ಶ್ರೀಕೃಷ್ಣ ಜನ್ಮಾಷ್ಟಮಿ: ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನಿಂದ ‘ಮುದ್ದು ಕೃಷ್ಣ’ ಸ್ಪರ್ಧೆ

0
19

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಪುಟಾಣಿ ಮಕ್ಕಳ ಬಾಲಲೀಲೆ ಮತ್ತು ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ವತಿಯಿಂದ “ಮುದ್ದು ಕೃಷ್ಣ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 6, ಭಾನುವಾರ ರಂದು ಬೆಳಿಗ್ಗೆ 9:00 ಗಂಟೆಯಿಂದ ಯಡಾಡಿ-ಮತ್ಯಾಡಿಯಲ್ಲಿರುವ ‘ವಿದ್ಯಾರಣ್ಯ ಕ್ಯಾಂಪಸ್’ ಆವರಣದಲ್ಲಿ ಈ ಸ್ಪರ್ಧೆಯು ನಡೆಯಲಿದೆ.

ಎರಡು ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆ:
ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ:

ವಿಭಾಗ 1: 1 ವರ್ಷದಿಂದ 3.5 ವರ್ಷದೊಳಗಿನ ಮಕ್ಕಳು

ವಿಭಾಗ 2: 3.6 ವರ್ಷದಿಂದ 6 ವರ್ಷದೊಳಗಿನ ಮಕ್ಕಳು

ಆಕರ್ಷಕ ನಗದು ಬಹುಮಾನ ಹಾಗೂ ಪ್ರಮಾಣಪತ್ರ:
ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕವಾಗಿ ಆಕರ್ಷಕ ನಗದು ಬಹುಮಾನ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು:
ಪ್ರಥಮ ಬಹುಮಾನ: ₹10,000/- (ಫಲಕ + ಪ್ರಮಾಣಪತ್ರ)

ದ್ವಿತೀಯ ಬಹುಮಾನ: ₹7,500/- (ಫಲಕ + ಪ್ರಮಾಣಪತ್ರ)

Click Here

ತೃತೀಯ ಬಹುಮಾನ: ₹5,000/- (ಫಲಕ + ಪ್ರಮಾಣಪತ್ರ)

ಸಮಾಧಾನಕರ ಬಹುಮಾನ: ಪ್ರತಿ ವಿಭಾಗಕ್ಕೆ ತಲಾ ₹2,500/- ರಂತೆ 3 ಮಕ್ಕಳಿಗೆ ನೀಡಲಾಗುವುದು.

ಉಚಿತ ಪ್ರವೇಶ: ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಭಾಗವಹಿಸುವ ಪ್ರತಿಯೊಬ್ಬ ಮಗುವಿಗೂ ಸಂಸ್ಥೆಯ ವತಿಯಿಂದ ಪ್ರೋತ್ಸಾಹಕ ಪ್ರಮಾಣಪತ್ರ ನೀಡಲಾಗುವುದು.

ಸ್ಪರ್ಧೆಯ ಪ್ರಮುಖ ನಿಯಮಗಳು:
ಸ್ಪರ್ಧೆಯಲ್ಲಿ ಅಭಿನಯಕ್ಕೆ 1 ನಿಮಿಷ ಹಾಗೂ ಸಿದ್ಧತೆಗೆ 1 ನಿಮಿಷ ಸಮಯಾವಕಾಶ ಇರಲಿದೆ.
ಹಿನ್ನೆಲೆ ಸಂಗೀತ ಬಳಸಲು ಸೂಕ್ತ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸೀಮಿತ ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು, ಆದ್ಯತೆಯ ಮೇರೆಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ನೋಂದಣಿ ಮಾಡಿಕೊಳ್ಳುವ ವಿಧಾನ:
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಪೋಷಕರು ಮಗುವಿನ ಹೆಸರು, ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರದ ಪ್ರತಿಯನ್ನು ಕೆಳಗೆ ನೀಡಿರುವ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು. ಮಾಹಿತಿ ತಲುಪಿದ ತಕ್ಷಣ ಪೋಷಕರ ಸಂಖ್ಯೆಗೆ ನೋಂದಣಿ ಲಿಂಕ್ (Registration Link) ಕಳುಹಿಸಲಾಗುತ್ತದೆ.

ನೋಂದಣಿಗೆ ಕೊನೆಯ ದಿನಾಂಕ: 03 ಸೆಪ್ಟೆಂಬರ್ 2026
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 8867853401 / 8088126101

Click Here

LEAVE A REPLY

Please enter your comment!
Please enter your name here