪತ್ರಕರ್ತರಾದ ರವೀಂದ್ರ ಕೋಟ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯೆ ಯಶಸ್ವಿನಿ ಬೀಜಾಡಿ ನಿರೂಪಿಸಿದರೆ, ಜೈ ಕುಂದಾಪ್ರ ತಂಡದ ಪ್ರಧಾನ ಕಾರ್ಯದರ್ಶಿ ದಿವ್ಯ ಕುಂದಾಪುರ ಸ್ವಾಗತಿಸಿದರು. ಸಂಸ್ಥೆಯ ನಿರ್ವಾಹಕ ಜಯರಾಜ್ ಸಾಲಿಯಾನ್ ಪಡುಕರೆ ವಂದಿಸಿದರು.

Click Here

LEAVE A REPLY

Please enter your comment!
Please enter your name here